ಸುದ್ದಿ

ಜ.18 : ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11

ವಿಟ್ಲ : ಕೆ.ಪಿ.ಎಲ್‍. ಕುಳಾಲು ಇದರ ಆಶ್ರಯದಲ್ಲಿ ಲೀಗ್ ಮಾದರಿಯ ಹೊನಲು ಬೆಳಕಿನ ಅಂಡರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11, ಜ.18 ರಂದು ಸಂಜೆ 7 ಗಂಟೆಗೆ ಕುಳಾಲು ವಾರಾಹಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11ರ ಕ್ರಿಕೇಟ್‍ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 15,555 KPL ಟ್ರೋಫಿ ಹಾಗೂ ದ್ವಿತೀಯ ಬಹುಮಾನ 11,111 KPL ಟ್ರೋಫಿಯನ್ನು ನೀಡಲಿದ್ದಾರೆ. ಉತ್ತಮ ದಾಂಡಿಗ, ಉತ್ತಮ ದಾಳಿಗಾರ, ಹಾಗೂ ಸವ್ಯಸಾಚಿ ಟ್ರೋಫಿಯನ್ನು […]

ಜ.18 : ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11 Read More »

ಏರೋಸ್ಪೇಸ್‌ ಇಂಜಿನಿಯರ್‌ ಈಗ ನಾಗಸಾಧು

ಕೈತುಂಬ ಸಂಬಳದ ನೌಕರಿ, ಐಷರಾಮಿ ಬದುಕು ತೊರೆದು ಅಧ್ಯಾತ್ಮದತ್ತ ಹೋದ ಪ್ರತಿಭಾವಂತ ಪ್ರಯಾಗ್‌ರಾಜ್‌ : ಇಲ್ಲಿ ನಡೆಯುತ್ತಿರುವ ವೈಭವದ ಮಹಾಕುಂಭಮೇಳದಲ್ಲಿ ಅನೇಕ ವಿಸ್ಮಯಗಳು ಗಮನ ಸೆಳೆಯುತ್ತವೆ. ಮಹಾಕುಂಭಮೇಳದ ಪ್ರಧಾನ ಅಂಗವಾಗಿರುವ ನಾಗಸಾಧುಗಳ ವಿಚಿತ್ರ ವೇಷಭೂಷಣ, ವರ್ತನೆ, ನಿಗೂಢ ಬದುಕು ಎಲ್ಲವೂ ಕುತೂಹಲಕರವಾಗಿವೆ. ಒಬ್ಬೊಬ್ಬ ನಾಗಸಾಧು ಒಂದೊಂದು ವೈಶಿಷ್ಟ್ಯ ಹೊಂದಿದ್ದಾರೆ. ಕುಂಭಮೇಳ ಜರುಗುವಾಗ ಮಾತ್ರ ನಾಗರಿಕ ಪ್ರಪಂಚದಲ್ಲಿ ಕಾಣಿಸಿಕೊಳ್ಳುವ ಈ ನಾಗಸಾಧುಗಳನ್ನು ನೋಡಲು, ಅವರ ಆಶೀವಾದ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ನಾಗಸಾಧುಗಳ ಪೈಕಿ ಈ ಸಲ ಬಹಳ ಸುದ್ದಿ

ಏರೋಸ್ಪೇಸ್‌ ಇಂಜಿನಿಯರ್‌ ಈಗ ನಾಗಸಾಧು Read More »

6.80 ಕೋ.ರೂ. ಮೌಲ್ಯದ ಡ್ರಗ್ಸ್‌ ನಾಶ ಮಾಡಿದ ಮಂಗಳೂರು ಪೊಲೀಸರು

ಮಂಗಳೂರು: ಮಂಗಳೂರು ಪೊಲೀಸರು ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಸುಮಾರು 6.80 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಿದ್ದಾರೆ. ಮೂಲ್ಕಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ನಿನ್ನೆ ನಾಶ ಮಾಡಲಾಗಿದೆ. ನ್ಯಾಯಾಲಯದ ಅನುಮತಿಯೊಂದಿಗೆ 2024 ಮತ್ತು 2023ರಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಇದು ಪ್ರತಿ ವರ್ಷದ ಪ್ರಕ್ರಿಯೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. 37 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಸುಮಾರು

6.80 ಕೋ.ರೂ. ಮೌಲ್ಯದ ಡ್ರಗ್ಸ್‌ ನಾಶ ಮಾಡಿದ ಮಂಗಳೂರು ಪೊಲೀಸರು Read More »

ದಶಮಾನೋತ್ಸವದ  ಪ್ರಯುಕ್ತ ಶ್ರೀಮಾತಾ ಅರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ

ಉಜಿರೆ : ಯಕ್ಷಭಾರತಿ(ರಿ )ಕನ್ಯಾಡಿ ಬೆಳ್ತಂಗಡಿ ಇದರ ದಶಮಾನೋತ್ಸವದ  ಪ್ರಯುಕ್ತ ಶ್ರೀಮಾತಾ ಅರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ನಾಗರಾಜ ಕಾಂಪೌಂಡ್ ಆವರಣದಲ್ಲಿ  ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ ಬಯಲಾಟ ಮತ್ತು ಸನ್ಮಾನ ಕಾರ್ಯಕ್ರಮ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ವಹಿಸಿದ್ದರು. ಅತಿಥಿಗಳಾಗಿ ಪದ್ಮಶೇಖರ ಜೈನ್ ಕಾವಳಕಟ್ಟೆ,ಭಾಗವತ ಪಟ್ಲ ಸತೀಶ್ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಉಜಿರೆ ಲಕ್ಷ್ಮಿ ಗ್ರೂಪ್ಸ್ ಮೋಹನ ಕುಮಾರ್, ಉಜಿರೆ ಶ್ರೀ ದುರ್ಗಾ ಇಂಡಸ್ಟ್ರೀಸ್ ರಮೇಶ್

ದಶಮಾನೋತ್ಸವದ  ಪ್ರಯುಕ್ತ ಶ್ರೀಮಾತಾ ಅರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ Read More »

ನಟ ಸೈಫ್‌ ಅಲಿ ಖಾನ್‌ ಮೇಲೆ ಮಾರಕಾಸ್ತ್ರದಿಂದ ದಾಳಿ

ದರೋಡೆ ಮಾಡಲು ಮನೆಗೆ ನುಗ್ಗಿದವರಿಂದ ಚಾಕು ಇರಿತ ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಿನ್ನೆ ರಾತ್ರಿ ಮಾರಕಾಸ್ತ್ರದಿಂದ ದಾಳಿ ಮಾಡಲಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 2.30ರ ವೇಳೆಗೆ ಈ ಘಟನೆ ನಡೆದಿದೆ. ದರೋಡೆಕೋರರು ಅವರ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಅವರು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು

ನಟ ಸೈಫ್‌ ಅಲಿ ಖಾನ್‌ ಮೇಲೆ ಮಾರಕಾಸ್ತ್ರದಿಂದ ದಾಳಿ Read More »

ಅದಾನಿ ಸಮೂಹವನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ

ವಾಷಿಂಗ್ಟನ್‌ : ಭಾರತದ ಅಗ್ರಗಣ್ಯ ಉದ್ಯಮಿ ಗೌತಮ್‌ ಅದಾನಿಯವರ ನೇತೃತ್ವದ ಅದಾನಿ ಕಂಪನಿಗಳಿಗೆ ಇನ್ನಿಲ್ಲದಂತೆ ಕಾಟ ಕೊಟ್ಟಿದ್ದ ಹಿಂಡನ್‌ಬರ್ಗ್‌ ಸಂಸ್ಥೆಗೆ ಬೀಗ ಬಿದ್ದಿದೆ. ಹಿಂಡನ್‌ಬರ್ಗ್‌ ರೀಸರ್ಚ್‌ ಕಂಪನಿಯನ್ನು ಮುಚ್ಚುತ್ತಿರುವುದಾಗಿ ಅದರ ಸಂಸ್ಥಾಪಕ ನೇಟ್‌ ಆಂಡರ್‌ಸನ್‌ ಹೇಳಿದ್ದಾರೆ. ನಾವು ಏನು ಸಾಧಿಸಬೇಕೆಂದಿದ್ದೆವೋ ಅದನ್ನು ಸಾಧಿಸಿದ್ದೇವೆ. ಈಗ ಕಂಪನಿಯನ್ನು ಮುಚ್ಚುವ ಸಮಯ ಬಂದಿದೆ. ಈ ಸಂಸ್ಥೆಯನ್ನು ನಡೆಸಿದ್ದು ಬದುಕಿ ಅದ್ಭುತ ಸಾಹಸವಾಗಿತ್ತು ಎಂದು ನೇಟ್‌ ಹೇಳಿದ್ದಾರೆ.2023ರಲ್ಲಿ ಅದಾನಿ ಕಂಪನಿಯ ವಿರುದ್ಧ ಹಿಂಡನ್‌ಬರ್ಗ್‌ ಬಿಡುಗಡೆ ಮಾಡಿದ್ದ ವರದಿ ಇಡೀ ಜಗತ್ತಿನಲ್ಲಿ ಕೋಲಾಹಲ

ಅದಾನಿ ಸಮೂಹವನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ Read More »

ಡೀಸೆಲ್‍ ಕಳವು ಪ್ರಕರಣ| ನಾಲ್ವರ ಬಂಧನ

ಮಂಗಳೂರು : ಮಂಗಳೂರು ತಾಲೂಕಿನ ಬಾಳ ಗ್ರಾಮದ ಟ್ಯಾಂಕರ್ ಯಾರ್ಡಿನಲ್ಲಿರುವ ಟ್ಯಾಂಕರುಗಳಿಂದ ಮಾಲಕರಿಗೆ ತಿಳಿಯದೇ ಡೀಸೆಲ್‌ನ್ನು ಕಳವು ಮಾಡಿ ದಾಸ್ತಾನು ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂದಿಸಿ ಪತ್ತೆ ಹಚ್ಚಿರುವ ಮಂಗಳೂರು ನಗರ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕುಳಾಯಿಗುಡ್ಡೆಯ ಸಂತೋಷ್ (42), ಕಾಟಿಪಳ್ಳದ ಐರನ್ ರಿತೇಶ್ ಮಿನೇಜ್ (36), ಟ್ಯಾಂಕರ್ ಚಾಲಕ ಕಡಿರುದ್ಯಾವರ, ನಾರಾಯಣ ( 23 ) ಮತ್ತು ಹೆಜಮಾಡಿಯ ರವಿ ಜನಾಂದ್ರ ಪುತ್ರನ್ (59)ಎಂದು ತಿಳಿದು ಬಂದಿದೆ. ಬಂಧಿತ

ಡೀಸೆಲ್‍ ಕಳವು ಪ್ರಕರಣ| ನಾಲ್ವರ ಬಂಧನ Read More »

ಮುಡಾ ಹಗರಣ : ಸಿಬಿಐ ತನಿಖೆ ಕೋರಿದ ಅರ್ಜಿಯ ವಿಚಾರಣೆ ಮುಂದೂಡಿಕೆ

ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಳ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಆರ್​ಟಿಐ ಕಾರ್ಯರಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜನವರಿ 27ಕ್ಕೆ ಮುಂದೂಡಿದೆ.ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ‌ವಾಗಿ ಕಪಿಲ್‌ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ

ಮುಡಾ ಹಗರಣ : ಸಿಬಿಐ ತನಿಖೆ ಕೋರಿದ ಅರ್ಜಿಯ ವಿಚಾರಣೆ ಮುಂದೂಡಿಕೆ Read More »

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ : ಹಿಟ್‌ & ರನ್‌ ಕೇಸ್‌ ದಾಖಲು

ಅನುಮಾನಕ್ಕೆ ಕಾರಣವಾದ ಚಾಲಕನ ದೂರು ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಲು ನಾಯಿಗಳು ಅಡ್ಡಬಂದದ್ದು ಕಾರಣ ಎನ್ನಲಾಗಿತ್ತು. ಕಾರಿನಲ್ಲೇ ಇದ್ದ ಸಚಿವೆಯ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕೂಡ ಮಾಧ್ಯಮದವರ ಮುಂದೆ ನಾಯಿಗಳು ಅಡ್ಡಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಕಾರಿನ ಚಾಲಕ ಅಪರಿಚಿತ ಕಂಟೇನರ್‌ ಚಾಲಕನ ವಿರುದ್ಧ ಹಿಟ್‌ & ರನ್‌ ದೂರು ದಾಖಲಿಸಿರುವುದರಿಂದ ಈ ಅಪಘಾತದ

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ : ಹಿಟ್‌ & ರನ್‌ ಕೇಸ್‌ ದಾಖಲು Read More »

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು

ಬಂಟ್ವಾಳ : ಬೈಕ್ – ಬೈಕ್ ಗಳ ನಡುವೆ ಅಪಘಾತ ಸಂಭವಿಸಿರುವ   ಘಟನೆ ಇಂದು ರಾತ್ರಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆಯಲ್ಲಿ ನಡೆದಿದೆ.           ಘಟನೆಯಿಂದ ಬೈಕ್ ನಲ್ಲಿ ಸಹಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃತಪಟ್ಟ ಬಾಲಕಿ. ಬೈಕ್ ಚಾಲಕ ಬಾಲಕಿಯ ತಂದೆ ಅಬ್ದುಲ್ ರಹಮಾನಿಗೆ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು Read More »

error: Content is protected !!
Scroll to Top