ಸುದ್ದಿ

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌ : ಕೇಸ್‌ ದಾಖಲು

ಮಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಸಂದೇಶವನ್ನು ಹಂಚಿದ ಆರೋಪದ ಮೇರೆಗೆ ಕಂಕನಾಡಿ ನಗರ ಠಾಣೆಯಲ್ಲಿ ನಝೀರ್ ಮಂಗಳೂರು ಮತ್ತು Gandhian Nehruvian Magar ಎಂಬ ಎರಡು ಫೇಸ್‌ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅ.21ರಂದು ಅಪರಾಹ್ನ 3 ಗಂಟೆಗೆ ತಾನು ಸಾಮಾಜಿಕ ಜಾಲತಾಣಾ ಮಾನಿಟರಿಂಗ್ ನಿಗಾವಣೆ ಕರ್ತವ್ಯದ ಮೇರೆಗೆ ಫೇಸ್‌ಬುಕ್ ವೀಕ್ಷಿಸುತ್ತಿರುವಾಗ ನಝೀರ್ ಮಂಗಳೂರ್ ಎಂಬ ಫೇಸ್‌ಬುಕ್ ಖಾತೆಯಿಂದ Mumthas Abdul Nelyadka ಮತ್ತು Mahesh Vikram Hegde ಎಂಬ ಫೇಸ್‌ಬುಕ್ ಖಾತೆಗಳಿಗೆ ಟ್ಯಾಗ್ ಮಾಡಿರುವ Gandhian Nehruvian […]

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌ : ಕೇಸ್‌ ದಾಖಲು Read More »

ಮಹಿಳೆ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಕುಸಿತಕ್ಕೆ ಸಾರ್ವಜನಿಕರ ಆಕ್ರೋಶ ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಮಂಗಳವಾರ ರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘೋರ ಕೃತ್ಯ ನಗರದಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿದೆ. ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ ಎಂದು ಜನರು ಾತಂಕ ವ್ಯಕ್ತಪಡಿಸಿದ್ದಾರೆ. ಬಂಧಿತರನ್ನು ಕಾರ್ತಿಕ್, ಗ್ಲೆನ್ ಮತ್ತು ಸಿಯೋಗ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗಂಗೊಂಡನಹಳ್ಳಿಯಲ್ಲಿ

ಮಹಿಳೆ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ Read More »

ಶಾಲೆ ಪುನರಾರಂಭ : ಸಿಲೆಬಸ್‌ ಪೂರ್ತಿಗೊಳಿಸಲು ಹಲವು ಸೂಚನೆ

ಜನವರಿ ಒಳಗೆ ಸಿಲೆಬಸ್‌ ಪೂರ್ತಿಯಾಗಲೇಬೇಕು ಬೆಂಗಳೂರು: ದಸರಾ ರಜೆ, ಜಾತಿ ಗಣತಿ ರಜೆ ಬಳಿಕ ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭಗೊಂಡಿವೆ. ಹೆಚ್ಚುಕ ಡಿಮೆ ಒಂದು ತಿಂಗಳ ರಜೆಯ ಬಳಿಕ ಮತ್ತೆ ಶಾಲೆಗಳು ಪ್ರಾರಂಭವಾಗಿವೆ. ಶಾಲೆ ಮರು ಪ್ರಾರಂಭವಾಗುತ್ತಿದ್ದಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. ಡಿಸೆಂಬರ್-ಜನವರಿ ಒಳಗೆ ಸಂಪೂರ್ಣ ಸಿಲಬಸ್ ಮುಕ್ತಾಯ ಆಗಬೇಕು, ಒಂದು ತಿಂಗಳು ಆಗಿರುವ ಸಿಲೆಬಸ್ ನಷ್ಟ ತುಂಬಲು ವಿಶೇಷ ತರಗತಿಗಳನ್ನು ನಡೆಸಬೇಕು, ಬೆಳಗ್ಗೆ ಶಾಲೆ ಸಮಯಕ್ಕಿಂತ ಮುಂಚೆ ಅಥವಾ ಸಂಜೆ

ಶಾಲೆ ಪುನರಾರಂಭ : ಸಿಲೆಬಸ್‌ ಪೂರ್ತಿಗೊಳಿಸಲು ಹಲವು ಸೂಚನೆ Read More »

ನವದೆಹಲಿ : ಎನ್‌ಕೌಂಟರ್‌ನಲ್ಲಿ ನಾಲ್ವರು ದರೋಡೆಕೋರರ ಹತ್ಯೆ

ಪೊಲೀಸರಿಗೆ ಬಹಿರಂಗ ಸವಾಲು ಹಾಕುತ್ತಿದ್ದ ದರೋಡೆ ಗ್ಯಾಂಗ್‌ನ ರಣಬೇಟೆ ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ನಾಲ್ವರು ದರೋಡೆಕೋರರು ಬಲಿಯಾಗಿದ್ದಾರೆ. ಹತ್ಯೆಯಾದವರು ಬಿಹಾರದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಸಿಗ್ಮಾ ಗ್ಯಾಂಗ್‌ನ ಸದಸ್ಯರು. ದೆಹಲಿ ಮತ್ತು ಬಿಹಾರ ಪೊಲೀಸರ ತಂಡ ಮತ್ತು ದರೋಡೆಕೋರರ ನಡುವೆ ಗುರುವಾರ ತಡರಾತ್ರಿ 2.20ಕ್ಕೆ ರೋಹಿಣಿಯ ಡಾ. ಅಂಬೇಡ್ಕರ್ ಚೌಕ್‌ನಿಂದ ಪನ್ಸಾಲಿ ಚೌಕ್‌ವರೆಗಿನ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ ನಡೆದಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ ಪೊಲೀಸರು ಸಿಗ್ಮಾ ಗ್ಯಾಂಗ್‌ನ ದರೋಡೆಕೋರರನ್ನು

ನವದೆಹಲಿ : ಎನ್‌ಕೌಂಟರ್‌ನಲ್ಲಿ ನಾಲ್ವರು ದರೋಡೆಕೋರರ ಹತ್ಯೆ Read More »

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ : ಮಹಿಳೆ ಸಹಿತ ಮೂವರು ಸೆರೆ

ಐಷಾರಾಮಿ ಬಂಗಲೆಯಲ್ಲಿ ನಡೆಯುತ್ತಿತ್ತು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮೈಸೂರು : ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲವೊಂದನ್ನು ಮೈಸೂರಿನಲ್ಲಿ ಪೊಲೀಸರು ಆರೋಗ್ಯ ಇಲಾಖೆ ಸಹಕಾರದಿಂದ ಬಯಲಿಗೆಳೆದಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ : ಮಹಿಳೆ ಸಹಿತ ಮೂವರು ಸೆರೆ Read More »

ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 42 ಲ.ರೂ. ಸುಲಿಗೆ

ಮಂಗಳೂರು : ಡಿಜಿಟಲ್ ಅರೆಸ್ಟ್ ಮಾಡಿ ಮಹಿಳೆಯಿಂದ 42 ಲಕ್ಷ ಸುಲಿಗೆ ಮಾಡಿದ ಪ್ರಕರಣವೊಂದು ಮಂಗಳೂರಿನಲ್ಲಿ ಸಂಭವಿಸಿದೆ. ಮಹಿಳೆ ಅಪರಿಚಿತರು ಕರೆ ಮಾಡಿ 42 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಿದ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ. ಅ.7ರಂದು ತನ್ನ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮುಂಬೈಯ ಕೊಲಾಬ ಪೊಲೀಸ್ ಠಾಣೆಯಿಂದ ತಾನು ಮಾತನಾಡುತ್ತಿರುವೆ. ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಲಾಗಿದೆ. ಬಳಿಕ ತನ್ನನ್ನು ಮುಂಬೈಗೆ ಬರುವಂತೆ ಹೇಳಿದ್ದಾನೆ. ನನಗೆ ಮುಂಬೈಗೆ ಬರಲು

ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 42 ಲ.ರೂ. ಸುಲಿಗೆ Read More »

ಗುರುವಾಯೂರು ದೇವಸ್ಥಾನದಲ್ಲೂ ಚಿನ್ನ ಕಳವು : 25 ಕೋಟಿ ಅವ್ಯವಹಾರವಾಗಿರುವ ವರದಿ

ಶಬರಿಮಲೆ ಬಳಿಕ ಇನ್ನೊಂದು ಪ್ರಸಿದ್ಧ ದೇವಸ್ಥಾನದ ಚಿನ್ನಕ್ಕೆ ಕನ್ನ ತಿರುವನಂತಪುರಂ : ಶಬರಿಮಲೆಯ ಬಳಿಕ ಇದೀಗ ಕೇರಳದ ಇನ್ನೊಂದು ಪ್ರಸಿದ್ಧ ದೇವಸ್ಥಾನ ಗುರುವಾಯೂರು ದೇವಸ್ಥಾನದಲ್ಲೂ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕೇರಳದಲ್ಲಿ 12 ಪ್ರಸಿದ್ಧ ದೇವಸ್ಥಾನಗಳ ಆಡಳಿತ ನಿಭಾಯಿಸುವ ಸರ್ಕಾರದ ಗುರುವಾಯೂರು ದೇವಸ್ವಂ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಪತ್ತೆಯಾಗಿವೆ. 2019ರಲ್ಲಿ ಮಾಡಲಾದ ಆಡಿಟಿಂಗ್​ನಲ್ಲಿ ಕೆಲ ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್

ಗುರುವಾಯೂರು ದೇವಸ್ಥಾನದಲ್ಲೂ ಚಿನ್ನ ಕಳವು : 25 ಕೋಟಿ ಅವ್ಯವಹಾರವಾಗಿರುವ ವರದಿ Read More »

ನೇತ್ರಾವತಿ ಸೇರಿ 12 ನದಿಗಳ ನೀರು ಕುಡಿಯಲು ಅಸುರಕ್ಷಿತ

ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿದೆ ನದಿಗಳ ಮಾಲಿನ್ಯದ ಕಳವಳಕಾರಿ ಮಾಹಿತಿ ಬೆಂಗಳೂರು: ರಾಜ್ಯದಲ್ಲಿರುವ ನದಿಗಳ ನೀರಿನ ಗುಣಮಟ್ಟದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯೊಂದನ್ನು ಸಿದ್ಧಪಡಿಸಿದ್ದು, ಈ ವರದಿಯಲ್ಲಿ ಕರಾವಳಿಯ ಜೀವನದಿ ನೇತ್ರಾವತಿಯೂ ಸೇರಿ ರಾಜ್ಯದ 12 ನದಿಗಳ ನೀರು ನೇರವಾಗಿ ಕುಡಿಯಲು ಸುರಕ್ಷಿತವಲ್ಲ ಎಂಬ ಮಾಹಿತಿ ನೀಡಿದೆ. ಸೆಪ್ಟೆಂಬರ್‌ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ 12 ಪ್ರಮುಖ ನದಿಗಳ ನೀರನ್ನು 32 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು, 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ

ನೇತ್ರಾವತಿ ಸೇರಿ 12 ನದಿಗಳ ನೀರು ಕುಡಿಯಲು ಅಸುರಕ್ಷಿತ Read More »

RSS ಪಥಸಂಚಲನದಲ್ಲಿ ಭಾಗವಹಿಸಿ ಸರ್ಕಾರಿ ನೌಕರರ ಅಮಾನತು: ಪ್ರಿಯಾಂಕ್ ಖರ್ಗೆ ಏನಂದ್ರು?

ಬೆಂಗಳೂರು: RSS ಪಥಸಂಚಲನದಲ್ಲಿ ‌ಸರ್ಕಾರಿ ನೌಕರರು ಭಾಗವಹಿಸಿದರೆ ಅಮಾನತು ಮಾಡುವ ಬಗ್ಗೆ ಟೀಕೆಗಳು ಕೇಳಿ ಬಂದಿದ್ದು, ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ನಾನು ಮಂತ್ರಿ ಎಂಬ ಮಾತ್ರಕ್ಕೆ ಬೇಕಾಬಿಟ್ಟಿ ‌ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನನಗೂ ನಿರ್ದಿಷ್ಟ ನಿಯಮಗಳಿದ್ದು, ಅದರ ಅನುಸಾರವೇ ಸರ್ಕಾರಿ ನೌಕರರ ಅಮಾನತು ನಿರ್ಣಯ ಕೈಗೊಳ್ಳಲಾಗಿದೆ. ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರನ್ನು ಅಮಾನತು ಮಾಡಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ. RSS ಹಣಕಾಸು ಮೂಲದ ಬಗೆಗೂ ಪ್ರಶ್ನಿಸಿದ ಅವರು, ನಾನು ದಲಿತ ಸಂಘಟನೆಗಳ ಪ್ರಾಯೋಜಕತ್ವ

RSS ಪಥಸಂಚಲನದಲ್ಲಿ ಭಾಗವಹಿಸಿ ಸರ್ಕಾರಿ ನೌಕರರ ಅಮಾನತು: ಪ್ರಿಯಾಂಕ್ ಖರ್ಗೆ ಏನಂದ್ರು? Read More »

22ನೇ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಅಧ್ಯಾಪಕ ವೆಂಕಟೇಶ್ ಪ್ರಸಾದ್‌ ಅವರಿಗೆ 2 ಚಿನ್ನ, 1 ಕಂಚು

ಪುತ್ತೂರು: ಮಂಗ‌ಳೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 19ರಂದು ಆಯೋಜಿತವಾದ 22ನೇ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಅವರು ಹಲವು ಸ್ಪರ್ಧೆಗಳಲ್ಲಿ ವಿಜಯಿಯಾಗಿದ್ದಾರೆ. 50ರ ವಯೋಮಾನದ ಎತ್ತರ ಜಿಗಿತ ಮತ್ತು 5 ಕಿ.ಮೀ ವೇಗದ ನಡಿಗೆಯಲ್ಲಿ ಚಿನ್ನದ ಪದಕ ಹಾಗೂ ಉದ್ದ ಜಿಗಿತದಲ್ಲಿ ಕಂಚಿನ ಪದಕ ಗಳಿಸಿದ್ದು, ಡಿಸೆಂಬರ್ ನಲ್ಲಿ ಕೋಲಾರದಲ್ಲಿ ನಡೆಯುವ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

22ನೇ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಅಧ್ಯಾಪಕ ವೆಂಕಟೇಶ್ ಪ್ರಸಾದ್‌ ಅವರಿಗೆ 2 ಚಿನ್ನ, 1 ಕಂಚು Read More »

error: Content is protected !!
Scroll to Top