ಸುದ್ದಿ

ನ.15: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದ ವಾರ್ಷಿಕೋತ್ಸವ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಶಾಂತಿಗೋಡು ಗ್ರಾಮ, ಸರ್ವೆ ಅಂಚೆ ಪುತ್ತೂರು ಇಲ್ಲಿನ ವಾರ್ಷಿಕೋತ್ಸವ ಪಿಎಂಶ್ರೀ ಸಡಗರ ನ. 15 ರಂದು ನಡೆಯಲಿದೆ. ಬೆಳಗ್ಗೆ 9.30 ಕ್ಕೆ ಧ್ವಜವಂದನೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಧ್ವಜಾರೋಹಣವನ್ನು ರವಿಚಂದ್ರ (ಅಧ್ಯಕ್ಷರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ನಡೆಸಿ ಕೊಡಲಿದ್ದಾರೆ. ಬಹುಮಾನ ವಿತರಣೆಯನ್ನು ಅಮೃತಕಲಾ (ಶಿಕ್ಷಣ ಸಂಯೋಜಕರು ಪುತ್ತೂರು) ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಶುಭಾರಂಭವನ್ನು […]

ನ.15: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದ ವಾರ್ಷಿಕೋತ್ಸವ Read More »

ಮಕ್ಕಳು ನಮ್ಮ ಪಾಲಕರು – ರೊ. ಚಂದ್ರಹಾಸ ರೈ

ಪುತ್ತೂರು: ಇಲ್ಲಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಅರ್ಥಪೂರ್ಣವಾಗಿ ಜರುಗಿತು. ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 136ನೇ ಜನ್ಮದಿನದ ಅಂಗವಾಗಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯವರಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಉಪನ್ಯಾಸಕ, ಜೇಸೀ ತರಬೇತುದಾರ Rtn. ಚಂದ್ರಹಾಸ ರೈ ಮಾತನಾಡಿ ಸುಸಂಸ್ಕೃತ ಶಿಕ್ಷಣ ಸಂಸ್ಥೆಯಾಗಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ಸುಯೋಗ ಎಂದರು. ಹಿರಿಯರಾದ ನಾವು ಮಕ್ಕಳಿಂದ ಕಲಿಯಬೇಕಾದ್ದು ಸಾಕಷ್ಟಿದೆ ಎಂದು ಹೇಳಿ ಇಂದಿನ ಕಾರ್ಯಕ್ರಮದ ಉದ್ಘಾಟಕಿಯಾದ

ಮಕ್ಕಳು ನಮ್ಮ ಪಾಲಕರು – ರೊ. ಚಂದ್ರಹಾಸ ರೈ Read More »

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ

ಅನಾರೋಗ್ಯದಿಂದ ನಿಧನರಾದ ಶತಾಯುಷಿ ತಿಮ್ಮಕ್ಕ ಬೆಂಗಳೂರು : ವೃಕ್ಷಮಾತೆ ಎಂದೇ ಕರಿಯಲ್ಪಡುತ್ತಿದ್ದ ಸಾಲುಮರದ ತಿಮ್ಮಕ್ಕ ಅನಾರೋಗ್ಯದಿಂದಾಗಿ ಇಂದು ನಿಧನರಾಗಿದ್ದಾರೆ. ಅವರಿಗೆ 114 ವರ್ಷ ಪ್ರಾಯವಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ ಹುಲಿಕಲ್​​

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ Read More »

ಕೆಂಪುಕೋಟೆ ಸ್ಫೋಟದ ಆರೋಪಿ ಡಾ.ಉಮರ್‌ನ ಮನೆ ಧ್ವಂಸ

ಬುಡೋಜರ್‌ ನುಗ್ಗಿಸಿ ಮನೆಯನ್ನು ಕೆಡವಿ ಹಾಕಿದ ಭದ್ರತಾ ಪಡೆಗಳು ಶ್ರೀನಗರ : ದೆಹಲಿಯ ಕೆಂಪುಕೋಟೆಯ ಬಳಿ ಕಳೆದ ಸೋಮವಾರ ಸಂಭವಿಸಿದ್ದ ಕಾರು ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಡಾ.ಉಮರ್ ನಬಿ ಅಲಿಯಾಸ್‌ ಡಾ. ಮೊಹಮ್ಮದ್‌ ಉಮರ್‌ನ ಮನೆಯನ್ನು ಭದ್ರತಾ ಪಡೆ ಧ್ವಂಸಗೊಳಿಸಿದೆ. ಈ ಸ್ಫೋಟದಲ್ಲಿ ಅತ್ಮಾಹುತಿ ಬಾಂಬರ್‌ ಆಗಿದ್ದ ಡಾ. ಉಮರ್‌ ಸತ್ತಿರುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ದೆಹಲಿ ಸ್ಫೋಟದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ

ಕೆಂಪುಕೋಟೆ ಸ್ಫೋಟದ ಆರೋಪಿ ಡಾ.ಉಮರ್‌ನ ಮನೆ ಧ್ವಂಸ Read More »

ಬಿಹಾರ ಫಲಿತಾಂಶ: ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿರುವ ಎನ್‌ಡಿಎ; ಮಹಾಘಟಬಂಧನ್‌ ಮಹಾಪತನದತ್ತ

192 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ; ಕಾಂಗ್ರೆಸ್ಸಿನ ನಿರಾಶದಾಯಕ ಪ್ರದರ್ಶನ ಮುಂದುವರಿಕೆ ಪಾಟ್ನಾ : ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ. ಎಲ್ಲ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ನಿಚ್ಚಳ ಬಹುಮತದತ್ತ ಮುನ್ನಗ್ಗುತ್ತಿದ್ದು, ನಿರಾಯಾಸವಾಗಿ ಅಧಿಕಾರವನ್ನು ಉಳಿಸುಕೊಳ್ಳುವತ್ತ ಹೆಜ್ಜೆಯನ್ನು ಹಾಕುತ್ತಿದೆ. ಇದುವರೆಗಿನ ಟ್ರೆಂಡ್ ಪ್ರಕಾರ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಗೆಲುವಿನತ್ತ ಸಾಗುತ್ತಿದೆ. ಇನ್ನೊಂದು ಕಡೆ, ಮಹಾಘಟಬಂಧನ್, ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ಸಿನ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎನ್‌ಡಿ 192 ಕ್ಷೇತ್ರಗಳಲ್ಲಿ ಮುನ್ನಡೆ

ಬಿಹಾರ ಫಲಿತಾಂಶ: ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿರುವ ಎನ್‌ಡಿಎ; ಮಹಾಘಟಬಂಧನ್‌ ಮಹಾಪತನದತ್ತ Read More »

ಎಸ್‌ಐಟಿ ವಿರುದ್ಧವೇ ದೂರು ನೀಡಿದ ಜಯಂತ

ಹಲ್ಲೆ ಮಾಡಿ ಬಲವಂತದಿಂದ ಹೇಳಿಕೆ ಪಡೆದಿದ್ದಾರೆ ಎಂದು ಆರೋಪ ಬೆಳ್ತಂಗಡಿ: ಎಸ್.ಐ.ಟಿ‌ ಅಧಿಕಾರಿಗಳು ತನ್ನನ್ನು ವಿಚಾರಣೆಗೆಂದು ಕರೆದು ಹಲ್ಲೆ ಮಾಡಿದ್ದಲ್ಲದೆ ಬೆದರಿಕೆ ಹಾಕಿರುವುದಾಗಿ ಹೋರಾಟಗಾರ ಜಯಂತ್ ಟಿ. ರಾಜ್ಯಪಾಲರಿಗೆ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಎಸ್.ಐ.ಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಸೈಮನ್, ಮಂಜುನಾಥ್ ಆರ್.ಜೆ, ಮಂಜುನಾಥ ಗೌಡ, ಹಾಗೂ ಗುಣಪಾಲ ಸೇರಿ ತನಗೆ ಬೆದರಿಕೆ ಹಾಕಿದ್ದರು, ಬಳಿಕ ದೂರುದಾರ ಚಿನ್ನಯ್ಯನನ್ನು ಕರೆಸಿ ಆತನ ಮೂಲಕ ತನಗೆ ತೀವ್ರವಾಗಿ ಹಲ್ಲೆ ಮಾಡಿಸಿದರು. ಅದೇ ರೀತಿ ಚಿನ್ನಯ್ಯನ ಮೇಲೆ

ಎಸ್‌ಐಟಿ ವಿರುದ್ಧವೇ ದೂರು ನೀಡಿದ ಜಯಂತ Read More »

ಮಂಗಳೂರು: ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 1.81 ಕೋ. ರೂ. ದೋಚಿದ ಖದೀಮರು

ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಬೆದರಿಸಿ ಡಿಜಿಟಲ್‌ ಅರೆಸ್ಟ್‌ ಮಂಗಳೂರು: ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 1,81,50,000ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮಹಿಳೆಯೊಬ್ಬರ ಮೊಬೈಲ್‌ಗೆ ಅ.24ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಮುಂಬೈನ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಮಹಿಳೆಯನ್ನು ನಂಬಿಸಿ ಆಕೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಮಾಡಿ ಕಮಿಷನ್ ತೆಗೆದುಕೊಂಡ ಆರೋಪವಿದೆ ಎಂದು

ಮಂಗಳೂರು: ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 1.81 ಕೋ. ರೂ. ದೋಚಿದ ಖದೀಮರು Read More »

ಪುಣೆ ಅಪಘಾತ : ಮೃತರ ಸಂಖ್ಯೆ ಎಂಟಕ್ಕೇರಿಕೆ

ಕಂಟೇನರ್‌ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತ ಪುಣೆ : ಮಹಾರಾಷ್ಟ್ರದ ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆ ಬಳಿ ಗುರುವಾರ ರಾತ್ರಿ ಕಂಟೇನರ್ ಟ್ರಕ್ ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಖ್ಯೆ 8ಕ್ಕೇರಿದೆ. ಎರಡು ಕಂಟೇನರ್‌ಗಳ ನಡುವೆ ವಾಹನಗಳು ಸಿಲುಕಿಕೊಂಡ ಪರಿಣಾಮ 2ರಿಂದ 3 ಭಾರೀ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅನೇಕ ಮಂದಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಆರು ಮಂದಿ ಸ್ಥಳದಲ್ಲೇ ಜೀವಂತ ದಹನವಾಗಿದ್ದರು. ಎರಡು

ಪುಣೆ ಅಪಘಾತ : ಮೃತರ ಸಂಖ್ಯೆ ಎಂಟಕ್ಕೇರಿಕೆ Read More »

ನ.16ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ

ಕಾನೂನು ಹೋರಾಟದಲ್ಲಿ ಗೆದ್ದ ಆರ್‌ಎಸ್‌ಎಸ್‌; ಪ್ರಿಯಾಂಕ್‌ ಖರ್ಗೆಗೆ ಮುಖಭಂಗ ಕಲಬುರಗಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕೊನೆಗೂ ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್​ಗೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ನ.16ರ ಮಧ್ಯಾಹ್ನ 3.30ರಿಂದ ಸೂರ್ಯಾಸ್ತದವರೆಗೆ ಅವಕಾಶ ನೀಡಲಾಗಿದೆ. ಪಥಸಂಚಲನದಲ್ಲಿ 300 ಕಾರ್ಯಕರ್ತರು ಹಾಗೂ 25 ಬ್ಯಾಂಡ್ ವಾದಕರಿಗೆ ಅವಕಾಶ ನೀಡಲಾಗಿದ್ದು, ಒಟ್ಟು 325 ಜನ ಮಾತ್ರ ಭಾಗಿಯಾಗಬೇಕು ಎಂದು ತಿಳಿಸಿದೆ. ನವೆಂಬರ್​ 7ರಂದು ಇದೇ ವಿಚಾರವಾಗಿ ಕಲಬುರಗಿ ವಿಭಾಗೀಯ ಪೀಠದಲ್ಲಿ ನಡೆದಿದ್ದ ವಿಚಾರಣೆ

ನ.16ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ Read More »

ಇಂದು ಬಿಹಾರ ಫಲಿತಾಂಶ : ರಾಷ್ಟ್ರವ್ಯಾಪಿ ಭಾರಿ ಕುತೂಹಲ

ಎನ್‌ಡಿಎ ಮತ್ತೆ ಗೆಲುವಿನ ಹಾರ ಧರಿಸುತ್ತಾ?; ಮಹಾಘಟಬಂಧನ್‌ ಅಧಿಕಾರದ ಕನಸು ನನಸಾಗುತ್ತಾ? ಪಾಟ್ನಾ: ಜಿದ್ದಾಜಿದ್ದಿನ ಹೋರಾಟ ಕಂಡ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಇಡೀ ದೇಶ ಈ ಫಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿ ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿವೆ. ಚುನಾವಣೋತ್ತರ ಸಮೀಕ್ಷೆಗಳೆಲ್ಲ ಎನ್‌ಡಿಎ ಮೈತ್ರಿಕೂಟಕ್ಕೆ ಬಿಹಾರದ ಗೆಲುವಿನ ಹಾರ ಎಂದು ಭವಿಷ್ಯ ನುಡಿದಿದ್ದರೂ ಮಹಾಘಟಬಂಧನ್‌ ಕೂಡ

ಇಂದು ಬಿಹಾರ ಫಲಿತಾಂಶ : ರಾಷ್ಟ್ರವ್ಯಾಪಿ ಭಾರಿ ಕುತೂಹಲ Read More »

error: Content is protected !!
Scroll to Top