ಸುದ್ದಿ

ವಂಚಕ ರೋಷನ್‌ ಸಲ್ಡಾನನ 2.85 ಕೋ. ರೂ. ಮೌಲ್ಯದ ಆಸ್ತಿ ಜಪ್ತಿ

ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ 200 ಕೋ. ರೂ. ವಂಚಿಸಿದ್ದ ಆರೋಪಿ ಮಂಗಳೂರು: ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟಿಗಟ್ಟಲೆ ರೂಪಾಯಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ರೋಷನ್ ಸಲ್ಡಾನನ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ರೋಷನ್ ಸಲ್ಡಾನನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದ್ದಾರೆ. ರೋಷನ್ ಸಲ್ಡಾನ ಸಾಲ […]

ವಂಚಕ ರೋಷನ್‌ ಸಲ್ಡಾನನ 2.85 ಕೋ. ರೂ. ಮೌಲ್ಯದ ಆಸ್ತಿ ಜಪ್ತಿ Read More »

ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಕೆ.ಎಸ್.ಎಸ್. ಕಾಲೇಜಿನ ದೇವಿಕಾ ಆಯ್ಕೆ

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನ. 11 ರಿಂದ ನ. 17 ರವರೆಗೆಕುರುಕ್ಷೇತ್ರ ವಿಶ್ವವಿದ್ಯಾನಿಲಯ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕೆಎಸ್ಎಸ್ ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕಿ ದೇವಿಕಾ ದ್ವಿತೀಯ ಬಿಕಾಂ ಅವರು ಪಾಲ್ಗೊಳ್ಳಲಿದ್ದಾರೆ. ಇವರು ರಾಮಕುಂಜದ ಹೇಮಾಕ್ಷ – ಪ್ರಮೀಳಾ ದಂಪತಿ ಪುತ್ರಿ. ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳ ಪರವಾಗಿ ಹಾರ್ದಿಕ ಅಭಿನಂದನೆಗಳು.

ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಕೆ.ಎಸ್.ಎಸ್. ಕಾಲೇಜಿನ ದೇವಿಕಾ ಆಯ್ಕೆ Read More »

ಅಲ್‌ಖೈದಾ ಜಿಹಾದಿಗಳಿಂದ ಐವರು ಭಾರತೀಯರ ಅಪಹರಣ

ಹಿಂಸಾತ್ರಸ್ತ ಮಾಲಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳು ಮಾಲಿ : ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದಿಂದ ತತ್ತರಿಸಿರುವ ಪಶ್ಚಿಮ ಆಫ್ರಿಕಾದ ದೇಶವಾದ ಮಾಲಿಯಲ್ಲಿ ಅಲ್‌ ಖೈದಾ ಜಿಹಾದಿಗಳು ಐವರು ಭಾರತೀಯ ಪ್ರಜೆಗಳನ್ನು ಅಪಹರಿಸಿದ್ದಾರೆ ಎಂದು ಅವರ ಕಂಪನಿ ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಪಶ್ಚಿಮ ಮಾಲಿಯ ಕೊಬ್ರಿ ಬಳಿ ಗುರುವಾರ ಬಂದೂಕುಧಾರಿಗಳು ಕಾರ್ಮಿಕರನ್ನು ಅಪಹರಿಸಿದ್ದಾರೆ. ವಿದ್ಯುದೀಕರಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಐವರು ಭಾರತೀಯ ಪ್ರಜೆಗಳ ಅಪಹರಣವನ್ನು ನಾವು ದೃಢಪಡಿಸುತ್ತೇವೆ ಎಂದು

ಅಲ್‌ಖೈದಾ ಜಿಹಾದಿಗಳಿಂದ ಐವರು ಭಾರತೀಯರ ಅಪಹರಣ Read More »

ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿದಾತ ಸೆರೆ

ಪುತ್ತೂರು: ಆರೋಪಿಯೊಬ್ಬನಿಗೆ ಜಾಮೀನು ನೀಡಲು ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಪಡುವನ್ನೂರು ನಿವಾಸಿ ಅಬ್ದುಲ್ ಹಾಶೀಮ್ (34) ಬಂಧಿತ ಆರೋಪಿ. ಆರೋಪಿಯು ಪುತ್ತೂರು ನಿವಾಸಿಯೊಬ್ಬರಿಗೆ ಸೇರಿದ ಆರ್‌ಟಿಸಿ (ಹಕ್ಕುಗಳು, ಬಾಡಿಗೆ ಮತ್ತು ಬೆಳೆಗಳ ದಾಖಲೆ) ದಾಖಲೆಯನ್ನು ತನ್ನದು ಎಂದು ನಂಬಿಸಿ, ಮತ್ತೊಬ್ಬ ಆರೋಪಿಗೆ ಜಾಮೀನು ನೀಡಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆ

ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿದಾತ ಸೆರೆ Read More »

ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ, ನಿರ್ವಾಹಕನಿಗೆ ಗಾಯ

ಸುಳ್ಯ: ಇಂಟರ್‌ಲಾಕ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ ಮತ್ತು ನಿರ್ವಾಹಕ ಗಾಯಗೊಂಡ ಘಟನೆ ಸುಳ್ಯ ಅಜ್ಜಾವರ ಗ್ರಾಮದ ಮುಳ್ಯ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮುಳ್ಯದ ಯತೀಶ್ ಎಂಬವರ ಹೊಸ ಮನೆಯ ಅಂಗಳಕ್ಕೆ ಅಳವಡಿಸಲು ಇಂಟರ್‌ಲಾಕ್ ತುಂಬಿಕೊಂಡು ಹೋಗುತ್ತಿರುವಾಗ ಲಾರಿ ಪಲ್ಟಿಯಾಗಿದೆ.ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಬ್ಬರು ಗಾಯಗೊಂಡಿದ್ದಾರೆ. ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ನಿರ್ವಾಹಕ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ, ನಿರ್ವಾಹಕನಿಗೆ ಗಾಯ Read More »

ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಕಾರಿಡಾರ್‌ಗೆ ಸಮೀಕ್ಷೆ ನಡೆಸಲು ಸಮಿತಿ ರಚನೆ

ಶಿರಾಡಿ ಘಾಟ್​ನಲ್ಲಿ ಹೆದ್ದಾರಿ, ರೈಲ್ವೆ ಮಾರ್ಗ ನಿರ್ಮಾಣ ಸಾಧಕ-ಬಾಧಕ ಅಧ್ಯಯನ ಮಂಗಳೂರು : ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಕಾರಿಡಾರ್​​ಗೆ ಸಂಬಂಧಿಸಿದಂತೆ ಹಾಸನದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ ಸೇರಿದಂತೆ ರೈಲ್ವೆ ಮತ್ತು ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಜಂಟಿ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ತಜ್ಞರ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ. ಶಿರಾಡಿ ಘಾಟ್​​ನಲ್ಲಿ ಸುರಂಗ ಮಾರ್ಗ ನಿರ್ಮಾಣದ ಜಂಟಿ ಸಮೀಕ್ಷೆಗೆ ಸಮಿತಿ ರಚಿಸಲು ಕೋರಿ ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವ

ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಕಾರಿಡಾರ್‌ಗೆ ಸಮೀಕ್ಷೆ ನಡೆಸಲು ಸಮಿತಿ ರಚನೆ Read More »

ಕಬ್ಬು ಬೆಳೆಗಾರರ ಹೋರಾಟ: ಸಕ್ಕರೆ ಕಾರ್ಖಾನೆ ಮಾಲಕರ ಜೊತೆ ಸಿಎಂ ‌ಸಿದ್ದು ಸಭೆ

ಬೆಳಗಾವಿ: ಕಬ್ಬಿನ ಬೆಲೆ ಟನ್‌ಗೆ ಮೂರೂವರೆ ಸಾವಿರ ರೂ. ಗಳಿಗೆ ಏರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈ ನಡುವೆ ಸಿಎಂ ‌ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲಕರ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೂವತ್ತೆಂಟಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಮಾಲಕರು, ಆಡಳಿತ ಮಂಡಳಿಯ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಿಎಂ ಅವರು ಈ‌ ಸಭೆಯಲ್ಲಿ ರೈತರಿಗೆ ಮಾಡಬಹುದಾದ ನ್ಯಾಯಯುತ ಬೆಲೆಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಬ್ಬು ಬೆಳೆಗಾರರ ಹೋರಾಟ: ಸಕ್ಕರೆ ಕಾರ್ಖಾನೆ ಮಾಲಕರ ಜೊತೆ ಸಿಎಂ ‌ಸಿದ್ದು ಸಭೆ Read More »

ನಾನು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ ಎಂದ ಎಸ್‌ಪಿ ನಾಯಕ ಅಬು ಅಸಿಮ್ ಅಜ್ಮಿ

ಮುಂಬೈ: ಕೆಲವು ಹಾಡುಗಳು ಪ್ರಾರ್ಥನೆಗೆ ಸಂಬಂಧಿಸಿದವುಗಳಾಗಿದೆ. ಆದ್ದರಿಂದ ಮುಸಲ್ಮಾನರು ವಂದೇ ಮಾತರಂ ಪಠಿಸಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ನಾಯಕ ಅಬು ಅಸಿಮ್ ಅಜ್ಮಿ ಹೇಳಿದ್ದಾರೆ. ಬಿಜೆಪಿ ಮುಂಬೈ ನಗರವು ಅಜ್ಮಿ ಅವರನ್ನು ರಾಷ್ಟ್ರಕ್ಕೆ ಸಂಬಂಧಿಸಿದ ಗೀತೆ ವಂದೇ ಮಾತರಂ‌ನ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೀಡಿದ ಆಹ್ವಾನವನ್ನು ನಿರಾಕರಿಸಿ, ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ವಂದೇ ಮಾತರಂ 150 ವರ್ಷಗಳನ್ನು ಗುರುತಿಸುವ ಮಹಾರಾಷ್ಟ್ರ ಸರ್ಕಾರದ ಒಂದು ವಾರದ ಆಚರಣೆಯ ಭಾಗವಾಗಿ ಮುಂಬೈನಲ್ಲಿರುವ ಎಸ್‌ಪಿ ನಾಯಕನ

ನಾನು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ ಎಂದ ಎಸ್‌ಪಿ ನಾಯಕ ಅಬು ಅಸಿಮ್ ಅಜ್ಮಿ Read More »

ಗ್ರಂಥಾಲಯ ಸಲಹಾ ಸಮಿತಿಯ ಸಭೆ

ಬೆಳ್ತಂಗಡಿ: ತಾಲೂಕು ಕಳಿಯ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಸಲಹಾ ಸಮಿತಿ ಮಾಸಿಕ ಸಭೆಯು ಸಲಹಾ ಸಮಿತಿ ಅಧ್ಯಕ್ಷ ಹಾಗೂ ಗ್ರಾ.ಪಂ. ಅಧ್ಯಕ್ಷ ದಿವಾಕರ ಎಂ. ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಗ್ರಂಥಾಲಯದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗ್ಗೆ, ಅರಿವು ಕೇಂದ್ರಕ್ಕೆ ಪುಸ್ತಕಗಳು ಮತ್ತು ವಿಕಲಚೇತನ ಮಕ್ಕಳಿಗೆ ಅನುಕೂಲವಾಗುವ ಅನೇಕ ಸಲಕರಣೆಗಳು ಬಂದಿರುವ ಬಗ್ಗೆ ತಿಳಿಸಲಾಯಿತು. ಸಲಹಾ ಸಮಿತಿಯ ಸದಸ್ಯ ದಿವಾಕರ ಆಚಾರ್ಯ ಗೇರುಕಟ್ಟೆ, ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಈಶ್ವರಿ, ಕೇಶವ ಪೂಜಾರಿ

ಗ್ರಂಥಾಲಯ ಸಲಹಾ ಸಮಿತಿಯ ಸಭೆ Read More »

ನ.9: ಮಾಹಿ ಕಿರುಚಿತ್ರ ಬಿಡುಗಡೆ

ಕಾವು: ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ, ಅಜಿತ್ ಬಿ.ಟಿ. ನಿರ್ಮಾಣದ ಕಿರು ಚಿತ್ರ ಮಾಹಿ ಇದೇ ತಿಂಗಳ 9 ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಪ್ರಥಮ ಪ್ರೀಮಿಯರ್ ಶೋ ರಿಲೀಸ್ ಆಗಲಿದೆ ಎಂದು ಚಿತ್ರದ ನಿರ್ದೇಶಕ ಕೀರ್ತನ್ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ. ಹಲವು ಗಣ್ಯರ ಸಮ್ಮುಖದಲ್ಲಿ ತೆರೆ ಕಾಣಲಿರುವ, ಮಕ್ಕಳು ನಟಿಸಿರುವ ಮಾಹಿ ಚಿತ್ರದ 4 ಶೋ ಭಾನುವಾರ ಪ್ರದರ್ಶನಗೊಳ್ಳಲಿದೆ. ಚಿತ್ರದ ಎಲ್ಲ ಟಿಕೆಟ್‌ಗಳು ಮುಗಿದಿದ್ದು ಈಗಲೇ ಹೌಸ್ ಫುಲ್ ಆಗಿರುವುದಾಗಿ ಅವರು ಹೇಳಿದ್ದಾರೆ.

ನ.9: ಮಾಹಿ ಕಿರುಚಿತ್ರ ಬಿಡುಗಡೆ Read More »

error: Content is protected !!
Scroll to Top