ಸುದ್ದಿ

KRGಗೆ ಅರೆಭಾಷೆ ಫೆಲೋಶಿಪ್

ಮಡಿಕೇರಿ: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಷ್ಠಿತ “ಅಕಾಡೆಮಿ ಪ್ರಶಸ್ತಿ’ಗೆ KRG ಎಂದೇ ಜನಮಾನಸದಲ್ಲಿ ಪ್ರತೀತಿ ಪಡೆದಿರುವ ನಿವೃತ್ತ ಪ್ರಾಂಶುಪಾಲ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೆ. ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಅರೆಭಾಷೆ ನಿಘಂಟುವಿನ ಕರ್ತೃಅರೆಭಾಷೆಯ ಪದಕೋಶವೊಂದನ್ನು ರಚಿಸುವ ಮೂಲಕ ಅರೆಭಾಷೆಯ ಅಸ್ಮಿತೆ ಮತ್ತು ಅಸ್ತಿತ್ವಗಳಿಗೆ ಗಣನೀಯ ಕೊಡುಗೆಯೊಂದನ್ನು ನೀಡಿದವರು ಕೆ.ಆರ್. ಜಿ. ಜೊತೆಗೆ ‘ಸಾಧನಾ ಶೃಂಗ” ಎಂಬ ಕೃತಿಯನ್ನು ರಚಿಸಿ ಅದರಲ್ಲಿ […]

KRGಗೆ ಅರೆಭಾಷೆ ಫೆಲೋಶಿಪ್ Read More »

ಕಬ್ಬಿಗೆ 3,300 ರೂ. ನಿಗದಿ ಮಾಡಿರುವ ಸರ್ಕಾರದ ನಿಲುವು ಸಮ್ಮತವಲ್ಲ: ರೈತರಿಂದ ಧರಣಿ

ಬೆಳಗಾವಿ: ಕಬ್ಬಿಗೆ 3,300 ರೂ. ಬೆಲೆ ನಿಗದಿ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ಮುಧೋಳ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುವ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನಿಸಿದ್ದಾರೆ. ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಸಾವಿರಾರು ರೈತರು ಸೇರಿ ಸರ್ಕಾರದ ವಿರುದ್ಧ ಧರಣಿ ಮಾಡಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಬೆಲೆ ತಮಗೆ ಸಾಲುವುದಿಲ್ಲ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ. ಕಬ್ಬು ಟನ್‌ಗೆ 3,500 ರೂ. ಇರಲೇಬೇಕು ಎಂದು ಆಗ್ರಹಿಸಿದ್ದಾರೆ.

ಕಬ್ಬಿಗೆ 3,300 ರೂ. ನಿಗದಿ ಮಾಡಿರುವ ಸರ್ಕಾರದ ನಿಲುವು ಸಮ್ಮತವಲ್ಲ: ರೈತರಿಂದ ಧರಣಿ Read More »

ಅತಿವೇಗದ ಚಾಲನೆ: ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರ ದುರ್ಮರಣ

ಬೆಂಗಳೂರು: ಅತಿ ವೇಗದಿಂದ ಚಲಾಯಿಸುತ್ತಿದ್ದ ಬೈಕ್ ಸವಾರಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ರಸ್ತೆ ಪಾಳ್ಯದ ಗಾಂಧಿ ಫಾರಂ ಬಳಿ ನಡೆದಿದೆ. ಬೆಂಗಳೂರಿನಿಂದ ಹಾಸನದ ಕಡೆಗೆ ಬೈಕ್‌ನಲ್ಲಿ ಯುವಕರಿಬ್ಬರು ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೃತದೇಹಗಳ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು ಶವಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಕುದೂರು ‌ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತಿವೇಗದ ಚಾಲನೆ: ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರ ದುರ್ಮರಣ Read More »

ಡಿ.1-19 ರ ವರೆಗೆ ಸಂಸತ್ ಚಳಿಗಾಲದ ಅಧಿವೇಶನ ನಡೆಸಲು ರಾಷ್ಟ್ರಪತಿ ಸಮ್ಮತಿ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ನಡೆಸಲು ಡಿ. 1 ರಿಂದ 19 ರ ವರೆಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮುಂಬರುವ ಚಳಿಗಾಲದ ಅಧಿವೇಶನ ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಹಾಗೂ ಜನರ ಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ. ಜುಲೈ 21ರಂದು ಆರಂಭಗೊಂಡಿದ್ದ ಚಳಿಗಾಲದ

ಡಿ.1-19 ರ ವರೆಗೆ ಸಂಸತ್ ಚಳಿಗಾಲದ ಅಧಿವೇಶನ ನಡೆಸಲು ರಾಷ್ಟ್ರಪತಿ ಸಮ್ಮತಿ Read More »

ಬನ್ನೂರು: ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಅವರಿಗೆ ಅಲುಂಬುಡ ಸೇವಾ ಪ್ರತಿಷ್ಠಾನದಿಂದ ಸನ್ಮಾನ

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯಲ್ಲಿ ಸುದೀರ್ಘ ೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಈಶ್ವರ ಗೌಡ ಬಾರಿಂಜ ಅವರಿಗೆ ಬನ್ನೂರು ಅಲುಂಬುಡ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.೫ರಂದು ಅಲುಂಬುಡ ತರವಾಡು ಮನೆಯಲ್ಲಿ ನಡೆಯಿತು. ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು, ಗೌಡ ಸಮಾಜ ಸಜ್ಜನ ಸಮಾಜ. ಹಿರಿಯರು ಮಾಡಿದ ಕಾಯಕದಿಂದಾಗಿ ಈಗಿನ ತಲೆಮಾರಿನವರನ್ನು ಮನೆತನದಿಂದ ಗುರುತಿಸುವಂತೆ ಆಗಿದೆ. ಗೌಡರದ್ದು ೧೦ ಕುಟುಂಬ ೧೮ ಗೋತ್ರ ಸಂಪ್ರದಾಯ. ನಮ್ಮದೇ ಆದ ಆಚಾರ, ವಿಚಾರಗಳಿವೆ.

ಬನ್ನೂರು: ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಅವರಿಗೆ ಅಲುಂಬುಡ ಸೇವಾ ಪ್ರತಿಷ್ಠಾನದಿಂದ ಸನ್ಮಾನ Read More »

ಪುಂಜಾಲಕಟ್ಟೆಯಲ್ಲಿ ಸ್ವಯಂ ರಕ್ಷಣಾ ತರಬೇತಿ

ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ, ಯುವ ರೆಡ್ ಕ್ರಾಸ್ ಘಟಕ, ಕ್ರೀಡಾ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಸಬಲೀಕರಣ ಘಟಕ ಮತ್ತು ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ನಡೆಯಿತು. November 7ರಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ (Swaraksha for Women Trust) ಇದರ

ಪುಂಜಾಲಕಟ್ಟೆಯಲ್ಲಿ ಸ್ವಯಂ ರಕ್ಷಣಾ ತರಬೇತಿ Read More »

ಮನೆಗೆ ನುಗ್ಗಿ ನಗ-ನಗದು ಕಳವು

ಪುತ್ತೂರು: ಬಲ್ನಾಡಿನ ಪಾಲೆಚ್ಚಾರ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಎಗರಿಸಿದ ಘಟನೆ ನಡೆದಿದ್ದು, ಈ ಸಂಬಂಧ ಮನೆಯಲ್ಲಿ ವಾಸ್ತವ್ಯ ಇರುವ ಉಮಾವತಿ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುದ್ದುಪದವಿನ ಅಂಗನವಾಡಿಯಲ್ಲಿ ‌ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಉಮಾವತಿ ಅವರು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಕ್ಟೋಬರ್ 22 ರಂದು ತಮ್ಮ ಪಾಲೆಚ್ಚಾರ್ ಮನೆಗೆ ಹೋಗಿ ಬಂದಿದ್ದರು. ಆ ಬಳಿಕ ನ. 5 ರಂದು ಮತ್ತೆ ಪಾಲೆಚ್ಚಾರ್ ಮನೆಗೆ ಹೋದಾಗ ಕಳ್ಳತನವಾಗಿರುವುದು

ಮನೆಗೆ ನುಗ್ಗಿ ನಗ-ನಗದು ಕಳವು Read More »

ಬನ್ನೂರು: ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಅವರಿಗೆ ಅಲುಂಬುಡ ಸೇವಾ ಪ್ರತಿಷ್ಠಾನದಿಂದ ಸನ್ಮಾನ

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯಲ್ಲಿ ಸುದೀರ್ಘ ೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಈಶ್ವರ ಗೌಡ ಬಾರಿಂಜ ಅವರಿಗೆ ಬನ್ನೂರು ಅಲುಂಬುಡ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನ ಕಾರ್ಯಕ್ರಮ ನ.೫ರಂದು ಅಲುಂಬುಡ ತರವಾಡು ಮನೆಯಲ್ಲಿ ನಡೆಯಿತು. ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು, ಗೌಡ ಸಮಾಜ ಸಜ್ಜನ ಸಮಾಜ. ಹಿರಿಯರು ಮಾಡಿದ ಕಾಯಕದಿಂದಾಗಿ ಈಗಿನ ತಲೆಮಾರಿನವರನ್ನು ಮನೆತನದಿಂದ ಗುರುತಿಸುವಂತೆ ಆಗಿದೆ. ಗೌಡರದ್ದು ೧೦ ಕುಟುಂಬ ೧೮ ಗೋತ್ರ ಸಂಪ್ರದಾಯ. ನಮ್ಮದೇ ಆದ ಆಚಾರ, ವಿಚಾರಗಳಿವೆ.

ಬನ್ನೂರು: ಕ್ಯಾಂಪ್ಕೋ ನಿವೃತ್ತ ನೌಕರ ಈಶ್ವರ ಗೌಡ ಅವರಿಗೆ ಅಲುಂಬುಡ ಸೇವಾ ಪ್ರತಿಷ್ಠಾನದಿಂದ ಸನ್ಮಾನ Read More »

ಜಾನುವಾರು ಅಕ್ರಮ ಸಾಗಾಟ ಪ್ರಕರಣ : ಜಪ್ತಿ ಮಾಡಿದ ಮನೆ ವಾಪಸು ನೀಡಲು ಆದೇಶ

ಕರು ಮಾರಾಟ ಮಾಡಿದವರ ಮನೆ ಜಪ್ತಿ ಮಾಡಿದ್ದು ಕಾನೂನು ವ್ಯಾಪ್ತಿ ಮೀರಿದ ಕ್ರಮ ಎಂದ ಪುತ್ತೂರು ಎಸಿ ಬೆಳ್ತಂಗಡಿ : ದನ ಮಾರಾಟ ಮಾಡಿದ ಕಾರಣಕ್ಕೆ ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಮನೆ ಜಪ್ತಿ ಮಾಡಿದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಜೊಹರಾ ಸಾರಮ್ಮ ಅವರ ವಾಸದ ಮನೆಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಕ್ರಮವಾಗಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಧರ್ಮಸ್ಥಳ

ಜಾನುವಾರು ಅಕ್ರಮ ಸಾಗಾಟ ಪ್ರಕರಣ : ಜಪ್ತಿ ಮಾಡಿದ ಮನೆ ವಾಪಸು ನೀಡಲು ಆದೇಶ Read More »

ಕೇಶವ ಅಮೈ ಹುಟ್ಟುಹಬ್ಬ: SRK ಲ್ಯಾಡರ್ಸ್ ಸಿಬ್ಬಂದಿಯಿಂದ ನೇತ್ರದಾನ ಪತ್ರಕ್ಕೆ ಸಹಿ

ಪುತ್ತೂರು: ಮಾನವನ ದೇಹಕ್ಕೆ ಸಾವಿದೆ ಆದರೆ ಕಣ್ಣಿಗೆ ಸಾವಿಲ್ಲ ಎಂಬಂತೆ SRK ಲ್ಯಾಡರ್ಸ್‌ನ ಮಾಲಕ ಕೇಶವ್ ಅಮೈ ಮತ್ತು ಅವರ 66 ಸಿಬ್ಬಂದಿ ಕೇಶವ್ ಅವರ ಜನ್ಮದಿನವನ್ನು ನೇತ್ರದಾನ ಪತ್ರಕ್ಕೆ ಸಹಿ ಹಾಕುವ ಮೂಲಕ ವಿಶೇಷವಾಗಿ ಆಚರಿಸಿದರು. ಕೇಶವ್ ಅಮೈ ಅವರ ಜನ್ಮದಿನದ ಪ್ರಯುಕ್ತ ಸಂಸ್ಥೆಯಲ್ಲಿ ನೇತ್ರ ದಾನ ನೋಂದಣಿ ಶಿಬಿರ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ನೇತ್ರ ದಾನ ಪತ್ರಕ್ಕೆ ಸಹಿ ಹಾಕಿದರು. ಹಾಗೆಯೇ ಅಡಿಕೆಯನ್ನು ಗೊನೆಯಿಂದ ಬಿಡಿಸುವ ಮತ್ತು ಕಾಳುಮೆಣಸು ಸ್ವಚ್ಛಗೊಳಿಸುವ ಯಂತ್ರಗಳ

ಕೇಶವ ಅಮೈ ಹುಟ್ಟುಹಬ್ಬ: SRK ಲ್ಯಾಡರ್ಸ್ ಸಿಬ್ಬಂದಿಯಿಂದ ನೇತ್ರದಾನ ಪತ್ರಕ್ಕೆ ಸಹಿ Read More »

error: Content is protected !!
Scroll to Top