ಸುದ್ದಿ

ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌

ಮನೆಗೆ ಹೋಗಲು ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಬಲವಂತವಾಗಿ ಬಸ್‌ಗೆ ಹತ್ತಿಸಿಕೊಂಡು ಕೃತ್ಯ ನವದೆಹಲಿ: ಚಲಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ನಂಗ್ಲೋಯಿಯಲ್ಲಿ ನಡೆದಿದೆ. ಬಸ್ಸಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಬಸ್ ಡ್ರೈವರ್, ಕಂಡಕ್ಟರ್‌ನನ್ನು ಬಂಧಿಸಿದ್ದಾರೆ. ಸೋಮವಾರ ರಾತ್ರಿ 11 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಎಂದಿನಂತೆ ಕೆಲಸ ಮುಗಿಸಿ ಮಹಿಳೆ ಸರಸ್ವತಿ ವಿಹಾರ್ […]

ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌ Read More »

ಅಮೆರಿಕ-ಚೀನಾ ಭಾಯಿ ಭಾಯಿ : ಟ್ರಂಪ್‌ಗೆ ಭರ್ಜರಿ ಸ್ವಾಗತ

ಕ್ಸಿ ಜಿನ್‌ಪಿಂಗ್ ಅವರನ್ನು ಹಾಡಿ ಹೊಗಳಿದ ಟ್ರಂಪ್‌ ಬೀಜಿಂಗ್‌: ಚೀನಾಕ್ಕೆ ಭೇಟಿ ನೀಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಚೀನಾದ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದ ಟ್ರಂಪ್‌ ಈಗ ಚೀನಾವನ್ನು ಹಾಡಿ ಹೊಗಳಿದ್ದಾರೆ. ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಐತಿಹಾಸಿಕ ಜಿ-2 (G2) ಶೃಂಗಸಭೆಯ ಆರಂಭಿಕ ಮಾತುಕತೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಜಿನ್‌ಪಿಂಗ್ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಿಮ್ಮೊಂದಿಗೆ ಇರುವುದು ಮತ್ತು

ಅಮೆರಿಕ-ಚೀನಾ ಭಾಯಿ ಭಾಯಿ : ಟ್ರಂಪ್‌ಗೆ ಭರ್ಜರಿ ಸ್ವಾಗತ Read More »

ಸಕ್ಕರೆ ರಫ್ತು ತಕ್ಷಣದಿಂದ ಬ್ಯಾನ್‌

ಬೆಲೆ ನಿಯಂತ್ರಿಸಲು ಕೇಂದ್ರದಿಂದ ಕಠಿಣ ಕ್ರಮ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶದೊಳಗೆ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30ರವರೆಗೆ ಸಂಪೂರ್ಣ ನಿಷೇಧ ಹೇರಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಈ ಆದೇಶ ಪ್ರಕಟಿಸಿದೆ. ಸಕ್ಕರೆ ರಫ್ತು ನೀತಿಯನ್ನು ಈ ಹಿಂದೆ ಇದ್ದ ‘ನಿರ್ಬಂಧಿತ’ ವರ್ಗದಿಂದ ‘ನಿಷೇಧಿತ’ ವರ್ಗಕ್ಕೆ

ಸಕ್ಕರೆ ರಫ್ತು ತಕ್ಷಣದಿಂದ ಬ್ಯಾನ್‌ Read More »

ಗಾಳಿ-ಮಳೆಯ ಆರ್ಭಟ : 74 ಮಂದಿ ಸಾವು

ಮರ, ವಿದ್ಯುತ್‌ ಕಂಬ, ಕಟ್ಟಡ ಬಿದ್ದು ವ್ಯಾಪಕ ಹಾನಿ ಲಖನೌ : ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ವರದಿಯಂತೆ ಉತ್ತರ ಪ್ರದೇಶ ವ್ಯಾಪ್ತಿಯಲ್ಲಿ ಚಂಡಮಾರುತ

ಗಾಳಿ-ಮಳೆಯ ಆರ್ಭಟ : 74 ಮಂದಿ ಸಾವು Read More »

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹಿಂಬಾಕಿ ಪಾವತಿ, ವೇತನ ತಾರತಮ್ಯ ನಿವಾರಣೆ ಬೇಡಿಕೆ ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ 26 ತಿಂಗಳ ಬಾಕಿ ಹಣ 1,272 ಕೋಟಿ ರೂ.ಒಂದೇ ಕಂತಿನಲ್ಲಿ ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ Read More »

ಇಂದಿರಾ ಗಾಂಧಿ ನಂತರದ ಮಾಸ್‌ ಲೀಡರ್‌ ಮೋದಿ : ರಾಜಣ್ಣ ಹೊಗಳಿಕೆ

ಮೋದಿ ಜನರನ್ನು ಆಕರ್ಷಿಸುವ ಲೀಡರ್‌ ಎಂದ ಮಾಜಿ ಸಚಿವ ಬೆಂಗಳೂರು: ಇಂದಿರಾ ಗಾಂಧಿ ನಂತರ ಮಾಸ್ ಲೀಡರ್, ಜನರನ್ನು ಆಕರ್ಷಿಸುವ ನಾಯಕರಿದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿ ಕಾಂಗ್ರೆಸ್‌ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ಇಂದಿರಾ ಗಾಂಧಿಯವರ ನಂತರ ಮಾಸ್ ಲೀಡರ್ ಅಂತ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ. ಹಾಗಂತ ನಾನು ಮೋದಿಯವರನ್ನು ಹೊಗಳುತ್ತಿಲ್ಲ. ವಾಸ್ತವ ಹೇಳುತ್ತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ರಾಜಕಾರಣದಲ್ಲಿ ಜನಪ್ರಿಯತೆ ಯಾರಿಗೂ ಶಾಶ್ವತವಲ್ಲ.

ಇಂದಿರಾ ಗಾಂಧಿ ನಂತರದ ಮಾಸ್‌ ಲೀಡರ್‌ ಮೋದಿ : ರಾಜಣ್ಣ ಹೊಗಳಿಕೆ Read More »

ವೋಟ್‌ ಬ್ಯಾಂಕ್‌ ಖುಷಿಪಡಿಸಲು ಹಿಜಾಬ್‌ಗೆ ಅವಕಾಶ : ಅಶೋಕ್‌ ಟೀಕೆ

ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂಗಳಿಗೆ ಅವಮಾನ ಎಂದು ಆಕ್ರೋಶ ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರದ ಆದೇಶವನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ನಾಯಕ ಆರ್‌.ಅಶೋಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಭರಪೂರ ಅವಕಾಶ ಕೊಡ್ತಾರೆ, ಹಿಂದೂಗಳನ್ನು ಕಡೆಗಣಿಸ್ತಾರೆ ಎಂದು ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅಂದರೆ ಮುಸ್ಲಿಮರಿಗೆ ಭರಪೂರ ಅವಕಾಶಗಳು. ಸಿದ್ದರಾಮಯ್ಯನವರು ಹಿಂದೂಗಳನ್ನ ಕಡೆಗಣಿಸ್ತಾರೆ, ಹಿಂದೂಗಳಿಗೆ ಅವಮಾನ ಮಾಡ್ತಾರೆ. ಜನಿವಾರ ಕಂಡರೆ ಆಗಲ್ಲ, ಬೊಟ್ಟು ಇಟ್ಟುಕೊಂಡರೆ ಆಗಲ್ಲ, ದೇವಸ್ಥಾನಕ್ಕೆ ಹೋದರೆ ಆಗಲ್ಲ. ಆದರೆ ಮುಲ್ಲಾಗಳ ಮೇಲೆ ಬಹಳ

ವೋಟ್‌ ಬ್ಯಾಂಕ್‌ ಖುಷಿಪಡಿಸಲು ಹಿಜಾಬ್‌ಗೆ ಅವಕಾಶ : ಅಶೋಕ್‌ ಟೀಕೆ Read More »

ಚಿನ್ನದ ದರ ಏಕಾಏಕಿ 8,838 ರೂ. ಏರಿಕೆ, ಬೆಳ್ಳಿಯೂ ಜಿಗಿತ

ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ನಾಗಾಲೋಟ ಮುಂಬೈ: ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಏರಿಕೆಯಾಗಿದೆ. ಇಂದು ಬೆಳಗ್ಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ.(5.66%) ಏರಿಕೆಯಾಗಿ 1,61,887 ರೂ.ನಲ್ಲಿ ವ್ಯವಹಾರ ನಡೆಸುತ್ತಿದ್ದರೆ 1 ಕೆಜಿ ಬೆಳ್ಳಿ ದರ 18,0920 ರೂ. (6.36%) ಏರಿಕೆಯಾಗಿ 2,98,400 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಮಧ್ಯಾಹ್ನ ನಂತರ ಈ ದರ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ. ಎಂಸಿಎಕ್ಸ್

ಚಿನ್ನದ ದರ ಏಕಾಏಕಿ 8,838 ರೂ. ಏರಿಕೆ, ಬೆಳ್ಳಿಯೂ ಜಿಗಿತ Read More »

ಇಂದಿರಾ ಗಾಂಧಿ ಊಟ, ಟೀ ಬಿಡಿ ಎಂದಿದ್ದನ್ನು ಮರೆತಿದ್ದಿರಾ?: ಕಾಂಗ್ರೆಸ್‌ಗೆ ದೇವೇಗೌಡ ತಿರುಗೇಟು

ಮೋದಿ ಬಗ್ಗೆ ಹಗುರ ಮಾತು ಬೇಡ ಎಂದು ಎಚ್ಚರಿಕೆ ಹಾಸನ: ಜಾಗತಿಕ ಮಟ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಳಕೆ ತಗ್ಗಿಸಿ, ಚಿನ್ನ ಖರೀದಿ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಕಾಂಗ್ರೆಸ್‌ ನಾಯಕರ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನಾಗಪುರದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ವಾರದಲ್ಲಿ ಒಂದು ದಿನ ಊಟ, ಟೀ ಕುಡಿಯುವುದನ್ನು ಬಿಡಿ ಎಂದು ಬಹಿರಂಗ ಹೇಳಿಕೆ ನೀಡಿರುವ ವಿಚಾರವನ್ನು ಕಾಂಗ್ರೆಸ್‌ ನಾಯಕರು

ಇಂದಿರಾ ಗಾಂಧಿ ಊಟ, ಟೀ ಬಿಡಿ ಎಂದಿದ್ದನ್ನು ಮರೆತಿದ್ದಿರಾ?: ಕಾಂಗ್ರೆಸ್‌ಗೆ ದೇವೇಗೌಡ ತಿರುಗೇಟು Read More »

ಕನ್ನಡದ ಖ್ಯಾತ ನಟ ದಿಲೀಪ್‌ ರಾಜ್‌ ನಿಧನ

ಹೀರೊ, ವಿಲನ್‌ ಪಾತ್ರಗಳಲ್ಲಿ ಮಿಂಚಿದ್ದ ಪ್ರತಿಭಾವಂತ ಕಲಾವಿದ ಬೆಂಗಳೂರು: ಕನ್ನಡದ ಕಿರುತೆರೆ ಮತ್ತು ಸಿನಿಮಾ ನಟ ದಿಲೀಪ್‌ ರಾಜ್‌ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು. 2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ

ಕನ್ನಡದ ಖ್ಯಾತ ನಟ ದಿಲೀಪ್‌ ರಾಜ್‌ ನಿಧನ Read More »

error: Content is protected !!
Scroll to Top