ಸುದ್ದಿ

ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ

ಮೂರನೇ ಟಿ20ಯಲ್ಲಿ ಸುಲಭ ಜಯ; ಸರಣಿಯಲ್ಲಿ 2-1 ಮುನ್ನಡೆ ಧರ್ಮಶಾಲಾ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆ ಕಾಯ್ದುಕೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಪ್ರಿಕಾ ತಂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್‌ ಆಯಿತು. 118 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ […]

ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ Read More »

ಇಂದು ಸಂಜೆ ಶಾಮನೂರ ಶಿವಶಂಕರಪ್ಪ ಅಂತ್ಯಕ್ರಿಯೆ

ಗಣ್ಯರ ಸಹಿತ ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ದಾವಣಗೆರೆ : ಕಾಂಗ್ರೆಸ್​​ನ ಹಿರಿಯ ಮುತ್ಸದ್ದಿ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ವಯೋಸಹಜ ಅನಾರೋಗ್ಯದಿಂದ ಭಾನುವಾರ ಲಿಂಗೈಕ್ಯರಾಗಿದ್ದು, ಅವರ ಅಂತ್ಯಸಂಸ್ಕಾರ ದಾವಣಗೆರೆಯಲ್ಲಿ ಇಂದು ಸಂಜೆ ನಡೆಯಲಿದೆ. ಬೆಂಗಳೂರಿನಿಂದ ಇಂದು ನಸುಕಿನ ಜಾವ ಶಾಮನೂರರ ಪಾರ್ಥಿವ ಶರೀರ ದಾವಣಗೆರೆಗೆ ಆಗಮಿಸಿದೆ. ಬೆಳಗ್ಗೆ 7 ರಿಂದ 12ರ ವರೆಗೆ ಶಾಮನೂರ ಪುತ್ರ ಸಚಿವ ಎಸ್​​ಎಸ್​​ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ

ಇಂದು ಸಂಜೆ ಶಾಮನೂರ ಶಿವಶಂಕರಪ್ಪ ಅಂತ್ಯಕ್ರಿಯೆ Read More »

ಮೈಸೂರಿನಲ್ಲಿ ಸೋನಿಕಾ ಜನಾರ್ದನ್ ಅವರಿಂದ ಸಂವಿಧಾನ ಪೀಠಿಕಾ ಗೀತೆ

ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ ಮೈಸೂರು ಮತ್ತು ಮಹಾಬೆಳಕು (ರಿ ) ಇದರ ವತಿಯಿಂದ ವಿಶ್ವ ವಿದ್ಯಾನಿಲಯದ ಸಭಾಂಗಣದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಸಂವಿಧಾನ ಪೀಠಿಕೆ ಗೀತೆ ಹಾಡಿ ಜನಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಖ್ಯಾತ ಚಿಂತಕರಾದ ಶಂಕರ ದೇವನೂರು, ಹಿರಿಯ ರಂಗ ಕರ್ಮಿ ರಾಜಶೇಖರ ಕದಂಬ, ರಂಗ ಕಲಾವಿದರಾದ

ಮೈಸೂರಿನಲ್ಲಿ ಸೋನಿಕಾ ಜನಾರ್ದನ್ ಅವರಿಂದ ಸಂವಿಧಾನ ಪೀಠಿಕಾ ಗೀತೆ Read More »

ಕುದ್ಮಾರು ಶಾಲಾ ವಾರ್ಷಿಕೋತ್ಸವ

ಕಾಣಿಯೂರು: ಅನೇಕ ಏಳುಬೀಳುಗಳನ್ನು ಕಂಡ ಕುದ್ಮಾರು ಶಾಲೆಯು ಇದೀಗ ಎಲ್ಲರ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಸಂಭ್ರಮದಿಂದ ಆಚರಿಸುತ್ತಿರುವ ಶಾಲಾ ವಾರ್ಷಿಕೋತ್ಸವ ಊರ ಹಬ್ಬವಾಗಿ ಮೂಡಿಬಂದಿದೆ ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ ಹೇಳಿದರು. ಅವರು ಡಿ.13ರಂದು ನಡೆದ ಕುದ್ಮಾರು ಸ.ಉ.ಹಿ.ಪ್ರಾ.ಶಾಲೆ ಹಾಗೂ ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ

ಕುದ್ಮಾರು ಶಾಲಾ ವಾರ್ಷಿಕೋತ್ಸವ Read More »

ಸ್ಪೀಕರ್‌ ಖಾದರ್‌ ಹರಿಕಥೆ ಟೀಕೆಗೆ ಕರಾವಳಿಯಲ್ಲಿ ಆಕ್ರೋಶ

ಅನುದಾನ ಕೇಳಿದಾಗ ಹರಿಕಥೆ ಹೇಳಬೇಡಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಬಾಯಿಮುಚ್ಚಿಸಿದ ಖಾದರ್‌ ಉಡುಪಿ: ವಿಧಾನಸಭೆ ಅಧಿವೇಶನದಲ್ಲಿ ಉಡುಪಿ ಪರ್ಯಾಯಕ್ಕೆ ಅನುದಾನ ಕೋರಿ ಮಾತನಾಡಿದ ಸಂದರ್ಭ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಮತ್ತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಡುವೆ ನಡೆದ ಮಾತಿನ ಚಕಮಕಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದೆ. ಕರಾವಳಿ ಭಾಗದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಹೇಳಿಕೆ ಮತ್ತು ಸ್ಪೀಕರ್ ನಡೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಅಧಿವೇಶನದಲ್ಲಿ ಮಾತನಾಡುವ ವೇಳೆ ಶಾಸಕ ಯಶಪಾಲ್

ಸ್ಪೀಕರ್‌ ಖಾದರ್‌ ಹರಿಕಥೆ ಟೀಕೆಗೆ ಕರಾವಳಿಯಲ್ಲಿ ಆಕ್ರೋಶ Read More »

ಅಮಲೇರಿದಾಗ ಬಸ್ಸನ್ನೇ ಕದ್ದುಕೊಂಡು ಹೋದ ಕುಡುಕರು!

ಜನ ಸಂಚಾರವಿಲ್ಲದ ಕಾರಣ ತಪ್ಪಿದ ಅನಾಹುತ ಬೆಂಗಳೂರು : ಶರಾಬಿನ ಮತ್ತಿನಲ್ಲಿ ಬಸ್ಸನ್ನೇ ಕದ್ದುಕೊಂಡು ಹೋದ ಘಟನೆಯೊಂದು ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಬಸ್‌ ಚಲಾಯಿಸಿಕೊಂಡು ಪಲಾಯನ ಮಾಡಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ವ್ಯಕ್ತಿ ಮತ್ತು ರಸ್ತೆ ಬದಿಯ ವಿದ್ಯುತ್​​ ಕಂಬಗಳಿಗೆ ಬಸ್ ಡಿಕ್ಕಿಯಾಗಿ ಕುಡುಕುರು ಸಿಕ್ಕಿಬಿದ್ದಿದ್ದಾರೆ. ಘಟನೆ ನಿನ್ನೆ ರಾತ್ರಿ ​​ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್‌ನ ಮುಂಭಾಗ ಜಖಂ ಆಗಿದ್ದು, ರಾತ್ರಿ ವೇಳೆ ಜನ ಸಂಚಾರ

ಅಮಲೇರಿದಾಗ ಬಸ್ಸನ್ನೇ ಕದ್ದುಕೊಂಡು ಹೋದ ಕುಡುಕರು! Read More »

ಐಷರಾಮಿ ಕಾರಿನಲ್ಲಿ ಗೋ ಕಳ್ಳತನ : ಬೆನ್ನಟ್ಟಿಕೊಂಡು ಹೋದ ಹಿಂದೂ ಕಾರ್ಯಕರ್ತರು

10 ಕಿ.ಮೀ. ಸಿನಿಮಾ ಶೈಲಿಯಲ್ಲಿ ಚೇಸ್‌ ಮಾಡಿದರೂ ತಪ್ಪಿಸಿಕೊಂಡ ದುಷ್ಕರ್ಮಿಗಳು ಚಿಕ್ಕಮಗಳೂರು: ರಸ್ತೆ ಬದಿ ಮಲಗಿದ್ದ ಗೋವುಗಳನ್ನು ಎಕ್ಸ್‌ಯುವಿ 500 ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗುತ್ತಿದ್ದ ಗೋ ಕಳ್ಳರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿರುವ ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪದಿಂದ‌ ಕುದುರೆಗುಂಡಿಯವರೆಗೆ ಸುಮಾರು 10 ಕಿ.ಮೀ ಎರಡು ಕಾರುಗಳು ರೇಸ್‌ನಂತೆ ಅತಿವೇಗವಾಗಿ ಸಾಗಿವೆ. ಹಿಂದೂ ಸಂಘಟಕರು ಈ ಚೇಸ್ ಮಾಡಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕೊಪ್ಪ ಪಟ್ಟಣದಿಂದ

ಐಷರಾಮಿ ಕಾರಿನಲ್ಲಿ ಗೋ ಕಳ್ಳತನ : ಬೆನ್ನಟ್ಟಿಕೊಂಡು ಹೋದ ಹಿಂದೂ ಕಾರ್ಯಕರ್ತರು Read More »

ಶಾಲಾ ಬಾಲಕಿಗೆ ಕಿರುಕುಳ : ವೃದ್ಧ ಬಂಧನ

ಮಂಗಳೂರು: ಶಾಲಾ ಬಾಲಕಿಗೆ ವೃದ್ಧನೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಸುರತ್ಕಲ್ ಪೊಲೀಸರು ಪೊಕ್ಸೊ ಕಾಯ್ದೆಯಡಿ ಆರೋಪಿಯನ್ನು ಚೇಳಾಯರು ಎಂಬಲ್ಲಿ ಬಂಧಿಸಿದ್ದಾರೆ. ಸುರತ್ಕಲ್ ಚೇಳಾಯರು ನಿವಾಸಿ ಸುಂದರ ಪೂಜಾರಿ (60) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯೂಶನ್ ಮುಗಿಸಿ ಬಸ್‌ನಲ್ಲಿ ಬಂದು ಮುಕ್ಕದಲ್ಲಿ ಇಳಿದು ತನ್ನ ಮನೆಗೆ ಒಳ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆ ರಸ್ತೆಯಾಗಿ ಬಂದ ಆರೋಪಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾಳೆ. ಈ ಘಟನೆ

ಶಾಲಾ ಬಾಲಕಿಗೆ ಕಿರುಕುಳ : ವೃದ್ಧ ಬಂಧನ Read More »

ಬಂಟ್ವಾಳ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

ಬಂಟ್ವಾಳ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, 810 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) ಹಾಗೂ ಬಂಟ್ವಾಳ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಸೆರೆಯಾಗಿರುವ ಆರೋಪಿಗಳು. ಡಿಸೆಂಬರ್ 13ರ ಸಂಜೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಹನಮನಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರವಾಗಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ

ಬಂಟ್ವಾಳ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ Read More »

ಅಪಾರ್ಟ್‌ಮೆಂಟ್‌ ನಿವಾಸಿ ಸಂಘಟನೆ ಪದಾಧಿಕಾರಿಗಳಿಗೆ ಡಿಕೆಶಿ ಧಮಕಿ : ವ್ಯಾಪಕ ಆಕ್ರೋಶ

ಸಂವಾದ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಬೆದರಿಕೆ ದಾಟಿಯಲ್ಲಿ ಮಾತನಾಡಿದ ಡಿಸಿಎಂ ಬೆಂಗಳೂರು : ಬೆಂಗಳೂರಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆದುಕೊಂಡ ರೀತಿಗೆ ಭಾರಿ ಆಕ್ರೋಶ ಮತ್ತು ಟೀಕೆ ವ್ಯಕ್ತವಾಗಿದೆ. ದೂರು ನೀಡಲು ಬಂದವರ ಜೊತೆಗೆ ದರ್ಪದಿಂದ ಮಾತನಾಡಿದ್ದಲ್ಲದೆ ಬೆದರಿಕೆಯನ್ನೂ ಹಾಕಿರುವ ಶಿವಕುಮಾರ್‌ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಇದು ಅಹಂಕಾರದ ಪರಮಾವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಪಕ್ಷ ಬಿಜೆಪಿ ಕೂಡ ಡಿಕೆಶಿ ವರ್ತನೆಯನ್ನು ಟೀಕಿಸಿದೆ. ಕರ್ನಾಟಕ ಅಪಾರ್ಟ್​ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ

ಅಪಾರ್ಟ್‌ಮೆಂಟ್‌ ನಿವಾಸಿ ಸಂಘಟನೆ ಪದಾಧಿಕಾರಿಗಳಿಗೆ ಡಿಕೆಶಿ ಧಮಕಿ : ವ್ಯಾಪಕ ಆಕ್ರೋಶ Read More »

error: Content is protected !!
Scroll to Top