ಸುದ್ದಿ

ಯುವಕನ ಮೇಲೆ ಚೂರಿಯಿಂದ ದಾಳಿ : ಎಲ್ಲ 4 ಆರೋಪಿಗಳ ಬಂಧನ

ಎಡಪದವು ಬಳಿ ಹಲ್ಲೆ ನಡೆಸಿ ಪಲಾಯನ ಮಾಡಿದ್ದ ದುಷ್ಕರ್ಮಿಗಳು ಮಂಗಳೂರು: ಬಜಪೆ ಸಮೀಪ ಎಡಪದವು ಎಂಬಲ್ಲಿ ಅಖಿಲೇಶ್ ಎಂಬವರ‌ ಮೇಲೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಎಲ್ಲ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಬಂದರು ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು‌ ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಬಂಧಿತರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಬಂಧಿತರ ಪೈಕಿ ಮಂಗಳೂರು ಬಂದರು ನಿವಾಸಿ ಸಿನಾನ್‌ನನ್ನು ಸಾರ್ವಜನಿಕರು […]

ಯುವಕನ ಮೇಲೆ ಚೂರಿಯಿಂದ ದಾಳಿ : ಎಲ್ಲ 4 ಆರೋಪಿಗಳ ಬಂಧನ Read More »

ಉಡುಪಿ: ಪ್ರಧಾನಿ ಮೋದಿ ಸ್ವಾಗತಕ್ಕೆ ಭರದ ಸಿದ್ಧತೆ; ಬಿಗಿ ಭದ್ರತೆ ಏರ್ಪಾಡು

ಬನ್ನಂಜೆಯಿಂದ ಕಲ್ಸಂಕದವರೆಗೆ ರೋಡ್‌ ಶೋ ನಡೆಸಲು ವ್ಯವಸ್ಥೆ ಉಡುಪಿ: ಶುಕ್ರವಾರ ಉಡುಪಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಪೂರ್ವಾಹ್ನ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಉಡುಪಿ ಬನ್ನಂಜೆಯ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್‌ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಜಂಕ್ಷನ್‌ವರೆಗೆ ಸಾಗಲಿದೆ. ಕಲ್ಸಂಕ ರಸ್ತೆಯಿಂದ ನೇರವಾಗಿ ಪಾರ್ಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ 12ಕ್ಕೆ ಶ್ರೀ ಕೃಷ್ಣ ಮಠವನ್ನು

ಉಡುಪಿ: ಪ್ರಧಾನಿ ಮೋದಿ ಸ್ವಾಗತಕ್ಕೆ ಭರದ ಸಿದ್ಧತೆ; ಬಿಗಿ ಭದ್ರತೆ ಏರ್ಪಾಡು Read More »

ದಕ್ಷ ಐಎಎಸ್‌ ಅಧಿಕಾರಿಯ ಪ್ರಾಣಕ್ಕೆ ಎರವಾದ ಶ್ವಾನ

ಭೀಕರ ಅಪಘಾತದಲ್ಲಿ ಮೂವರು ಸಾವು ಬೆಂಗಳೂರು: ಕಲಬುರಗಿಯ ಜೇವರ್ಗಿ ಸಮೀಪ ನಿನ್ನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಸಹಿತ ಮೂವರು ಸಾವನ್ನಪ್ಪಿದ್ದಾರೆ. ಮಾರ್ಗ ಮಧ್ಯೆ ಶ್ವಾನ ಅಡ್ಡಬಂದ ಹಿನ್ನೆಲೆ ಅದನ್ನು ತಪ್ಪಿಸಲು ಹೋಗಿ ಜೇವರ್ಗಿ ಬೈಪಾಸ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಹಾಂತೇಶ್ ಬೀಳಗಿ ಅವರ ಸೋದರರಾದ ಶಂಕರ ಬೀಳಗಿ

ದಕ್ಷ ಐಎಎಸ್‌ ಅಧಿಕಾರಿಯ ಪ್ರಾಣಕ್ಕೆ ಎರವಾದ ಶ್ವಾನ Read More »

ಅಯೋಧ್ಯೆಯ ಶ್ರೀ ರಾಮ ಮತ್ತು ಪರಿವಾರಕ್ಕೆ ಉಡುಪಿಯ ‘ಸ್ವರ್ಣಾ’ಭರಣ

ಉಡುಪಿ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ಮೊದಲ ಮಹಡಿಯಲ್ಲಿನ ಶ್ರೀ ರಾಮ ದರ್ಬಾರ್‌ನಲ್ಲಿರುವ ರಾಮ ಪಟ್ಟಾಭಿಷೇಕದ ಶ್ರೀ ರಾಮ, ಲಕ್ಷ್ಮಣ, ಸೀತೆ, ಭರತ, ಶತ್ರುಘ್ನ ಮತ್ತು ಆಂಜನೇಯ ವಿಗ್ರಹಗಳಿಗೆ ಸ್ವರ್ಣಾಭರಣಗಳನ್ನು ಉಡುಪಿಯಿಂದ ಸಿದ್ಧಪಡಿಸಿ ಅರ್ಪಣೆ ಮಾಡಲಾಗಿದೆ. ಟ್ರಸ್ಟ್‌ನ ‌ಮನವಿಯಂತೆ ಉಡುಪಿಯ ಸ್ವರ್ಣ ಜ್ಯುವೆಲ್ಲರ್ಸ್‌ನವರು ಕೇವಲ ಹತ್ತು ದಿನಗಳಲ್ಲಿ ಈ ಆಭರಣಗಳನ್ನು ನಿರ್ಮಿಸಿ ಅರ್ಪಣೆ ಮಾಡಿದ್ದಾರೆ. ಗುಜ್ಜಾಡಿಯ ದೀಪಕ್ ಮತ್ತು ಇತರರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಪರಿವಾರ ಸಮೇತ ಶ್ರೀ ರಾಮನಿಗಾಗಿ

ಅಯೋಧ್ಯೆಯ ಶ್ರೀ ರಾಮ ಮತ್ತು ಪರಿವಾರಕ್ಕೆ ಉಡುಪಿಯ ‘ಸ್ವರ್ಣಾ’ಭರಣ Read More »

ಅನಾರೋಗ್ಯದಿಂದ ಬೇಸತ್ತು ಯುವತಿ ಆತ್ಮಹತ್ಯೆ

ಪುತ್ತೂರು: ಅನಾರೋಗ್ಯದ ಕಾರಣಕ್ಕೆ ಬೇಸತ್ತು ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೈಯ್ಯೂರಿನಲ್ಲಿ ನಡೆದಿದೆ. ನೀತಾ (22) ಎಂಬ ಯುವತಿಯೇ‌ ಮೃತ ದುರ್ದೈವಿ. ತಾಯಿ ಮತ್ತು ಅಕ್ಕನ ಜೊತೆ ವಾಸಿಸುತ್ತಿದ್ದ ನೀತಾ‌ರಿಗೆ ಕೆಲ‌ಸಮಯದಿಂದ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಇದಕ್ಕೆ ಚಿಕಿತ್ಸೆ ಸಹ ಪಡೆಯುತ್ತಿದ್ದರು. ನೀತಾ ಅವರ ಅಕ್ಕ ಕೆಲಸದ ನಿಮಿತ್ತ ಮತ್ತು ನೀ ತಾ ಅವರಿಗೆ ಔಷಧಿ ತರಲೆಂದು ಹೊರಹೋಗಿದ್ದ ಸಮಯದಲ್ಲಿ ಶಾಲನ್ನು ಕಿಟಕಿಯ ಸರಳಿಗೆ ಕಟ್ಟಿ ನೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಗೀತಾ ಮನೆಗೆ

ಅನಾರೋಗ್ಯದಿಂದ ಬೇಸತ್ತು ಯುವತಿ ಆತ್ಮಹತ್ಯೆ Read More »

ಅಯತಪ್ಪಿ ಬಾವಿಗೆ ಬಿದ್ದ ಯುವಕನನ್ನು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ

ಕಾರ್ಕಳ: ಬಾವಿ ಕಂಬ ತುಂಡಾಗಿ ನೀರು ಸೇದುತ್ತಿದ್ದ ವ್ಯಕ್ತಿ ಬಾವಿಯೊಳಗೆ ಬಿದ್ದ ಘಟನೆ ಸಾಣೂರಿನ ಕೆಂಚಬೆಟ್ಟುವಿನಲ್ಲಿ ನಡೆದಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾವಿಗೆ ಬಿದ್ದ ಯುವಕನನ್ನು ಪ್ರಶಾಂತ್ ಭಂಡಾರಿ ಎಂದು ಗುರುತಿಸಲಾಗಿದೆ. ಮನೆಯ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಮನೆಯವರು ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನನ್ನು ಕಾಪಾಡಿದ್ದಾರೆ.

ಅಯತಪ್ಪಿ ಬಾವಿಗೆ ಬಿದ್ದ ಯುವಕನನ್ನು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ Read More »

ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಸಂಪನ್ನ

ಸಾವಿರಾರು ಪ್ರಮುಖ ಗಣ್ಯರ ಸಮ್ಮುಖ ಧ್ವಜಾರೋಹಣ ನೆರವೇರಿಸಿದ ಮೋದಿ ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ಕಾರ್ಯ ನೆರವೇರಿಸಿದ್ದಾರೆ. ಇದು ಭಕ್ತರಿಗೆ ದೇವಾಲಯಕ್ಕೆ ಆಗಮಿಸಲು ಮುಕ್ತ ಆಹ್ವಾನ ನೀಡಿದಂತಾಗಿದೆ. ಶ್ರೀರಾಮ ಮತ್ತು ಸೀತಾಮಾತೆಯ ದೈವಿಕ ವಿವಾಹವನ್ನು ಆಚರಿಸುವ ವಿವಾಹ ಪಂಚಮಿಯ ಸಂದರ್ಭದಲ್ಲಿ ಅಯೋಧ್ಯೆ ಪೂರ್ಣ ವೈಭವದಿಂದ ಹೊಳೆಯುತ್ತಿದೆ. ತ್ರೇತಾಯುಗದಲ್ಲಿ ರಾಮ ಮತ್ತು ಜಾನಕಿಯ ವಿವಾಹವು ಮಾರ್ಗಶಿರ ಮಾಸದ ಹದಿನೈದು ದಿನಗಳ ಐದನೇ ದಿನದಂದು

ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಸಂಪನ್ನ Read More »

ನ. 27 ರಿಂದ 11 ದಿನಗಳ ಕಾಲ ಕಬ್ಬನ್ ಪಾರ್ಕ್‌ನಲ್ಲಿ ಫಲ ಪುಷ್ಪ ಪ್ರದರ್ಶನ

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ತೋಟಗಾರಿಕಾ ಇಲಾಖೆಯ ಫಲ ಪುಷ್ಪ ಪ್ರದರ್ಶನ ನ. 27 ರಿಂದ ತೆೊಡಗಿದಂತೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಇಲ್ಲಿ ಆಯೋಜನೆ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಈ ವರೆಗೆ ಸಣ್ಣ ಪುಟ್ಟ ಕಾರ್ಯಕ್ರಮಗಳಷ್ಟೇ ಈ ಪಾರ್ಕ್‌ನಲ್ಲಿ ನಡೆಯುತ್ತಿತ್ತು. ಈ ಫಲ ಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂದರ್ಶಿಸುವರು ನೂರಾರು ಬಗೆಯ ಹೂವು ಹಣ್ಣುಗಳನ್ನು ಕಾಣಬಹುದು. ವಿವಿಧ ವಿಷಯಗಳ ನೂರಾರು ಮಳಿಗೆಗಳೂ ಈ ಮೇಳದಲ್ಲಿ ಇರಲಿದೆ. ಈ ಕಾರ್ಯಕ್ರಮಕ್ಕೆ ಇಲಾಖೆ ಸುಮಾರು

ನ. 27 ರಿಂದ 11 ದಿನಗಳ ಕಾಲ ಕಬ್ಬನ್ ಪಾರ್ಕ್‌ನಲ್ಲಿ ಫಲ ಪುಷ್ಪ ಪ್ರದರ್ಶನ Read More »

ರಾಜ್ಯದ ಹತ್ತು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ಶಾಕ್‌ ಬೆಂಗಳೂರು : ಬೆಂಗಳೂರು, ಮಂಡ್ಯ, ಬೀದರ್, ಮೈಸೂರು, ಧಾರವಾಡ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಡಿಕೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಸಂಬಂಧಿಸಿದೆ ಎನ್ನಲಾದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಸದ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳ

ರಾಜ್ಯದ ಹತ್ತು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ Read More »

ಮನಸ್ಸು ಮತ್ತು ಬುದ್ಧಿಯ ಹತೋಟಿ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ: ಡಾ. ಅನುರಾಧಾ ಕುರುಂಜಿ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು SDMC ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ವಹಿಸಿದ್ದರು. ಅಜ್ಜಾವರ ವಲಯದ ಜನ ಜಾಗೃತಿ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ಅವರು ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವ್ಯಕ್ತಿತ್ವ ವಿಕಸನ ಹಾಗೂ ಸ್ವಾಸ್ಥ್ಯ ಸಂಕಲ್ಪ ತರಬೇತುದಾರಾದ ಡಾ. ಅನುರಾಧಾ ಕುರುಂಜಿ (ಉಪನ್ಯಾಸಕರು) ಮಾತನಾಡಿ, ಯುವಜನತೆ ಮನಸ್ಸು ಮತ್ತು ಬುದ್ಧಿಯನ್ನು

ಮನಸ್ಸು ಮತ್ತು ಬುದ್ಧಿಯ ಹತೋಟಿ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ: ಡಾ. ಅನುರಾಧಾ ಕುರುಂಜಿ Read More »

error: Content is protected !!
Scroll to Top