ಸುದ್ದಿ

ಡಾ. ಆರ್.ಪಿ. ಕುರುಂಜಿ ಮತ್ತು ಪದಾಧಿಕಾರಿಗಳಿಂದ ರಾಜಕೀಯದ ಭೀಷ್ಮ ‘ದೇವೇಗೌಡ’ರ ಭೇಟಿ ಮತ್ತು ಸನ್ಮಾನ

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಅವಿರೋಧವಾಗಿ ನಾಲ್ಕನೇ ಬಾರಿಗೆ ಮರು ಆಯ್ಕೆಗೊಂಡ ಡಾ. ರೇಣುಕಾಪ್ರಸಾದ್ ಕೆ. ವಿ. ಮತ್ತು ಇತರ ಪದಾಧಿಕಾರಿಗಳು ಮಾಜಿ ಪ್ರಧಾನಿ ಮಾನ್ಯ ಶ್ರೀ ದೇವೇಗೌಡರನ್ನು ಭೇಟಿ ಮಾಡಿ, ಸನ್ಮಾನಿಸಿ, ಆಶೀರ್ವಾದ ಪಡೆದರು. ನೂತನ ಪದಾಧಿಕಾರಿಗಳುಅಧ್ಯಕ್ಷ: ಎಲ್. ಶ್ರೀನಿವಾಸ್, ಉಪಾಧ್ಯಕ್ಷರು: ಡಾ. ರೇಣುಕಾಪ್ರಸಾದ್ ಕೆ. ವಿ. ಮತ್ತು ಎ. ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ: ಸಿ.ಜಿ. ಗಂಗಾಧರ್, ಸಹಾಯಕ ಕಾರ್ಯದರ್ಶಿ: ಡಾ. ಡಿ.ಕೆ. ರಮೇಶ್ ಮತ್ತು ಖಜಾಂಚಿ: ಕೆ.ವಿ. ಶ್ರೀಧರ್.

ಡಾ. ಆರ್.ಪಿ. ಕುರುಂಜಿ ಮತ್ತು ಪದಾಧಿಕಾರಿಗಳಿಂದ ರಾಜಕೀಯದ ಭೀಷ್ಮ ‘ದೇವೇಗೌಡ’ರ ಭೇಟಿ ಮತ್ತು ಸನ್ಮಾನ Read More »

ಅನುಮತಿ ಪಡೆಯದೆ ಮದುವೆ ಮನೆಯಲ್ಲಿ ಡಿಜೆ ಬಳಕೆ : ಕೇಸ್‌ ದಾಖಲು

ಬಂಟ್ವಾಳ : ಸುತ್ತಮುತ್ತಲಿನವರಿಗೆ ಕಿರಿಕಿರಿಯಾಗುವಂತೆ ಕರ್ಕಶವಾಗಿ ಧ್ವನಿವರ್ಧಕ ಬಳಕೆಯ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 22ರಂದು ರಾತ್ರಿ ಬಂಟ್ವಾಳ ಭಂಡಾರಿಬೆಟ್ಟು ಎಂಬಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಹಾಗೂ ಕರ್ಕಶವಾಗಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ನಿಮಿತ್ತ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮದುವೆ ಕಾರ್ಯಕ್ರಮದ ಹಿನ್ನೆಲೆ ಯಾವುದೇ ಪೂರ್ವಾನುಮತಿ ಪಡೆಯದೆ ಕರ್ಕಶವಾಗಿ ಡಿ.ಜೆ.

ಅನುಮತಿ ಪಡೆಯದೆ ಮದುವೆ ಮನೆಯಲ್ಲಿ ಡಿಜೆ ಬಳಕೆ : ಕೇಸ್‌ ದಾಖಲು Read More »

ಇಂದು ಅಯೋಧ್ಯೆ ರಾಮ ಮಂದಿರಲ್ಲಿ ಪ್ರಧಾನಿಯಿಂದ ಧ್ವಜಾರೋಹಣ

ರಾಮ ಮಂದಿರ ಪೂರ್ಣಗೊಂಡ ಸಂಕೇತವಾಗಿ 22 ಅಡಿ ಎತ್ತರದ ಭಗವಾ ಧ್ವಜ ಹಾರಿಸಲಿರುವ ಮೋದಿ ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಯ ರಾಮಮಂದಿರದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಐದು ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿ, ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ಅವರು 22 ಅಡಿ ಎತ್ತರದ ಧಾರ್ಮಿಕ ಧ್ವಜಾರೋಹಣ ಮಾಡಿ,

ಇಂದು ಅಯೋಧ್ಯೆ ರಾಮ ಮಂದಿರಲ್ಲಿ ಪ್ರಧಾನಿಯಿಂದ ಧ್ವಜಾರೋಹಣ Read More »

ಮಕ್ಕಳಿಗೂ ಕಡ್ಡಾಯವಾಗಲಿದೆ ಹೆಲ್ಮೆಟ್‌!

9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳು ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ಬೆಂಗಳೂರು : ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿ ನಿಗದಿಪಡಿಸುವ ಹಾಗೂ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ​​ ಪೊಲೀಸರು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಮಕ್ಕಳೂ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯ ಮಾಡಲು ಮುಂದಾಗಿದ್ದಾರೆ.

ಮಕ್ಕಳಿಗೂ ಕಡ್ಡಾಯವಾಗಲಿದೆ ಹೆಲ್ಮೆಟ್‌! Read More »

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ : ದೆಹಲಿ ತಲುಪಿದ ಬೂದಿ

12 ಸಾವಿರ ವರ್ಷಗಳ ಬಳಿಕ ಸ್ಫೊಟಿಸಿದ ಜ್ವಾಲಾಮುಖಿ ನವದೆಹಲಿ : ಇಥಿಯೋಪಿಯಾದ ಹೈಲಿ ಗುಬ್ಬಿ ಜ್ವಾಲಾಮುಖಿ 12 ಸಾವಿರ ವರ್ಷಗಳ ಬಳಿಕ ಸ್ಫೋಟಗೊಂಡಿದ್ದು, ಇದರ ಬೂದಿ ಸೋಮವಾರ ರಾತ್ರಿ ದೆಹಲಿ ತಲುಪಿದೆ. ಹವಾಮಾನ ಇಲಾಖೆ ಈವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೊದಲೇ ದೆಹಲಿ ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿದೆ. ಇದರೊಂದಿಗೆ ಜ್ವಾಲಾಮುಖಿಯ ಬೂದಿಯೂ ಸೇರಿಕೊಂಡರೆ ಪರಿಸ್ಥಿತಿ ಬಿಗಡಾಯಿಸುವ ಆತಂಕವಿದೆ. ಮೋಡದಂತಿರುವ ಬೂದಿ ವಾಯುವ್ಯ ಭಾರತದ ಕಡೆಗೆ ಗಂಟೆಗೆ ಸುಮಾರು 130 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಚಲಿಸುತ್ತಿದೆ. ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡ

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ : ದೆಹಲಿ ತಲುಪಿದ ಬೂದಿ Read More »

ತಲವಾರ್‌ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ತಲವಾರ್‌ ಜಳಪಿಸುತ್ತಾ ಒಂದೇ ಬೈಕ್‌ನಲ್ಲಿ ಸಾಗುತ್ತಿದ್ದ ನಾಲ್ಕು ಮಂದಿ ಮಂಗಳೂರು: ಬೈಕ್‌ನಲ್ಲಿ ತಲವಾರ್‌ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಮಂಗಳೂರು ಹೊರವಲಯದ ಬಜಪೆ ಸಮೀಪ ನಡೆದಿದೆ. ಬಜಪೆ ಸಮೀಪದ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಎಂಬವರ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಪೊಲೀಸರು ಓರ್ವ ಆರೋಪಿ ಸಿನಾನ್‌ನನ್ನು ಜನರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬಜಪೆ ಬಳಿ ನಾಲ್ವರು ಆರೋಪಿಗಳು ಒಂದೇ ಬೈಕ್‌ನಲ್ಲಿ ತಲವಾರ್ ಹಿಡಿದು ಸಾಗುತ್ತಿದ್ದರು. ಇದನ್ನು ನೋಡಿ

ತಲವಾರ್‌ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ Read More »

ಧರ್ಮಸ್ಥಳ ಕೇಸ್‌ : 3 ತಿಂಗಳಿಂದ ಜೈಲಿನಲ್ಲಿರುವ ಚಿನ್ನಯ್ಯನಿಗೆ ಜಾಮೀನು

ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದ ಕೋರ್ಟ್‌ ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಬುರುಡೆ ಗ್ಯಾಂಗಿನ ಮಾಸ್ಕ್​ಮ್ಯಾನ್​​​ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಬಾಂಡ್ ಒದಗಿಸುವುದು ಸೇರಿ 12 ಷರತ್ತುಗಳನ್ನ ನ್ಯಾಯಾಲಯ ವಿಧಿಸಿದೆ. ಪ್ರಕರಣದಲ್ಲಿ ಅಗಸ್ಟ್ 23ರಂದು ಸುಧೀರ್ಘ ವಿಚಾರಣೆ ಬಳಿಕ ದೂರುದಾರ ಚಿನ್ನಯ್ಯನ ಬಂಧನವಾಗಿತ್ತು. ಸುಮಾರು ಮೂರು ತಿಂಗಳಿಂದ ಚಿನ್ನಯ್ಯ ಶಿವಮೊಗ್ಗದ ಜೈಲಿನಲ್ಲಿದ್ದಾನೆ. ಮುಂದೆ ಇದೇ ರೀತಿಯ ಅಪರಾಧಕ್ಕೆ

ಧರ್ಮಸ್ಥಳ ಕೇಸ್‌ : 3 ತಿಂಗಳಿಂದ ಜೈಲಿನಲ್ಲಿರುವ ಚಿನ್ನಯ್ಯನಿಗೆ ಜಾಮೀನು Read More »

ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಂದು ಆರೋಪಿ ಪರಾರಿ

ಬೆಂಗಳೂರು: ಬಿಬಿಎಂ ‌ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವಿದ್ಯಾರ್ಥಿನಿಯನ್ನು ಆಂಧ್ರ ಮೂಲದ ದೇವಿಶ್ರೀ (21) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪ್ರೇಮ್‌ವರ್ಧನ್ ಎಂದು ಗುರುತಿಸಲಾಗಿದೆ. ದೇವಿಶ್ರೀಯು ಪ್ರೇಮ್‌ಶೇಖರ್ ಜೊತೆಗೆ ಮತ್ತೊಬ್ಬ ಯುವತಿಯ ರೂಂ‌ಗೆ ತೆರಳಿದ್ದಳು. ಆದರೆ ರಾತ್ರಿಯಾದರೂ ಆಕೆ ಅಲ್ಲಿಂದ ಬಂದಿಲ್ಲ. ಇದರಿಂದ ಆತಂಕಗೊಂಡ ಕುಟುಂಬ ವರ್ಗ ಮತ್ತು ಆಕೆಯ ರೂಂಮೇಟ್ಸ್ ಮಾಹಿತಿ ನೀಡಿದ ನಂತರ ಪ್ರಕರಣ ದಾಖಲು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ

ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಂದು ಆರೋಪಿ ಪರಾರಿ Read More »

ಗೋವುಗಳ ಕಳ್ಳತನ: ದೂರು ದಾಖಲು

ವಿಟ್ಲ: ಮೂವರು ಮುಸುಕುಧಾರಿ ಖದೀಮರು ಪೆರುವಾಯಿಯ ಸೊಸೈಟಿ ಆವರಣದಿಂದ ನಾಲ್ಕು ಗೋವುಗಳನ್ನು ಕದ್ದೊಯ್ಯವ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಗಣೇಶ್ ರೈ ಎಂಬವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ನ. 18 ರಂದು ನಾರಾಯಣ ನಾಯ್ಕ್ ಮತ್ತು ಗಣೇಶ್ ರೈ ಅವರ ದನಗಳು ಸೊಸೈಟಿ ಆವರಣದಲ್ಲಿ ಮೇಯುತ್ತಿದ್ದವು. ಸಂಜೆಯ ವೇಳೆ ಸೊಸೈಟಿ ನೌಕರರು ಹಸುಗಳನ್ನು ಅಲ್ಲೇ ಬಿಟ್ಟು ಗೇಟಿಗೆ ಬೀಗ ಹಾಕಿ ತೆರಳಿದ್ದರು. ಆ ಬಳಿಕ ಮೂವರು ಮುಸುಕುಧಾರಿಗಳು ಗೇಟಿನ ಬೀಗ ಮುರಿದು

ಗೋವುಗಳ ಕಳ್ಳತನ: ದೂರು ದಾಖಲು Read More »

ಬಾಲಿವುಡ್ ನಟ ಧರ್ಮೇಂದ್ರ ಇನ್ನಿಲ್ಲ

ಮುಂಬೈ: ಬಾಲಿವುಡ್‌ನ ಹಿರಿಯ ನಟ ಎವರ್‌ಗ್ರೀನ್ ಸ್ಟಾರ್, ಆ್ಯಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ ಧರ್ಮೇಂದ್ರ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ಕೆಲ ಸಮಯದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಕೊಂಚ‌ ಚೇತರಿಸಿಕೊಂಡು ಮನೆಗೆ ತೆರಳಿದ್ದರು. ಸುಮಾರು 300 ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟ ಧರ್ಮೇಂದ್ರ ಇನ್ನಿಲ್ಲ Read More »

error: Content is protected !!
Scroll to Top