ಸುದ್ದಿ

ಧರ್ಮಸ್ಥಳದಲ್ಲಿನ್ನು ತಿರುಪತಿ ಮಾದರಿ ಕ್ಯೂ ವ್ಯವಸ್ಥೆ

2 ಅಂತಸ್ತಿನ ಶ್ರೀ ಸಾನ್ನಿಧ್ಯ ಭವನ ನಿರ್ಮಾಣ, ಜ.7ರಂದು ಲೋಕಾರ್ಪಣೆ ಧರ್ಮಸ್ಥಳ : ದೇಶ-ವಿದೇಶಗಳಿಂದ ಭಕ್ತರು ಆಗಮಿಸುವ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ತೆರಳಲು ತಿರುಪತಿ ಮಾದರಿಯಲ್ಲಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ತಯಾರಾಗಿದೆ. ಕರ್ನಾಟಕದಲ್ಲಿ ಈ ಮಾದರಿಯ ಕ್ಯೂ ವ್ಯವಸ್ಥೆ ಜಾರಿಗೆ ತರುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಸಕಲ ಸೌಲಭ್ಯಗಳನ್ನೊಳಗೊಂಡ ಸರತಿ […]

ಧರ್ಮಸ್ಥಳದಲ್ಲಿನ್ನು ತಿರುಪತಿ ಮಾದರಿ ಕ್ಯೂ ವ್ಯವಸ್ಥೆ Read More »

ಉಡುಪಿ : ನೇಣಿಗೆ ಶರಣಾಗಿ ವ್ಯಕ್ತಿ ಆತ್ಮಹತ್ಯೆ

ಉಡುಪಿ : ವ್ಯಕ್ತಿಯೋರ್ವರು ತಮ್ಮ ನಿವಾಸದ ಹೊರಗೆ ನೇಣಿಗೆ ಶರಣಾಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕೊರಂಗ್ರಪಾಡಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ವಸಂತ ಕೋಟ್ಯಾನ್ (59) ಎಂದು ಗುರುತಿಸಲಾಗಿದೆ. ಒಂಟಿ ಜೀವನ ಜೀವನ ಸಾಗಿಸುತ್ತಿದ್ದ ಇವರು ಅಡುಗೆ ವ್ಯಾಪಾರ ನಡೆಸುತ್ತಿದ್ದರು. ಮಾನಸಿಕ ಚಿಂತನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ  ಶಂಕೆ ವ್ಯಕ್ತವಾಗಿದೆ. ಮೃತರು ಬಿಟ್ಟು ಹೋಗಿದ್ದರು ಎನ್ನಲಾದ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪಿಎಸ್‌ಐ ಪುನೀತ್‌ಕುಮಾ‌ರ್, ತನಿಖಾ ಸಹಾಯಕಿ ನೇತ್ರಾವತಿ ಕಾನೂನು ಕ್ರಮಕೈಗೊಂಡಿದ್ದಾರೆ. ಸಾಮಾಜಿಕ

ಉಡುಪಿ : ನೇಣಿಗೆ ಶರಣಾಗಿ ವ್ಯಕ್ತಿ ಆತ್ಮಹತ್ಯೆ Read More »

ಸಂಘಟನೆಗಳು ಬೆಳೆಯಲು ಆರ್ಥಿಕದ ಜೊತೆಗೆ ಭೌತಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ | ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ | ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು | ಸಂಭ್ರಮದಿಂದ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ ನ ನೂತನ ಸಭಾಭವನ ಉದ್ಘಾಟನೆ

ಪುತ್ತೂರು : ಯಾವುದೇ ಸಮುದಾಯದಲ್ಲೂ ಕೇವಲ ಸಂಘ ಸಂಸ್ಥೆಗಳಿದ್ದರೆ ಸಾಲದು. ಬದಲಾಗಿ ಸಂಘ ಸಂಸ್ಥೆಗಳಲ್ಲಿರುವವರು ಭೌತಿಕ ಹಾಗೂ ಆರ್ಥಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ಕಟ್ಟಿ ತಾನೂ ಬೆಳೆಯಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ನುಡಿದರು. ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಆಶ್ರಯದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಒಕ್ಕಲಿಗ

ಸಂಘಟನೆಗಳು ಬೆಳೆಯಲು ಆರ್ಥಿಕದ ಜೊತೆಗೆ ಭೌತಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ | ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ | ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು | ಸಂಭ್ರಮದಿಂದ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ ನ ನೂತನ ಸಭಾಭವನ ಉದ್ಘಾಟನೆ Read More »

ಕೋಣ ಬಿಡುವುದು ವಿಳಂಬವಾದರೆ ಓಟಗಾರನಿಗೆ ಎರಡು ಕಂಬಳ ನಿಷೇಧ

ಕಂಬಳಕ್ಕೂ ಬಂತು ಕ್ರಿಕೆಟ್‌, ಫುಟ್‌ಬಾಲ್‌ನ ಕಠಿಣ ನಿಯಮ ಮೂಡುಬಿದಿರೆ: ಕ್ರಿಕೆಟ್‌, ಫುಟ್‌ಬಾಲ್‌ ಮುಂತಾದ ಕ್ರೀಡೆಗಳಲ್ಲಿರುವ ನಿಯಮಗಳನ್ನು ಕಂಬಳಕ್ಕೂ ಅಳವಡಿಸಿಕೊಳ್ಳಲು ಕಂಬಳ ಸಮಿತಿ ತೀರ್ಮಾನಿಸಿದೆ. ಈಗಾಗಲೇ ನಡೆದ ಕಂಬಳಗಳು ವಿಳಂಬವಾಗಿ ಮುಕ್ತಾಯವಾಗಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡಿದರೆ ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವುದು ಸಾಬೀತಾದಲ್ಲಿ ಅಂತಹವರನ್ನು ಮುಂದಿನ ಎರಡು ಕಂಬಳಗಳಿಗೆ ನಿಷೇಧಿಸಲು ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ನಿರ್ಧಾರ

ಕೋಣ ಬಿಡುವುದು ವಿಳಂಬವಾದರೆ ಓಟಗಾರನಿಗೆ ಎರಡು ಕಂಬಳ ನಿಷೇಧ Read More »

ಸದ್ಯದಲ್ಲೇ ಏರಿಕೆಯಾಗಲಿದೆ ಹಾಲಿನ ಬೆಲೆ

ಲೀಟರಿಗೆ 8-10 ರೂ. ಹೆಚ್ಚಿಸಲು ಪ್ರಸ್ತಾವ ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡಿ ಶಾಕ್ ನೀಡಿರುವ ರಾಜ್ಯ ಸರ್ಕಾರ, ಇದೀಗ ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ. ಹಾಲಿನ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆ ಹಾಲಿನ

ಸದ್ಯದಲ್ಲೇ ಏರಿಕೆಯಾಗಲಿದೆ ಹಾಲಿನ ಬೆಲೆ Read More »

ಬಿಲ್‌ ಪಾಸ್‌ ಮಾಡಿ ಇಲ್ಲವೇ ದಯಾಮರಣ ಕರುಣಿಸಿ : ಗುತ್ತಿಗೆದಾರನಿಂದ ಸಿಎಂಗೆ ಪತ್ರ

ಒಂದು ವರ್ಷದಿಂದ ಬಿಲ್‌ಗಾಗಿ ಅಲೆದಾಡುತ್ತಿರುವ ಗುತ್ತಿಗೆದಾರ ಬೆಂಗಳೂರು: ಬಿಲ್‌ ಪಾಸ್‌ ಆಗದೆ ಕಂಗಾಲಾಗಿರುವ ಸರಕಾರಿ ಗುತ್ತಿಗೆದಾರರೊಬ್ಬರು ಒಂದೋ ಬಿಲ್‌ ಪಾಸ್‌ ಮಾಡಿಸಿ ಇಲ್ಲವೇ ದಯಾಮರಣವನ್ನಾದರೂ ಕರುಣಿಸಿ ಎಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮನವರಿಗೆ ಪತ್ರ ಬರೆದಿದ್ದಾರೆ. ಬಿಟ್ಟಿ ಭಾಗ್ಯಗಳಿಂದ ರಾಜ್ಯ ದಿವಾಳಿಯಾಗಿದ್ದು, ಕಾಮಗಾರಿ ಮಾಡಲು ಸರಕಾರದ ಬಳಿ ಹಣ ಇಲ್ಲ ಎಂಬ ಕೂಗು ಕೇಳಿಸುತ್ತಿರುವಾಗಲೇ ನಡೆದಿರುವ ಈ ಬೆಳವಣಿಗೆ ವಿಪಕ್ಷದ ಕೈಗೆ ಇನ್ನೊಂದು ಅಸ್ತ್ರವಾಗಿ ಸಿಕ್ಕಿದೆ.ದಾವಣಗೆರೆ ಜಿಲ್ಲೆಯ ಹರಿಹರದ ಕ್ಲಾಸ್‌ ಒನ್‌ ಗುತ್ತಿಗೆದಾರ ಮೊಹಮ್ಮದ್‌ ಮಝರ್‌ ಎಂಬವರು ಈ

ಬಿಲ್‌ ಪಾಸ್‌ ಮಾಡಿ ಇಲ್ಲವೇ ದಯಾಮರಣ ಕರುಣಿಸಿ : ಗುತ್ತಿಗೆದಾರನಿಂದ ಸಿಎಂಗೆ ಪತ್ರ Read More »

ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಯಿಂದ 30 ಲ.ರೂ. ದರೋಡೆ

ವಿಟ್ಲ: ಜಾರಿ ನಿರ್ದೇಶನಾಲಯದ ಅಧಿಕಾರಿಗಳಂತೆ ಸೋಗು ಹಾಕಿ ವಿಟ್ಲದ ಬೀಡಿ ಉದ್ಯಮಿಯೊಬ್ಬರ ಮನೆಯಿಂದ 30 ಲ.ರೂ. ದರೋಡೆ ಮಾಡಿದ ಘಟನೆ ಸಂಭವಿಸಿದೆ. ಬಂಟ್ವಾಳ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ತಮ್ಮನ್ನು ಇ.ಡಿ.ಅಧಿಕಾರಿಗಳೆಂದು ಪರಿಚಯಿಸಿಕೊಂಡಿದೆ. ಬಳಿಕ ಮನೆಯಲ್ಲಿ ಸುಮಾರು ಎರಡು ತಾಸು ಶೋಧ ನಡೆಸುವ ನಾಟಕವಾಡಿದೆ.

ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಯಿಂದ 30 ಲ.ರೂ. ದರೋಡೆ Read More »

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ

ಹೊಸವರ್ಷದ ಗ್ರೀಟಿಂಗ್‌ ಜೊತೆಗೆ ವಿಷಪೂರಿತ ಸಿಹಿತಿಂಡಿ ರವಾನಿಸಿದ ದುಷ್ಕರ್ಮಿಗಳು ಶಿವಮೊಗ್ಗ: ಹೊಸ ವರ್ಷಾಚರಣೆಯಂದು ಬಿಜೆಪಿ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ವಿಷಪೂರಿತ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಮೂವರಿಗೆ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಹಿತಿಂಡಿಗಳ ಬಾಕ್ಸ್‌ ಸ್ವೀಕರಿಸಿದ ಮೂವರಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್ ಎನ್ ನಾಗರಾಜ್ ಸಹ ಒಬ್ಬರಾಗಿದ್ದಾರೆ. ಜನವರಿ 1ರಂದು ಅಜ್ಞಾತ ವ್ಯಕ್ತಿಗಳು ಡಾ. ಸರ್ಜಿ ಅವರ ಹೆಸರನ್ನು ಬಳಸಿಕೊಂಡು, ಡಿಟಿಡಿಸಿ ಕೊರಿಯರ್ ಮೂಲಕ

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ Read More »

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಶೀತ ಜ್ವರದ ಚಿಕಿತ್ಸೆ ಪಡೆಯಲು ಸಲಹೆ ಹೊಸದಿಲ್ಲಿ : ಚೀನದಲ್ಲಿ ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ. ಎಲ್ಲ ಉಸಿರಾಟದ ಸೋಂಕುಗಳ ವಿರುದ್ಧ ತೆಗೆದುಕೊಳ್ಳುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಹೇಳಿದೆ. ನಾವು ದೇಶದಲ್ಲಿ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ Read More »

ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿ ವೈರಸ್‌

ಆಸ್ಪತ್ರೆ, ಸ್ಮಶಾನಗಳು ತುಂಬಿ ತುಳುಕುತ್ತಿರುವ ವೀಡಿಯೊಗಳು ವೈರಲ್‌ ಬೀಜಿಂಗ್‌ : ಇಡೀ ಜಗತ್ತಿಗೆ ಕೊರೊನ ವೈರಸ್‌ ಹರಡಿ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲಿ ಐದು ವರ್ಷಗಳ ಬಳಿಕ ಇದೇ ಮಾದರಿಯ ಇನ್ನೊಂದು ವೈರಸ್‌ ಕಾಣಿಸಿಕೊಂಡಿದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಎಕ್ಸ್‌, ಫೇಸ್‌ಬುಕ್‌, ವಾಟ್ಸಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್‌ ಮೀಡಿಯಾಗಳಲ್ಲಿ ಈ ವೈರಸ್‌ ಕುರಿತು ಚರ್ಚೆಯಾಗುತ್ತಿದೆ. ಕೆಲವರು ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ, ಸ್ಮಶಾನಗಳಲ್ಲಿ ಸಾಲಾಗಿ ಹೆಣಗಳನ್ನು ಇಟ್ಟಿರುವ ವೀಡಿಯೊಗಳನ್ನು ಹಂಚಿಕೊಂಡು ಇದು ಕೊರೊನ

ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿ ವೈರಸ್‌ Read More »

error: Content is protected !!
Scroll to Top