ಸುದ್ದಿ

ದೇಶಾದ್ಯಂತ ಆಘಾತದ ಅಲೆಯೆಬ್ಬಿಸಿದ ಸಹೋದರಿಯರ ಸೆಕ್ಸ್‌, ಮತಾಂತರ ಜಾಲ

ಬಡ ಹೆಣ್ಣು ಮಕ್ಕಳನ್ನು ಡ್ರಗ್ಸ್‌ ಸೇವಿಸುವಂತೆ ಮಾಡಿ ಶೋಷಿಸುತ್ತಿದ್ದ ಸಹೋದರಿಯರು ನವದೆಹಲಿ: ಸೆಕ್ಸ್ ಮತ್ತು ಡ್ರಗ್ಸ್ ಜಾಲವನ್ನು ಭೇದಿಸಿದ ಮಧ್ಯಪ್ರದೇಶ ಪೊಲೀಸರು ಇಬ್ಬರು ಸಹೋದರಿಯರು ಸೇರಿದಂತೆ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ. ಯುವತಿಯರಿಗೆ ಉದ್ಯೋಗ ಒದಗಿಸುವ ನೆಪದಲ್ಲಿ ಅತ್ಯಾಚಾರ, ಬಲವಂತದ ಮತಾಂತರ ಮತ್ತು ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರು ಸಹೋದರಿಯರು ಮತ್ತು ಆ ಪೈಕಿ ಒಬ್ಬಾಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಬಗ್ಸೇವಾನಿಯಾ ಪೊಲೀಸರು ಹೇಳಿದ್ದಾರೆ. ಇತರ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಮಧ್ಯ […]

ದೇಶಾದ್ಯಂತ ಆಘಾತದ ಅಲೆಯೆಬ್ಬಿಸಿದ ಸಹೋದರಿಯರ ಸೆಕ್ಸ್‌, ಮತಾಂತರ ಜಾಲ Read More »

ಆಕ್ರೋಶದ ಅಲೆ ಎಬ್ಬಿಸಿದ ವಿದ್ಯಾರ್ಥಿ ಸಂಕೇತ್‌ ಕೊಲೆ ಕೃತ್ಯ

15 ಲ.ರೂ. ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗ: ಶಿವಮೊಗ್ಗದಲ್ಲಿ ಮುಸ್ಲಿಂ ಯುವಕರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಥಳಿಸಿ ಸಾಯಿಸಿದ ಪ್ರಕರಣ ರಾಜ್ಯಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದೆ. ಶಾಲಾ ಬಾಲಕನ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ಅವರೂ ಖಂಡಿಸಿದ್ದು, ಮೃತ ಬಾಲಕನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಶಾಲಾ ವಿದ್ಯಾರ್ಥಿಯನ್ನು ಥಳಿಸಿ ಹತ್ಯೆಗೈದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವುದರ ಜೊತೆಗೆ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ

ಆಕ್ರೋಶದ ಅಲೆ ಎಬ್ಬಿಸಿದ ವಿದ್ಯಾರ್ಥಿ ಸಂಕೇತ್‌ ಕೊಲೆ ಕೃತ್ಯ Read More »

ಅಪಘಾತದಲ್ಲಿ ಬೋಳಿಯಾರ್‌ನ ಚಾಲಕ ಸಾವು

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಅಪಘಾತ ಕೊಣಾಜೆ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮುಡಿಪು ಸಮೀಪದ ಬೋಳಿಯಾರ್ ನಿವಾಸಿ ವಿವಾಹಿತ ಯುವಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಬೋಳಿಯಾರ್ ನಿವಾಸಿ ಬಿ.ಎಚ್ ಕರೀಂ ಎಂಬವರ ಪುತ್ರ ಮುಹಮ್ಮದ್ ರಿಝ್ವಾನ್ (28) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ಕಂಪನಿಯೊಂದರ ಮೀನಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದ ರಿಝ್ವಾನ್ ಮಹಾರಾಷ್ಟ್ರಕ್ಕೆ ಮೀನಿನ ಲೋಡ್‌ ಕೊಂಡೊಯ್ಯುತ್ತಿದ್ದಾಗ ಮಹಾರಾಷ್ಟ್ರದ ರತ್ನಗಿರಿ ಎಂಬಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು

ಅಪಘಾತದಲ್ಲಿ ಬೋಳಿಯಾರ್‌ನ ಚಾಲಕ ಸಾವು Read More »

ಅಜೀಮ್‌ ಪ್ರೇಮ್‌ಜಿ ವಿವಿ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆರೋಪ

ಮಾನ್ಯತೆ ರದ್ದುಪಡಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ಬೆಂಗಳೂರು: ಸರ್ಜಾಪುರದಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಮಂಗಳವಾರ ವಿವಿಯೊಳಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಸಂಜೆ ವಿವಿ ಆವರಣಕ್ಕೆ ನುಗ್ಗಿದ ಎಬಿವಿಪಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು. ವಿವಿಯ ನಾಮಫಲಕಕ್ಕೆ ಕಪ್ಪುಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸರ್ಜಾಪುರ ಪೊಲೀಸರು ತೆರಳಿ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಕೇಂದ್ರ ಗೃಹ

ಅಜೀಮ್‌ ಪ್ರೇಮ್‌ಜಿ ವಿವಿ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆರೋಪ Read More »

ವಿದ್ಯಾರತ್ನ ‌ಪ್ರಶಸ್ತಿಗೆ ದಯಾಮಣಿ ಕೆ. ಭಾಜನ : ಮಾರ್ಚ್ 1 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು, ಇವರು ಶಿಕ್ಷಣ ಕ್ಷೇತ್ರದಲ್ಲಿ ಆತ್ಯುತ್ತಮ ಸೇವೆಗೈದಿರುವವರಿಗೆ ನೀಡುವ ವಿದ್ಯಾರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲೆ ದಯಾಮಣಿ ಕೆ. ಇವರು ಭಾಜನರಾಗಿದ್ದಾರೆ. ಇವರಿಗೆ ದಿನಾಂಕ ಮಾರ್ಚ್ 1 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ.) ಬೆಂಗಳೂರು ಇದರ ರಾಜ್ಯ ಮಟ್ಟದ ಸಮಾವೇಶ ಮತ್ತು

ವಿದ್ಯಾರತ್ನ ‌ಪ್ರಶಸ್ತಿಗೆ ದಯಾಮಣಿ ಕೆ. ಭಾಜನ : ಮಾರ್ಚ್ 1 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ Read More »

ಬಸ್ಸಿನಲ್ಲಿ ಅಸ್ವಸ್ಥರಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ

ಪುತ್ತೂರು:‌ ಪುತ್ತೂರಿನಿಂದ ‌ವಿಟ್ಲಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಅಸ್ವಸ್ಥರಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದೆ. ಅನಾರೋಗ್ಯಕ್ಕೆ ತುತ್ತಾದ ಪ್ರಯಾಣಿಕ ಬಸ್ಸಿನಲ್ಲೇ ಕೆಳಕ್ಕೆ ಬಿದ್ದು, ಗಾಯಗಳಾಗಿವೆ. ಈ ಘಟನೆ ನಡೆದಾಕ್ಷಣದಲ್ಲೇ ಎಚ್ಚೆತ್ತ ಚಾಲಕ ಬಸ್ಸನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಸ್ವಸ್ಥ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಸ್ ಚಾಲಕನ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಸ್ಸಿನಲ್ಲಿ ಅಸ್ವಸ್ಥರಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ Read More »

ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ

ಲಕ್ನೋ: ಉತ್ತರ ಪ್ರದೇಶದಲ್ಲಿ ಮಗನೇ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮನ್ವೇಂದ್ರ ‌ಸಿಂಗ್ ಎಂದು ಗುರುತಿಸಲಾಗಿದೆ. ಆತನ ಪುತ್ರ ಅಕ್ಷತ್ ಪ್ರತಾಪ್ ಸಿಂಗ್ ಎಂಬಾತನೇ‌ ಆರೋಪಿ.‌ ಮನ್ವೇಂದ್ರ ಅವರು ಔಷಧ ಮತ್ತು ಮದ್ಯದ ಉದ್ಯಮ ನಡೆಸುತ್ತಿದ್ದರು. ಅವರು ತಮ್ಮ ಮಗನನ್ನು ಡಾಕ್ಟರ್ ಆಗುವಂತೆ ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಈ ವಿಷಯದಲ್ಲೇ ಮಗ

ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ Read More »

ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ

ಪ್ರತಿಭಟನೆಗೆ ಸಂಚು ರೂಪಿಸಿದ್ದ ಉದಯ್‌ ಭಾನು ಚಿಬ್‌ ನವದೆಹಲಿ: ಭಾರತ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶರ್ಟ್‌ ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಹಲವಾರು ಸುತ್ತಿನ ವಿಚಾರಣೆಯ ನಂತರ ಬಂಧಿಸಲಾಗಿದೆ. ತಿಲಕ್ ಮಾರ್ಗ ಪೊಲೀಸ್ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಪೊಲೀಸ್ ಠಾಣೆ ಹೊರಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ. ಎಐ ಸಭೆಯಲ್ಲಿ ಶರ್ಟ್‌ಲೆಸ್

ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ Read More »

ಎಸ್‌ಐಟಿ ತನಿಖೆಯಿಂದ ಬಯಲಾಯಿತು ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಯ ಅಸಲಿ ಕಾರಣ

ರಿಯಲ್‌ ಎಸ್ಟೇಟ್‌ ಉದ್ಯಮಿಯ ಆತ್ಮಹತ್ಯೆಗೆ ಇದೇ ಕಾರಣವಂತೆ ಬೆಂಗಳೂರು: ಇಡೀ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಬೆಂಗಳೂರಿನ ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಹಿಂದಿನ ಕಾರಣ ಈಗ ಬಯಲಾಗಿದೆ. ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಎಸ್‌ಐಟಿ ಅಧಿಕಾರಿಗಳ ಇಲ್ಲಿಯವರೆಗಿನ ತನಿಖೆಯಲ್ಲಿ ರಾಯ್ ಆತ್ಮಹತ್ಯೆ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ. ಒಂದೇ ಕಾರಣದಿಂದ ರಾಯ್ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಇಲ್ಲಿಯವರೆಗಿನ ಎಸ್‌ಐಟಿ ತನಿಖೆಯ ವೇಳೆ ಬಹಿರಂಗವಾಗಿದೆ

ಎಸ್‌ಐಟಿ ತನಿಖೆಯಿಂದ ಬಯಲಾಯಿತು ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಯ ಅಸಲಿ ಕಾರಣ Read More »

ಮಾ.11ರಿಂದ ಸರ್ಕಾರಿ ವೈದ್ಯರ ಪ್ರತಿಭಟನೆ : ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆ

ಆಸ್ಪತ್ರೆಗಳಿಗೆ ಔಷಧ ಸಮರ್ಪಕ ಪೂರೈಕೆ, ನೇಮಕಾತಿ ನಿಯಮ ತಿದ್ದುಪಡಿ ಬೇಡಿಕೆ ಬೆಂಗಳೂರು : ವರ್ಗಾವಣೆ ನೀತಿ ಬದಲಾವಣೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ 15 ರವರೆಗೆ ಹೊರ ರೋಗಿಗಳ ಸೇವೆಯನ್ನು (ಒಪಿಡಿ) ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಪ್ರತಿಭಟನೆಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ

ಮಾ.11ರಿಂದ ಸರ್ಕಾರಿ ವೈದ್ಯರ ಪ್ರತಿಭಟನೆ : ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆ Read More »

error: Content is protected !!
Scroll to Top