ಅಪಾರ್ಟ್ಮೆಂಟ್ನಲ್ಲಿ ಭೀಕರ ಬೆಂಕಿ ಅವಘಡ
ನವದೆಹಲಿ: ಕಟ್ಟಡವೊಂದರಲ್ಲಿ ಬೆಂಕಿ ಹತ್ತಿಕೊಂಡು ಒಂಬತ್ತು ಜನರು ಸಜೀವ ಸುಟ್ಟು ಹೋದ ಘಟನೆ ನೈಋತ್ಯ ದೆಹಲಿಯ ಪಾಲಂ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಏಕಾಏಕಿ ಈ ದುರಂತ ಸಂಭವಿಸಿರುವುದಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಸುಮಾರು 30 ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಕಟ್ಟಡದ ಒಳಗೆ ಜನರು ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ.
ಅಪಾರ್ಟ್ಮೆಂಟ್ನಲ್ಲಿ ಭೀಕರ ಬೆಂಕಿ ಅವಘಡ Read More »










