ಅಪಘಾತ

ಲಾರಿ-ಬೈಕ್‌ ಡಿಕ್ಕಿ : ನವದಂಪತಿ ಸಾವು

ಶಿವಮೊಗ್ಗ : ಲಾರಿಗೆ ಬೈಕ್​ ಡಿಕ್ಕಿಯಾಗಿ ನವದಂಪತಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್​ಪಿ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಬಾಬು(30) ಮತ್ತು ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಳ ತುಂಬಿದ್ದ ಲಾರಿ ಶಿವಮೊಗ್ಗ ತರೀಕೆರೆ ಮಾರ್ಗವಾಗಿ ಹೊರಟಿದ್ದು, […]

ಲಾರಿ-ಬೈಕ್‌ ಡಿಕ್ಕಿ : ನವದಂಪತಿ ಸಾವು Read More »

ಕೆರೆಗೆ ಕಾಲು ಜಾರಿ ಬಿದ್ದು ಹತ್ತನೇ ತರಗತಿ ಬಾಲಕ ಸಾವು

ಶಿವಮೊಗ್ಗ: ಗದ್ದೆಯೊಳಗಿನ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಹತ್ತನೇ ತರಗತಿಯ ಬಾಲಕನೊಬ್ಬ ಮೃತಪಟ್ಚ ಘಟನೆ ರಿಪ್ಪನ್ ಪೇಟೆಯ ಬರುವೆ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಮದೀನಾ ಕಾಲೋನಿ ನಿವಾಸಿ ಮಹಮ್ಮದ್ ತಮೀಮ್ ಬಿನ್ ತಾಹಿರ್ ಹುಸೇನ್ ಎಂದು ಗುರುತಿಸಲಾಗಿದೆ. ಚೌಡೇಶ್ವರಿ ಬೀದಿಯಲ್ಲಿ ಟ್ಯೂಷನ್‌ಗೆ ತೆರಳಿದ್ದ ಬಾಲಕ ಆ‌ನಂತರ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆಯುತ್ತಿದ್ದಾಗ ಕಾಲುಜಾರಿ ನೀರಿಗೆ ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ

ಕೆರೆಗೆ ಕಾಲು ಜಾರಿ ಬಿದ್ದು ಹತ್ತನೇ ತರಗತಿ ಬಾಲಕ ಸಾವು Read More »

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು

ಬಾವಿ ಕೊರೆಯುವಾಗ ಸಂಭವಿಸಿದ ದುರಂತ ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ತಲೆಗೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉಳ್ಳಾಲ ಸಮೀಪ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30) ಮೃತರು ಎಂದು ಗುರುತಿಸಲಾಗಿದೆ.ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು Read More »

ವಿಟ್ಲ: ಬೈಕ್ – ಲಾರಿ ನಡುವೆ ಡಿಕ್ಕಿ

ವಿಟ್ಲ: ಇಲ್ಲಿನ ಕಾಶಿಮಠ ಪೆಟ್ರೋಲ್ ಪಂಪ್ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಲ್ಲಕಟ್ಟ ನಿವಾಸಿ ರತ್ನಕರ್ ಎಂಬುವವರು ಗಾಯಗೊಂಡಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಗೊಂಡ ರತ್ನಾಕರ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಟ್ಲ: ಬೈಕ್ – ಲಾರಿ ನಡುವೆ ಡಿಕ್ಕಿ Read More »

ಕಾರುಗಳ ಮುಖಾಮುಖಿ ಡಿಕ್ಕಿ : ಪಾದಚಾರಿಗೆ ಗಂಭೀರ ಗಾಯ

ಬೆಳ್ಳಾರೆಯಲ್ಲಿ ಕಾರುಗಳ ನಡುವೆ ಅಪಘಾತ ನಡೆದಿದ್ದು, ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಗುದ್ದಿ ಗಂಭೀರ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ. ಮಾರುತಿ 800 ಕಾರು ಮತ್ತು ಬ್ರಿಜಾ ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಹತ್ತಿರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಗುದ್ದಿದೆ. ಕಾರು ಗುದ್ದಿದ ಪರಿಣಾಮ ಪೆರುವಾಜೆಯ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾರುಗಳ ಮುಖಾಮುಖಿ ಡಿಕ್ಕಿ : ಪಾದಚಾರಿಗೆ ಗಂಭೀರ ಗಾಯ Read More »

ಕಾರು-ಬೈಕ್‌ ಡಿಕ್ಕಿ : ಇಬ್ಬರು ಸವಾರರು ಗಂಭೀರ

ವಿಟ್ಲ : ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಶಾಂತಿನಗರ ಎಂಬಲ್ಲಿ ನಡೆದಿದೆ. ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಮಂಗಳೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ವೀರಕಂಬ ಮೂಲದವರು ಎನ್ನಲಾದ ಸವಾರ ಮತ್ತು ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಾರು ವಿಟ್ಲದ ಮೇಗಿನಪೇಟೆಯ ನಿವಾಸಿಯದ್ದು, ಹೊರ

ಕಾರು-ಬೈಕ್‌ ಡಿಕ್ಕಿ : ಇಬ್ಬರು ಸವಾರರು ಗಂಭೀರ Read More »

ಟಿಪ್ಪರ್ – ಸರ್ಕಾರಿ ಬಸ್ಸಿನ ನಡುವೆ ಅಪಘಾತ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಟಿಪ್ಪರ್ ಚಾಲಕ

ವಿಟ್ಲ: ಮುಚ್ಚಿರಪದವಿನಲ್ಲಿ ಸರ್ಕಾರಿ ಬಸ್ಸು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಬಸ್ಸು ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿತ್ತು. ಟಿಪ್ಪರ್ ‌ಪೆರುವಾಯಿ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಇವೆರಡೂ ವಾಹನಗಳು ಮುಖಾಮುಖಿ ಗುದ್ದಿಕೊಂಡಿವೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ ಅಪಘಾತದ ಬಳಿಕ ಎರಡೂ ವಾಹನಗಲ‌ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಪ್ಪರ್ ‌ಚಾಲಕ ಬಿಲಾಲ್ ‌ಎಂಬಾತ‌ ಕರ್ತವ್ಯದಲ್ಲಿದ್ದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಕಂಡಕ್ಟರ್ ವಿಟ್ಲ

ಟಿಪ್ಪರ್ – ಸರ್ಕಾರಿ ಬಸ್ಸಿನ ನಡುವೆ ಅಪಘಾತ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಟಿಪ್ಪರ್ ಚಾಲಕ Read More »

ಬೈಕ್ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಗಾಳಿ ಮಳೆಗೆ ಕೇಬಲ್ ಒಂದು ತುಂಡಾಗಿ ಮೈಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಚ ಘಟನೆ ನಗರದ ಗೋಕುಲ ರಸ್ತೆಯ ಅರ್ಬನ್ ಓಯಸಿಸ್ ಮಾಲ್‌ನ ಸಮೀಪ ನಡೆದಿದೆ. ಮೃತರನ್ನು ತಾಜ್‌ ನಗರ ನಿವಾಸಿ ಮೀಜಾಮುಲ್ಲಾ ಮುಲ್ಲಾ ಮತ್ತು ಫಯಾಜ್ ಭಾಗವಾನ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೈಕ್ ಮೂಲಕ ಗೋಕುಲ್ ರಸ್ತೆ ವಿಮಾನ ನಿಲ್ದಾಣದಿಂದ ಹೊಸೂರು ಕಡೆ ಬರುತ್ತಿದ್ದರು. ಈ ವೇಳೆ ಗಾಳಿ ಮಳೆಗೆ ಕೇಬಲ್‌ ತುಂಡಾಗಿ ಇವರ ಮೇಲೆ ಬಿದ್ದಿದೆ. ಅದನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ

ಬೈಕ್ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು Read More »

ಅಮೆರಿಕ ಮಿಲಿಟರಿ ವಿಮಾನ ಪತನ : ಮೃತರ ಸಂಖ್ಯೆ 66ಕ್ಕೇರಿಕೆ

ಟೇಕಾಫ್‌ ಆದ ಮರುಕ್ಷಣ ಪತನಗೊಂಡ ವಿಮಾನ ವಾಷಿಂಗ್ಟನ್‌ : ದಕ್ಷಿಣ ಕೊಲಂಬಿಯಾದಲ್ಲಿ 121 ಮಂದಿ ಪ್ರಯಾಣಿಸುತ್ತಿದ್ದ ಅಮೆರಿಕದ ಸೇನಾ ವಿಮಾನ ಟೇಕ್‌ಆಫ್ ಆದ ತಕ್ಷಣ ಪತನಗೊಂಡ ಪರಿಣಾಮ ಮೃತಪಟ್ಟವರ ಸಂಖ್ಯೆ 66ಕ್ಕೇರಿದೆ. ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವ ಪೆಡ್ರೋ ಸಾಂಚೆಝ್ ಎಕ್ಸ್ ಖಾತೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಈ ಅಪಘಾತ ಅಮೆಜಾನ್ ಪ್ರದೇಶದಲ್ಲಿರುವ ಪುಟುಮಾಯೋ ಪ್ರಾಂತ್ಯದ ದೂರದ ಪಟ್ಟಣವಾದ ಪ್ಯೂರ್ಟೋ ಲೆಗುಇಜಾಮೋದಲ್ಲಿ ಸಂಭವಿಸಿದೆ. ಈ ಪ್ರದೇಶ ಪೆರು ಮತ್ತು ಇಕ್ವಡಾರ್ ದೇಶಗಳ ಗಡಿಗೆ

ಅಮೆರಿಕ ಮಿಲಿಟರಿ ವಿಮಾನ ಪತನ : ಮೃತರ ಸಂಖ್ಯೆ 66ಕ್ಕೇರಿಕೆ Read More »

ಅಮೆರಿಕದ ಮಿಲಿಟರಿ ವಿಮಾನ ಪತನ : ಕನಿಷ್ಠ 8 ಸೈನಿಕರು ಸಾವು

ಭಾರಿ ದುರಂತದಲ್ಲಿ ಎಲ್ಲ 121 ಮಂದಿ ಸಾವಿಗೀಡಾಗಿರುವ ಶಂಕೆ ವಾಷಿಂಗ್ಟನ್‌ : ಅಮೆರಿಕದ ಕೊಲಂಬಿಯಾದಲ್ಲಿ ಭಾರಿ ವಿಮಾನ ದುರಂತ ಸಂಭವಿಸಿದ್ದು, ದೇಶದ ಮಿಲಿಟರಿಗೆ ದೊಡ್ಡ ಆಘಾತ ತಂದಿದೆ. ವಾಯುಪಡೆಯ ಹರ್ಕ್ಯುಲಸ್ C-130 ಮಿಲಿಟರಿ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಕನಿಷ್ಠ 8 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವಿಮಾನದಲ್ಲಿ ಸುಮಾರು 110 ಸೈನಿಕರ ಸಹಿತ 121 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಆದರೆ,

ಅಮೆರಿಕದ ಮಿಲಿಟರಿ ವಿಮಾನ ಪತನ : ಕನಿಷ್ಠ 8 ಸೈನಿಕರು ಸಾವು Read More »

error: Content is protected !!
Scroll to Top