ಅಪಘಾತ

ಭಾರಿ ಗಾಳಿ ಮಳೆ : ಕಾರಿನ ಮೇಲೆ ಬಿದ್ದ ಮರ

ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಅಪಾರ ಹಾನಿ ಬೆಳ್ತಂಗಡಿ: ಬೆಳ್ತಂಗಡಿಯ ಎಲ್ಲೆಡೆ ಸೋಮವಾರ ಸಂಜೆ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದು ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲಿ ರಾಮಕ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಈ ಪ್ರದೇಶದ ಇನ್ನೂ ನಾಲ್ಕು […]

ಭಾರಿ ಗಾಳಿ ಮಳೆ : ಕಾರಿನ ಮೇಲೆ ಬಿದ್ದ ಮರ Read More »

ಜೀಪು – ಆಪೆ – ಟೆಂಪೋ ನಡುವೆ ಸರಣಿ ಅಪಘಾತ

ಪುತ್ತೂರು: ಮಂಜಲ್ಪಡ್ಪು ಬಳಿಯಲ್ಲಿ ಜೀಪು, ಟೆಂಪೋ ಮತ್ತು ಆಪೆ ‌ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಜೀಪು ‌ಚಾಲಕ ಬ್ರೇಕ್ ಒತ್ತಿದ ಪರಿಣಾಮ ಹಿಂದಿದ್ದ ಆಮೆ ವಾಹನ ಜೀಪ್‌ಗೆ ಗುದ್ದಿದೆ. ಹಾಗೆಯೇ ಆಪೆ ವಾಹನದ ಹಿಂದಿದ್ದ ಟೆಂಪೋ ಆಪೆಗೆ ಢಿಕ್ಕಿಯಾಗಿ ಈ ಸರಣಿ ಅಪಘಾತ ಸಂಭವಿಸಿದೆ.

ಜೀಪು – ಆಪೆ – ಟೆಂಪೋ ನಡುವೆ ಸರಣಿ ಅಪಘಾತ Read More »

ಕಂದಕಕ್ಕೆ ಉರುಳಿದ ಬಸ್‌ : 15 ಮಂದಿ ಸಾವು

ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ರಾಮನಗರದಿಂದ ಉಧಂಪುರಕ್ಕೆ ಹೋಗುತ್ತಿದ್ದ ಬಸ್, ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಸೇನೆ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ

ಕಂದಕಕ್ಕೆ ಉರುಳಿದ ಬಸ್‌ : 15 ಮಂದಿ ಸಾವು Read More »

ತಾಂತ್ರಿಕ ದೋಷದಿಂದ 4 ತಾಸು ಆಕಾಶದಲ್ಲೇ ಹಾರಾಡಿದ ವಿಮಾನ

ಜೀವದ ಮೇಲೆ ಆಸೆ ಬಿಟ್ಟು ನಾವಿನ್ನು ಬರುವುದಿಲ್ಲ ಎಂದು ಸಂದೇಶ ಕಳುಹಿಸಿದ ಪ್ರಯಾಣಿಕರು ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು 4 ಗಂಟೆಗಳ ಕಾಲ ವಿಮಾನ ಆಗಸದಲ್ಲೇ ಸುತ್ತಾಟ ನಡೆಸಿದ್ದು, ಹುಬ್ಬಳ್ಳಿಯಲ್ಲಿ ಮಹಾ ದುರಂತವೊಂದು ತಪ್ಪಿದೆ. ಫ್ಲೈಟ್​​ನ್ನು ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡಲು ಹರಸಾಹಸ ಪಡಲಾಗಿದ್ದು, ಅಂತಿಮವಾಗಿ ವಿಮಾನವನ್ನು ಬೆಂಗಳೂರಿನಲ್ಲಿ ಲ್ಯಾಂಡಿಂಗ್​​ ಮಾಡಲಾಗಿದೆ. Fly91 ಏರ್‌ಲೈನ್ಸ್ IC3401(ATRTURBOPROP AT7) ಫ್ಲೈಟ್‌ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಿಂದ

ತಾಂತ್ರಿಕ ದೋಷದಿಂದ 4 ತಾಸು ಆಕಾಶದಲ್ಲೇ ಹಾರಾಡಿದ ವಿಮಾನ Read More »

ಬೆಳ್ತಂಗಡಿ : ರೈಲಿನಿಂದ ಬಿದ್ದು ಶಬರಿಮಲೆ ಯಾತ್ರಿಕ ಸಾವು

ಬೆಳ್ತಂಗಡಿ: ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ವಸಂತ ಪೂಜಾರಿ (60) ಎಂದು ಗುರುತಿಸಲಾಗಿದೆ. ಶಬರಿಮಲೆ ಯಾತ್ರೆಗಾಗಿ ಮಂಗಳೂರಿನಿಂದ ಕೇರಳಕ್ಕೆ ರೈಲು ಮೂಲಕ ಅವರು ಏ.17ರಂದು ಪ್ರಯಾಣಿಸಿದ್ದರು. ಅದೇ ದಿನ ರಾತ್ರಿ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೇರಳದ ತ್ರಿಶೂರ್ ಆಸ್ಪತ್ರೆಗೆ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದರು. ಭಾನುವಾರ ಮೃತದೇಹವನ್ನು ಸ್ವಗ್ರಾಮಕ್ಕೆ ರವಾನಿಸಲಾಗಿದೆ.

ಬೆಳ್ತಂಗಡಿ : ರೈಲಿನಿಂದ ಬಿದ್ದು ಶಬರಿಮಲೆ ಯಾತ್ರಿಕ ಸಾವು Read More »

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಸಾವಿನ ಸಂಖ್ಯೆ 23ಕ್ಕೇರಿಕೆ

ಸ್ಫೋಟದ ಬಿರುಸಿಗೆ ನಾಲ್ಕು ಮಹಡಿಯ ಕಟ್ಟಡ ಧರಾಶಾಯಿ ಚೆನ್ನೈ: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೇರಿದೆ. ಭಾನುವಾರ ಮಧ್ಯಾಹ್ನ ವಿರುಧುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿ ಗ್ರಾಮದ ಬಳಿಯಿರುವ ವನಜ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಟ್ಟಡವು ಸಂಪೂರ್ಣವಾಗಿ ನೆಲಸಮವಾಗಿದೆ. ಗಾಯಾಳುಗಳನ್ನು ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಮಧುರೈ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು,

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಸಾವಿನ ಸಂಖ್ಯೆ 23ಕ್ಕೇರಿಕೆ Read More »

ಬೈಕುಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು

ಪುತ್ತೂರು: ಬೈಕುಗಳೆರಡರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಚ ಘಟನೆ ಪಡೀಲ್‌ನ ಯಾಸಿನ್ ಚಿಕನ್ ಸೆಂಟರ್ ಸಮೀಪ ನಡೆದಿದೆ. ಒಂದು ಬೈಕ್ ರಾಂಗ್ ‌ಸೈಡಿನಲ್ಲಿ ಬರುತ್ತಿದ್ದು, ಈ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ನ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸವಾರ ಮೃತಪಟ್ಟಿದ್ದು, ಇನ್ನೊಂದು ಬೈಕ್‌ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ‌ಲಭ್ಯವಾಗಬೇಕಿದೆ.

ಬೈಕುಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು Read More »

ವ್ಯಾನ್‌ ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು

ಪ್ರಸಿದ್ಧ ಪ್ರವಾಸಿ ತಾಣ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಸಂಭವಿಸಿದ ದುರಂತ ಕೊಯಮತ್ತೂರು : ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ. ಮೃತರನ್ನು ಅಜಿತಾ (54), ರಮ್ಲಾ

ವ್ಯಾನ್‌ ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು Read More »

ಸ್ಲೀಪರ್ ಬಸ್ – ಕಾರಿನ ನಡುವೆ ಭೀಕರ ಅಪಘಾತ: ಹತ್ತಿಕೊಂಡ ಬೆಂಕಿಗೆ ನಾಲ್ಕಕ್ಕೂ ಹೆಚ್ಚು ಮಂದಿ ಸಾವು

ಯಾದಗಿರಿ: ಸ್ಲೀಪರ್ ಬಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹತ್ತಿದ ಬೆಂಕಿ ಎರಡೂ ವಾಹನಗಳನ್ನು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿಸಿದ ಘಟನೆ ನಡೆದಿದೆ. ಸುರಪುರದ ಶಾಂತಪುರ ಕ್ರಾಸ್‌‌ನ ಬೀದರ್ – ಬೆಂಗಳೂರು ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸು ಕಲಬುರ್ಗಿ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ನಾಲ್ಕಕ್ಕೂ ಹೆಚ್ಚು ಜನರು ಸುಟ್ಟು ಕರಕಲಾಗಿದ್ದಾರೆ. ಕಾರಿನಲ್ಲಿದ್ದ ಎಲ್ಲರೂ ಈ ದುರಂತದಲ್ಲಿ ಸಜೀವ ದಹನವಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾಗಿ ಹೇಳಲಾಗುತ್ತಿದೆ. ನಾಲ್ಕು ತಲೆ‌ ಬುರುಡೆಗಳು

ಸ್ಲೀಪರ್ ಬಸ್ – ಕಾರಿನ ನಡುವೆ ಭೀಕರ ಅಪಘಾತ: ಹತ್ತಿಕೊಂಡ ಬೆಂಕಿಗೆ ನಾಲ್ಕಕ್ಕೂ ಹೆಚ್ಚು ಮಂದಿ ಸಾವು Read More »

ಎರಡು ಓಮ್ನಿಗಳ ನಡುವೆ ಅಪಘಾತ

ಪುತ್ತೂರು: ನಗರದ ಹಾರಾಡಿ ‌ಸಮೀಪ ಎರಡು ಓಮ್ನಿ ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ವಾಹನಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಓಮ್ನಿಗಳ ನಡುವೆ ಅಪಘಾತ Read More »

error: Content is protected !!
Scroll to Top