ಅಪಘಾತ

ತಪ್ಪಿದ ಇನ್ನೊಂದು ಭಾರಿ ವಿಮಾನ ಅವಘಡ : 181 ಪ್ರಯಾಣಿಕರು ಪಾರು

ರನ್‌ವೇಗೆ ಅಪ್ಪಳಿಸಿದ ಇಳಿಯುತ್ತಿದ್ದ ವಿಮಾನದ ಹಿಂಭಾಗ ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಬಾಲವು ನೆಲಕ್ಕೆ ಅಪ್ಪಳಿಸಿದ್ದು, ಭಾರಿ ಅವಘಡ ತಪ್ಪಿದೆ. ಗುರುವಾರ ಬೆಳಗ್ಗೆ 181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ AI2651 ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಇನ್ನೊಂದು ವಿಮಾನ ಅದೇ ರನ್‌ವೇಯಿಂದ ಟೇಕ್-ಆಫ್ ಆಗುತ್ತಿತ್ತು. ಇದರಿಂದಾಗಿ ಗಾಳಿಯಲ್ಲಿ ಅಸಮತೋಲನ ಉಂಟಾದಂತೆ […]

ತಪ್ಪಿದ ಇನ್ನೊಂದು ಭಾರಿ ವಿಮಾನ ಅವಘಡ : 181 ಪ್ರಯಾಣಿಕರು ಪಾರು Read More »

ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ

ಭಟ್ಕಳ: ಕಾರುಗಳೆರಡರ ನಡುವೆ ನಡೆದ ಅಪಘಾತದಲ್ಲಿ ಆರು ಮಂದಿ ಗಾಯಗೊಂಡು, ಎರಡೂ ಕಾರುಗಳು ಜಖಂ ಆದ ಘಟನೆ ವೆಂಕ್ಟಾಪುರ ಸೇತುವೆ ಸಮೀಪದ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ನಡೆದಿದೆ. ಗಾಯಾಳುಗಳನ್ನು ಹಾವೇರಿ ಮೂಲದ ಬೀಮಪ್ಪ ಹನುಮಂತಪ್ಪ ಗಣಜೂರು, ಮೊಹಮ್ಮದ್ ಮುಶಾಫರ್ (26), ಪೌಜಿಯಾ ಎ., ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ಸ್ (19) ಎಂದು ಗುರುತಿಸಲಾಗಿದೆ. ಹಾವೇರಿಯಿಂದ ಬಂಟ್ವಾಳದತ್ತ ಹೋಗುತ್ತಿದ್ದ ಕಾರಿಗೆ ಭಟ್ಕಳದಿಂದ ಹೊನ್ನಾವರದತ್ತ ಹೋಗುತ್ತಿದ್ದ ಕಾರು ಗುದ್ದಿದೆ.

ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ Read More »

ಮೀನುಗಾರಿಕೆ ದೋಣಿ ಮುಳುಗಡೆ : 6 ಮೀನುಗಾರರ ರಕ್ಷಣೆ

ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನಿಂದ ತೆರಳಿದ ಆಳಸಮುದ್ರ ಬೋಟೊಂದು ಮಂಗಳವಾರ ರಾತ್ರಿ ಕೋಡಿಬೆಂಗ್ರೆ ಸಮೀಪದ ಮುಳುಗಡೆಗೊಂಡಿದ್ದು ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಬೋಟಿನ ತಾಂಡೇಲ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ, ಕಾರ್ಮಿಕರಾದ ರೋಹಿದಾಸ್ ಮೊಗೇರ, ಶಾಮ ಸುಂದರ್‌ ಮಲೀಕ್, ಉಜ್ವಲ್ ಮಲೀಕ್, ಸತ್ಯಜಿತ್ ಮಲೀಕ್, ತ್ರಿಲೇಶ್ ಭಾಸ್ಕರ್ ರಕ್ಷಿಸಲ್ಪಟ್ಟ ಮೀನುಗಾರರು ಎಂದು ಗುರುತಿಸಲಾಗಿದೆ. ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಎಂಬವರಿಗೆ ಸೇರಿದ ಸಾಯಿದತ್ತ ಆಳಸಮುದ್ರ ಬೋಟು ಮೇ 17ರಂದು ರಾತ್ರಿ 10.30ಕ್ಕೆ ಮಲ್ಪೆ

ಮೀನುಗಾರಿಕೆ ದೋಣಿ ಮುಳುಗಡೆ : 6 ಮೀನುಗಾರರ ರಕ್ಷಣೆ Read More »

ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಈಜಲು ನದಿಗಿಳಿದಾಗ ಸಂಭವಿಸಿದ ದುರಂತ ಬೆಳ್ತಂಗಡಿ : ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಜಿರಡ್ಕ ದೇವಸ್ಥಾನದ ಸಮೀಪ ನೇತ್ರಾವತಿ ನದಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಮೇ 19 ರಂದು ಸಂಜೆ 4 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಏಳು ಮಂದಿ ವಿದ್ಯಾರ್ಥಿಗಳ ತಂಡ ನದಿಯಲ್ಲಿ ಈಜಲು ಹೋಗಿತ್ತು. ಉಜಿರೆಯ ಖಾಸಗಿ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್

ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು Read More »

ದುಬಾರೆ ದುರಂತ : ಇನ್ನು ಆನೆಗಳ ಬಳಿಗೆ ಹೋಗಲು ಇಲ್ಲ ಅವಕಾಶ

ಆನೆಯಡಿಗೆ ಬಿದ್ದು ಮಹಿಳೆ ಮೃತಪಟ್ಟ ಬಳಿಕ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಅರಣ್ಯ ಇಲಾಖೆ ಬೆಂಗಳೂರು: ಮಡಿಕೇರಿಯ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಎರಡು ಆನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ ಆನೆ ವೀಕ್ಷಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ

ದುಬಾರೆ ದುರಂತ : ಇನ್ನು ಆನೆಗಳ ಬಳಿಗೆ ಹೋಗಲು ಇಲ್ಲ ಅವಕಾಶ Read More »

ಹಗ್ಗ ತುಂಡಾಗಿ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರ ರಕ್ಷಣೆ

ಬಂಟ್ವಾಳ : ಬಾವಿಯೊಂದರ ಹೂಳೆತ್ತುವ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಹಗ್ಗ ಜಾರಿ ಬಿದ್ದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳದ ಕುಕ್ಕಾಜೆ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಕುರಿಯಾಳ ಗ್ರಾಮದ ಕುಕ್ಕಾಜೆ ಕೇಶವ ಪೂಜಾರಿ ಎಂಬವರ ಬಾವಿಯ ಹೂಳೆತ್ತುವುದಕ್ಕೆ ಬಂದ ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಎಂಬವರು ಬಾವಿಗೆ ಬಿದ್ದಿದ್ದು, ಅದರಲ್ಲಿ ಓರ್ವರ ಕಾಲಿಗೆ ಗಾಯವಾಗಿದೆ. ಇವರು ಬಾವಿಯ ಹೂಳೆತ್ತುವ ಕೆಲಸ ಮುಗಿಸಿ, ಬಾವಿಯೊಳಗಿನಿಂದ ಹಗ್ಗ ಹಿಡಿದು ಮೇಲೆಕ್ಕೆ

ಹಗ್ಗ ತುಂಡಾಗಿ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರ ರಕ್ಷಣೆ Read More »

ಬಂಟ್ವಾಳ : ಗುಜರಿ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

ಬಂಟ್ವಾಳ: ಚಲಿಸುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಮೆಲ್ಕಾರಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಬೆಂಗಳೂರು ಮೂಲದ ಲಾರಿ ಇದಾಗಿದ್ದು, ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಮೆಲ್ಕಾರ್‌ನಲ್ಲಿ ಬೆಂಕಿ ಹತ್ತಿಕೊಂಡಿದೆ. ಗುಜರಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯ ಒಳಗಿದ್ದ ಬ್ಯಾಟರಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಲಾರಿಯಲ್ಲಿ ತುಂಬಿಸಿದ್ದ ಗುಜರಿ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಬಂಟ್ವಾಳ : ಗುಜರಿ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ Read More »

ಬೆಳ್ತಂಗಡಿ : ಬೈಕ್‌ಗೆ ಕಾರು ಗುದ್ದಿ ಮಹಿಳೆ ಸಾವು

ಬೆಳ್ತಂಗಡಿ : ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ದುರ್ಮರಣ ಹೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಕನ್ನಡಿಕಟ್ಟೆ ಬಳಿ ಭಾನುವಾರ ರಾತ್ರಿ ನಡೆದಿದೆ. ಬಳಂಜದ ಪ್ರಸಿದ್ಧ ಅನಿಲ್ ಫಾರ್ಮ್‌ನ ಅನಿಲ್ ಭಟ್ ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಸಾವೀಗೀಡಾದ ಮಹಿಳೆ. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ಫಾರ್ಮ್‌ನ ಮಾಲಕ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅನಿಲ್ ಭಟ್ ಅವರು ಗಾಯಗೊಂಡಿದ್ದಾರೆ.

ಬೆಳ್ತಂಗಡಿ : ಬೈಕ್‌ಗೆ ಕಾರು ಗುದ್ದಿ ಮಹಿಳೆ ಸಾವು Read More »

ಅಪಘಾತದಲ್ಲಿ ಕೊಲ್ಲೂರಿಗೆ ಬಂದ ಭಕ್ತರಿಬ್ಬರು ಸಾವು

ಜೀಪಿಗೆ ಮೀನು ಸಾಗಿಸುವ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತ ಉಡುಪಿ: ಮೀನು ಸಾಗಾಟದ ಲಾರಿ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ನಡೆದಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ(35) ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆರ್ಯ ಅನೂಪ್ (28) ಮೃತಪಟ್ಟಿದ್ದಾರೆ. ಜೀಪಿನಲ್ಲಿದ್ದ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕೊಲ್ಲೂರಿಗೆ

ಅಪಘಾತದಲ್ಲಿ ಕೊಲ್ಲೂರಿಗೆ ಬಂದ ಭಕ್ತರಿಬ್ಬರು ಸಾವು Read More »

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭೀಕರ ಬೆಂಕಿ ಅವಘಡ : ಪ್ರಯಾಣಿಕರು ಪಾರು

ತಿರುವನಂತಪುರಂನಿಂದ ದೆಹಲಿಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ನವದೆಹಲಿ: ಕೇರಳದ ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ರಾಜಸ್ಥಾನದ ಕೋಟಾದ ವಿಕ್ರಮ್‌ಗಢ ಅಲೋಟ್ ರೈಲು ನಿಲ್ದಾಣದ ಬಳಿ ಬಿ-1 ಕೋಚ್‌ನಲ್ಲಿ ಮುಂಜಾನೆ 5.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೋಗಿಯಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಅವರ ಲಗ್ಗೇಜ್‌ಗಳು ಸುಟ್ಟು ಹೋಗಿವೆ ಎಂದು ತಿಳಿದುಬಂದಿದೆ. ಈ ಕೋಚ್‌ನಲ್ಲಿ 68 ಮಂದಿ ಪ್ರಯಾಣಿಸುತ್ತಿದ್ದರು. ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ತಕ್ಷಣ ಬೆಂಕಿ

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭೀಕರ ಬೆಂಕಿ ಅವಘಡ : ಪ್ರಯಾಣಿಕರು ಪಾರು Read More »

error: Content is protected !!
Scroll to Top