ಸುದ್ದಿ

ಗೌರಿ ಲಂಕೇಶ್‌ ಹತ್ಯೆ ಆರೋಪಿಗೆ ಮುನ್ಸಿಪಲ್‌ ಚುನಾವಣೆಯಲ್ಲಿ ಗೆಲುವು

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಶ್ರೀಕಾಂತ್‌ ಪಂಗಾರ್ಕರ್‌ ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ನಗರಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಕಾಂತ್ ಪಂಗಾರ್ಕರ್ ಸ್ಪರ್ಧಿಸಿದ್ದರು. ಶ್ರೀಕಾಂತ್ ಎದುರು ಬಿಜೆಪಿ ಮತ್ತು ಇತರ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಆ ವಾರ್ಡ್‌ನಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಪಂಗಾರ್ಕರ್ 2001 ಮತ್ತು 2006ರ ನಡುವೆ ಅವಿಭಜಿತ ಶಿವಸೇನೆಯಿಂದ ಜಲ್ನಾ ಪುರಸಭೆಯ ಸದಸ್ಯರಾಗಿದ್ದರು. […]

ಗೌರಿ ಲಂಕೇಶ್‌ ಹತ್ಯೆ ಆರೋಪಿಗೆ ಮುನ್ಸಿಪಲ್‌ ಚುನಾವಣೆಯಲ್ಲಿ ಗೆಲುವು Read More »

ಹಣದ ವಿಚಾರಕ್ಕೆ ಹಲ್ಲೆ: ದೂರು ದಾಖಲು

ರಾಮಕುಂಜ: ಹಣದ ವಿಚಾರಕ್ಕೆ ಸಂಬಂಧಿಸಿದ ಹಾಗೆ ರಾಮಕುಂಜದ ಕುಂಡಡ್ಕಕ್ಕೆ ಬರಲು ಹೇಳಿ ತಗಾದೆ ತೆಗೆದು, ಹಲ್ಲೆ ನಡೆಸಿರುವ ಬಗ್ಗೆ ಕಡು ಪೊಲೀಸ್ ಠಾಣೆಗೆ ಸವಣೂರು ಚಾಪಳ್ಳಿ ನಿವಾಸಿ ಅಬ್ದುಲ್ ಖಾದರ್ ಎಂಬವರು ದೂರು ನೀಡಿದ್ದಾರೆ. ಆರೋಪಿಗಳಾದ ಕೃಷ್ಣಪ್ಪ, ಗಂಗಾಧರ, ಆರಿಫ್, ಸದಾಶಿವ ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಖಾದರ್ ತಿಳಿಸಿದ್ದಾರೆ. ಕೃಷ್ಣಪ್ಪ ಎಂಬವರು ಖಾದರ್ ಅವರಿಗೆ ಪರಿಚಯಸ್ಥರಾಗಿದ್ದು ಫೋನ್ ಮೂಲಕ ಕುಂಡಡ್ಕದ ಕೇಶವ ಎಂಬವರ ಮನೆಯ ಪಕ್ಕ ಬನ್ನಿ, ಹಣಕಾಸಿಗೆ ಸಂಬಂಧಿಸಿದಂತೆ ಮಾತನಾಡುವುದಾಗಿ ಕರೆದಿದ್ದರು. ಅದರಂತೆ

ಹಣದ ವಿಚಾರಕ್ಕೆ ಹಲ್ಲೆ: ದೂರು ದಾಖಲು Read More »

ಅಕ್ರಮ ಜಾನುವಾರು ಸಾಗಾಟಗಾರರ ಬಂಧನ

ಉಡುಪಿ: ಅನಧಿಕೃತವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೆಮ್ಮಣ್ಣಿನ ವಾಸಿಂ ಅಕ್ರಮ್ ಮತ್ತು ಮೊಹಮ್ಮದ್ ಖಾಜಾ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮಂಗಳೂರು ತಾಲೂಕು ಮೂಡುತೆರಾರ್ ಗ್ರಾಮದ ಗಂಜಿಮಠದ ಸಮೀಪ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳ ವಿರುದ್ಧ ಬಿ.ಎನ್.ಎಸ್. ಮತ್ತು ಕಲಂ ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಅಕ್ರಮ ಜಾನುವಾರು ಸಾಗಾಟಗಾರರ ಬಂಧನ Read More »

ಸೂರ್ಯಕುಮಾರ್‌ ಯಾದವ್‌ ಜೊತೆ ಡೇಟಿಂಗ್‌ ಮಾಡಿದ್ದೇನೆ ಎಂದ ನಟಿಯ ಮೇಲೆ ಬಿತ್ತು 100 ಕೋ. ರೂ. ಮಾನನಷ್ಟ ಮೊಕದ್ದಮೆ

ಹಲವಾರು ಕ್ರಿಕೆಟರ್‌ಗಳು ನನ್ನ ಹಿಂದೆ ಬಿದ್ದಿದ್ದರು ಎಂದು ಬಡಾಯಿ ಕೊಚ್ಚಿದ್ದ ನಟಿ ಮುಂಬೈ: ಟಿ20 ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಖುಷಿ ಮುಖರ್ಜಿಗೆ ಬಿಗ್ ಶಾಕ್ ಎದುರಾಗಿದ್ದು, ಆಕೆಯ ವಿರುದ್ಧ ಇದೀಗ 100 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಈ ಹಿಂದೆ ಖುಷಿ ಮುಖರ್ಜಿ ನನ್ನ ಹಿಂದೆ ಹಲವಾರು ಕ್ರಿಕೆಟರ್‌ಗಳು ಬಿದ್ದಿದ್ದರು. ಇದರಲ್ಲಿ ಕ್ಯಾಪ್ಟನ್‌ ಸೂರ್ಯಕುಮಾರ್‌ ನನ್ನ ಜೊತೆ ಸಾಕಷ್ಟು ಮೆಸೇಜ್‌ ವಿನಿಮಯ ಮಾಡಿದ್ದರು

ಸೂರ್ಯಕುಮಾರ್‌ ಯಾದವ್‌ ಜೊತೆ ಡೇಟಿಂಗ್‌ ಮಾಡಿದ್ದೇನೆ ಎಂದ ನಟಿಯ ಮೇಲೆ ಬಿತ್ತು 100 ಕೋ. ರೂ. ಮಾನನಷ್ಟ ಮೊಕದ್ದಮೆ Read More »

ಹಿಂದೂ ಹುಡುಗಿಗೆ ಬಲವಂತಾಗಿ ಬುರ್ಖಾ ತೊಡಿಸಿದ ಸ್ನೇಹಿತೆಯರು : ವಿಡಿಯೋ ವೈರಲ್‌

ಇದನ್ನು ಧರಿಸು, ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ ಗೆಳತಿಯರು ಲಖನೌ : ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮುಸ್ಲಿಂ ಸ್ನೇಹಿತೆಯರ ಗುಂಪೊಂದು ಹಿಂದೂ ಹುಡುಗಿಗೆ ಬಲವಂತವಾಗಿ ಬುರ್ಖಾ ತೊಡಿಸಿರುವ ವಿಡಿಯೋವೊಂದು ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಬಿಲಾರಿ ಪ್ರದೇಶದ ಸಾಹುಕುಂಜ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ಧರಿಸಿದ ಕೆಲವು ಹುಡುಗಿಯರು ಸರಳ ಉಡುಪಿನಲ್ಲಿರುವ ಹಿಂದೂ ಹುಡುಗಿಯನ್ನು ಬುರ್ಖಾ ಧರಿಸಲು ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಹುಡುಗಿ ನಿರಾಕರಿಸಿದಾಗ,

ಹಿಂದೂ ಹುಡುಗಿಗೆ ಬಲವಂತಾಗಿ ಬುರ್ಖಾ ತೊಡಿಸಿದ ಸ್ನೇಹಿತೆಯರು : ವಿಡಿಯೋ ವೈರಲ್‌ Read More »

Leopard attack

ಚಿರತೆ ದಾಳಿ: ಕೂದಲೆಳೆ ಅಂತರದಿಂದ ತಪ್ಪಿಸಿ ಜೀವ ಉಳಿಸಿಕೊಂಡ ವ್ಯಕ್ತಿ

ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಅಂಡೀರುಮಾರುವಿನಲ್ಲಿ ಚಿರತೆಯ ದಾಳಿಯಿಂದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಮಂಜಪ್ಪ ನಾಯ್ಕ(62) ಎಂಬವರೇ ಚಿರತೆಯ ಭೀಕರ ದಾಳಿಗೆ ತುತ್ತಾಗಿ ಪಾರಾದ ವ್ಯಕ್ತಿ. ಮನೆಯ ಅಂಗಳದಲ್ಲಿದ್ದ ಮಂಜಪ್ಪ ಅವರ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ. ತಕ್ಷಣವೇ ಅವರು ಪಕ್ಕದಲ್ಲಿದ್ದ ಅಡಿಕೆ ಮರವನ್ನು ಏರಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿರತೆ ಅವರ ಕಾಲಿಗೆ ಕಚ್ಚಿದ್ದು, ಗಂಭೀರ ಪ್ರಮಾಣದ ಗಾಯಗಳಾಗಿವೆ. ಗಾಯಾಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ

ಚಿರತೆ ದಾಳಿ: ಕೂದಲೆಳೆ ಅಂತರದಿಂದ ತಪ್ಪಿಸಿ ಜೀವ ಉಳಿಸಿಕೊಂಡ ವ್ಯಕ್ತಿ Read More »

ಕಾರ್ಕಳ: ಗ್ಯಾಸ್‌ ಸಿಲಿಂಡರ್‌ ಸ್ಫೋಟಿಸಿ ಅಪಾರ ಹಾನಿ

ಸ್ಫೋಟದ ಬಿರುಸಿಗೆ ಮನೆಯ ಗೋಡೆಯಲ್ಲಿ ಬಿರುಕು ಕಾರ್ಕಳ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾದ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ಗುರುವಾರ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಮುದ್ದಣ್ಣ ನಗರದ ವಾರಿಜಾ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್, ಪಾತ್ರೆ ಪಗಡಿ ಹಾಗೂ

ಕಾರ್ಕಳ: ಗ್ಯಾಸ್‌ ಸಿಲಿಂಡರ್‌ ಸ್ಫೋಟಿಸಿ ಅಪಾರ ಹಾನಿ Read More »

ಅವನಲ್ಲ ಅವಳು : ಕಳ್ಳರನ್ನು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್‌

ಶಾಲೂ, ನೀಲೂ ಖತರ್‌ನಾಕ್‌ ಐಡಿಯಾಕ್ಕೆ ಬೇಸ್ತುಬಿದ್ದ ಪೊಲೀಸರು ಬೆಂಗಳೂರು: ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರನ್ನು ಪೊಲೀಸರು ಬಂಧಿಸಿದ್ದಾರೆ. ಜ.13ರಂದು ಸಂಪಿಗೇಹಳ್ಳಿಯ ಸಂಗಮೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುವುದು ಪತ್ತೆಯಾಗಿತ್ತು. ಸಿಸಿಟಿವಿ ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, ಹುಡುಗಿಯರು ಎನ್ನುವುದು ಪತ್ತೆಯಾಗಿದೆ. ಕಳ್ಳತನ ಎಸಗಿದ ಶಾಲು ಮತ್ತು ನೀಲು ಅವರನ್ನು ಬಂಧಿಸಿದ್ದಾರೆ. ಇಬ್ಬರು

ಅವನಲ್ಲ ಅವಳು : ಕಳ್ಳರನ್ನು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್‌ Read More »

ಇರಾನ್‌ ದಂಗೆ ತೀವ್ರ : ಭಾರತೀಯರನ್ನು ಕರೆತರಲು ಮುಂದಾದ ಸರ್ಕಾರ

ಇಂದಿನಿಂದಲೇ ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧಾರ ನವದೆಹಲಿ: ಇರಾನ್‌ನಲ್ಲಿ ತೀವ್ರ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಲ್ಲಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. ಇರಾನ್‌ನಲ್ಲಿರುವ ಭಾರತೀಯರಿಗೆ ಕೂಡಲೇ ಇರಾನ್ ತೊರೆಯುವಂತೆ ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು, ಅದಾಗ್ಯೂ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರವೇ ಕಾರ್ಯಾಚರಣೆಗೆ ಮುಂದಾಗಿದೆ. ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಸರ್ಕಾರ ತುರ್ತು ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದೆ. ಈ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ

ಇರಾನ್‌ ದಂಗೆ ತೀವ್ರ : ಭಾರತೀಯರನ್ನು ಕರೆತರಲು ಮುಂದಾದ ಸರ್ಕಾರ Read More »

ಮಂಗಳೂರು: ಪ್ರಚೋದನಕಾರಿ ಪೋಸ್ಟ್ ಹಾಕಿದ ಇಬ್ಬರ ವಿರುದ್ಧ ಕೇಸ್‌

ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್‌ ವಾರ್ನಿಂಗ್‌ ನೀಡಿದ ಪೊಲೀಸರು ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದು, ಕೆಲವು ಜನರು ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಇದು ಅಮಾಯಕರ ವಿರುದ್ಧ ದಾಳಿಗೆ ಕಾರಣವಾಗಬಹುದು. ಮಂಗಳೂರಿನಲ್ಲಿ ಭಾರತೀಯ ವಲಸೆ ಕಾರ್ಮಿಕನ ಮೇಲೆ ಇಂತಹ ದಾಳಿ ನಡೆದಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ

ಮಂಗಳೂರು: ಪ್ರಚೋದನಕಾರಿ ಪೋಸ್ಟ್ ಹಾಕಿದ ಇಬ್ಬರ ವಿರುದ್ಧ ಕೇಸ್‌ Read More »

error: Content is protected !!
Scroll to Top