ಸುದ್ದಿ

ಮಹಾಕುಂಭಮೇಳಕ್ಕೆ ಎಐ, ಡಿಜಿಟಲ್‌ ಸ್ಪರ್ಶ

ಸಾರಿಗೆ, ಭದ್ರತೆ, ವಸತಿ, ಪಾರ್ಕಿಂಗ್‌, ಸಾರಿಗೆ ಎಲ್ಲದಕ್ಕೂ ಆಧುನಿಕ ತಂತ್ರಜ್ಞಾನ ಬಳಕೆ ಪ್ರಯಾಗ್‌ರಾಜ್‌ : ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಪ್ರಯಾಗ್‌ರಾಜ್‌ ನಗರ ಸಜ್ಜಾಗುತ್ತಿದೆ. ಉತ್ತರ ಪ್ರದೇಶ ಸರಕಾರ ಕಳೆದ ಐದಾರು ತಿಂಗಳಿನಿಂದಲೇ ಕುಂಭಮೇಳಕ್ಕಾಗಿ ತಯಾರಿ ನಡೆಸುತ್ತಿದ್ದು, ಈ ಸಲದ ಕುಂಭಮೇಳ ಸಂಪೂರ್ಣವಾಗಿ ಡಿಜಿಟಲ್‌ ತಂತ್ರಜ್ಞಾನದ ಸ್ಪರ್ಶದೊಂದಿಗೆ ನಡೆಯುತ್ತಿರುವುದು ವಿಶೇಷ. ಭಕ್ತರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸೌಲಭ್ಯ ಕಲ್ಪಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ. ಸಾರಿಗೆ, ಭದ್ರತೆ, ವಸತಿ, ಪಾರ್ಕಿಂಗ್‌… ಹೀಗೆ ಪ್ರತಿಯೊಂದನ್ನು ಕೂಡ ಅತ್ಯಾಧುನಿಕ ತಂತ್ರಜ್ಞಾನ ಬಳಸಿ […]

ಮಹಾಕುಂಭಮೇಳಕ್ಕೆ ಎಐ, ಡಿಜಿಟಲ್‌ ಸ್ಪರ್ಶ Read More »

ಕ್ರಿಸ್‌ಮಸ್‌ಗೆ ಬೆಂಗಳೂರು-ಮಂಗಳೂರು ಮಧ್ಯೆ ವಿಶೇಷ ರೈಲು

ಬೆಂಗಳೂರು: ಕ್ರಿಸ್​ಮಸ್ ಹಬ್ಬ ಮತ್ತು ವರ್ಷಾಂತ್ಯದ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ನೈಋತ್ಯ ರೈಲ್ವೆ ಬೆಂಗಳೂರು-ಮಂಗಳೂರು ಮಧ್ಯೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಈ ರೈಲು ಹೊರಡಲಿದೆ. ರೈಲು ಸಂಖ್ಯೆ 06505 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಡಿಸೆಂಬರ್ 23 ಮತ್ತು 27 ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.ಇದೇ ರೈಲು (06506) ಡಿಸೆಂಬರ್ 24 ಮತ್ತು 28ರಂದು ಮಂಗಳೂರು ಜಂಕ್ಷನ್

ಕ್ರಿಸ್‌ಮಸ್‌ಗೆ ಬೆಂಗಳೂರು-ಮಂಗಳೂರು ಮಧ್ಯೆ ವಿಶೇಷ ರೈಲು Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ವತಿಯಿಂದ ತೃತೀಯ ವಾರ್ಷಿಕೋತ್ಸವದ ಸಂಭ್ರಮ

ಪುತ್ತೂರು : ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ತೃತೀಯ ವಾರ್ಷಿಕೋತ್ಸವವು ಪುತ್ತೂರು ಕಲ್ಲೆಗ ಭಾರತ ಮಾತಾ ಸಭಾಭವನದಲ್ಲಿ ಇಂದು ಜರಗಿತು. ಈ ಸಂದರ್ಭದಲ್ಲಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು ಸಮಾರಂಭದ ಅಧ್ಯಕ್ಷತೆ ಪ್ರೊ ಎ. ವಿ. ನಾರಾಯಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ತಾಳ್ತಜೆ ವಸಂತಕುಮಾರ, ಡಾ ಸುರೇಶ್ ಪುತ್ತೂರಾಯ, ಕೆ.ಕೃಷ್ಣಕುಮಾರ್ ಪೂಂಜ, ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಕೈಯೂರು ನಾರಾಯಣ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ವತಿಯಿಂದ ತೃತೀಯ ವಾರ್ಷಿಕೋತ್ಸವದ ಸಂಭ್ರಮ Read More »

ಜನ ಮರೆತರೂ ಸೋಷಿಯಲ್‌ ಮೀಡಿಯಾ ಮರೆಯುವುದಿಲ್ಲ

ಲಕ್ಷ್ಮೀ-ರವಿ ರಾದ್ಧಾಂತದಲ್ಲಿ ಮುನ್ನೆಲೆಗೆ ಬಂದ ಹಳೆ ಪ್ರಕರಣಗಳು ಕಾರ್ಕಳ: ಸಾರ್ವಜನಿಕರ ನೆನಪಿನ ಶಕ್ತಿಗೆ ಬಹಳ ಕಡಿಮೆ ಆಯಸ್ಸು. ಹೀಗಾಗಿ ರಾಜಕಾರಣಿಗಳು ಏನೇ ಮಾಡಿದರೂ, ಮಾತನಾಡಿದರೂ ಕೆಲವೇ ಸಮಯದಲ್ಲಿ ಜನ ಅದನ್ನು ಮರೆತುಬಿಡುತ್ತಾರೆ. ಹೀಗಾಗಿ ರಾಜಕೀಯ ನಾಯಕರು ಏನೇನಲ್ಲ ಮಾಡಿಯೂ ದಕ್ಕಿಸಿಕೊಳ್ಳುತ್ತಾರೆ ಎನ್ನುವುದು ಭಾರತದ ರಾಜಕೀಯದ ಮಟ್ಟಿಗೆ ಸಾರ್ವತ್ರಿಕವಾಗಿರುವ ಒಂದು ಅಭಿಪ್ರಾಯ ಮತ್ತು ಇದು ನಿಜವೂ ಹೌದು. ಆದರೆ ಈ ಸೋಷಿಯಲ್‌ ಮೀಡಿಯಾ ಯುಗದಲ್ಲಿ ಜನರು ಮರೆತರೂ ಸೋಷಿಯಲ್‌ ಮೀಡಿಯಾ ಮಾತ್ರ ಮರೆಯುವುದಿಲ್ಲ. ಎಲ್ಲ ಹಳೆ ವೀಡಿಯೊ, ದಾಖಲೆಗಳನ್ನೆಲ್ಲ

ಜನ ಮರೆತರೂ ಸೋಷಿಯಲ್‌ ಮೀಡಿಯಾ ಮರೆಯುವುದಿಲ್ಲ Read More »

ಸಾಫ್ಟ್‌ವೇರ್‌ ಇಂಜಿನಿಯರನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 11.83 ಕೋ ರೂ. ಲೂಟಿ

ಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಮೊತ್ತ ಲೂಟಿಯಾದ ಪ್ರಕರಣ ಬೆಂಗಳೂರು : ನಗರದ 39 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರನ್ನು ಒಂದು ತಿಂಗಳ ಕಾಲ ಡಿಜಿಟಲ್‌ ಅರೆಸ್ಟ್‌ ಮಾಡಿ ಸೈಬರ್‌ ವಂಚಕರು ಬರೋಬ್ಬರಿ 11.83 ಕೋಟಿ ರೂ.ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ವಂಚನೆಯಲ್ಲಿ ಅತ್ಯಧಿಕ ಮೊತ್ತ ಕಳೆದುಕೊಂಡ ದೇಶದ ಮೊದಲ ಪ್ರಕರಣ ಇದಾಗಿದೆ. ಈ ಕುರಿತು ಸಂತ್ರಸ್ತ ಟೆಕ್ಕಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸೈಬರ್‌ ಠಾಣೆ

ಸಾಫ್ಟ್‌ವೇರ್‌ ಇಂಜಿನಿಯರನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 11.83 ಕೋ ರೂ. ಲೂಟಿ Read More »

ಮುಂದಿನ ವರ್ಷ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ

ಮಂಡ್ಯದ ಸಮ್ಮೇಳನಕ್ಕೆ ಇಂದು ತೆರೆ ; ದಾಖಲೆ ಸಂಖ್ಯೆಯಲ್ಲಿ ಆಗಮಿಸಿದ ಕನ್ನಡಾಭಿಮಾನಿಗಳು ಮಂಡ್ಯ : 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮಂಡ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ವರ್ಷದ ಸಮ್ಮೇಳನದ ಸ್ಥಳ ಘೋಷಿಸಲಾಗಿದೆ. ಮೂರನೇ ದಿನವಾದ ಇಂದು ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳಲಿದೆ. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲು ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಭೆಯಲ್ಲಿ

ಮುಂದಿನ ವರ್ಷ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ Read More »

ಡಾಗ್‌ ಫೈಟಿಂಗ್‌ ಮೇಲೆ ಬೆಟ್ಟಿಂಗ್‌!

ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿತ್ತು ನಾಯಿಗಳ ಕಾದಾಟದ ವಿಲಕ್ಷಣ ಪಂದ್ಯ ಜೈಪುರ: ಕೋಳಿಅಂಕ, ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್‌ ನಡೆಯುವುದು ಗೊತ್ತು, ಆದರೆ ಇಲ್ಲಿ ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್‌ ಕಟ್ಟುವ ವಿಚಿತ್ರ ಪಂದ್ಯವೊಂದು ನಡೆಯುತ್ತಿದೆ. ರಾಜಸ್ಥಾನದ ಜೈಪುರ ಸಮೀಪ ಇಂಥದ್ದೊಂದು ವಿಲಕ್ಷಣ ಮತ್ತು ಕ್ರೂರ ಪಂಂದ್ಯ ನಡೆದು ಅದರ ಮೇಲೆ ಲಕ್ಷಗಟ್ಟಲೆ ಬೆಟ್ಟಿಂಗ್‌ ನಡೆಸಲಾಗುತ್ತಿತ್ತು. ಈ ಸಂಬಂಧ 80ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಜೈಪುರ ಹನುಮಾನ್‌ಗಢ ಎಂಬಲ್ಲಿ ಫಾರ್ಮ್‌ ಹೌಸ್‌ ಒಂದರಲ್ಲಿ ಡಾಗ್‌ ಫೈಟ್‌ ನಡೆಯುತ್ತಿತ್ತು ಎಂದು ಪೊಲೀಸರು

ಡಾಗ್‌ ಫೈಟಿಂಗ್‌ ಮೇಲೆ ಬೆಟ್ಟಿಂಗ್‌! Read More »

ಭವಿಷ್ಯ ನಿಧಿ ವಂಚಿಸಿರುವ ಕಂಪನಿಗಳಲ್ಲಿ ನಾನಿಲ್ಲ : ಸ್ಪಷ್ಟನೆ ನೀಡಿದ ರಾಬಿನ್‌ ಉತ್ತಪ್ಪ

ಬೆಂಗಳೂರು : ಕಾರ್ಮಿಕರ ಭವಿಷ್ಯ ನಿಧಿ ವಂಚಿಸಿರುವ ಕಂಪನಿಗೆ ತಾನು ಕೆಲ ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದು, ಕಂಪನಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ರಿಕೆಟಿಗ ರಾಬಿನ್‌ ಉತ್ತಪ್ಪ ತನ್ನ ವಿರುದ್ಧ ಜಾರಿಯಾಗಿರುವ ಅರೆಸ್ಟ್‌ ವಾರಂಟ್‌ಗೆ ಸ್ಪಷ್ಟನೆ ನೀಡಿದ್ದಾರೆ.ಕಂಪನಿಯ ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು.2018-19 ರರ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರಿಸ್ ಫ್ಯಾಶನ್

ಭವಿಷ್ಯ ನಿಧಿ ವಂಚಿಸಿರುವ ಕಂಪನಿಗಳಲ್ಲಿ ನಾನಿಲ್ಲ : ಸ್ಪಷ್ಟನೆ ನೀಡಿದ ರಾಬಿನ್‌ ಉತ್ತಪ್ಪ Read More »

ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ : ಪುತ್ತೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಪುತ್ತೂರು: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಹೇಳಿರುವ ವಿಡಿಯೋ ನಾವು ನೋಡಿದ್ದೇವೆ, ಇದು ಕಟ್ಟುಕಥೆಯಲ್ಲ ಅಲ್ಲದೆ ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆ ಸಿ.ಟಿ.ರವಿ ಹೇಳಿಕೆ‌ ಸಹಿಸಲು ಅಸಾಧ್ಯವಾದುದು ಅವರ ಹೇಳಿಕೆಗೆ ಅಗತ್ಯ ಕಾನೂನು ಕ್ರಮ ಆಗಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಸಭಾಪತಿಗಳೂ ಈ ವಿಚಾರವನ್ನು‌ ಪ್ರಿವಿಲೇಜ್ ಕಮಿಟಿಗೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ,

ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ : ಪುತ್ತೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ Read More »

ರಾಜ್ಯ ಸರಕಾರ ರೈತರ ಸವಲತ್ತುಗಳ ಹಕ್ಕನ್ನು ಕಸಿಯುತ್ತಿದೆ – ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಆರೋಪ

ಪುತ್ತೂರು : ರೈತರ ಮತ ಪಡೆದ ಈಗಿನ ರಾಜ್ಯ ಸರಕಾರ ರೈತರ ಸವಲತ್ತಿನ ಹಕ್ಕುಗಳನ್ನು ಕಸಿಯುತ್ತಿದೆ. ಈ ಕೀರ್ತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಹೇಳಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೃಷಿಗೆ ಅಲ್ಪಸ್ವಲ್ಪ ಸಹಾಯವಾಗುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯ ಸರಕಾರದಿಂದ ಬರುತ್ತಿದ್ದ ರೂ.4ಸಾವಿರವನ್ನು ನಿಲ್ಲಿಸಲಾಗಿದೆ. ಪ್ರತಿ ಲೀಟರ್ ಹಾಲಿಗೆ ರೂ.1.50 ಕಡಿಮೆ ಮಾಡಲಾಗಿದೆ. ಅಕ್ರಮ ಸಕ್ರಮ

ರಾಜ್ಯ ಸರಕಾರ ರೈತರ ಸವಲತ್ತುಗಳ ಹಕ್ಕನ್ನು ಕಸಿಯುತ್ತಿದೆ – ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಆರೋಪ Read More »

error: Content is protected !!
Scroll to Top