ಸುದ್ದಿ

ಬಸ್‍ನಿಂದ ತಲೆ ಹೊರಹಾಕಿದ ಮಹಿಳೆಗೆ ಲಾರಿ ಡಿಕ್ಕಿ | ದೇಹದಿಂದ ಬೇರ್ಪಟ್ಟ ರುಂಡ

ಚಾಮರಾಜನಗರ : ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಿಕಿಯಿಂದ ತಲೆ ಹೊರ ಹಾಕಿದ್ದು, ಎದುರಿಗೆ ಬಂದ ಲಾರಿಯೊಂದು ತಲೆಯನ್ನೇ ಕತ್ತರಿಸಿಕೊಂಡು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆಯಿಂದ ನಂಜನಗೂಡು ಕಡೆಗೆ ಹೊರಟ್ಟಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ತಲೆಯನ್ನು ಕಿಟಕಿಯಿಂದ ಹೊರ ಹಾಕಿದ್ದ ವೇಳೆ ಮುಂಭಾಗದಿಂದ ವೇಗವಾಗಿ ಬಂದ ಲಾರಿಯೊಂದು ಮಹಿಳೆಯ ದೇಹದಿಂದ ರುಂಡವನ್ನು ಬೇರ್ಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಲಾರಿಯನ್ನು […]

ಬಸ್‍ನಿಂದ ತಲೆ ಹೊರಹಾಕಿದ ಮಹಿಳೆಗೆ ಲಾರಿ ಡಿಕ್ಕಿ | ದೇಹದಿಂದ ಬೇರ್ಪಟ್ಟ ರುಂಡ Read More »

ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದ ಮಹಾ ಕುಂಭಮೇಳದಲ್ಲಿ ನಾಥಯೋಗಿ ಪಂಥದ ಮಹಾಸಭೆ| ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಂದ ಆಶೀರ್ವಚನ

ಪ್ರಯಾಗ್‌ರಾಜ್‌ : ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಾಥಯೋಗಿ ಪಂಥದ ಮಹಾಸಭೆ ಜ. 25ರಂದು ಬೆಳಗ್ಗೆ 10ಗಂಟೆಗೆ ನಡೆಯಿತು. ಮಹಾಸಭೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಗೋರಖ್ ಪುರದ ಗೋರಕ್ಷಾ ಮಠದ ಮಹಂತ ಯೋಗಿ ಆದಿತ್ಯ ನಾಥ್ ಜಿರವರು  ಸಾನಿಧ್ಯವನ್ನು  ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ

ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದ ಮಹಾ ಕುಂಭಮೇಳದಲ್ಲಿ ನಾಥಯೋಗಿ ಪಂಥದ ಮಹಾಸಭೆ| ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಂದ ಆಶೀರ್ವಚನ Read More »

ದ್ವಿಚಕ್ರ- ಆಟೋ ನಡುವೆ ಡಿಕ್ಕಿ| ಸವಾರರು ಗಂಭೀರ ಗಾಯ

ವಿಟ್ಲ: ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ವಿಟ್ಲ – ಸಾಲೆತ್ತೂರು ಮಾರ್ಗ ಸಮೀಪವಿರುವ ವಿಟ್ಲದ ಸೈಂಟ್  ರೀಟಾ ವಿದ್ಯಾಸಂಸ್ಥೆಯ ರಸ್ತೆಯ ಬಳಿ ನಡೆದಿದೆ.  ದ್ವಿಚಕ್ರ ವಾಹನ ಸಾಲೆತ್ತೂರು ಕಡೆಯಿಂದ ವಿಟ್ಲ ಕಡೆಗೆ ಸಂಚರಿಸುತ್ತಿದ್ದು, ರಿಕ್ಷಾ ವಿಟ್ಲದಿಂದ ಕುಡ್ತ ಮುಗೇರು ಕಡೆಗೆ ಬರುತ್ತಿತ್ತು ಎನ್ನಲಾಗಿದೆ. ಘಟನೆಯ ಪರಿಣಾಮ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ರಿಕ್ಷಾ ಚಾಲಕನಿಗೂ ಗಾಯಗಳಾಗಿದೆ. ಗಾಯಾಳುಗಳನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಿಕ್ಷಾ ಮತ್ತೊಂದು

ದ್ವಿಚಕ್ರ- ಆಟೋ ನಡುವೆ ಡಿಕ್ಕಿ| ಸವಾರರು ಗಂಭೀರ ಗಾಯ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಾಣಿ ಶಾಲೆಗೆ ಬೆಂಚ್, ಡೆಸ್ಕ್ ವಿತರಣೆ

ಮಾಣಿ  : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಟ್ಲ ತಾಲೂಕು ಮಾಣಿ ವಲಯದ  ಕರ್ನಾಟಕ ಪ್ರೌಢ ಶಾಲೆಗೆ ಸಮುದಾಯದ ಅಭಿವೃದ್ಧಿ  ಜ್ಞಾನ ದೀಪ ಕಾರ್ಯಕ್ರಮದಡಿ. ಮಂಜೂರಾದ ಬೆಂಚು, ಡೆಸ್ಕ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಯೋಜನಾಧಿಕಾರಿ ರಮೇಶ್ ಬೆಂಚು, ಡೆಸ್ಕ್ ನ್ನು ವಿತರಿಸಿ ಮಾತನಾಡಿ,  ಶಿಕ್ಷಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಗಳ ಬಗ್ಗೆ ಮಾಹಿತಿ ತಿಳಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ  ಶಾಲೆಯ ಸಂಚಾಲಕ  ಹಾಜಿ ಇಬ್ರಾಹಿಂ ಕೆ, ಶಿಕ್ಷಕ ರಕ್ಷಕ ಸಂಘದ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಾಣಿ ಶಾಲೆಗೆ ಬೆಂಚ್, ಡೆಸ್ಕ್ ವಿತರಣೆ Read More »

ರೇಶನ್‌ ಕಾರ್ಡ್‌ ಇ-ಕೆವೈಸಿಗೆ ಕೊನೆಯ ಅವಕಾಶ

ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಬಂದ್‌ ಮಂಗಳೂರು: ಸರ್ಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ಕುಟುಂಬದ ಸದಸ್ಯರ ಇ-ಕೆವೈಸಿಗೆ ಕೊನೆಯ ಅವಕಾಶ ನೀಡಲಾಗಿದೆ. ಒಂದು ವೇಳೆ ಸದಸ್ಯರು ಹಾಜರಾಗಿ ಕೆವೈಸಿ ಮಾಡಿಸದಿದ್ದರೆ ಅವರ ಪಾಲಿನ ಪಡಿತರ ಬಂದ್‌ ಮಾಡಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ. ಪಡಿತರ ಚೀಟಿ ಫಲಾನುಭವಿಗಳ ಪೈಕಿ ಕೆಲವು ಸದಸ್ಯರು ಒಟಿಪಿ ಮೂಲಕ ತಿದ್ದುಪಡಿ ಮಾಡಿದ್ದು, ಸದಸ್ಯರು ಜೀವಂತ ಇರುವ ಬಗ್ಗೆ ಜೀವ ಮಾಪನ ನೀಡಿ ಇ-ಕೆವೈಸಿ ಮಾಡುವುದು ಕಡ್ಡಾಯ ಎಂದು ಆಹಾರ ಇಲಾಖೆ

ರೇಶನ್‌ ಕಾರ್ಡ್‌ ಇ-ಕೆವೈಸಿಗೆ ಕೊನೆಯ ಅವಕಾಶ Read More »

ಜುಬಿನ್‌ ಮೊಹಾಪಾತ್ರ ರಾಯಚೂರಿಗೆ ವರ್ಗ

12 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಬೆಂಗಳೂರು: ಪುತ್ತೂರು ಉಪವಿಭಾಗದ ಹಿರಿಯ ಸಹಾಯಕ ಆಯುಕ್ತ ಜುಬಿನ್‌ ಮೊಹಾಪಾತ್ರ ಸಹಿತ 12 ಐಎಎಸ್‌ ಅಧಿಕಾರಿಗಳನ್ನು ಸರಕಾರ ವರ್ಗಾವಣೆಗೊಳಿಸಿದೆ. ಜುಬಿನ್‌ ಮೊಹಾಪಾತ್ರ ಅವರನ್ನು ರಾಯಚೂರು ನಗರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಉಳಿದಂತೆ ಕಲಬುರಗಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಜಿಲ್ಲೆಗಳಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ.

ಜುಬಿನ್‌ ಮೊಹಾಪಾತ್ರ ರಾಯಚೂರಿಗೆ ವರ್ಗ Read More »

ಉಡುಪಿ : ಹಾಡಹಗಲೇ ಬಾಲಕಿಗೆ ಕಿರುಕುಳ

ಆರೋಪಿಯನ್ನು ಶೀಘ್ರ ಬಂಧಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚನೆ ಉಡುಪಿ: ಉಡುಪಿ ನಗರದಲ್ಲಿ ಹಾಡಹಗಲೇ ಯುವಕನೊಬ್ಬ ಐದು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಯನ್ನು ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದಾರೆ. ನಗರದ ಪೂರ್ಣಪ್ರಜ್ಞ ಕಾಲೇಜು ಸಮೀಪದ ಓಣಿಯಲ್ಲಿ ಸುಮಾರು 30 ವರ್ಷದ ಯುವಕ ಗುರುವಾರ ಮಧ್ಯಾಹ್ನ ಈ ಕೃತ್ಯ ಎಸಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕಿಯ

ಉಡುಪಿ : ಹಾಡಹಗಲೇ ಬಾಲಕಿಗೆ ಕಿರುಕುಳ Read More »

ಜ.26 : ಕುಂಬ್ರ ಸ್ಪಂದನಾ ಸೇವಾ ಬಳಗದಿಂದ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ

ಪುತ್ತೂರು: ಕುಂಬ್ರ ಸ್ಪಂದನಾ ಸೇವಾ ಬಳಗದ ವತಿಯಿಂದ ಧರ್ಮ ಜಾಗೃತಿಗಾಗಿ ರಾಮ ಸಂಕೀರ್ತನೆ ಧ್ಯೇಯ ವಾಕ್ಯದಲ್ಲಿ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ ಜ.26 ಭಾನುವಾರ ಕುಂಬ್ರ ಆಲಂಗಾರು ಗದ್ದೆಯಲ್ಲಿ ವಿವಿಧ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬ್ರ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಪಂದನಾ ಸೇವಾ ಬಳಗ ಕಳೆದ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ, ಕಷ್ಟದಲ್ಲಿರುವ ಬಡವರಿಗೆ ಧನ ಸಹಾಯ

ಜ.26 : ಕುಂಬ್ರ ಸ್ಪಂದನಾ ಸೇವಾ ಬಳಗದಿಂದ ‘ಶ್ರೀರಾಮ ಲೀಲೋತ್ಸವ’, ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ Read More »

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಾಲಿವುಡ್‌ ನಟಿ

ಒಂದು ಕಾಲದ ಮಾದಕ ನಟಿ ಈಗ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪ್ರಯಾಗ್‌ರಾಜ್‌ : ಬಾಲಿವುಡ್‌ನ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತದ್ದಾರೆ. ಶುಕ್ರವಾರ ಕುಂಭಮೇಳದಲ್ಲಿ ನಟಿಗೆ ಸನ್ಯಾಸ ದೀಕ್ಷೆ ನೀಡಿ ಮಾಯಿ ಮಮತಾ ನಂದಗಿರಿ ಎಂಬ ಹೊಸ ಹೆಸರು ನೀಡಲಾಗಿದೆ. ಇದರೊಂದಿಗೆ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷೇಕವನ್ನೂ ಮಾಡಲಾಗಿದೆ. 25 ವರ್ಷಗಳಿಂದ ವಿದೇಶದಲ್ಲಿ ಇದ್ದ ಮಮತಾ ಕುಲಕರ್ಣಿ ಶುಕ್ರವಾರ

ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಾಲಿವುಡ್‌ ನಟಿ Read More »

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲ್  ನೆಹರು  ನಗರದಲ್ಲಿ  ಪಟ್ಲ  ಕಾಂಪ್ಲೆಕ್ಸ್’ ಗೆ ಸ್ಥಳಾಂತರಗೊಂಡು ಉದ್ಘಾಟನೆ | ಶ್ರೀ  ಕೃಷ್ಣ ಭವನ  ಹೋಟೆಲ್  ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ಅನ್ನದಾತವಾದ ಸಂಸ್ಥೆ: ಸಂಜೀವ ಮಠಂದೂರು |41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ  ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ | ಶ್ರೀ ಕೃಷ್ಣ ಭವನ ಹೋಟೆಲ್‍ ಗೆ ಶುಭ ಹಾರೈಸಿದ ಅಶೋಕ್‍ ಕುಮಾರ್ ರೈ| ಶ್ರೀ  ಕೃಷ್ಣ ಭವನ  ಹೋಟೆಲ್ ಗೆ  ಭೇಟಿ ನೀಡಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ  

ಪುತ್ತೂರು : ಕೃಷ್ಣಪ್ಪ  ಗೌಡ  ಮಾಲಿಕತ್ವದ  ಪುತ್ತೂರಿನ  ನೆಹರು  ನಗರದಲ್ಲಿರುವ  ಹೋಟೆಲ್  ಶ್ರೀಕೃಷ್ಣ ಭವನವು  ಸುಮಾರು  20   ವರುಷಗಳಿಂದಲೂ   ಅಧಿಕ   ಸಮಯದಿಂದ   ನೆಹರು   ನಗರದಲ್ಲಿನ   ಪುತ್ತೂರು- ಮಂಗಳೂರು   ಹೆದ್ದಾರಿ   ರಸ್ತೆ   ಬದಿಯ   ಅಶ್ವಿನಿ   ಕಾಂಪ್ಲೆಕ್ಸ್’ನಲ್ಲಿ   ಕಾರ್ಯಾಚರಿಸುತ್ತಿದ್ದು,   ಇದೀಗ  ಹೋಟೆಲ್   ಶ್ರೀಕೃಷ್ಣ  ಭವನ   ಪಟ್ಲ  ಕಾಂಪ್ಲೆಕ್ಸ್’ಗೆ  ಜ. 24ರಂದು  ಸ್ಥಳಾoತರಗೊಂಡಿದೆ. ಈ  ಸಂದರ್ಭದಲ್ಲಿ  ಲಕ್ಷ್ಮೀ   ಪೂಜೆಯೊಂದಿಗೆ   ಹೋಟೆಲ್   ಶ್ರೀ  ಕೃಷ್ಣ ಭವನ  ಪಟ್ಲ  ಕಾಂಪ್ಲೆಕ್ಸ್’ ನ ನೂತನ   ಕಟ್ಟಡ   ಶುಭಾರಂಭಗೊಂಡಿದೆ.   ನೂತನ   ಹೋಟೆಲನ್ನು   ಪುತ್ತೂರು   ಮಾಜಿ   ಶಾಸಕ  ಸಂಜೀವ

ಪ್ರತಿಷ್ಠಿತ  ಶ್ರೀ  ಕೃಷ್ಣ ಭವನ  ಹೋಟೆಲ್  ನೆಹರು  ನಗರದಲ್ಲಿ  ಪಟ್ಲ  ಕಾಂಪ್ಲೆಕ್ಸ್’ ಗೆ ಸ್ಥಳಾಂತರಗೊಂಡು ಉದ್ಘಾಟನೆ | ಶ್ರೀ  ಕೃಷ್ಣ ಭವನ  ಹೋಟೆಲ್  ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ಅನ್ನದಾತವಾದ ಸಂಸ್ಥೆ: ಸಂಜೀವ ಮಠಂದೂರು |41 ವರ್ಷದಿಂದ  ಹೋಟೆಲ್  ಸೇವೆಯನ್ನು  ನೀಡಿದ  ಯಶಸ್ವಿ  ಉದ್ಯಮಿ  ಕೃಷ್ಣಪ್ಪ  ಗೌಡ : ಅರುಣ್‍ ಕುಮಾರ್ ಪುತ್ತಿಲ | ಶ್ರೀ ಕೃಷ್ಣ ಭವನ ಹೋಟೆಲ್‍ ಗೆ ಶುಭ ಹಾರೈಸಿದ ಅಶೋಕ್‍ ಕುಮಾರ್ ರೈ| ಶ್ರೀ  ಕೃಷ್ಣ ಭವನ  ಹೋಟೆಲ್ ಗೆ  ಭೇಟಿ ನೀಡಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ   Read More »

error: Content is protected !!
Scroll to Top