ರಾಷ್ಟ್ರ ಮಟ್ಟದ INSEF ವಿಜ್ಞಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧ್ ಆರ್ ಶೆಟ್ಟಿಗೆ ಕಂಚಿನ ಪದಕ
ಪುತ್ತೂರು : ರಾಷ್ಟ್ರ ಮಟ್ಟದ INSEF ವಿಜ್ಞಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಮೃದ್ಧ್ ಆರ್ ಶೆಟ್ಟಿ ತೃತೀಯ ಸ್ಥಾನ ಪಡೆದು, ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಆಸಕ್ತಿ ಮತ್ತು ಕ್ರೀಯಾಶೀಲತೆಯನ್ನು ಬೆಳೆಸುವ ಸಲುವಾಗಿ ಜೂನಿಯರ್ ವಿಭಾಗದಲ್ಲಿ INSEF ವತಿಯಿಂದ ಜನವರಿ 11ರಂದು ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಿತು. ಸಮೃದ್ಧ್ ಆರ್ ಶೆಟ್ಟಿ, ಶಿಕ್ಷಕ ದಂಪತಿ ರಾಮಚಂದ್ರ ಶೆಟ್ಟಿ […]