ಸುದ್ದಿ

ಹೆದ್ದಾರಿ ಗುಂಡಿಗೆ ಬಿದ್ದ ಸ್ಕೂಟರ್‌ : ಮಹಿಳೆ ದುರ್ಮರಣ

ರಸ್ತೆಗೆ ಬಿದ್ದ ಮಹಿಳೆ ಮೇಲೆ ಹರಿದು ಹೋದ ಟ್ರಕ್‌ ಮಂಗಳೂರು: ಮಂಗಳೂರು ಹೊರವಲಯದ ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯೊಂದರಸಿಬ್ಬಂದಿ ಮಾಧವಿ ಎಂಬ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ. ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ದೊಡ್ಡ ಗುಂಡಿಗೆ ಬಿದ್ದಿದ್ದು, ಅದೇ ವೇಳೆ ಹಿಂದಿನಿಂದ ಬಂದ ಮೀನಿನ ಟ್ರಕ್ ಅವರ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವಿಗೀಡಾದರು. ಈ ದಾರುಣ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಮೂಲ್ಕಿಯಿಂದ ಪಂಪ್‌ವೆಲ್‌ಗೆ ಸಾಗುವ […]

ಹೆದ್ದಾರಿ ಗುಂಡಿಗೆ ಬಿದ್ದ ಸ್ಕೂಟರ್‌ : ಮಹಿಳೆ ದುರ್ಮರಣ Read More »

ಮದ್ದೂರು ಗಲಭೆ ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾಗೆ ಪತ್ರ

ರಾಜ್ಯದಲ್ಲಿ ಹಿಂದೂಗಳು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ಬಂದಿದೆ ಎಂದು ದೂರು ಬೆಂಗಳೂರು: ಮಂಡ್ಯದ ಮದ್ದೂರು ಗಣೇಶ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಿದ ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಗಲಭೆ ಹಾಗೂ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಇದೇ ಮಾದರಿಯ ಗಲಭೆಗಳ ಹಿಂದೆ ಮತಾಂಧ ಶಕ್ತಿಗಳ ವ್ಯವಸ್ಥಿತ ಪಿತೂರಿ ಇರುವ ಅನುಮಾನವಿದೆ. ಹೀಗಾಗಿ ಎನ್‌ಐಎ ಮೂಲಕ ತನಿಖೆ ನಡೆಸಬೇಕೆಂದು ಹಿಂದೂ ಮುಖಂಡ ತೇಜಸ್‌ ಗೌಡ

ಮದ್ದೂರು ಗಲಭೆ ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾಗೆ ಪತ್ರ Read More »

ಶ್ರೀ ಮಹಾಭಾರತ ಸರಣಿ ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ 50 ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ನಾಲ್ಕನೇ ಹಂತದ ತಾಳಮದ್ದಳೆಯ ಉದ್ಘಾಟನಾ ಕಾರ್ಯಕ್ರಮವು ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು. ಭಾರತೀಯ ಭೂಸೇನೆಯ ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ತಾಳಮದ್ದಳೆಯಂತ ಕಲಾ ಪ್ರಕಾರಗಳು ಸಮರ್ಥ ಮಾಧ್ಯಮವಾಗಿದ್ದು ಇದನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠ0ದೂರು ಮಾತನಾಡಿ ಯಕ್ಷಗಾನ

ಶ್ರೀ ಮಹಾಭಾರತ ಸರಣಿ ತಾಳಮದ್ದಳೆ Read More »

ಹಿಂದೂ ಸಂಘಟನೆಗಳ ಚಾಮುಂಡಿ ಚಲೋ ಪಾದಯಾತ್ರೆಗೆ ಪೊಲೀಸರಿಂದ ತಡೆ

ಪೊಲೀಸರ ಜೊತೆ ವಾಗ್ವಾದ, ಹಲವು ಕಾರ್ಯಕರ್ತರು ವಶಕ್ಕೆ ಬೆಂಗಳೂರು: ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಇಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ಪಾದಯಾತ್ರೆಯನ್ನು ಪೊಲೀಸರು ತಡೆದು ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಇಂದು ಚಾಮುಂಡಿ ಚಲೋ ಪಾದಯಾತ್ರೆಗೆ ಕರೆ ನೀಡಲಾಗಿತ್ತು. ಇನ್ನೊಂದು ಕಡೆ ಬಾನು ಮುಷ್ತಾಕ್ ಆಯ್ಕೆ ಸಮರ್ಥಿಸಿ

ಹಿಂದೂ ಸಂಘಟನೆಗಳ ಚಾಮುಂಡಿ ಚಲೋ ಪಾದಯಾತ್ರೆಗೆ ಪೊಲೀಸರಿಂದ ತಡೆ Read More »

ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಸಮರ

ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನ 8 ದೇಶಗಳು, 19 ಪಂದ್ಯ ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ,

ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಸಮರ Read More »

ಮಂಗಳೂರು : ಸಹೋದರಿ, ಸ್ನೇಹಿತೆಯ ಎದುರೇ ಟೆರೇಸ್‌ನಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಮಂಗಳೂರು : ಸಹೋದರಿ ಮತ್ತು ಸ್ನೇಹಿತೆಯ ಎದುರೇ ಬಾಲಕಿ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮಂಗಳೂರಿನ ಬಜಿಲಕೇರಿ ಸಮೀಪದ ವಸತಿ ಸಮುಚ್ಚಯದಲ್ಲಿ ಸಂಭವಿಸಿದೆ. ಮೂಲತಃ ಉತ್ತರ ಪ್ರದೇಶ ಬನಾರಸ್‌ನ ಪ್ರಸ್ತುತ ಬಜಿಲಕೇರಿ ನಿವಾಸಿಯಾಗಿರುವ ಖುಷಿ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ನಗರದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಸೆ.7ರಂದು ಮಧ್ಯಾಹ್ನ ದೇವಸ್ಥಾನಕ್ಕೆ ತೆರಳಿದ್ದ ಖುಷಿ ಬಳಿಕ ತನ್ನ ಸಹೋದರಿ ಮತ್ತು ಸ್ನೇಹಿತೆಯ ಜತೆಗೆ ಅಪಾರ್ಟ್‌ಮೆಂಟ್‌ನ ಟೆರೇಸ್‌ಗೆ ಹೋಗೋಣ

ಮಂಗಳೂರು : ಸಹೋದರಿ, ಸ್ನೇಹಿತೆಯ ಎದುರೇ ಟೆರೇಸ್‌ನಿಂದ ಜಿಗಿದು ಬಾಲಕಿ ಆತ್ಮಹತ್ಯೆ Read More »

26 ವರ್ಷ ಹಿಂದಿನ ಕೋಮು ಗಲಭೆ ಪ್ರಕರಣದ ಆರೋಪಿಗಳು ಸೆರೆ

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಮಂಗಳೂರು: 26 ವರ್ಷದ ಹಿಂದೆ ನಡೆದ ಕೋಮು ಗಲಭೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 31, 1998ರಂದು ಮೂಲ್ಕಿಯ ಹಳೆಯಂಗಡಿಯಲ್ಲಿ ಭುಗಿಲೆದ್ದ ಕೋಮು ಗಲಭೆಯ ಆರೋಪಿಗಳಾಗಿದ್ದ ಇವರಿಬ್ಬರು ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದರು. ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ್ ಶೆಟ್ಟಿ ಸೆರೆಯಾಗಿರುವ ಆರೋಪಿಗಳು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 436, 427 r/w 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ, ಮೂಲ್ಕಿ ಸಮೀಪ

26 ವರ್ಷ ಹಿಂದಿನ ಕೋಮು ಗಲಭೆ ಪ್ರಕರಣದ ಆರೋಪಿಗಳು ಸೆರೆ Read More »

ಧರ್ಮಸ್ಥಳ ಪ್ರಕರಣ : ಅಮಿತ್‌ ಶಾ ಭೇಟಿಯಾದ ಬಿಜೆಪಿ ನಿಯೋಗ

ಅನ್ಯರಾಜ್ಯದವರೂ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆಗೆ ಪ್ರಸ್ತಾವ ನವದೆಹಲಿ: ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರ ನಿಯೋಗ ಭೇಟಿ ಮಾಡಿ ಮಾಹಿತಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿಯಾಗಿದೆ. ಈ ವೇಳೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಆರಂಭದಿಂದ ಎಸ್‌ಐಟಿ ತನಿಖೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಾವುದೇ ಅಸ್ಥಿಪಂಜರ ಸಿಗದಿರುವ

ಧರ್ಮಸ್ಥಳ ಪ್ರಕರಣ : ಅಮಿತ್‌ ಶಾ ಭೇಟಿಯಾದ ಬಿಜೆಪಿ ನಿಯೋಗ Read More »

ಇಂದು ಉಪರಾಷ್ಟ್ರಪತಿ ಚುನಾವಣೆ : ರಾಧಾಕೃಷ್ಣನ್‌-ಸುದರ್ಶನ್‌ ರೆಡ್ಡಿ ನಡುವೆ ಸ್ಪರ್ಧೆ

ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್‌ ಗೆಲುವು ಬಹುತೇಕ ಖಚಿತ ನವದೆಹಲಿ: ಜಗದೀಪ್ ಧನ್‌ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯಲಿದೆ. ಆಡಳಿತ-ವಿರೋಧ ಪಕ್ಷದ ನಡುವೆ ಪ್ರತಿಷ್ಠೆಯ ಕಣವಾಗಿದ್ದು, ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಇಂಡಿ ಒಕ್ಕೂಟದ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ

ಇಂದು ಉಪರಾಷ್ಟ್ರಪತಿ ಚುನಾವಣೆ : ರಾಧಾಕೃಷ್ಣನ್‌-ಸುದರ್ಶನ್‌ ರೆಡ್ಡಿ ನಡುವೆ ಸ್ಪರ್ಧೆ Read More »

ಬೆಂಗಳೂರಿನಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಡ್ಯಾನ್ಸ್ & ಬೀಟ್ಸ್ ತಂಡ ಬೆಳ್ಳಾರೆ

ಬೆಂಗಳೂರು: ತುಳುನಾಡ ಜವನೆರ್ (ರಿ), ಬೆಂಗಳೂರು ವತಿಯಿಂದ ವಿಜಯನಗರದ ಬಂಟರ ಸಂಘದ ಆವರಣದಲ್ಲಿ ನಡೆದ “ಅಷ್ಟಮಿದ ಐಸಿರ” 2025 ರ ತುಳುವ ಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀವನ್ ಟಿ.ಎನ್ ಬೆಳ್ಳಾರೆ ನಿರ್ದೇಶನದ ‘ಡ್ಯಾನ್ಸ್ ಅಂಡ್ ಬೀಟ್ಸ್’ ಬೆಳ್ಳಾರೆ. ಪಂಜ, ಸುಬ್ರಹ್ಮಣ್ಯ, ಕೈಕಂಬ ನೃತ್ಯ ಶಾಖೆಗಳ ಸುಮಾರು 60 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರದರ್ಶನದ ಮೂಲಕ ನೆರೆದಿದ್ದ ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿ ಸಂಘಟಕರ ಪ್ರಶಂಸೆ ಪಡೆಯಿತು. ತಂಡದ ಕಾರ್ಯಕ್ರಮದ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಡಾ|

ಬೆಂಗಳೂರಿನಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಡ್ಯಾನ್ಸ್ & ಬೀಟ್ಸ್ ತಂಡ ಬೆಳ್ಳಾರೆ Read More »

error: Content is protected !!
Scroll to Top