ಸುದ್ದಿ

ವಿದ್ಯುತ್‌ ಸ್ಥಾವರದ ಕಮಾನು ಕುಸಿದು ಬಿದ್ದು 9 ಕಾರ್ಮಿಕರ ಸಾವು

ನಿರ್ಮಾಣ ಹಂತದ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಸಂಭವಿಸಿದ ದುರಂತ ಚೆನ್ನೈ : ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಎನ್ನೋರ್‌ನಲ್ಲಿ ನಿರ್ಮಾಣ ಹಂತದ ಉಷ್ಣ ವಿದ್ಯುತ್ ಸ್ಥಾವರದ ಕಮಾನು ಕುಸಿದು ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ 9 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಅವಘಡದಲ್ಲಿ ಮೃತಪಟ್ಟ ಎಲ್ಲ ಕಾರ್ಮಿಕರು ಅಸ್ಸಾಂನವರು. ಈ ಸಂದರ್ಭ ನಿವೇಶನದಲ್ಲಿ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಡೆಟ್ (ಬಿಎಚ್‌ಇಎಲ್)ನ ಅಧಿಕಾರಿಗಳು ಇದ್ದರು ಎಂದು ತಮಿಳುನಾಡು ಜನರೇಷನ್ ಆ್ಯಂಡ್ ಡಿಸ್ಟ್ರಿಬ್ಯುಷನ್ ಕಾರ್ಪೊರೇಷನ್(ಟಿಎಎನ್‌ಜಿಇಡಿಸಿಒ)ನ ಅಧ್ಯಕ್ಷ ಡಾ. ಜೆ. ರಾಧಾಕೃಷ್ಣನ್ ಹೇಳಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು […]

ವಿದ್ಯುತ್‌ ಸ್ಥಾವರದ ಕಮಾನು ಕುಸಿದು ಬಿದ್ದು 9 ಕಾರ್ಮಿಕರ ಸಾವು Read More »

ಬಂಟ್ವಾಳ : 15 ವರ್ಷದ ಹಿಂದೆ ಮನೆ ಬಿಟ್ಟು ಹೋದ ಮಗನ ಚಿಂತೆಯಲ್ಲಿ ಮಹಿಳೆ ಅತ್ಮಹತ್ಯೆ

ಬಂಟ್ವಾಳ : ಅನಾರೋಗ್ಯದ ಸಮಸ್ಯೆ ಹಾಗೂ ಮಗನ ಚಿಂತೆಯಿದ್ದ ಬಳಲುತ್ತಿದ್ದ ಮಹಿಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ನಡೆದಿದೆ. ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಉಮಾವತಿ (68) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 15 ವರ್ಷಗಳ ಹಿಂದೆ ಉಮಾವತಿಯವರ ಮಗ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದಾರೆ. ಅದೇ ಚಿಂತೆಯಲ್ಲಿದ್ದವರಿಗೆ ಮಗನ ಚಿಂತೆಯಿಂದ ರಕ್ತದ ಒತ್ತಡ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಮಾನಸಿಕವಾಗಿ ನೊಂದುಕೊಂಡು ಜೀವನದಲ್ಲಿ ಜಿಗುಪ್ಪೆ ಹೊಂದಿದ್ದ ಇವರು

ಬಂಟ್ವಾಳ : 15 ವರ್ಷದ ಹಿಂದೆ ಮನೆ ಬಿಟ್ಟು ಹೋದ ಮಗನ ಚಿಂತೆಯಲ್ಲಿ ಮಹಿಳೆ ಅತ್ಮಹತ್ಯೆ Read More »

ಧರ್ಮಸ್ಥಳ ಪ್ರಕರಣ ಎಸ್‌ಐಟಿ ತನಿಖೆ ಶೀಘ್ರ ಮುಕ್ತಾಯ : ಪರಮೇಶ್ವರ್‌

ಶೀಘ್ರದಲ್ಲೇ ವರದಿ ಕೊಡಲು ಎಸ್‌ಐಟಿಗೆ ಸೂಚನೆ ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಆದಷ್ಟು ಬೇಗ ಮುಕ್ತಾಯವಾಗಲಿದ್ದು, ಇಡೀ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಎಸ್‌ಐಟಿಗೆ ತಿಳಿಸಿದ್ದೇವೆ ಎಂಬುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಆದಷ್ಟು ಶೀಘ್ರದಲ್ಲಿ ಎಸ್‌ಐಟಿಯಿಂದ ತನಿಖಾ ವರದಿ ಪಡೆಯಲು ಸರ್ಕಾರ ನಿರ್ಧರಿಸಿದೆ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಿ ವರದಿ ಕೊಡಲು ಎಸ್‌ಐಟಿಗೆ ಹೇಳಿದ್ದೇವೆ. ಆದಷ್ಟು ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಬೇಕು ಅಂತ

ಧರ್ಮಸ್ಥಳ ಪ್ರಕರಣ ಎಸ್‌ಐಟಿ ತನಿಖೆ ಶೀಘ್ರ ಮುಕ್ತಾಯ : ಪರಮೇಶ್ವರ್‌ Read More »

ನಾಳೆ ಕಟ್ಟತ್ತಾರಿನಲ್ಲಿ “Future First 2025”

ಪುತ್ತೂರು : ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯ ವತಿಯಿಂದ “ಫ್ಯೂಚರ್ ಪಸ್ಟ್ 2025” ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು ಎಂಬ ಧ್ಯೇಯದಡಿ ಅಕ್ಟೋಬರ್ ಒಂದರಂದು ಕಟ್ಟತ್ತಾರ್ ನಲ್ಲಿ ನಡೆಯಲಿದೆ ಕಳೆದ ಆರು ವರ್ಷಗಳಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಹಲವಾರು ಜನರ ಜೀವನದಲ್ಲಿ ಬೆಳಕು ತಂದಿದೆ. ಈಗ ಹೊಸ ಶೈಕ್ಷಣಿಕ ಯಾತ್ರೆಗೆ ಕಾಲಿಟ್ಟಿದ್ದಾರೆ—Future First 2025, ಒಂದು ದೀರ್ಘಕಾಲಿಕ ಯೋಜನೆ, ಪ್ರತಿಯೊಂದು ಮನೆಯಲ್ಲೂ ವೃತ್ತಿಪರರನ್ನು ರೂಪಿಸುವ ಮಹತ್ವಾಕಾಂಕ್ಷೆಮನ್ನು ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯು ಹೊಂದಿದೆ. ಇಂದಿನ ಪರಿಸ್ಥಿತಿಯಲ್ಲಿ ಹಲವರು 8ನೇ,

ನಾಳೆ ಕಟ್ಟತ್ತಾರಿನಲ್ಲಿ “Future First 2025” Read More »

ಇಂಟರ್ ಲಾಕ್ ಫ್ಯಾಕ್ಟರಿಯ ಸಿಸಿ ಕ್ಯಾಮರಾಗಳಿಗೆ ಹಾನಿ

ವಿಟ್ಲ: ಅಪ್ರಾಪ್ತ ಬಾಲಕರಿಬ್ಬರು ಖಾಸಗಿ ಸ್ಥಳದಲ್ಲಿದ್ದ ಇಂಟರ್ ಲಾಕ್ ಘಟಕದಲ್ಲಿರುವ ಸಿಸಿ ಕ್ಯಾಮರಾಗಳಿಗೆ ಹಾನಿ ಮಾಡಿ, ದೇವರ ಫೋಟೋ ಮತ್ತು ಡಿವಿಆರ್ ಅನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಪುಣಚದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಘಟನೆಯಲ್ಲಿ ಭಾಗಿಯಾದ ಇಬ್ಬರು ಅಪ್ರಾಪ್ತರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಪುಣಚ ಗ್ರಾಮದ ಪಾಲಸ್ತಡ್ಕ ನಿವಾಸಿ ಆನಂದ ಗೌಡ ಅವರ ಪತ್ನಿಯ ಹೆಸರಿನಲ್ಲಿರುವ ಇಂಡೆಸ್ಟ್ರೀಸ್ ಇಂಟರ್ ಲಾಕ್ ಘಟಕದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲಾಗಿತ್ತು. ಸಂಜೆ 6

ಇಂಟರ್ ಲಾಕ್ ಫ್ಯಾಕ್ಟರಿಯ ಸಿಸಿ ಕ್ಯಾಮರಾಗಳಿಗೆ ಹಾನಿ Read More »

ಹಿಂದು ಮುಖಂಡರ ಹತ್ಯೆಗೆ ಮುಜಾಹಿದಿನ್‌ ಆರ್ಮಿ ರಚಿಸಿದ ನಾಲ್ವರ ಬಂಧನ

ಆನ್‌ಲೈನ್‌ ಗ್ರೂಪ್‌ಗಳ ಮೂಲಕ ರಹಸ್ಯ ಸಂದೇಶಗಳ ರವಾನೆ ಲಖನೌ: ಹಿಂದೂ ಧಾರ್ಮಿಕ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು ಮುಜಾಹಿದ್ದೀನ್ ಆರ್ಮಿ ಎಂಬ ಮೂಲಭೂತವಾದಿ ಸಂಘಟನೆಯನ್ನು ರಚಿಸಲು ಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ. ಈ ಗುಂಪು ಹಿಂಸಾತ್ಮಕ ಚಟುವಟಿಕೆಗಳಿಗೆ ತಯಾರಿ ನಡೆಸುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕೆಲವು ವ್ಯಕ್ತಿಗಳು ಉಗ್ರಗಾಮಿ

ಹಿಂದು ಮುಖಂಡರ ಹತ್ಯೆಗೆ ಮುಜಾಹಿದಿನ್‌ ಆರ್ಮಿ ರಚಿಸಿದ ನಾಲ್ವರ ಬಂಧನ Read More »

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು, ಇದರ 2025-26 ಮತ್ತು 2026-27ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ 28 ರಂದು ಸಮಾಜದ ಆಡಳಿತ ಮಂಡಳಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಪಳಂಗಪ್ಪ ಪಾಣತ್ತಲೆಯವರು, ಉಪಾಧ್ಯಕ್ಷರಾಗಿ ಶ್ರೀ ನಾಗೇಶ್ ಕುಮಾರ್ ಕಲ್ಲುಮುಟ್ಲುರವರು, ಗೌರವ ಕಾರ್ಯದರ್ಶಿಗಳಾಗಿ ಶ್ರೀ ಸೋಮಣ್ಣ ಕುಂಭಗೌಡನ ರವರು, ಕೋಶಾಧಿಕಾರಿಗಳಾಗಿ ಶ್ರೀ ರಾಧಾಕೃಷ್ಣ ಗುತ್ತಿಗಾರುಮೂಲೆಯವರು, ಜಂಟಿ ಕಾರ್ಯದರ್ಶಿಗಳಾಗಿ ಶ್ರೀ ನಾಗೇಶ್ ಉಳುವಾರು ಬಂಟೋಡಿರವರು ಹಾಗೂ ಶ್ರೀಮತಿ ನೇಹ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ Read More »

ದೇವಾಲಯಗಳ ಪ್ರಸಾದ, ಪೂಜೆ ಹೆಸರಿನಲ್ಲಿ ವಂಚನೆ : ಇಬ್ಬರ ಬಂಧನ

ನಕಲಿ ವೆಬ್‌ಸೈಟ್‌ ಮೂಲಕ ಪ್ರಸಿದ್ಧ ದೇವಸ್ಥಾನಗಳ ಹೆಸರಿನಲ್ಲಿ ಮೋಸ ಬೆಂಗಳೂರು: ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ ಪ್ರಮುಖ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಗೆ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬವರನ್ನು ಚಿಕ್ಕಮಗಳೂರು

ದೇವಾಲಯಗಳ ಪ್ರಸಾದ, ಪೂಜೆ ಹೆಸರಿನಲ್ಲಿ ವಂಚನೆ : ಇಬ್ಬರ ಬಂಧನ Read More »

ಲಂಡನ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

ಗಾಂಧಿ ಜಯಂತಿಗೆ ಎರಡು ದಿನ ಮೊದಲು ನಡೆದ ಕೃತ್ಯಕ್ಕೆ ಭಾರತ ಖಂಡನೆ ಲಂಡನ್ : ಗಾಂಧಿ ಜಯಂತಿಗೆ ಕೇವಲ ಎರಡು ದಿನಗಳ ಮೊದಲು ಲಂಡನ್ ವಿಶ್ವವಿದ್ಯಾಲಯದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಭಾರತದ ಹೈಕಮಿಷನ್ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದು, ಇದನ್ನು ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದು ಕರೆದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಧ್ಯಾನಸ್ಥ ಭಂಗಿಯಲ್ಲಿ

ಲಂಡನ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ Read More »

ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಇಂದು ಲೋಕಾಯುಕ್ತ ದಾಳಿ ನಡೆಸಿದೆ. ಕೋರ್ಟ್ ನಿರ್ದೇಶನದಂತೆ ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲು ಬೆನ್ನಲ್ಲೇ ಲೋಕಾಯುಕ್ತ ತನಿಖೆ ಚುರುಕುಗೊಳಿಸಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ರಾಜೇಗೌಡ, ಪತ್ನಿ‌ ಪುಷ್ಪ ಹಾಗೂ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಟಿ.ಡಿ.ರಾಜೇಗೌಡ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಆಸ್ತಿ

ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ Read More »

error: Content is protected !!
Scroll to Top