22ನೇ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಅಧ್ಯಾಪಕ ವೆಂಕಟೇಶ್ ಪ್ರಸಾದ್ ಅವರಿಗೆ 2 ಚಿನ್ನ, 1 ಕಂಚು
ಪುತ್ತೂರು: ಮಂಗಳೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 19ರಂದು ಆಯೋಜಿತವಾದ 22ನೇ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಅವರು ಹಲವು ಸ್ಪರ್ಧೆಗಳಲ್ಲಿ ವಿಜಯಿಯಾಗಿದ್ದಾರೆ. 50ರ ವಯೋಮಾನದ ಎತ್ತರ ಜಿಗಿತ ಮತ್ತು 5 ಕಿ.ಮೀ ವೇಗದ ನಡಿಗೆಯಲ್ಲಿ ಚಿನ್ನದ ಪದಕ ಹಾಗೂ ಉದ್ದ ಜಿಗಿತದಲ್ಲಿ ಕಂಚಿನ ಪದಕ ಗಳಿಸಿದ್ದು, ಡಿಸೆಂಬರ್ ನಲ್ಲಿ ಕೋಲಾರದಲ್ಲಿ ನಡೆಯುವ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. […]










