ಸುದ್ದಿ

ಕಾಡಿನಂಚಿನಲ್ಲಿ ಬೀಡುಬಿಟ್ಟಿವೆ 21 ಹುಲಿಗಳು : ಅರಣ್ಯಾಧಿಕಾರಿ ಎಚ್ಚರಿಕೆ

ಹುಲಿ ಸೆರೆಹಿಡಿಯುವ ಕಾರ್ಯಾಚರಣೆ ಚುರುಕು ಮೈಸೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ಬರೋಬರಿ 21 ಹುಲಿಗಳು ಬಂದಿವೆ ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ, ಸರಗೂರು ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಮೂವರ ರೈತರು ಬಲಿಯಾದ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಅರಣ್ಯ ಇಲಾಖೆ ಜನರನ್ನು ಕಾಡಿದ್ದ ಹುಲಿಯನ್ನು ಸೆರೆಹಿಡಿದಿತ್ತು. ಜೊತೆಗೆ ಕಾಡಂಚಿನ ರೈತರ ರಕ್ಷಣೆಗೆ ಹಲವು ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಈ ನಡುವೆ ಒಂದಲ್ಲ ಎರಡಲ್ಲ ಬರೋಬ್ಬರಿ 21 ಹುಲಿಗಳು ಎಂಟ್ರಿ […]

ಕಾಡಿನಂಚಿನಲ್ಲಿ ಬೀಡುಬಿಟ್ಟಿವೆ 21 ಹುಲಿಗಳು : ಅರಣ್ಯಾಧಿಕಾರಿ ಎಚ್ಚರಿಕೆ Read More »

ಬಿ.ಸಿ.ರೋಡ್‌ : ಕಾರು ವೃತ್ತಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು

ಬಂಟ್ವಾಳ : ಇನ್ನೋವಾ ಕಾರೊಂದು ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಕಾರು ಶನಿವಾರ ಮುಂಜಾನೆ 5ರ ವೇಳೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ನೇರವಾಗಿ ಢಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು ಐವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬೆಂಗಳೂರು ಮೂಲದವರು ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಬಿ.ಸಿ.ರೋಡ್‌ : ಕಾರು ವೃತ್ತಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು Read More »

ಸುರತ್ಕಲ್‌ನಲ್ಲಿ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ

ಹೆದ್ದಾರಿ ಬಂದ್‌ ಮಾಡಿ ಸುರಕ್ಷತಾ ಕ್ರಮ ಕೈಗೊಂಡ ಅಧಿಕಾರಿಗಳು ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಜಂಕ್ಷನ್‌ನಲ್ಲಿ ಅಥರ್ವಾ ಆಸ್ಪತ್ರೆ ಬಳಿ ಸಿಎನ್‌ಜಿ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಒಂದರಲ್ಲಿ ಶುಕ್ರವಾರ ರಾತ್ರಿ ಸೋರಿಕೆ ಉಂಟಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾಯಿತು. ಕೂಡಲೇ ಸುರಕ್ಷತಾ ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಲಾಯಿತು. ಬೈಕಂಪಾಡಿ ಗೈಲ್ ಪಂಪ್‌ನಿಂದ ಸಿಎನ್‌ಜಿ ತುಂಬಿಸಿಕೊಂಡು ಉಡುಪಿ ಕಡೆ ಹೋಗುತ್ತಿದ್ದ ಟ್ಯಾಂಕರ್ ಸುರತ್ಕಲ್ ತಲುಪುತ್ತಿದ್ದಂತೆ ಸೋರಿಕೆ ಆರಂಭವಾಗಿತ್ತು. ಚಾಲಕ ತಕ್ಷಣ ಟ್ಯಾಂಕರನ್ನು ಹೆದ್ದಾರಿ ಬದಿ ನಿಲ್ಲಿಸಿ ಅಪಾಯದ ಮುನ್ಸೂಚನೆಯನ್ನು

ಸುರತ್ಕಲ್‌ನಲ್ಲಿ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ Read More »

ಬಿಹಾರ ಫಲಿತಾಂಶ : ಪಕ್ಷಗಳ ಅಂತಿಮ ಬಲಾಬಲ

200 ದಾಟಿ ಇತಿಹಾಸ ನಿರ್ಮಿಸಿದ ಎನ್‌ಡಿಎ ಮೈತ್ರಿಕೂಟ ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಎಲ್ಲ ಎಕ್ಸಿಟ್‌ ಪೋಲ್‌ಗಳನ್ನು ತಲೆಕೆಳಗು ಮಾಡಿ ಮತ್ತೆ ಅಧಿಕಾರಕ್ಕೇರಿದೆ. ಎನ್‌ಡಿಎ 202, ಮಹಾಘಟಬಂಧನ್‌ 35 ಹಾಗೂ ಇತರ 6 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಕಾಂಗ್ರೆಸ್ ಎಂದಿನಂತೆ ಹೇಳೋಕೆ ಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡ ಆರ್‌ಜೆಡಿ ಮಣ್ಣು ಮುಕ್ಕಿದೆ. ಮತಪಟ್ಟಿ ಪರಿಷ್ಕರಣೆಗೆ ವಿರೋಧ, ಮತಕಳವು ಆರೋಪ, ಅತ್ಯಧಿಕ ಮತದಾನ, ಶೇ.47ರಷ್ಟು ಮಹಿಳಾ ಮತದಾರರಿಂದ ವೋಟಿಂಗ್ ದಾಖಲೆಗಳ ವಿಶೇಷತೆ ನಡುವೆ

ಬಿಹಾರ ಫಲಿತಾಂಶ : ಪಕ್ಷಗಳ ಅಂತಿಮ ಬಲಾಬಲ Read More »

ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ : ಏಳು ಪೊಲೀಸರ ಸಾವು; 30 ಮಂದಿಗೆ ಗಾಯ

ಫರಿದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕ ವಸ್ತು ಸ್ಫೋಟಿಸಿ ಭೀಕರ ಅನಾಹುತ ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತು ಸ್ಫೋಟಿಸಿ 7 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯಿಂದ ಭಾರಿ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಲ್ಲಿ ಕಾಣಿಸಿವೆ. ಗಾಯಗೊಂಡ

ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ : ಏಳು ಪೊಲೀಸರ ಸಾವು; 30 ಮಂದಿಗೆ ಗಾಯ Read More »

ಜಿ. ಎಲ್. ಆಚಾರ್ಯ‌ರ 101ನೇ ಜನ್ಮದಿನ: ರಾಮಕೃಷ್ಣ ಆಶ್ರಮಕ್ಕೆ ಡಬ್ಬಲ್ ಡೆಕ್ಕರ್ ಕಾಟ್‌ಗಳ ಕೊಡುಗೆ

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಸಂಸ್ಥೆಯ ಸಂಸ್ಥಾಪಕ ಜಿ. ಎಲ್. ಆಚಾರ್ಯ ಅವರ 101 ನೇ ಜನ್ಮ ದಿನವನ್ನು ನ. 13 ರಂದು ಸಂಸ್ಥೆಯಲ್ಲಿ ಆಚರಣೆ ಮಾಡಲಾಯಿತು. ಈ ಹಿನ್ನೆಲೆ 10 ಡಬ್ಬಲ್ ಡೆಕ್ಕರ್ ಕಾಟ್‌ಗಳನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು. ಈ‌ ಸಂದರ್ಭದಲ್ಲಿ ಜ್ಯುವೆಲ್ಲರ್ಸ್‌ನ ಆಡಳಿತ ನಿರ್ದೇಶಕ ಜಿ.ಎಲ್. ಬಲರಾಮ ಆಚಾರ್ಯ, ಆಶ್ರಮದ ಕಾರ್ಯದರ್ಶಿ ಗುಣಪಾಲ್ ಜೈನ್, ಸದಸ್ಯ ಹರೇಕೃಷ್ಣ ಕಡಂಬಳಿತ್ತಾಯ ಮತ್ತು ಜಂಟಿ ಕಾರ್ಯದರ್ಶಿ ವತ್ಸಲ ರಾಜಿ

ಜಿ. ಎಲ್. ಆಚಾರ್ಯ‌ರ 101ನೇ ಜನ್ಮದಿನ: ರಾಮಕೃಷ್ಣ ಆಶ್ರಮಕ್ಕೆ ಡಬ್ಬಲ್ ಡೆಕ್ಕರ್ ಕಾಟ್‌ಗಳ ಕೊಡುಗೆ Read More »

ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಡಿ. 25 ರಂದು ತೆಂಕಿಲ ಒಕ್ಕಲಿಗ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ತಾಲೂಕು ಸಮಿತಿ ಪದ ಪ್ರದಾನ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ನ. 14 ರಂದು ಬಿಡುಗಡೆ ಮಾಡಲಾಯಿತು. ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಗಂಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಸಂಘದ ಅಧ್ಯಕ್ಷ ರವಿ

ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಬಿಹಾರದಲ್ಲಿ NDA ಮೈತ್ರಿಕೂಟದ ಮೋಡಿ: ಕಳಪೆ ಸಾಧನೆಯ ಮೂಲಕ ಮುಖಭಂಗ ‌ಮಾಡಿಕೊಂಡ ಕಾಂಗ್ರೆಸ್, RJD

ಬಿಹಾರ: ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಭರ್ಜರಿ ಗೆಲುವಿನತ್ತ ಮುಖ ಮಾಡಿದೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಅತೀ‌ದೊಡ್ಡ ಪಕ್ಷವಾಗಿ ಅರಳುವ ಹಾದಿಯಲ್ಲಿದೆ ಎಂದು ಚು. ಆಯೋಗದ ವರದಿ ಹೇಳಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 190ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ದೆಹಲಿ, ಮಹಾರಾಷ್ಟ್ರ ಮತ್ತು ಹರಿಯಾಣದ ನಂತರ

ಬಿಹಾರದಲ್ಲಿ NDA ಮೈತ್ರಿಕೂಟದ ಮೋಡಿ: ಕಳಪೆ ಸಾಧನೆಯ ಮೂಲಕ ಮುಖಭಂಗ ‌ಮಾಡಿಕೊಂಡ ಕಾಂಗ್ರೆಸ್, RJD Read More »

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ

ಮಂಗಳೂರು: ಬೆಂಗಳೂರು ಆರ್‌ಟಿಒ ನೋಂದಣಿಯ ಕಾರ್‌ನಲ್ಲಿ ನಗರದ ನಂತೂರ್ ಸಮೀಪ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನ ಎಂಜಿನ್‌ನಲ್ಲಿ ಹೊಗೆ ಆವರಿಸಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಡ್ರೈನೇಜ್ ಸಕ್ಕಿಂಗ್ ವಾಹನದಲ್ಲಿದ್ದ ನೀರನ್ನು ಬಳಸಿ ಕಾರಿನ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ Read More »

ಬಿಹಾರದಲ್ಲಿ‌ ಓಟ್ ಚೋರಿ?: ಸಿಎಂ ‌ಸಿದ್ದು ಹೇಳಿದ್ದೇನು?

ಬೆಂಗಳೂರು: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಓಟ್ ಚೋರಿ ಆಗಿದೆ. ಆದರೂ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಹಾರದಲ್ಲಿ ಯಾಕೆ ಹಿನ್ನಡೆ ಆಗಿದೆ. ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ಆ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ. NDA ಯಾಕೆ ಬಹುಮತ ಪಡೆದಿದೆ. ಅಲ್ಲೂ ಓಟ್ ಚೋರಿ ಆಗಿದೆ. ಆದರೆ ಜನ ತೀರ್ಪು ನಾವು ಒಪ್ಪಬೇಕು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಜೆಂಡಾ ಓಬಿಸಿ ಅವರೇ ಬಿಹಾರದಲ್ಲಿ ಕೈ

ಬಿಹಾರದಲ್ಲಿ‌ ಓಟ್ ಚೋರಿ?: ಸಿಎಂ ‌ಸಿದ್ದು ಹೇಳಿದ್ದೇನು? Read More »

error: Content is protected !!
Scroll to Top