ಸುದ್ದಿ

ಮೈಸೂರು ಅರಮನೆಯ ಮುಖ್ಯದ್ವಾರವೊಂದರ ‌ಮೇಲ್ಛಾವಣಿಯ ಸ್ವಲ್ಪ ಭಾಗ ಕುಸಿತ

ಮೈಸೂರು: ಐತಿಹಾಸಿಕ ಮೈಸೂರು ಅರಮನೆಯ ವರಾಹ ಗೇಟ್ ಬಳಿ ಮುಖ್ಯದ್ವಾರದ ಮೇಲ್ಛಾವಣೆಯ ಸಣ್ಣ ಭಾಗವೊಂದು ಮುರಿದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ‌ತಪ್ಪಿದೆ. ಗೇಟಿನ ಮೇಲ್ಭಾಗದ ಸಣ್ಣ ಪ್ರಮಾಣದ ಚಾವಣಿ ಕುಸಿದು ಬಿದ್ದಿದ್ದು, ಆ ಸಂದರ್ಭದಲ್ಲಿ ಗೇಟಿನ ಸಮೀಪ ಸಾರ್ವಜನಿಕರ್ಯಾರೂ ಇರದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕುಸಿತಕ್ಕೆ ಒಳಗಾದ ಭಾಗವು ಸಿಬ್ಬಂದಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ಕೂಡಲೇ ಅರಮನೆಯ ಸಿಬ್ಬಂದಿ ಎಚ್ಚೆತ್ತು ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ […]

ಮೈಸೂರು ಅರಮನೆಯ ಮುಖ್ಯದ್ವಾರವೊಂದರ ‌ಮೇಲ್ಛಾವಣಿಯ ಸ್ವಲ್ಪ ಭಾಗ ಕುಸಿತ Read More »

ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ

ಧಾರವಾಡ: ಸರ್ಕಾರಿ ಆಸ್ಪತ್ರೆಯಲ್ಲಿನ ಜನೌಷಧ ಕೇಂದ್ರ ಮುಚ್ಚುವುದಕ್ಕೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೃಯಾಜ್ಞೆ ನೀಡಿದೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಿ ರಾಕೇಶ್, ಮಹಾಲಿಂಗಪ್ಪ ‌ಮೊದಲಾದವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶವನ್ನು ರದ್ದು ಮಾಡಿರುವುದಾಗಿದೆ. 120 ಚದರ ಅಡಿ ಜಾಗದಲ್ಲಿ ಜನೌಷಧಿ ಮೂಲಕ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸಿದಲ್ಲಿ ನಿಮಗೇನು ನಷ್ಟ?

ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ Read More »

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ : ಯತೀಂದ್ರ ಸ್ಪಷ್ಟನೆ

ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ಹೇಳಿಕೆ ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎನ್ನುವ ಮೂಲಕ ಸಿದ್ದರಾಮಯ್ಯನವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮತ್ತೆ ಬಾಂಬ್‌ ಸಿಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಂದೆಯೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎಂದಿದ್ದಾರೆ. ಕುರ್ಚಿ ಕಿತ್ತಾಟದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸ್ವತಹ ಸಿದ್ದರಾಮಯ್ಯನವರೇ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ : ಯತೀಂದ್ರ ಸ್ಪಷ್ಟನೆ Read More »

ಋತುಚಕ್ರ ರಜೆ ಆದೇಶ : ಹೈಕೋರ್ಟಿನಲ್ಲಿ ಸರ್ಕಾರ ಸಮರ್ಥನೆ

ಮಹಿಳಾ ನೌಕರರ ಆರೋಗ್ಯ ದೃಷ್ಟಿಯಿಂದ ಆದೇಶ ಎಂದು ವಾದ ಬೆಂಗಳೂರು: ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಋತುಚಕ್ರದ ರಜೆ ನೀಡುವ ನೀತಿಯನ್ನು ಸರ್ಕಾಸರ ಹೈಕೋರ್ಟ್‌ನಲ್ಲಿ ಬಲಕವಾಗಿ ಸಮರ್ಥಿಸಿಕೊಂಡಿದ್ದು, ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಲು ರಾಜ್ಯಕ್ಕೆ ಅಧಿಕಾರ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಬುಧವಾರ ಉಲ್ಲೇಖಿಸಿದೆ. 18ರಿಂದ 52 ವರ್ಷದೊಳಗಿನ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ ನೀಡುವ ಅಧಿಸೂಚನೆಯನ್ನು ಸರ್ಕಾರ ನವೆಂಬರ್ 20 ರಂದು ಹೊರಡಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ

ಋತುಚಕ್ರ ರಜೆ ಆದೇಶ : ಹೈಕೋರ್ಟಿನಲ್ಲಿ ಸರ್ಕಾರ ಸಮರ್ಥನೆ Read More »

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ : ಇಬ್ಬರು ಮಾಲೀಕರ ಬಂಧನ

ದುರಂತ ಸಂಭವಿಸಿದ ದಿನವೇ ಥೈಲ್ಯಾಂಡ್‌ಗೆ ಪರಾರಿಯಾಗಿದ್ದ ಮಾಲೀಕರು ಪಣಜಿ : ನೈಟ್​ಕ್ಲಬ್​ನಲ್ಲಿ ಅಗ್ನಿ ಅವಘಡಕ್ಕೆ 25 ಮಂದಿ ಬಲಿಯಾದ ಬಳಿಕ ವಿದೇಶಕ್ಕೆ ಪಲಾಯನ ಮಾಡಿದ್ದ ಗೋವಾದ ರೋಮಿಯೋ ಲೇನ್ ನೈಟ್​ಕ್ಲಬ್ಮಾಲೀಕರನ್ನು ಪೊಲೀಸರು ಬಂದಿಸಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಇಬ್ಬರು ಮಾಲೀಕರು ಥೈಲ್ಯಾಂಡ್‌ಗೆ ಪರಾರಿಯಾಗಿದ್ದರು. ಮಾಲೀಕರನ್ನು ಬಂಧಿಸಲಾಗಿದೆ. ಈ ಘಟನೆಯನ್ನು ಗೋವಾದ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ದುರಂತದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ರೋಮಿಯೋ ಲೇನ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ : ಇಬ್ಬರು ಮಾಲೀಕರ ಬಂಧನ Read More »

ಧರ್ಮಸ್ಥಳ ಷಡ್ಯಂತ್ರದ ಹಿಂದೆ ಅರ್ಬನ್‌ ನಕ್ಸಲರ ಕೈವಾಡ : ಬಿಜೆಪಿ ಆರೋಪ

ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ಒತ್ತಾಯ ಬೆಳಗಾವಿ : ಧರ್ಮಸ್ಥಳ ಪ್ರಕರಣ ಹಿಂದೆ ಷಡ್ಯಂತ್ರವಿದೆ ಎಂದು ನಾವು ಮೊದಲೇ ಹೇಳಿದ್ದೆವು. ಅದು ಈಗ ನಿಜವಾಗಿದ್ದು, ಸತ್ಯಕ್ಕೆ ಜಯವಾಗಿದೆ. ಈ ಬುರುಡೆ ಗ್ಯಾಂಗ್ ಹಿಂದೆ ಯಾರಿದ್ದಾರೆ ಎಂಬುದು ಹೊರಬರಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಧರ್ಮಸ್ಥಳ ವಿಚಾರದಲ್ಲಿ ಅರ್ಬನ್ ನಕ್ಸಲ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಆರು ಜನ ಸೇರಿ ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ

ಧರ್ಮಸ್ಥಳ ಷಡ್ಯಂತ್ರದ ಹಿಂದೆ ಅರ್ಬನ್‌ ನಕ್ಸಲರ ಕೈವಾಡ : ಬಿಜೆಪಿ ಆರೋಪ Read More »

ಕೊಲೆ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ

ಒಂದೇ ಕುಟುಂಬದ ನಾಲ್ವರನ್ನು ಸಾಯಿಸಿದ್ದ ಪಾತಕಿ ಮಡಿಕೇರಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಅಪರಾಧಿಗೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಮೊದಲ ತೀರ್ಪು ಇದು ಎನ್ನಲಾಗಿದೆ. ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಅಪರಾಧಿಗೆ ವಿರಾಜಪೇಟೆ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಕೇರಳ ಮೂಲದ ಗಿರೀಶ್ ಎಂಬಾತನಿಗೆ ಈ ಮರಣದಂಡನೆ ವಿಧಿಸಿದೆ. 2024ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ

ಕೊಲೆ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ Read More »

ಚಂಡೀಗಢದಲ್ಲಿ ಇಂದು ಭಾರತ-ದಕ್ಷಿಣ ಅಫ್ರಿಕಾ ಎರಡನೇ ಟಿ20 ಪಂದ್ಯ

ಮೊದಲ ಪಂದ್ಯದ ಅಮೋಘ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಟೀಮ್‌ ಇಂಡಿಯಾ ಚಂಡೀಗಢ : ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದಿರುವ ಭಾರತ ಇಂದು ಚಂಡೀಗಢದಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಹೀನಾಯವಾಗಿ ಸೋಲಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. 101 ರನ್‌ಗಳ ಅಮೋಘ ಗೆಲುವಿನ ಜೊತೆಗೆ ಹಲವು ವಿಶ್ವ ದಾಖಲೆಗಳನ್ನು ಕೂಡ ಈ ಪಂದ್ಯದಲ್ಲಿ ಭಾರತ ತನ್ನದಾಗಿಸಿಕೊಂಡಿದೆ. ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ

ಚಂಡೀಗಢದಲ್ಲಿ ಇಂದು ಭಾರತ-ದಕ್ಷಿಣ ಅಫ್ರಿಕಾ ಎರಡನೇ ಟಿ20 ಪಂದ್ಯ Read More »

ದೇವಸ್ಥಾನದ ಎದುರು ದಫ್‌ ಪ್ರದರ್ಶನಕ್ಕೆ ವಿರೋಧ

ಹಿಂದೂ ಸಂಘಟನೆಗಳ ಆಕ್ರೋಶದ ಬಳಿಕ ಕಾರ್ಯಕ್ರಮ ಕೈಬಿಟ್ಟ ಆಯೋಜಕರು ಸುಳ್ಯ: ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದ್ದ ದಫ್ ಪ್ರದರ್ಶನಕ್ಕೆ ಭಾರಿ ವಿರೋಧ ವ್ಯಕ್ತವಾದ ಬಳಿಕ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದ ಆಯೋಜಕರು ದಫ್ ಪ್ರದರ್ಶನವನ್ನು ಕೈಬಿಟ್ಟಿದ್ದಾರೆ. ಕೆವಿಜಿ ಸುಳ್ಯ ಹಬ್ಬ ಸಮಾಜ ಸಂಘದ ವತಿಯಿಂದ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಡಿಸೆಂಬರ್‌ 25 ಮತ್ತು 26ರಂದು ಕೆವಿಜಿ ಸುಳ್ಯ ಹಬ್ಬ-2025 ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರ

ದೇವಸ್ಥಾನದ ಎದುರು ದಫ್‌ ಪ್ರದರ್ಶನಕ್ಕೆ ವಿರೋಧ Read More »

ದೀಪಾವಳಿಗೆ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ: ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ: ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರ್ಪಡೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯ ಜೊತೆಗೆ ನಿಕಟ ಸಂಪರ್ಕ ಹೊಂದಿದೆ. ಇದು ನಾಗರೀಕತೆಯ ಆತ್ಮವಾಗಿದೆ. ಸದಾಚಾರ ಮತ್ತು ಜ್ಞಾನೋದಯವನ್ನು ಬಿಂಬಿಸುತ್ತದೆ. ಈ ವಿಚಾರ ಭಾರತ ಮತ್ತು ವಿಶ್ವದ ಜನರನ್ನು ರೋಮಾಂಚನಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುನೆಸ್ಕೋ ಪಟ್ಟಿಗೆ ಸೇರಿರುವ ಕಾರಣ

ದೀಪಾವಳಿಗೆ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ: ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ Read More »

error: Content is protected !!
Scroll to Top