ಸುದ್ದಿ

7 ದಿನಗಳಲ್ಲಿ 3,450 ರೂ. ಇಳಿಕೆಯಾದ ಚಿನ್ನದ ಬೆಲೆ

ಬಂಗಾರ ಖರೀದಿಸುವವರಿಗೆ ಈಗ ಉತ್ತಮ ಅವಕಾಶ ಬೆಂಗಳೂರು: ಚಿನ್ನ ಖರೀದಿಸುವವರಿಗೆ ಈಗ ಉತ್ತಮ ಅವಕಾಶ. ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 3,450 ರೂಪಾಯಿ ಕಡಿಮೆಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಚಿನ್ನದ ಬೆಲೆ ಇಷ್ಟು ಕ್ಷಿಪ್ರವಾಗಿ ಇಳಿಕೆಯಾದದ್ದು ಇದೇ ಮೊದಲು ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸುಂಕ ಸಮರದ ಪರಿಣಾಮವಾಗಿ ಜಗತ್ತಿನ ಷೇರು ಮಾರುಕಟ್ಟೆಗಳೆಲ್ಲ ತಲ್ಲಣಿಸಿ ಹೋಗಿದ್ದು, ಇದರಿಂದಾಗಿ ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿದೆ. ಕಳೆದ ಏಳು ದಿನಗಳಲ್ಲಿ 22 ಕ್ಯಾರಟ್ 10 […]

7 ದಿನಗಳಲ್ಲಿ 3,450 ರೂ. ಇಳಿಕೆಯಾದ ಚಿನ್ನದ ಬೆಲೆ Read More »

ಚಿನ್ನಕ್ಕಾಗಿ ಸ್ನೇಹಿತರನ್ನೇ ಕೊಂದ ಮೂವರ ಅಪರಾಧ ಸಾಬೀತು

11 ವರ್ಷದ ಹಿಂದೆ ಮಂಗಳೂರಿನ ಬಾಡಿಗೆ ಮನೆಯಲ್ಲಿ ಇಬ್ಬರನ್ನು ಮಲಗಿದ್ದಲ್ಲೇ ಇರಿದು ಸಾಯಿಸಿದ ಪ್ರಕರಣ ಮಂಗಳೂರು: ವಿದೇಶದಿಂದ ಅಕ್ರಮವಾಗಿ ತಂದ ಚಿನ್ನದ ಗಟ್ಟಿ ಮಾರಾಟದಲ್ಲಿ ಉಂಟಾದ ತಕರಾರಿನ ಹಿನ್ನೆಲೆಯಲ್ಲಿ ಇಬ್ಬರನ್ನು ಉಪಾಯದಿಂದ ಮಂಗಳೂರಿನ ಅತ್ತಾವರಕ್ಕೆ ಕರೆಸಿ ಮಲಗಿದಲ್ಲೇ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.ಕಾಸರಗೋಡು ತಾಲೂಕು ಚೆರ್ಕಳ ಮುಹಮ್ಮದ್ ಮುಹಜೀರ್ ಸನಾಫ್ (34), ಕಾಸರಗೋಡು ಆಣಂಗೂರು ಟಿ.ವಿ.ಸ್ಟೇಷನ್ ರಸ್ತೆ

ಚಿನ್ನಕ್ಕಾಗಿ ಸ್ನೇಹಿತರನ್ನೇ ಕೊಂದ ಮೂವರ ಅಪರಾಧ ಸಾಬೀತು Read More »

7ನೇ ವಾರಕ್ಕೆ ದಾಪುಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.9 ಬುಧವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

7ನೇ ವಾರಕ್ಕೆ ದಾಪುಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ 100% ಫಲಿತಾಂಶ

ಸವಣೂರು : ಈ ಬಾರಿ ಮಾರ್ಚ್ ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಿಂದ ಹಾಜರಾಗಿದ್ದ ಎಲ್ಲಾ 23 ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದು ಲಿಖಿತ್ ರಾಜ್  (510/600) ವಿಶಿಷ್ಟ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ್ದಾರೆ. ಹಾಗೆಯೇ ವಾಣಿಜ್ಯ ವಿಭಾಗದ ಎಲ್ಲಾ 22 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಅಪೇಕ್ಷಾ ಜಿ. (575/600), ಅಮೀನಾಥ್ ಐಫಾ (562/600), ಶೈಬಾ (544/600), ನೂರುನ್ನೀಸಾ (530/600), ಶೈಮಾ (525/600) ಮತ್ತು ಯಶಸ್ವಿ ರೈ ಕೆ.

ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ 100% ಫಲಿತಾಂಶ Read More »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ 93.90 ಶೇ ಪಡೆದು ಪ್ರಥಮ ಸ್ಥಾನ ಗಳಿಸಿಕೊಂಡರೆ, 93.57 ಶೇ ಫಲಿತಾಂಶದೊಂದಿಗೆ ದ.ಕ 2ನೇ ಸ್ಥಾನ ಪಡೆದುಕೊಂಡಿದೆ. 48.45% ಫಲಿತಾಂಶ ಪಡೆದು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಗಳಿಸಿದೆ. ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಫಲಿತಾಂಶವು ಮಧ್ಯಾಹ್ನ 1.30 ರ ನಂತರ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ Read More »

ಶಾಲೆಯಲ್ಲಿ ಬೆಂಕಿ ಅವಘಡ : ಡಿಸಿಎಂ ಪವನ್‌ ಕಲ್ಯಾಣ್‌ ಪುತ್ರನಿಗೆ ಗಂಭೀರ ಗಾಯ

ಸಿಂಗಾಪುರ: ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ನಟ ಪವನ್ ಕಲ್ಯಾಣ್ ಕಿರಿಯ ಮಗ ಮಾರ್ಕ್ ಶಂಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಮಾರ್ಕ್‌ ಶಂಕರ್ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪವನ್ ಕಲ್ಯಾಣ್ ಹಾಗೂ ಅನ್ನಾ ದಂಪತಿಗೆ 2017ರಲ್ಲಿ ಮಾರ್ಕ್ ಶಂಕರ್ ಜನಿಸಿದರು. ಸದ್ಯ ಪವನ್ ಕಲ್ಯಾಣ್ ಮೂರನೇ

ಶಾಲೆಯಲ್ಲಿ ಬೆಂಕಿ ಅವಘಡ : ಡಿಸಿಎಂ ಪವನ್‌ ಕಲ್ಯಾಣ್‌ ಪುತ್ರನಿಗೆ ಗಂಭೀರ ಗಾಯ Read More »

ಏ. 22-23 : ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ಕಾಣಿಯೂರು ವತಿಯಿಂದ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ

ಕಾಣಿಯೂರು : ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಡುಪಿ ಕಾಣಿಯೂರು ಮಠ ಇವರ ಆಶೀರ್ವಾದದೊಂದಿಗೆ ಏ.22 ಮಂಗಳವಾರದಿಂದ ಏ.23 ಬುಧವಾರದವರೆಗೆ ಬೆಳಗ್ಗೆ ವೃಷಭ ಲಗ್ನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ ನಡೆಯಲಿದೆ. ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ರವರ ಮಾರ್ಗದರ್ಶನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ ನೆರವೇರಲಿದೆ. ಈ ಸಮಾರಂಭಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 22-23 : ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ಕಾಣಿಯೂರು ವತಿಯಿಂದ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ Read More »

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ

ಕಾಂಗ್ರೆಸ್‌ ಪಾಲಿಗೆ ವರವಾದ ನಿರ್ಧಾರ ಮಂಗಳೂರು : ಬೆಲೆ ಏರಿಕೆಯನ್ನು ಪ್ರಧಾನ ವಿಷಯವಾಗಿಟ್ಟುಕೊಂಡು ಜನಾಕ್ರೋಶ ಯಾತ್ರೆ ಪ್ರಾರಂಭಿಸಿರುವ ರಾಜ್ಯ ಬಿಜೆಪಿಗೆ ಕೇಂದ್ರ ಸರಕಾರ ನಿನ್ನೆ ಕೈಗೊಂಡ ನಿರ್ಧಾರವೊಂದು ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ನಿನ್ನೆ ದಿಢೀರ್‌ ಎಂದು ಕೇಂದ್ರ ಸರಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಇದರ ಜೊತೆಗೆ ಪೆಟ್ರೋಲು ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ತಲಾ 2 ರೂ.ಯಂತೆ ಹೆಚ್ಚಿಸಿದೆ. ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರದ ವತಿಯಿಂದ ಆಗಿರುವ

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ Read More »

ಬಾಟಲಿ ನೀರು ಕೂಡ ಅಸುರಕ್ಷಿತ : ಆಹಾರ ಇಲಾಖೆ ವರದಿ

ಅನೇಕ ಕಂಪನಿಗಳ ಬಾಟಲಿ ನೀರಿನಲ್ಲಿ ಮಿನರಲ್‌ ಅಂಶ ಇರುವುದಿಲ್ಲ ಬೆಂಗಳೂರು: ಐಸ್‌ಕ್ರೀಮ್‌, ಕೇಕ್‌, ಗೋಬಿಮಂಚೂರಿ… ಹೀಗೆ ನಿತ್ಯ ಸೇವಿಸುವ ಹಲವು ಆಹಾರವಸ್ತುಗಳಲ್ಲಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಕಾರಣವಾಗುವ ರಾಸಾಯನಿಕ ಅಂಶ ಇರುವುದನ್ನು ಪತ್ತೆ ಹಚ್ಚಿ ಜನರಿಗೆ ಎಚ್ಚರಿಕೆ ನೀಡಿರುವ ಆಹಾರ ಇಲಾಖೆ ಈಗ ಬಾಟಲಿಗಳಲ್ಲಿ ಸಿಗುವ ಮಿನರಲ್‌ ವಾಟರ್‌ ಕೂಡ ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ. ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರಿನ ಪೈಕಿ ಶೇ.50ರಷ್ಟು ಬಾಟಲಿಗಳು ಕಳಪೆಯಾಗಿವೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ.

ಬಾಟಲಿ ನೀರು ಕೂಡ ಅಸುರಕ್ಷಿತ : ಆಹಾರ ಇಲಾಖೆ ವರದಿ Read More »

ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಶ್ರುತಿ ವಿಸ್ಮಿತ್

ಪುತ್ತೂರು : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು  ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಏ.6 ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ  ಪುತ್ತೂರು ಬಲ್ನಾಡು ನಿವಾಸಿ ಶ್ರುತಿ ವಿಸ್ಮಿತ್ ರವರಿಗೆ ರಾಷ್ಟ್ರೀಯ ವೀರ ವನಿತೆ ಯಕ್ಷಗಾನ ಕಲಾ ರತ್ನ ರಾಷ್ಟ್ರ ಪ್ರಶಸ್ತಿ  ನೀಡಿ ಗೌರವಿಸಲಾಯಿತು. ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವಾಗ ಕಲಾವಿದ ಪಾತಾಳ ಅಂಬಾ ಪ್ರಸಾದ್ ಅವರಿಂದ

ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಶ್ರುತಿ ವಿಸ್ಮಿತ್ Read More »

error: Content is protected !!
Scroll to Top