ಸುದ್ದಿ

ನರೇಗಾ ಯೋಜನೆ ಹೆಸರು ಬದಲು : ಸಿದ್ದರಾಮಯ್ಯ ಕಿಡಿ

ಹೊಸ ರೂಪದಲ್ಲಿರುವ ಯೋಜನೆಯಲ್ಲಿ ಉದ್ಯೋಗ ಖಾತರಿಯಿಲ್ಲ ಎಂದು ಆಕ್ರೋಶ ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ […]

ನರೇಗಾ ಯೋಜನೆ ಹೆಸರು ಬದಲು : ಸಿದ್ದರಾಮಯ್ಯ ಕಿಡಿ Read More »

25ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳ ಕುಖ್ಯಾತ ಆರೋಪಿ ಬಂಧನ

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾತಕಿ ಮಂಗಳೂರು: ಹಲವು ಬಾರಿ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರೂ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ನಿವಾಸಿ ದಿವಂಗತ ಹಸನ್ ಮಹಮ್ಮದ್ ಎಂಬವರ ಪುತ್ರ ಅಬ್ದುಲ್ ರವೂಫ್ ಅಲಿಯಾಸ್ ಮೀಸೆ ರವೂಫ್ (48) ಆರೊಪಿ. ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸುಮಾರು 19 ಪ್ರಕರಣಗಳು, ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಮತ್ತು ಮಂಗಳೂರು

25ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳ ಕುಖ್ಯಾತ ಆರೋಪಿ ಬಂಧನ Read More »

ಜಾಗತಿಕ ವೇದಿಕೆಯಲ್ಲಿ ಭಾರತ ವಿರೋಧಿ ನಿಲುವು ವ್ಯಕ್ತಪಡಿಸಿದ ಪಾಕ್‌: ತಿರುಗೇಟು ನೀಡಿದ ಭಾರತ

ನವದೆಹಲಿ: ಭಾರತ ಮತ್ತು ಪಾಕ್ ನಡುವಿನ ಬಹುಕಾಲದ ಭಿನ್ನಾಭಿಪ್ರಾಯ ಮತ್ತೊಮ್ಮೆ ಜಾಗತಿಕ ವೇದಿಕೆಗೆ ಬಂದಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ‘ಶಾಂತಿಗಾಗಿ ನಾಯಕತ್ವ’ ಕುರಿತ ಮುಕ್ತ ಚರ್ಚೆಯಲ್ಲಿ ಭಾರತ ಈ ಬಗ್ಗೆ ಮಾತನಾಡಿದೆ. ಪಾಕ್ ಪ್ರತಿನಿಧಿಯ ಹೇಳಿಕೆಗಳಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು, ತನ್ನ ಸ್ಪಷ್ಟ ನಿಲುವನ್ನು ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಹೇಳಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪಿ. ಕಾಶ್ಮೀರ, ಲಡಾಕ್ ಭಾರತದ ಅವಿಭಾಜ್ಯ ಅಂಗ ಮತ್ತು ಅವುಗಳನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ

ಜಾಗತಿಕ ವೇದಿಕೆಯಲ್ಲಿ ಭಾರತ ವಿರೋಧಿ ನಿಲುವು ವ್ಯಕ್ತಪಡಿಸಿದ ಪಾಕ್‌: ತಿರುಗೇಟು ನೀಡಿದ ಭಾರತ Read More »

ವಿದ್ಯುತ್ ತಂತಿ ದುರಸ್ತಿ ವೇಳೆ ಶಾಕ್ ಹೊಡೆದು ಓರ್ವ ಸಾವು, ಮತ್ತೋರ್ವ ಗಂಭೀರ

ಹಾಸನ: ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಾಟೀಹಳ್ಳಿಯ ಟೀಚರ್ಸ್ ಕಾಲನಿಯಲ್ಲಿ ನಡೆದಿದೆ. ಬರಿಕುಲ್ (18) ಎಂಬವರೇ ಮೃತ ದುರ್ದೈವಿ. ಗಾಯಾಳುವನ್ನು ಸಲೀಂ(17) ಎಂದು ಗುರುತಿಸಲಾಗಿದೆ. ತಾಂತ್ರಿಕ ದೋಷದ ಕಾರಣ ಈ ಇಬ್ಬರು ಕಂಬ ಏರಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೇ ಸಮಯದಲ್ಲಿ ತಂತಿಗಳಲ್ಲಿ ವಿದ್ಯುತ್ ಪ್ರವಹಿಸಿದ್ದು ಇಬ್ಬರಿಗೂ ತೀವ್ರ ಪ್ರಮಾಣದಲ್ಲಿ ಶಾಕ್ ಹೊಡೆದಿದೆ. ಬರೀಕುಲ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಸಲೀಂ ಪ್ರಜ್ಞಾಹೀನ

ವಿದ್ಯುತ್ ತಂತಿ ದುರಸ್ತಿ ವೇಳೆ ಶಾಕ್ ಹೊಡೆದು ಓರ್ವ ಸಾವು, ಮತ್ತೋರ್ವ ಗಂಭೀರ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಕ್ಷೇತ್ರ ಭೇಟಿ, ಸಭೆ

ಮೆಲ್ಕಾರ್: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ರಿ. ಬಂಟ್ವಾಳ ನೇತೃತ್ವದಲ್ಲಿ, ಪುತ್ತೂರು ಘಟಕದ ಸಹಯೋಗದೊಂದಿಗೆ ಒಂದು ದಿನದ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಪ್ರಾರಂಭಗೊಂಡು ಶ್ರೀ ಕ್ಷೇತ್ರ ಪಾವಂಜೆ, ಸಿಗಂದೂರು, ಕೊಲ್ಲೂರು ಮತ್ತು ಕಾಪು ಮಾರಿಯಮ್ಮ ದೇವಸ್ಥಾನಗಳನ್ನು ಸಂದರ್ಶಿಸಲಾಯಿತು. ಕೊಲ್ಲೂರು ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗರ ಸಮಕ್ಷಮದಲ್ಲಿ ಪ್ರತಿಷ್ಠಾನದ ಮಾಸಿಕ ಸಭೆ ನಡೆಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಪ್ರತಿವರ್ಷ ನಡೆಯುವ ಕ್ಷೇತ್ರ ಭೇಟಿಯಂತೆ ಈ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಕ್ಷೇತ್ರ ಭೇಟಿ, ಸಭೆ Read More »

ತುಮಕೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

ತುಮಕೂರು: ಬಾಂಬ್ ಬೆದರಿಕೆಯೊಂದು ಇ-ಮೇಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಇಂದು ಬಂದಿದ್ದು, ಇದರಿಂದಾಗಿ ಕೆಲಕಾಲ ಜಿಲ್ಲಾಡಳಿತ ಕಚೇರಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗ್ಗೆ ಸುಮಾರು 7 ಗಂಟೆಯ ಸಮಯಕ್ಕೆ ಈ ಬೆದರಿಕೆ ಇ-ಮೇಲ್ ಡಿಸಿ ಅವರ ಅಧಿಕೃತ ಮೇಲ್ ಐಡಿ‌ಗೆ ಬಂದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಕಚೇರಿಗೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ, ಹಿರಿಯ ಪೊಲೀಸ್ ಅಧಿಕಾರಿಗಳ ದಳ ಧಾವಿಸಿ ಪರಿಶೀಲನೆ ನಡೆಸಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಕಚೇರಿ ಮತ್ತು ಆಸುಪಾಸಿನಲ್ಲಿ ಶೋಧ

ತುಮಕೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ Read More »

ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ 2 ಕೋ. ರೂ. ಕಳೆದುಕೊಂಡ ಮಹಿಳಾ ಟೆಕ್ಕಿ

ಸೈಟ್‌, ಫ್ಲಾಟ್‌ ಮಾರಿ, ಸಾಲ ತೆಗೆದು ವಂಚಕರಿಗೆ ಹಣ ಪಾವತಿಸಿ ಮೋಸ ಹೋದ ಸಾಫ್ಟ್‌ವೇರ್‌ ಉದ್ಯೋಗಿ ಬೆಂಗಳೂರು : ಮಹಿಳಾ ಟೆಕ್ಕಿಯೊಬ್ಬರನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ 2 ಕೋ. ರೂ. ಲೂಟಿ ಮಾಡಿದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸೈಬರ್‌ ಚೋರರ ಬೆದರಿಕೆಗೆ ಮಣಿದ ಮಹಿಳೆ ತನ್ನ ಫ್ಲಾಟ್‌, ಸೈಟ್‌ಗಳನ್ನು ಮಾರಾಟ ಮಾಡಿ, ಸಾಲ ತೆಗೆದು ಹಣ ಹೊಂದಿಸಿ ಕೊಟ್ಟಿದ್ದಾರೆ. ವಿಜ್ಞಾನ ನಗರದ ನ್ಯೂ ತಿಪ್ಪಸಂದ್ರ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಭಾರಿ ವಂಚನೆಗೆ ಒಳಗಾದ

ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ 2 ಕೋ. ರೂ. ಕಳೆದುಕೊಂಡ ಮಹಿಳಾ ಟೆಕ್ಕಿ Read More »

ಲೋಕಾಯುಕ್ತ ದಾಳಿಯಾದಾಗ 50 ಸಾವಿರ ರೂ. ಟಾಯ್ಲೆಟ್‌ ಕಮೋಡ್‌ಗೆ ಹಾಕಿದ ಅಧಿಕಾರಿ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ದಾಳಿ ಬಿಸಿ ಬೆಂಗಳೂರು : ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್​​ ಕೊಟ್ಟಿದೆ. ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಸೇರಿ ವಿವಿಧೆಡೆ ಶೋಧ ನಡೆಸಿರುವ ಲೋಕಾಯುಕ್ತ ಸಿಬ್ಬಂದಿ ಕೆಲವೆಡೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ವಿವಿಧೆಡೆ ದಾಳಿ ನಡೆದಿದೆ. ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್​ ಅವರ ಧಾರವಾಡದ ಸಿಲ್ವರ್ ಆರ್ಕೇಡ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ

ಲೋಕಾಯುಕ್ತ ದಾಳಿಯಾದಾಗ 50 ಸಾವಿರ ರೂ. ಟಾಯ್ಲೆಟ್‌ ಕಮೋಡ್‌ಗೆ ಹಾಕಿದ ಅಧಿಕಾರಿ Read More »

ಬಂಟ್ವಾಳ : ಮದುವೆಗೆ ಕೆಲವೇ ತಾಸು ಬಾಕಿಯಿರುವಾಗ ವಧು ನಾಪತ್ತೆ!

ಬಂಟ್ವಾಳ : ಮದುವೆಗೆ ಕೆಲವೇ ತಾಸುಗಳು ಬಾಕಿಯಿರುವಾಗ ವಧು ಮನೆ ಬಿಟ್ಟು ಹೋದ ಘಟನೆಯೊಂದು ಬಂಟ್ವಾಳದ ಬಿ.ಸಿ.ರೋಡಿನ ಪಲ್ಲಮಜಲು ಎಂಬಲ್ಲಿ ಸಂಭವಿಸಿದೆ. ಅಶ್ಪಿಯ (21) ನಾಪತ್ತೆಯಾದ ಯುವತಿಯಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಡಿ.14ರಂದು ಅಶ್ಪಿಯಳ ಮದುವೆ ಬಂಟ್ವಾಳ ಬಿ ಮೂಡ ಗ್ರಾಮದ ಯುವಕನೊಂದಿಗೆ ನಿಶ್ಚಯವಾಗಿತ್ತು. ಹಿರಿಯರು ನಿಶ್ಚಯಿಸಿದ ಮದುವೆಗೆ ಎಲ್ಲ ತಯಾರಿ ಮುಗಿದಿತ್ತು. ಡಿ.14ರಂದು ಯುನಿಟಿ ಹಾಲ್‌ನಲ್ಲಿ ಮದುವೆ ನೆರವೇರಬೇಕಿತ್ತು. ಈ ನಡುವೆ ವಧು ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದಾಳೆ. ಡಿ‌.14ರಂದು ನಸುಕಿನ

ಬಂಟ್ವಾಳ : ಮದುವೆಗೆ ಕೆಲವೇ ತಾಸು ಬಾಕಿಯಿರುವಾಗ ವಧು ನಾಪತ್ತೆ! Read More »

ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತ : ಸವಾರ ನಡುರಸ್ತೆಯಲ್ಲಿ ಸಾವು

ಅಂಗಲಾಚಿದರೂ ಸಹಾಯಕ್ಕೆ ಬಾರದೆ ಅಮಾನವೀಯವಾಗಿ ನಡೆದುಕೊಂಡ ಜನ ಬೆಂಗಳೂರು: ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತವಾಗಿ 34ರ ಹರೆಯದ ವ್ಯಕ್ತಿ ನಡುರಸ್ತೆಯಲ್ಲೇ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ಪತಿಯ ಜೀವ ಉಳಿಸಲು ಪತ್ನಿ ಕೈಮುಗಿದು ಅಂಗಲಾಚಿದರೂ ಜನರು ಯಾರು ಕೂಡ ನೆರವಿಗೆ ಬಂದಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬನಶಂಕರಿ ಮೂರನೇ ಸ್ಟೇಜ್ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಾಮಣನ್ ಮೃತ ದುರ್ದೈವಿ. ಬೆಳಗಿನ ಜಾವ 3.30ರ ಸುಮಾರಿಗೆ ಇವರಿಗೆ ಮನೆಯಲ್ಲಿಯೇ ಎದೆನೋವು ಕಾಣಿಸಿಕೊಂಡಿದೆ.

ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತ : ಸವಾರ ನಡುರಸ್ತೆಯಲ್ಲಿ ಸಾವು Read More »

error: Content is protected !!
Scroll to Top