ಸುದ್ದಿ

ಮಹಿಳೆಗೆ ಕಿರುಕುಳ : ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ಕೇಸ್‌

ಉಡುಪಿ: ರಾಷ್ಟ್ರೀಯಕೃತ ಬ್ಯಾಂಕ್ ಒಂದರ ಆದಿ ಉಡುಪಿ ಶಾಖೆಯ ಮ್ಯಾನೇಜರ್ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಜ್ಯೋತಿ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 74ರ ಅಡಿಯಲ್ಲಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ಫೆ.7ರಂದು ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸಾಲದ ವಿಷಯದ ಬಗ್ಗೆ ಚರ್ಚಿಸಬೇಕೆಂದು ಹೇಳಿ ಮ್ಯಾನೇಜರ್ ತಮ್ಮನ್ನು […]

ಮಹಿಳೆಗೆ ಕಿರುಕುಳ : ಬ್ಯಾಂಕ್‌ ಮ್ಯಾನೇಜರ್‌ ವಿರುದ್ಧ ಕೇಸ್‌ Read More »

ಉದ್ಯೋಗ ನೆಪದಲ್ಲಿ ವಂಚನೆ : ಖಾಸಗಿ ಸಂಸ್ಥೆ ವಿರುದ್ಧ ದೂರು ದಾಖಲಿಸಿದ ಕಾಲೇಜು ವಿದ್ಯಾರ್ಥಿಗಳು

ಮೂರು ದಿನದ ತರಬೇತಿಗೆ 2 ಸಾವಿರ ರೂ. ಪಡೆದು ಬ್ರೈನ್‌ವಾಶ್‌ ಮಾಡಿದ ಆರೋಪ ಮಂಗಳೂರು : ನಗರದಲ್ಲಿ ಕಾರ್ಯಾಚರಿಸುತ್ತಿರುವ Vexon ಎಂಬ ಖಾಸಗಿ ಸಂಸ್ಥೆ ತರಬೇತಿ ಮತ್ತು ಉದ್ಯೋಗದ ಆಮಿಷವೊಡ್ಡಿ ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ. ಕುದ್ರೋಳಿಯ ಶ್ರೇಯಸ್ ಸ್ವೀಟ್ಸ್ ಎದುರು ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ವಂಚಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಸ್ಥೆಯು ತರಬೇತಿಯ ಹೆಸರಿನಲ್ಲಿ ಪ್ರತಿ ವಿದ್ಯಾರ್ಥಿಯಿಂದ 2,000 ರೂಪಾಯಿ ಸಂಗ್ರಹಿಸುತ್ತದೆ ಮತ್ತು

ಉದ್ಯೋಗ ನೆಪದಲ್ಲಿ ವಂಚನೆ : ಖಾಸಗಿ ಸಂಸ್ಥೆ ವಿರುದ್ಧ ದೂರು ದಾಖಲಿಸಿದ ಕಾಲೇಜು ವಿದ್ಯಾರ್ಥಿಗಳು Read More »

ಟಿ20 ಸೂಪರ್‌ 8 : ಇಂದು ಭಾರತ-ಜಿಂಬಾಬ್ವೆ ಮುಖಾಮುಖಿ

ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯ; ಟೀಂ ಇಂಡಿಯಾ ಮೇಲೆ ಭಾರಿ ಒತ್ತಡ ಚೆನ್ನೈ : ಟಿ20 ವಿಶ್ವಕಪ್‌ ಮೊದಲ ಸೂಪರ್-8 ಪಂದ್ಯದಲ್ಲಿ ಇಂದು ಭಾರತ ಮತ್ತು ಜಿಂಬಾಬ್ವೆ ಚೆನ್ನೈಯಲ್ಲಿ ಮುಖಾಮುಖಿಯಾಗಲಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು, ಈ ಸೋಲಿನಿಂದ ಟೀಂ ಇಂಡಿಯಾ ತನ್ನ ಸೆಮಿಫೈನಲ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಟೀಂ ಇಂಡಿಯಾ ಸೆಮಿಫೈನಲ್‌ಗೇರಬೇಕೆಂದರೆ ಉಳಿದಿರುವ ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆಲ್ಲಬೇಕಿದೆ. ಅಂದರೆ ಬರೀ ಗೆದ್ದರೆ ಮಾತ್ರ ಸಾಲದು, ಭಾರಿ ಅಂತರದ ಗೆಲುವು

ಟಿ20 ಸೂಪರ್‌ 8 : ಇಂದು ಭಾರತ-ಜಿಂಬಾಬ್ವೆ ಮುಖಾಮುಖಿ Read More »

ಶ್ರೀಕೃಷ್ಣಗಾರುಡಿ ತಾಳಮದ್ದಳೆ

ಶ್ರೀ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ವತಿಯಿಂದ ದಿನಾಂಕ 24 .2.2026 ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನದ ಪ್ರಯುಕ್ತಶ್ರೀ ಮಹಾಭಾರತ ಸರಣಿಯ 108ನೇ ( *ಅಷ್ಟೋತ್ತರ ಶತ) ಕಾರ್ಯಕ್ರಮವಾಗಿ ಶ್ರೀ ಬಲಿಪ ನಾರಾಯಣ ಭಾಗವತ ವಿರಚಿತ ಶ್ರೀ ಕೃಷ್ಣ ಗಾರುಡಿ ತಾಳಮದ್ದಳೆ ಜರಗಿತು. ಅರ್ಥಧಾರಿ ಗಳಾಗಿ : ಅಂಬಾ ಪ್ರಸಾದ್ ಪಾತಾಳ (ಧರ್ಮರಾಯ 1), ದಿವಾಕರ ಆಚಾರ್ಯ ಗೇರುಕಟ್ಟೆ (ಧರ್ಮರಾಯ 2)ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, (ನಾರದ)ಗುಡ್ಡಪ್ಪ ಬಲ್ಯ(ಅರ್ಜುನ 2), ಶ್ರೀಧರ್ ಎಸ್ಪಿ ಸುರತ್ಕಲ್(ಭೀಮ

ಶ್ರೀಕೃಷ್ಣಗಾರುಡಿ ತಾಳಮದ್ದಳೆ Read More »

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

ಹಾಸನ: ಹಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಮೃತಪಟ್ಚ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ಹನುಮನಹಳ್ಳಿ ನಿವಾಸಿ ಶೃತಿ ಎಂಬವರನ್ನು ದಾಖಲು ಮಾಡಲಾಗಿತ್ತು. ಅವರಿಗೆ ಭಾನುವಾರ ಮಗು ಜನಿಸಿದೆ. ಆದರೆ ಆ ಬಳಿಕ ಅವರ ಆರೋಗ್ಯ ಕ್ಷೀಣಿಸಲು ಆರಂಭವಾಗಿದೆ. ಆದರೆ ಭಾನುವಾರವಾದ ಕಾರಣ ತಜ್ಞ ವೈದ್ಯರು ಅಲಭ್ಯರಾದ ಕಾರಣ ಚಿಕಿತ್ಸೆ ವಿಳಂಬವಾಗಿ ಅವರು ಸಾವನ್ನಪ್ಪಿದ್ದಾರೆ. ಮೊದಲಿಗೆ ಶೃತಿ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿ, ಆ

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು Read More »

ತೋಟಕ್ಕೆ ನೀರು ಹಾಯಿಸಲು ಹೋದ ರೈತನ ಮೇಲೆ ಕಾಡುಕೋಣ ದಾಳಿ

ಚಿಕ್ಕಮಗಳೂರು: ಕೃಷಿಕರೊಬ್ಬರು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಗಾಯಾಳುವನ್ನು ‌ಶಿವಪ್ಪ ಗೌಡ(65) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಮೋಟಾರ್ ಸ್ವಿಚ್ ಆನ್ ಮಾಡಲು ಹೋಗಿದ್ದು, ಈ ವೇಳೆ ಕಾಡುಕೋಣ ಹಿಂದಿನಿಂದ ಬಂದು ದಾಳಿ ಮಾಡಿದೆ. ಅವರ ತೊಡೆ ಮತ್ತು ಬೆನ್ನಿಗೆ ಗಾಯಗಳಾಗಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಪ್ರಮಾಣದ

ತೋಟಕ್ಕೆ ನೀರು ಹಾಯಿಸಲು ಹೋದ ರೈತನ ಮೇಲೆ ಕಾಡುಕೋಣ ದಾಳಿ Read More »

ಬೈಕ್ ಕಳ್ಳರು ಪೊಲೀಸ್ ಬಲೆಗೆ

ಮಣಿಪಾಲ: ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬೈಕ್ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.ಆರೋಪಿಗಳನ್ನು ನೇತಾಜಿನಗರದ ಶರತ್(26) ಮತ್ತು ಗಣೇಶ್(31) ಎಂದು ಗುರುತಿಸಲಾಗಿದೆ. ರಾಹುಲ್ ನಗರದ ವೀರಮಾರುತಿ ಭಜನಾ ಮಂದಿರದ ಸಮೀಪ ನಿಲ್ಲಿಸಲಾದ ಬೈಕ್ ಕಳ್ಳತನವಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುದರ್ಶನ್ ಎಂಬವರು ದೂರು ದಾಖಲು ಮಾಡಿದ್ದರು. ಪ್ರಕರಣದ ಆರೋಪಿಗಳನ್ನು ಕೇವಲ 11 ಗಂಟೆಯೊಳಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕದ್ದ ಬೈಕ್ ಅನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಕಳ್ಳರಿಗೆ ನ್ಯಾಯಾಂಗ ಬಂಧನ

ಬೈಕ್ ಕಳ್ಳರು ಪೊಲೀಸ್ ಬಲೆಗೆ Read More »

ಮನೆ ಬಾಗಿಲಿನ ಬೀಗ ಮುರಿದು ಅರ್ಧ ಕೆ.ಜಿ. ಚಿನ್ನಕ್ಕೆ ಕನ್ನ ಹಾಕಿದ ಖದೀಮರು

ಬೆಂಗಳೂರು: ಮನೆಯ ಬಾಗಿಲ ಬೀಗ ಮುರಿದ ಕಳ್ಳರು ಸುಮಾರು ಅರ್ಧ ಕೆ.ಜಿ. ಗಳಷ್ಟು ಚಿನ್ನ ದರೋಡೆ ಮಾಡಿರುವ ಘಟನೆ ರಾಮನಗರ ಟೌನ್‌ನ ದ್ಯಾವರಸೇಗೌಡನದೊಡ್ಡಿ ಎಂಬಲ್ಲಿ ನಡೆದಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ‌ಲಿಖಿತ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿರುವುದಾಗಿದೆ. ಲಿಖಿತ್ ಅವರ ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಂದರ್ಭವನ್ನು ಬಳಸಿಕೊಂಡ ಖದೀಮರು, ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಸಂಜೆಯ ವೇಳೆಗೆ ಲಿಖಿತ್ ಅವರು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬೀಗ ಮುರಿದಿರುವುದು

ಮನೆ ಬಾಗಿಲಿನ ಬೀಗ ಮುರಿದು ಅರ್ಧ ಕೆ.ಜಿ. ಚಿನ್ನಕ್ಕೆ ಕನ್ನ ಹಾಕಿದ ಖದೀಮರು Read More »

ಫಾರಿನ್ ಆ್ಯಕ್ಟ್ ಉಲ್ಲಂಘನೆ: 12 ವರ್ಷಗಳ ಬಳಿಕ ಆರೋಪಿ ಅಂದರ್

ಬಂಟ್ವಾಳ: ಫಾರಿನ್ ಆ್ಯಕ್ಚ್ ಉಲ್ಲಂಘನೆ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳದಲ್ಲಿ ಬಂಧಿಸಲಾಗಿದೆ.ಬಂಧಿತನನ್ನು ಉಡುಪಿಯ ನಿವಾಸಿ ತಾಜ್ ಮೊಹಮ್ಮದ್ ಯೂಸಫ್ (59) ಎಂದು ಗುರುತಿಸಲಾಗಿದೆ. ಈತನ ವಿರುದ್ಧ 2014ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿದೇಶಿಯರ ಕಾಯ್ದೆ ಕಲಂ 14(a)(b), 14(c) m 2 2 340 ಅಡಿಯಲ್ಲಿ ಪ್ರಕರಣ (ಕ್ರೈಂ ನಂಬರ್: 152/2014) ದಾಖಲಾಗಿತ್ತು. ಪ್ರಕರಣ ದಾಖಲಾದಾಗಿನಿಂದಲೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಸದ್ಯ ಆರೋಪಿಗೆ ನ್ಯಾಯಾಂಗ ಬಂಧನ

ಫಾರಿನ್ ಆ್ಯಕ್ಟ್ ಉಲ್ಲಂಘನೆ: 12 ವರ್ಷಗಳ ಬಳಿಕ ಆರೋಪಿ ಅಂದರ್ Read More »

ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ ಯುವತಿ?

ಪುತ್ತೂರು: ಯುವಕನೊಬ್ಬ ವಿವಾಹವಾಗುವುದಾಗಿ ‌ನಂಬಿಸಿ ಮಗು ಕರುಣಿಸಿ ಬಳಿಕ ಕೈಕೊಟ್ಟ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಸಂತ್ರಸ್ತ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದು, ಪೋಷಕರು ತಕ್ಷಣವೇ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾಗಿ ಸುದ್ದಿ ಹಬ್ಬಿದೆ. ಆರೋಪಿ ಯುವಕ ಜೈಲಿನಿಂದ ಹೊರಬಂದ ಬಳಿಕ ಯುವತಿ ಮಾನಸಿಕವಾಗಿ ಬಹಳಷ್ಟು ನೊಂದಿದ್ದಳು. ಯುವಕನ ಕಡೆಯವರು ಜಿದ್ದಿನಿಂದ ಮದುವೆ ನಡೆದಿಲ್ಲ. ಹಲವಾರು ಜನರು ಈ ಸಂಬಂಧ ಸಂಧಾನ ನಡೆಸಿ, ವಿವಾಹ ನಡೆಸುವುದಕ್ಕೆ ಪ್ರಯತ್ನ ಮಾಡಿದ್ದರೂ ಸಹ ಯಾವುದೇ ಉಪಯೋಗವಾಗಿಲ್ಲ. ಇದೆಲ್ಲದರ

ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ ಯುವತಿ? Read More »

error: Content is protected !!
Scroll to Top