ಸುದ್ದಿ

ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು

ಸುಳ್ಯ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದುಕೊಂಡು ಹೋಗಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ನಡೆದಿದೆ.  ಕಾರು ಅಪಘಾತದಲ್ಲಿ ಪಾದಚಾರಿಗಳಿಬ್ಬರು  ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಅವರು ಫೆ. 8ರಂದು ರಾತ್ರಿ ನಡೆದ ಕಾರು ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಫೆ. 9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ […]

ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು Read More »

ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ

ಬೆಳ್ತಂಗಡಿ : ಯಕ್ಷ ಭಾರತಿ ರಿ.ಬೆಳ್ತಂಗಡಿ ಇದರ ದಶವರ್ಷದ ಪ್ರಯುಕ್ತ ಉಜಿರೆ  ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಭಾರತ ಮಾತಾ ಪೂಜನ  ಕಾರ್ಯಕ್ರಮವು ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ದಶಪರ್ವ ಸಂಚಿಕೆ ಬಿಡುಗಡೆಗೊಳಿಸಿ ಯಕ್ಷಗಾನದೊಂದಿಗೆ ಸಂಸ್ಕಾರ ಶಿಕ್ಸಣ ಮತ್ತು ಅರೋಗ್ಯ ಸೇವಾಕಾರ್ಯಗಳನ್ನು ಯಕ್ಷ ಭಾರತಿ ನಡೆಸಿರುವುದು ಅಪೂರ್ವವಾಗಿದೆ. ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿರುವ ಯಕ್ಷಭಾರತಿ ಸಂಸ್ಥೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ

ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ Read More »

ವಿಟ್ಲ (ಫೆ.13 ರಿಂದ ಫೆ.17) :ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ| ಶೌರ್ಯ ವಿಪತ್ತು ನಿರ್ವಹಣಾ  ಘಟಕ  ತಂಡ ಸದಸ್ಯರಿಂದ ಶ್ರಮದಾನ

ವಿಟ್ಲ : ಭ/ಶ್ರೀ1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ/1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಫೆ.13ರಿಂದ ಫೆ.17ರವರೆಗೆ ಮೆಗಿನಪೇಟೆ ಜೈನ ಬಸದಿಯಲ್ಲಿ ನಡೆಯಲಿದೆ. ಇದಕ್ಕೆ  ಪೂರಕವಾಗಿ ಭಗವಾನ್ ಚಂದ್ರನಾಥಸ್ವಾಮಿ ನೂತನ ಬಿಂಬವನ್ನು ಆರ್ಕುಳ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಇದರ ಕೆದಿಲ ಹಾಗೂ ವಿಟ್ಲ

ವಿಟ್ಲ (ಫೆ.13 ರಿಂದ ಫೆ.17) :ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ| ಶೌರ್ಯ ವಿಪತ್ತು ನಿರ್ವಹಣಾ  ಘಟಕ  ತಂಡ ಸದಸ್ಯರಿಂದ ಶ್ರಮದಾನ Read More »

ಪುತ್ತೂರು (ಫೆ.11) ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ

ಪುತ್ತೂರು: ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ ಫೆ. 11ರಂದು ನಡೆಯಿತು. ಬೆಳಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ಬೆಳಗ್ಗೆ11-30ಕ್ಕೆ ಕಲ್ಲೇಗ ದೈವಸ್ಥಾನದಲ್ಲಿ ಗಣಹೋಮ ಹಾಗೂ ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ಮಧ್ಯಾಹ್ನ 12.30 ರಿಂದ ಕಲ್ಲೇಗ ದೈವಸ್ಥಾನದಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು. ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡಲಿದ್ದು. ರಾತ್ರಿ ಗಂಟೆ 9:30ಕ್ಕೆ ಗೊಂದೊಳು

ಪುತ್ತೂರು (ಫೆ.11) ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ Read More »

ಆನಡ್ಕ – ಪುತ್ತೂರು  ಬಸ್‍ ಮತ್ತೆ ಸ್ಥಗಿತ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತಯರಾದ ಪ್ರಯಾಣಿಕರು

ಪುತ್ತೂರು :  ಆನಡ್ಕದಿಂದ ಪುತ್ತೂರಿಗೆ ಹಲವು ಸಮಯಗಳಿಂದ ಬಾರದೆ ಇದ್ದ ಬಸ್ಸಿನ ಸಂಚಾರವನ್ನು ಗ್ರಾಮಸ್ಥರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ಆರಂಭಗೊಳಿಸಿದರಾದರೂ ಇದೀಗ ಮತ್ತೆ ಬಸ್ ಸಂಚಾರ ಸ್ಥಗಿತಗೊಂಡಿರುವ ಬಗೆ ಪ್ರಯಾಣಿಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ಪ್ರತಿಭಟನೆಗೆ ಸಿದ್ದತೆ ನಡೆಯುತ್ತಿದೆ ಎಂದು ಕೇಳಿಬಂದಿದೆ.   ಆನಡ್ಕ – ಪುತ್ತೂರು  ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಹೊರಡುವ ಬಸ್‍ ಇಲ್ಲ ಎಂಬ ಮಾಹಿತಿ ಒಂದು ವಾರದ ಹಿಂದೆ ಕೇಳಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆಗಳಾಗಿವೆ. ಈ ಕಾರಣ ಬಸ್‍

ಆನಡ್ಕ – ಪುತ್ತೂರು  ಬಸ್‍ ಮತ್ತೆ ಸ್ಥಗಿತ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತಯರಾದ ಪ್ರಯಾಣಿಕರು Read More »

ರಾಮಕ್ಕೆ ರೈ ನಿಧನ

ಪುತ್ತೂರು: ಪುಣ್ಯಪ್ಪಾಡಿ ಗ್ರಾಮದ ಸೂಡಿಮುಳ್ಳು ನಿವಾಸಿ ರಾಮಕ್ಕೆ ರೈ( 90 ಪ)ನಿನ್ನೆ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ನಡೆಯಿತು. ಮೃತರು ಮಕ್ಕಳಾದ ಗಣೇಶ್ ರೈ ಸೂಡಿಮುಳ್ಳು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್

ರಾಮಕ್ಕೆ ರೈ ನಿಧನ Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವ 

ಉಪ್ಪಿನಂಗಡಿ : ಇಲ್ಲಿನ  ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವವು   ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳಲ್ಲಿ ಜರಗಿತು. ಫೆಬ್ರವರಿ 6ರಂದು ಸುತ್ತಮುತ್ತಲಿನ ಗ್ರಾಮಗಳಿಂದ ಹೊರೆಕಾಣಿಕೆ, ‌ಮಹಾಪೂಜೆ, ಅನ್ನಸಂತರ್ಪಣೆ, ಭಜನೆ ಮಹಾರಂಗಪೂಜೆ ಬಳಿಕ ನಾಗ ಮಾಣಿಕ್ಯ ನಾಟಕ ನಡೆಯಿತು.  ಮರುದಿನ ಕೆಮ್ಮಿಂಜೆ ಬ್ರಹ್ಮ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಪಂಚ ವಿಂಶತಿ ಕಲಶಾಭಿಶೇಕ, ಪರಿವಾರ ದೈವಗಳಿಗೆ ಕಲಶ ತಂಬಿಲ, ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘ ಬೊಳುವಾರು ಪುತ್ತೂರು ಇವರಿಂದ ಶ್ಯಮಂತಕ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವ  Read More »

ಫೆ.15 : “ಒಕ್ಕಲಿಗ ಗೌಡರ ಇತಿಹಾಸ” ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ | ಒಕ್ಕಲಿಗ ಸಮುದಾಯದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅವಕಾಶ

ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ, ತಾಲೂಕು ಒಕ್ಕಲಿಗ ಗೌಡ ಮಹಿಳಾ ಸಂಘದ ವತಿಯಿಂದ ಗೌಡ ಸಮುದಾಯದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ “ಒಕ್ಕಲಿಗ ಗೌಡರ ಇತಿಹಾಸ” ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ಫೆ.15 ಶನಿವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಅಪರಾಹ್ನ 2.30 ಕ್ಕೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಕೆಳಗೆ ನಮೂದಿಸಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಫೆ.14 ರ ಮುಂಚಿತವಾಗಿ ತಮ್ಮ ಹೆಸರನ್ನು ತರಗತಿಯೊಂದಿಗೆ ನೊಂದಾಯಿಸಿ ಕೊಳ್ಳುವಂತೆ

ಫೆ.15 : “ಒಕ್ಕಲಿಗ ಗೌಡರ ಇತಿಹಾಸ” ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ | ಒಕ್ಕಲಿಗ ಸಮುದಾಯದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅವಕಾಶ Read More »

ಮೊಗಪ್ಪೆಯಲ್ಲಿ‌ ಹೈ ಮಾಸ್ಟ್ ದೀಪ ಅಳವಡಿಸಲು ಶಾಸಕರಿಗೆ ಮನವಿ

ಪುತ್ತೂರು: ಕೊಳ್ತಿಗೆ ಗ್ರಾಮದ ಮೊಗಪ್ಪೆಯಲ್ಲಿ ಹೈ ಮಾಸ್ಡ್ ದೀಪ ಅಳವಡಿಸುವಂತೆ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ರೂಪರಾಜ್ ರವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು. ಜನವಸತಿ ಇರುವ ಮೊಗಪ್ಪೆಯಲ್ಲಿ ರಾತ್ರಿ ವೇಳೆ ಹೈ ಮಾಸ್ಕ್ ದೀಪದ ಅಗತ್ಯ ಇದ್ದು ಗ್ರಾಮಸ್ಥರ ಹಿತದೃಷ್ಟಿಯಿಂದ ದೀಪ ಅಳವಡಿಸುವಂತೆ ಶಾಸಕರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಶಾಸಕರು ಮೊಗಪ್ಪೆಯಲ್ಲಿ ಹೈ ಮಾಸ್ಕ್ ದೀಪ ಅಳವಡಿಸುವ ಭರವಸೆಯನ್ನು ನೀಡಿದ್ದಾರೆ ಈ ಸಂದರ್ಭದಲ್ಲಿ ಎನ್ ಎಸ್ ಯು

ಮೊಗಪ್ಪೆಯಲ್ಲಿ‌ ಹೈ ಮಾಸ್ಟ್ ದೀಪ ಅಳವಡಿಸಲು ಶಾಸಕರಿಗೆ ಮನವಿ Read More »

ಡಿ.27-28-29 : ಶ್ರೀನಿವಾಸ ಕಲ್ಯಾಣೋತ್ಸವ, 100 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಸಮಾರಂಭ | ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಪುತ್ತಿಲ ಪರಿವಾರ ಸಂಚಾಲಕ ಅರುಣ್ ಕುಮಾರ್ ಪುತ್ತಿಲ

ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಡಿ.27, 28 ಹಾಗೂ 29 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 100 ಜೋಡಿಗೆ ಉಚಿತ ವಿವಾಹ ಸಮಾರಂಭದ ಕುರಿತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ವಿವರ ನೀಡಿದರು. ಸೋಮವಾರ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಡಿಸೆಂಬರಿನಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ. ಅದೇ ರೀತಿ ಈ

ಡಿ.27-28-29 : ಶ್ರೀನಿವಾಸ ಕಲ್ಯಾಣೋತ್ಸವ, 100 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಸಮಾರಂಭ | ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಪುತ್ತಿಲ ಪರಿವಾರ ಸಂಚಾಲಕ ಅರುಣ್ ಕುಮಾರ್ ಪುತ್ತಿಲ Read More »

error: Content is protected !!
Scroll to Top