ಕನ್ನಡ ಸುದ್ದಿಗಳು

ಬೈಕ್ ಸಹಸವಾರನ ಮೇಲೆ ಲಾರಿ ಹರಿದು ಮೃತ್ಯು !

ಬಂಟ್ವಾಳ: ಬೈಕೊಂದು ಸ್ಕಿಡ್ ಆಗಿ ಅಡ್ಡಬಿದ್ದು ಬೈಕ್‍ ನಲ್ಲಿದ್ದ ಸಹಸವಾರನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಬಿ.ಸಿ.ರೋಡು ವೃತ್ತದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಬೆಂಗ್ರೆ ನಿವಾಸಿ ರಮೀಜ್‍ (20) ಮೃತಪಟ್ಟ ಸಹಸವಾರ. ಬೈಕ್‍ ಸ್ಕಿಡ್ ಆಗಿ ಡಾಮಾರು ರಸ್ತೆಗೆ ಬಿದ್ದಿದ್ದು, ರಮೀಜ್‍ ಅವರ ಮೇಲೆಯೇ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭ ಲಾರಿ ಸಮೇತ ಚಾಲಕ ಪರಾರಿಯಾಗಿದ್ದು, ಬಳಿಕ ಪೊಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ವೃತ್ತದ ಬಳಿ ಸಂಚಾರ […]

ಬೈಕ್ ಸಹಸವಾರನ ಮೇಲೆ ಲಾರಿ ಹರಿದು ಮೃತ್ಯು ! Read More »

ನಗರಸಭೆ ಉಪಚುನಾವಣೆ | ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ, ಬಿಜೆಪಿ ಅಭ್ಯರ್ಥಿ ರಮೇಶ್ ರೈ ಜಯಭೇರಿ

ಪುತ್ತೂರು : ನಗರಸಭೆಯ ಎರಡು ವಾರ್ಡುಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ  ದಿನೇಶ್ ಶೇವಿರೆ ಹಾಗೂ ವಾರ್ಡು 11 ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಜಯ ಗಳಿಸಿದ್ದಾರೆ. ಈ ಎರಡೂ ವಾರ್ಡುಗಳ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ. ಅಭ್ಯರ್ಥಿಗಳ ನಡುವೆಯೂ ತೀವ್ರ ಪೈಪೋಟಿ ಇದ್ದು, ರಮೇಶ್ ರೈ ಹಾಗೂ ದಿನೇಶ್ ಶೇವಿರೆ ಅವರು ಜಯಗಳಿಸಿದ್ದಾರೆ. ನಗರ ಸಭೆಯ

ನಗರಸಭೆ ಉಪಚುನಾವಣೆ | ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ, ಬಿಜೆಪಿ ಅಭ್ಯರ್ಥಿ ರಮೇಶ್ ರೈ ಜಯಭೇರಿ Read More »

ತೆಂಗು ರೈತರ ಸಂಸ್ಥೆಯ ‘ಕಲ್ಪ ಸಮೃದ್ಧಿ’ ಯೋಜನೆಯಡಿ ಠೇವಣಿ ಇಡುವವರಿಗೆ ಸುವರ್ಣ ಅವಕಾಶ | 200 ಜನರಿಗೆ ಮಾತ್ರ ಅವಕಾಶ | ಜ.30 ಕೊನೆಯ ದಿನಾಂಕ

ಪುತ್ತೂರು: ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆಯ ʼಕಲ್ಪಸಮೃದ್ಧಿʼ ಯೋಜನೆಯಡಿಯಲ್ಲಿ ಠೇವಣಿ ಇಡುವವರಿಗೆ ಸುವರ್ಣ ಅವಕಾಶ. ಜನವರಿ 30 ಕೊನೆಯ ದಿನಾಂಕವಾಗಿದ್ದು, 200 ಜನರಿಗೆ ಮಾತ್ರ ಅವಕಾಶವಿರುತ್ತದೆ.    ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಬೆಳೆ ಬೆಳೆದ ರೈತನಿಗೆ ಗರಿಷ್ಟ ಲಾಭ ತಂದು ಕೊಡಬೇಕು ಎಂಬ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಕರಾವಳಿ ಕರ್ನಾಟಕದಲ್ಲಿ ಅಕ್ಷರಶ:  ಸಾಕಾರಗೊಳಿಸುತ್ತಿರುವುದು “ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆ”.  ರೈತರಿಂದಲೇ ಸ್ಥಾಪಿತವಾದ ಈ ಸಂಸ್ಥೆ ತೆಂಗಿನಮರ ಹಾಗೂ ಅದರ ಸಂಪೂರ್ಣ ಉತ್ಪನ್ನವನ್ನು

ತೆಂಗು ರೈತರ ಸಂಸ್ಥೆಯ ‘ಕಲ್ಪ ಸಮೃದ್ಧಿ’ ಯೋಜನೆಯಡಿ ಠೇವಣಿ ಇಡುವವರಿಗೆ ಸುವರ್ಣ ಅವಕಾಶ | 200 ಜನರಿಗೆ ಮಾತ್ರ ಅವಕಾಶ | ಜ.30 ಕೊನೆಯ ದಿನಾಂಕ Read More »

ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆಯಲು ಯತ್ನ !

ಪುತ್ತೂರು: ಪಾದಚಾರಿ ಮಹಿಳೆಯೊಬ್ಬರ ಕತ್ತಿಗೆ ಕೈ ಹಾಕಿ ಚಿನ್ನದ ಸೆಳೆಯಲು ಯತ್ನಿಸಿದ ಘಟನೆ ಬನ್ನೂರು ಗ್ರಾಮದ ಸೇಡಿಯಾಪು ಕಜೆ ಎಂಬಲ್ಲಿ ನಡೆದಿದೆ. ಸೇಡಿಯಾಪು ಕಜೆ ಅಂಗನವಾಡಿ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷೆ ಮಮತಾ ಎಂಬವರು ಕರೆ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟರ್‍ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಸರ ಎಳೆಯಲು ಯತ್ನಿಸಿದಾಗ ಮಹಿಳೆ ಬೊಬ್ಬೆ ಹೊಡೆದದ್ದರಿಂದ ಸ್ಕೂಟರ್ ಸವಾರ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆಯಲು ಯತ್ನ ! Read More »

ಜಾಂಡೀಸ್ ಕಾಯಿಲೆಗೆ ತುತ್ತಾಗಿ ಯುವಕ ಮೃತ್ಯು !

ಪಂಜ: ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಂಜದಿಂದ ವರದಿಯಾಗಿದೆ. ಪ್ರಶಾಂತ್ (39) ಮೃತಪಟ್ಟ ಯುವಕ. ಕೂತ್ಕುಂಜ ಗ್ರಾಮದ ಕಲ್ಕ ದಿ.ಪದ್ಮಯ್ಯ ಗೌಡ ಹಾಗೂ ಇಂದಿರಾ ದಂಪತಿ ಪುತ್ರರಾಗಿರುವ ಪ್ರಶಾಂತ್‍ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕೆಲ ಸಮಯಗಳ ಹಿಂದೆ ಮನೆಗೆ ಬಂದಿದ್ದರು. ಜಾಂಡೀಸ್ ಕಾಯಿಲೆಗೆ ಒಳಗಾದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಈ ನಡುವೆ ಹಠಾತ್ತನೇ ಅನಾರೋಗ್ಯಕ್ಕೀಡಾದ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಾಂಡೀಸ್ ಕಾಯಿಲೆಗೆ ತುತ್ತಾಗಿ ಯುವಕ ಮೃತ್ಯು ! Read More »

ಡಿ.31 : ತಾಲೂಕು ಮರಾಠಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಕೊಂಬೆಟ್ಟು ಮರಾಠಿ ಸಮಾಜ ಸೇವಾ ಸಂಘ, ಮರಾಠಿ ಯುವ ವೇದಿಕೆ ಹಾಗೂ ಮರಾಠಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮರಾಠಿ ಸಮಾಜ ಬಾಂಧವರ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಡಿ.31 ಭಾನುವಾರ ಬೆಳಿಗ್ಗೆ 9 ಗಂಟೆಗೆ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಎನ್‍.ಎಸ್.. ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟದಲ್ಲಿ ತಾಲೂಕಿನ ಎಲ್ಲಾ ಸಮಾಜ ಬಾಂಧವರು ಪಾಲ್ಗೊಳ್ಳಬಹುದು. ಹೊರ ತಾಲೂಕಿನವರು ಸದಸ್ಯರಾಗಿದ್ದರೆ

ಡಿ.31 : ತಾಲೂಕು ಮರಾಠಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ Read More »

ಬೀಚ್‍ನಲ್ಲಿ ಅಲೆಯ ಸೆಳೆತಕ್ಕೆ ಸಿಲುಕಿದ ಮೂವರು ಯುವಕರು | ಇಬ್ಬರು ಮೃತ್ಯು, ಓರ್ವನ ರಕ್ಷಣೆ

ಉಳ್ಳಾಲ: ಸಮುದ್ರಕ್ಕೆ ಈಜಲು ತೆರಳಿದ ಯುವಕರಿಬ್ಬರು ಅಲೆಯ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಸಮ್ಮರ್ ಸ್ಯಾಂಡ್ ಬೀಚ್‍ನಲ್ಲಿ ನಡೆದಿದೆ. ಬಶೀರ್ (23) ಹಾಗೂ ಸಲ್ಮಾನ್ (19) ಮೃತಪಟ್ಟ ಯುವಕರು. ಕುಟುಂಬ ಸಮೇತ ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದ ಅವರು ಬಳಿಕ ಬೀಚ್‍ಗೆ ತೆರಳಿ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಬಶೀರ್, ಸಲ್ಮಾನ್ ಹಾಗೂ ಸೈಫ್ ಅಲಿ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು. ಈ ಸಂದರ್ಭ ಸ್ಥಳೀಯ ಈಜುಗಾರರು ಸಲ್ಮಾನ್‍ ಹಾಗೂ ಸೈಫುಲ್ಲಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ

ಬೀಚ್‍ನಲ್ಲಿ ಅಲೆಯ ಸೆಳೆತಕ್ಕೆ ಸಿಲುಕಿದ ಮೂವರು ಯುವಕರು | ಇಬ್ಬರು ಮೃತ್ಯು, ಓರ್ವನ ರಕ್ಷಣೆ Read More »

ವಿಷ ಪದಾರ್ಥ ಸೇವಿಸಿ ಮೃತ್ಯು !

ಪುತ್ತೂರು:ವಿಷ ಪದಾರ್ಥ ಸೇವಿಸಿದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ. ಆರ್ಯಾಪು ಗ್ರಾಮದ ಕಾರ್ಪಾಡಿ ನಿವಾಸಿ ರತ್ನಾಕರ ಭಂಡಾರಿ ಮೃತಪಟ್ಟವರು. ತಾಲೂಕಿನ ಹೊರವಲಯದ ನೈತ್ತಾಡಿ ಕಲ್ಲುಗುಡ್ಡೆ ಸೆಲೂನ್ ಮಾಲಕರಾಗಿರುವ ರತ್ನಾಕರ ಭಂಡಾರಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರತ್ನಾಕರ

ವಿಷ ಪದಾರ್ಥ ಸೇವಿಸಿ ಮೃತ್ಯು ! Read More »

ಗುಡ್ಡ ಕುಸಿತ |  ಮಣ್ಣಿನಡಿ ಸಿಲುಕಿದ ಕಾರ್ಮಿಕರು | ಸ್ಥಳೀಯರಿಂದ ರಕ್ಷಣೆ

ವಿಟ್ಲ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ಸೂರಿಕುಮೇರು ಸಮೀಪದ ಕಾಯರಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ದಾಸಕೋಡಿ ನೆಲ್ಲಿ ನಿವಾಸಿ ಉಮೇಶ್ ನಾಯ್ಕ( 60)  ಮತ್ತು ಬಾಯಿಲ ನಿವಾಸಿ ರಾಜೇಶ್ ನಾಯ್ಕ(40) ಮಣ್ಣಿನಡಿ ಸಿಲುಕಿ ಗಾಯಗೊಂಡವರು. ಜೆಸಿಂತಾ ಮಾರ್ಟಿಸ್  ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಹಠಾತ್ತನೆ ಮೇಲಿನ‌ಗುಡ್ಡ ಕುಸಿದಿದೆ. ಈ ಸಂದರ್ಭ ಕೆಲಸದಲ್ಲಿ ನಿರತರಾಗಿದ್ದ ಈ ಇಬ್ಬರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡರು. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ 

ಗುಡ್ಡ ಕುಸಿತ |  ಮಣ್ಣಿನಡಿ ಸಿಲುಕಿದ ಕಾರ್ಮಿಕರು | ಸ್ಥಳೀಯರಿಂದ ರಕ್ಷಣೆ Read More »

ಮೋದಿ ಆಡಳಿತದಿಂದ ದೇಶದಲ್ಲಿ ಪರಿವರ್ತನೆ | ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಸಂಸದ ನಳಿನ್ ಕುಮಾರ್ ಕಟೀಲ್ | ವೀರಮಂಗಲ ಶಾಲೆಗೆ ಗರಿಷ್ಠ ಅನುದಾನ ಒದಗಿಸಿದ ತೃಪ್ತಿ ನನಗಿದೆ : ಸಂಜೀವ ಮಠಂದೂರು

ಪುತ್ತೂರು: ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇಶ ಬಹಳಷ್ಟು ಕ್ಷೇತ್ರಗಳಲ್ಲಿ ಪ್ರಗತಿ ಕಂಡಿದೆ. ಈ ಮೂಲಕ  ಪರಿವರ್ತನೆಯ ಯುಗ ಆರಂಭವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೀರಮಂಗಲ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈ ಶಾಲೆಯನ್ನು ಪಿಎಂಶ್ರೀಗೆ ಆಯ್ಕೆ ಮಾಡಿದ ಪುತ್ತೂರಿನ ನಿಕಟಪೂರ್ವ ಶಾಸಕ ಸಂಜೀವ ಮಠಂದೂರುರವರ ಕಾರ್ಯಕ್ಷಮತೆ ಪ್ರಶಂಸನೀಯ ಎಂದರು. ಪಿಎಂಶ್ರೀಗೆ ಆಯ್ಕೆಯಾದ ವೀರಮಂಗಲ

ಮೋದಿ ಆಡಳಿತದಿಂದ ದೇಶದಲ್ಲಿ ಪರಿವರ್ತನೆ | ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಸಂಸದ ನಳಿನ್ ಕುಮಾರ್ ಕಟೀಲ್ | ವೀರಮಂಗಲ ಶಾಲೆಗೆ ಗರಿಷ್ಠ ಅನುದಾನ ಒದಗಿಸಿದ ತೃಪ್ತಿ ನನಗಿದೆ : ಸಂಜೀವ ಮಠಂದೂರು Read More »

error: Content is protected !!
Scroll to Top