ಕನ್ನಡ ಸುದ್ದಿಗಳು

ನಿಲ್ಲಿಸಿದ್ದ ಲಾರಿಯಲ್ಲಿ ಮೃತದೇಹ ಪತ್ತೆ !

ಉಪ್ಪಿನಂಗಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಲಾರಿಯೊಂದರಲ್ಲಿ ಮೃತದೇಹವೊಂದು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಚೆನ್ನಪಟ್ಟಣದ ಖಲೀಲ್ ಖಾನ್ (58) ಮೃತಪಟ್ಟ ವ್ಯಕ್ತಿ. ಈ ಘಟನೆ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಮೈಸೂರಿನಿಂದ ಬಿ.ಸಿ.ರೋಡಿಗೆ ಹಾಸಿಗೆ ಲೋಡನ್ನು ಲಾರಿಯಲ್ಲಿ ತಂದು ಖಾಲಿ ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು. ಲಾರಿಯ ಬಾಗಿಲು ಚಿಲಕ ಹಾಕಿದ್ದರಿಂದ ಘಟನೆ ತಿಳಿದು ಬಂದಿಲ್ಲ. ಡಿ.29 ರಂದು ಲಾರಿಯಿಂದ ವಾಸನೆ ಬರಲಾರಂಭಿಸಿದ್ದು, ಸಂಶಯಗೊಂಡು ಸ್ಥಳೀಯರು ಪರಿಶೀಲನೆ […]

ನಿಲ್ಲಿಸಿದ್ದ ಲಾರಿಯಲ್ಲಿ ಮೃತದೇಹ ಪತ್ತೆ ! Read More »

ಪಾದಚಾರಿ ಯುವತಿಗೆ ಕಾರು ಡಿಕ್ಕಿ | ಗಾಯಾಳು ಮೃತ್ಯು

ಬಂಟ್ವಾಳ : ಪಾದಚಾರಿ ಯುವತಿಗೆ ಕಾರು ಡಿಕ್ಕಿಯಾದ ಪರಿಣಾಮ ಯುವತಿ ಗಂಭೀರ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಬಿ.ಸಿ.ರೋಡು ಸಮೀಪದ ಪಚ್ಚಿನಡ್ಕದಲ್ಲಿ ನಡೆದಿದ್ದು, ಮಂಗಳೂರಿನ ಖಾಸಗಿ  ಆಸ್ಪತ್ರೆಯಲ್ಲಿ ತೀವ್ರನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಇದೀಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳೀಯ ‌ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ. ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಅವರಿಗೆ ನಿಶ್ಚಿತಾರ್ಥ ನಡೆದು ಮದುವೆಗೆ ದಿನ ನಿಗದಿಯಾಗಿದೆ ಎಂದು ತಿಳಿದುಬಂದಿದೆ. ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು

ಪಾದಚಾರಿ ಯುವತಿಗೆ ಕಾರು ಡಿಕ್ಕಿ | ಗಾಯಾಳು ಮೃತ್ಯು Read More »

ಕೋವಿಡ್ ಪಾಸಿಟಿವ್ ಸಂಖ್ಯೆಯಲ್ಲಿ ಹೆಚ್ಚಳ | ದ.ಕ.ಜಿಲ್ಲೆಯಲ್ಲಿ 8 ಮಂದಿಗೆ ಕೋವಿಡ್ ದೃಢ

ಮಂಗಳೂರು: ಒಂದೆಡೆ ಕೋವಿಡ್ ತಪಾಸಣೆ ಹೆಚ್ಚುತ್ತಿದ್ದಂತೆ ಇನ್ನೊಂದೆಡೆ ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಗುರುವಾರ ಒಟ್ಟು 341 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, 8 ಮಂದಿಗೆ ಕೋವಿಡ್ ದೃಢ ಪಟ್ಟಿದೆ. ಇದರಲ್ಲಿ ಮಂಗಳೂರಿನ ನಾಲ್ವರು, ಬಂಟ್ವಾಳದ ಮೂವರು ಮತ್ತು ಬೆಳ್ತಂಗಡಿ ಮೂಲದ ಒಬ್ಬರಿದ್ದಾರೆ. ಒಬ್ಬರು ಐಸಿಯುನಲ್ಲಿ, 6 ಮಂದಿ ಗೃಹ ನಿಗಾವಣೆಯಲ್ಲಿ ಮತ್ತು ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳಿಂದ ಜಿಲ್ಲೆಯಲ್ಲಿ ರಾಜ್ಯ ಸರಕಾರ ನೀಡಿದ ಗುರಿಯಂತೆ ಪರೀಕ್ಷೆಗಳು ನಡೆಯುತ್ತಿವೆ. ಡಿ. 26 ರಂದು 392, ಡಿ.27ರಂದು

ಕೋವಿಡ್ ಪಾಸಿಟಿವ್ ಸಂಖ್ಯೆಯಲ್ಲಿ ಹೆಚ್ಚಳ | ದ.ಕ.ಜಿಲ್ಲೆಯಲ್ಲಿ 8 ಮಂದಿಗೆ ಕೋವಿಡ್ ದೃಢ Read More »

ಲಾರಿ-ಕಾರು ಅಪಘಾತ | ಮೆಸ್ಕಾಂ ಅಧಿಕಾರಿಗೆ ಗಂಭೀರ ಗಾಯ

ಪುತ್ತೂರು: ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮೆಸ್ಕಾಂ ಅಧಿಕಾರಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ಸುಮಾರಿಗೆ ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂದಿರದ ತಿರುವಿನಲ್ಲಿ ಸಂಭವಿಸಿದೆ. ಮೆಸ್ಕಾಂ ಅಧಿಕಾರಿ ಆನಂದ ಉಕ್ಕುಡ ತೀವ್ರ ಗಾಯಗೊಂಡವರು. ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಇಕೋಸ್ಪೋರ್ಟ್ಸ್  ಕಾರು ಮತ್ತು ಎದುರುಗಡೆಯಿಂದ ಬರುತ್ತಿದ್ದ ಈಚರ್ ಲಾರಿ  ನಡುವೆ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರು ಚಾಲಕ ಲೇಖನ್ ಬನ್ನೂರು ಹಾಗೂ ಇನ್ನೋರ್ವರು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ

ಲಾರಿ-ಕಾರು ಅಪಘಾತ | ಮೆಸ್ಕಾಂ ಅಧಿಕಾರಿಗೆ ಗಂಭೀರ ಗಾಯ Read More »

ಪಾದಚಾರಿ ಯುವತಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯ

ಬಂಟ್ವಾಳ : ಪಾದಚಾರಿ ಯುವತಿಗೆ ಕಾರು ಡಿಕ್ಕಿಯಾದ ಪರಿಣಾಮ ಯುವತಿ ಗಂಭೀರ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಬಿ.ಸಿ.ರೋಡು ಸಮೀಪದ ಪಚ್ಚಿನಡ್ಕದಲ್ಲಿ ನಡೆದಿದೆ. ಸ್ಥಳೀಯ ‌ನಿವಾಸಿ ಚೈತ್ರ (22 ) ಗಾಯಗೊಂಡ ಯುವತಿ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಅವರಿಗೆ ನಿಶ್ಚಿತಾರ್ಥ ನಡೆದು ಮದುವೆಗೆ ದಿನ ನಿಗದಿಯಾಗಿದೆ ಎಂದು ತಿಳಿದುಬಂದಿದೆ. ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಅತೀ ವೇಗ ಮತ್ತು

ಪಾದಚಾರಿ ಯುವತಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯ Read More »

ದೀಪದ ಬೆಳಕು ಹರಿಯುವಂತೆ ಸಾಹಿತ್ಯದ ಬೆಳಕು ಹರಿಯಬೇಕು | ಭಾರತೀಯ ಭಾಷಾ ಉತ್ಸವ- ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ. ಹರಿಕೃಷ್ಣ ಪಾಣಾಜೆ

ಪುತ್ತೂರು,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್ ಕಾಲೇಜು , ರೇಡಿಯೋ ಪಾಂಚಜನ್ಯ  90.80ಎಫ್. ಎಂ, ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಸಂಯುಕ್ತ   ಆಶ್ರಯದಲ್ಲಿ  ‘ಭಾರತೀಯ ಭಾಷಾ ಉತ್ಸವದ’ ಪ್ರಯುಕ್ತ ಬಹುಭಾಷಾ ಕವಿ  ಗೋಷ್ಠಿ  ತೆಂಕಿಲ ವಿವೇಕಾನಂದ  ಬಿ.ಎಡ್. ಕಾಲೇಜಿನಲ್ಲಿ ನಡೆಯಿತು. ಆಯುರ್ವೇದಿಕ್ ವೈದ್ಯ ಡಾ. ಹರಿಕೃಷ್ಣ ಪಾಣಾಜೆ ದೀಪ ಪ್ರಜ್ವಲಿಸುವುದರ ಮೂಲಕ  ಕಾರ್ಯಕ್ರಮ ಉದ್ಘಾಟಿಸಿ ದೀಪವು ಬೆಳಕನ್ನು ನೀಡಿ ಕತ್ತಲೆಯನ್ನು ಹೋಗಲಾಡಿಸುವಂತೆ ಉತ್ತಮ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ಹರಿದು ತನ್ಮೂಲಕ ಅಜ್ಞಾನದ

ದೀಪದ ಬೆಳಕು ಹರಿಯುವಂತೆ ಸಾಹಿತ್ಯದ ಬೆಳಕು ಹರಿಯಬೇಕು | ಭಾರತೀಯ ಭಾಷಾ ಉತ್ಸವ- ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ. ಹರಿಕೃಷ್ಣ ಪಾಣಾಜೆ Read More »

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಐ. ಅವಿರೋಧ ಆಯ್ಕೆ

ಕಾಣಿಯೂರು : ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಐ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು. ಆಯ್ಕೆ ಪ್ರಕ್ರಿಯೆ ಬಳಿಕ ನಡೆದ ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕೆಡೆಂಜಿ, ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಐ. ಅವಿರೋಧ ಆಯ್ಕೆ Read More »

ಡಾ.ಪ್ರಭಾಕರ ಭಟ್ ಕಲ್ಲಡ್ಕಗೆ ಮಧ್ಯಂತರ ಜಾಮೀನು

ಬೆಂಗಳೂರು: ಮುಸ್ಲಿಂ ಮಹಿಳೆಯರನ್ನು ನಿಂದಿಸಿದ ಪ್ರಕರಣದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್‍ ಮೇಲ್ ಪ್ರಕರಣ ದಾಖಲಾಗಿದ್ದು, ಇದೀಗ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಕುರಿತು ಹಿರಿಯ ವಕೀಲ, ಕರ್ನಾಟಕ ಮಾಜಿ ಎಎಜೆ ಅರುಣ್ ಶ್ಯಾಮ್ ಮಾಹಿತಿ ನೀಡಿದ್ದಾರೆ. ಡಿ.24 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಪ್ರಭಾಕರ್ ಭಟ್ ನಿಂದನಾತ್ಮಕ ಆರೋಪ ಎದುರಿಸುತ್ತಿದ್ದಾರೆ.

ಡಾ.ಪ್ರಭಾಕರ ಭಟ್ ಕಲ್ಲಡ್ಕಗೆ ಮಧ್ಯಂತರ ಜಾಮೀನು Read More »

ಬೈತಡ್ಕ ಹೊಳೆಗೆ ಬಿದ್ದ ಕಾರು | ಜ್ಯೋತಿಷಿ ಅಪಾಯದಿಂದ ಪಾರು

ಪುತ್ತೂರು : ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿ ಎದುರಿನ ಹೊಳೆಗೆ ಕಾರು ಪಲ್ಟಿಯಾಗಿ ಜ್ಯೋತಿಷಿಯೊಬ್ಬರಿಗೆ ಗಾಯವಾದ ಘಟನೆ ಡಿ.28ರಂದು ಮಧ್ಯಾಹ್ನ ನಡೆದಿದೆ. ಬೆಳಂದೂರಿನ ಜ್ಯೋತಿಷಿ ಪ್ರಸಾದ್‌ ಪಂಗಣ್ಣಾಯರ ಮಾರುತಿ ಬ್ರಿಝಾ ಕಾರು ಇದಾಗಿದ್ದು, ಅವರೇ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದ್ದು ನೀರು ಕಡಿಮೆ ಇದ್ದಿದ್ದದರಿಂದ ಅವಘಡ ತಪ್ಪಿದೆ ಪಂಗಾಣ್ಣಯರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಜುಲೈನಲ್ಲಿ ಇದೇ ಸ್ಥಳದಲ್ಲಿ ಮಾರುತಿ 800ಕಾರು ಇದೇ ಸ್ಥಳದಲ್ಲಿ ಹೊಳೆಗೆ ಬಿದ್ದು ಇಬ್ಬರು ನೀರುಪಾಲದ ಘಟನೆ

ಬೈತಡ್ಕ ಹೊಳೆಗೆ ಬಿದ್ದ ಕಾರು | ಜ್ಯೋತಿಷಿ ಅಪಾಯದಿಂದ ಪಾರು Read More »

ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕೇಸು | ಸಂಸದ ನಳಿನ್‌ಕುಮಾರ್ ಕಟೀಲ್ ಖಂಡನೆ

ಮಂಗಳೂರು: ಹಿಂದೂ ಸಮಾಜದ ಮಾರ್ಗದರ್ಶಕರಾಗಿರುವ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ದುರುದ್ದೇಶ ಪೂರ್ವಕವಾಗಿ ಕೇಸು ದಾಖಲಿಸಿರುವುದಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಮುಂದುವರಿದಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ದ.ಕ. ಮುಸ್ಲಿಂ ಸಮಾಜದ ಮಹಿಳೆಯರಿಗೆ ಆದ ಅನ್ಯಾಯ ಹಾಗೂ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಮಾಡಿದ ಬಗ್ಗೆ ಡಾ,ಭಟ್ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಇದೇ ಹೇಳಿಕೆಯನ್ನು ತಿರುಚಿ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಕೇಸು ದಾಖಲಿಸಲಾಗಿದೆ. ಸಿದ್ದರಾಮಯ್ಯ

ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕೇಸು | ಸಂಸದ ನಳಿನ್‌ಕುಮಾರ್ ಕಟೀಲ್ ಖಂಡನೆ Read More »

error: Content is protected !!
Scroll to Top