ಬ್ರಹ್ಮರಕೂಟ್ಲು ಟೋಲ್‌ ಸಿಬ್ಬಂದಿ ಮೇಲೆ ಹಲ್ಲೆ : ಇಬ್ಬರ ಬಂಧನ

ಟೋಲ್‌ ಹಣ ಪಾವತಿಸಲು ನಿರಾಕರಿಸಿ ಹಲ್ಲೆ ಮಾಡಿದ್ದ ಲಾರಿ ಚಾಲಕ, ಕ್ಲೀನರ್‌ ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್‌ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಹಾಗೂ ಕ್ಲೀನರ್‌ನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದ ನಿವಾಸಿಗಳಾದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಬಂಧಿತ ಆರೋಪಿಗಳು. ಡಿ.29ರಂದು ಮುಂಜಾನೆ ಲಾರಿಯಲ್ಲಿ ಬಂದ ಆರೋಪಿಗಳು ಬ್ರಹ್ಮರಕೂಟ್ಲು ಟೋಲ್ ಬಳಿ ರಸ್ತೆಯ ವಿರುದ್ದ ದಿಕ್ಕಿನಿಂದ ಬಂದ್ದಿದ್ದು, ಟೋಲ್ ಸಿಬ್ಬಂದಿ ಟೋಲ್ ಹಣ […]

ಬ್ರಹ್ಮರಕೂಟ್ಲು ಟೋಲ್‌ ಸಿಬ್ಬಂದಿ ಮೇಲೆ ಹಲ್ಲೆ : ಇಬ್ಬರ ಬಂಧನ Read More »

ರಿವರ್ಸ್‌ ತೆಗೆಯುವಾಗ ಜನರ ಮೇಲೆ ಹರಿದುಹೋದ ಬಸ್‌ : 4 ಮಂದಿ ಸಾವು

ಜನನಿಬಿಢ ರೈಲು ನಿಲ್ದಾಣದ ಹೊರಗೆ ಸಂಭವಿಸಿದ ಭೀಕರ ಅಪಘಾತ ಮುಂಬೈ: ಮುಂಬೈ ಉಪನಗರ ಭಾಂಡೂಪ್‌ನ ರೈಲು ನಿಲ್ದಾಣದ ಹೊರಗೆ ಬೆಸ್ಟ್​ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿ 9 ಮಂದಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ರಾತ್ರಿ ಸಂಭವಿಸಿದೆ. ಜನನಿಬಿಢ ಭಾಂಡೂಪ್‌ ಸ್ಟೇಷನ್ ರಸ್ತೆಯಲ್ಲಿ ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಜನರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಜನದಟ್ಟಣೆಯ ಪ್ರದೇಶದಲ್ಲಿ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮೂವರು

ರಿವರ್ಸ್‌ ತೆಗೆಯುವಾಗ ಜನರ ಮೇಲೆ ಹರಿದುಹೋದ ಬಸ್‌ : 4 ಮಂದಿ ಸಾವು Read More »

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ನಿಧನ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೇಗಂ ಖಲೀದಾ ಜಿಯಾ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದ ಕಾರಣ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಬೇಗಂ ಅವರು ಮತ್ತೊಮ್ಮೆ ದೇಶವನ್ನು ಮುನ್ನಡೆಸುತ್ತಾರೆ ಎಂದು ಭಾವಿಸಲಾಗಿತ್ತು. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ನಿಧನ Read More »

ಕನ್ನಡದ ಕಿರುತೆರೆ ನಟಿ ಆತ್ಮಹತ್ಯೆ

ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ನಟಿ ಬೆಂಗಳೂರು : ಕನ್ನಡ ಮತ್ತು ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈನಿಸಿಕೊಂಡಿದ್ದ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದಲ್ಲಿ ನಡೆದಿದೆ. ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’, ‘ಅಣ್ಣ-ತಂಗಿ’ ಮುಂತಾದ ಸೀರಿಯಲ್​​ಗಳಲ್ಲಿ ಅವರು ನಟಿಸಿದ್ದರು. ಮೂಲತಃ ಕೊಟ್ಟೂರಿನವರಾದ ನಂದಿನಿ ಸಿ.ಎಂ ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡದ ʻಜೀವ ಹೂವಾಗಿದೆʼ, ʻಸಂಘರ್ಷʼ, ʻಮಧುಮಗಳುʼ, ʻನೀನಾದೆ ನಾʼ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ

ಕನ್ನಡದ ಕಿರುತೆರೆ ನಟಿ ಆತ್ಮಹತ್ಯೆ Read More »

ಮೊಬೈಲ್ ಬಿಟ್ಟು ಓದುವಂತೆ ಹೇಳಿದ ತಾಯಿ: ಮಗಳು ಆತ್ಮಹತ್ಯೆ

ಉಡುಪಿ: ಮೊಬೈಲ್ ಬಿಟ್ಟು ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸುವಂತೆ ತಾಯಿ ಹೇಳಿದ ಬುದ್ಧಿ ಮಾತಿಗೆ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. ಉಡುಪಿ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಹಿರೇಬೆಟ್ಟು ನಿವಾಸಿ ಸಮನ್ವಿ (17) ನೇಣಿಗೆ ‌ಶರಣಾಗಿರುವುದಾಗಿದೆ. ಸಮನ್ವಿ ಓದದೆ ಫೋನಿನಲ್ಲೇ ಮಾತನಾಡುತ್ತಿದ್ದು, ಆಕೆಗೆ ಮುಂಬರುವ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸುವಂತೆ ತಾಯಿ ಬುದ್ಧಿವಾದ ಹೇಳಿದ್ದರು. ಆ ಬಳಿಕ ಆಕೆ ರೂಮಿಗೆ ತೆರಳಿ ಒಳಗಿನಿಂದ ಲಾಕ್ ಮಾಡಿದ್ದು,

ಮೊಬೈಲ್ ಬಿಟ್ಟು ಓದುವಂತೆ ಹೇಳಿದ ತಾಯಿ: ಮಗಳು ಆತ್ಮಹತ್ಯೆ Read More »

ಧರ್ಮಸ್ಥಳ ಬುರುಡೆ ಪ್ರಕರಣದ ಇನ್ನಷ್ಟು ರಹಸ್ಯಗಳು ಬಯಲು

ಆರೋಪಿಯ ಹೇಳಿಕೆಯಲ್ಲಿದೆ ಬುರುಡೆ ಷಡ್ಯಂತ್ರದ ಭಯಾನಕ ಸತ್ಯ ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿಗಳು ಎಸ್‌ಐಟಿಗೆ ನೀಡಿದ ಹೇಳಿಕೆಯ ಕೆಲವು ಅಂಶಗಳು ಬಯಲಾಗಿದ್ದು, ಇದರಲ್ಲಿ ಯಾವ ರೀತಿ ಷಟ್ಯಂತ್ರ ರೂಪಿಸಲಾಗಿತ್ತು ಎಂಬುದರ ಬಗ್ಗೆ ಇಂಚಿಂಚು ಮಾಹಿತಿ ಇದೆ. ಬುರುಡೆ ನೋಡಿ ನಾನು ಹೆದರಿ ಹೋಗಿದ್ದೆ ಎಂದು ಬುರುಡೆ ಗ್ಯಾಂಗ್‌ನ ಸದಸ್ಯ, ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಜಯಂತ್ ಟಿ. ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ರೈಲಿನಲ್ಲಿ ದೆಹಲಿಗೆ ಜಯಂತ್‌ ಬುರುಡೆಯನ್ನು ತೆಗೆದುಕೊಂಡು

ಧರ್ಮಸ್ಥಳ ಬುರುಡೆ ಪ್ರಕರಣದ ಇನ್ನಷ್ಟು ರಹಸ್ಯಗಳು ಬಯಲು Read More »

ಪಟಾಕಿ ಅಂಗಡಿಯಲ್ಲಿ ಭೀಕರ ಬೆಂಕಿ ಅವಘಡ : ಅಪಾರ ನಷ್ಟ

ಆರಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು ಉಡುಪಿ : ಕುಂದಾಪುರದ ರಥಬೀದಿಯಲ್ಲಿರುವ ಕಟ್ಟಡವೊಂದರಲ್ಲಿ ಸೋಮವಾರ ಬೆಳಗಿನ ಜಾವ ಭೀಕರ ಅಗ್ನಿ ದುರಂತ ಸಂಭವಿಸಿದ್ದು ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಕಟ್ಟಡದಲ್ಲಿದ್ದ ಪಟಾಕಿ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಬಳಿಕ ಅದು ಪುಸ್ತಕದಂಗಡಿ ಸೇರಿದಂತೆ ಐರಾರು ಅಂಗಡಿಗಳಿಗೆ ವೇಗವಾಗಿ ಹಬ್ಬಿದೆ ಎನ್ನಲಾಗಿದೆ. ಸೋಮವಾರ ಮುಂಜಾನೆ ಮೂರು ಗಂಟೆಗೆ ಘಟನೆ ನಡೆದಿದ್ದು, ಕುಂದಾಪುರ ಪೇಟೆಯ ವೆಂಕಟರಮಣ ದೇವಸ್ಥಾನದ ಎದುರು ರಥಬೀದಿಯಲ್ಲಿರುವ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಅಂಗಡಿಯೊಂದಿಗೆ ಇಡೀ ಕಟ್ಟಡವೇ ಹೊತ್ತಿ

ಪಟಾಕಿ ಅಂಗಡಿಯಲ್ಲಿ ಭೀಕರ ಬೆಂಕಿ ಅವಘಡ : ಅಪಾರ ನಷ್ಟ Read More »

ಮಂಗಳೂರು : ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಎಎಸ್‌ಐ

ಹೆಂಡತಿ, ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ಕೃತ್ಯ ಮಂಗಳೂರು: ಪಾಂಡೇಶ್ವರ ಠಾಣೆಯ ಎಎಸ್‌ಐ ತನ್ನ ಮನೆಯಲ್ಲೇ ಮೈಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕದ್ರಿಯ ವ್ಯಾಸ ನಗರದಲ್ಲಿ ನಡೆದಿದೆ. ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ ಆತ್ಮಹತ್ಯೆಗೆ ಯತ್ನಿಸಿದವರು. ಕಾಸರಗೋಡು ಜಿಲ್ಲೆಯ ಮುಳ್ಳೇರಿಯದವರಾದ ಹರಿಶ್ಚಂದ್ರ ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಕಳೆದ 27 ವರ್ಷಗಳಿಂದ ಹಲವಾರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಒಂದು ವರ್ಷದ ಹಿಂದೆ ಎಎಸ್‌ಐ ಆಗಿ ಭಡ್ತಿ ಪಡೆದಿದ್ದರು. ಹಿಂದೆ

ಮಂಗಳೂರು : ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಎಎಸ್‌ಐ Read More »

ಎಚ್ಚರ…ಹೊಸ ವರ್ಷದ ಸಂದೇಶದಲ್ಲೂ ಇರಬಹುದು ಮೋಸದ ಜಾಲ!

ಅಪರಿಚಿತ ನಂಬರ್‌ಗಳಿಂದ ಬಂದ ಲಿಂಕ್‌ಗಳನ್ನು ಓಪನ್‌ ಮಾಡಬೇಡಿ ಬೆಂಗಳೂರು : ಹಬ್ಬಗಳು, ಹೊಸ ವರ್ಷದಂತಹ ವಿಶೇಷ ಸಂದರ್ಭಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಜಾಲವನ್ನು ಹರಡುತ್ತಿದ್ದಾರೆ. ಆಫರ್‌ಗಳು, ಗಿಫ್ಟ್‌ಗಳು, ಕ್ಯಾಶ್‌ಬ್ಯಾಕ್ ಎನ್ನುವ ಆಕರ್ಷಕ ಸಂದೇಶಗಳನ್ನು ವಾಟ್ಸ್‌ಅಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ತಿಳಿಯದೆ ಕ್ಲಿಕ್ ಮಾಡಿದರೂ ಬ್ಯಾಂಕ್ ಖಾತೆ ಲೂಟಿ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರು ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ

ಎಚ್ಚರ…ಹೊಸ ವರ್ಷದ ಸಂದೇಶದಲ್ಲೂ ಇರಬಹುದು ಮೋಸದ ಜಾಲ! Read More »

ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ

ಹೆಕ್ಟೇರ್‌ಗಟ್ಟಲೆ ಭೂಮಿ ಒತ್ತುವರಿ ಮಾಡಿದ ಆರೋಪ ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ ಎದುರಾಗಿದೆ. ಆಂಧ್ರದ ಪರ್ಮಿಟ್‌ ಬಳಸಿ ಭೂಮಿ ಒತ್ತುವರಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಸುದಾಂಶು ದುಲಿಯಾ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಬಳ್ಳಾರಿಗೆ ತಿಂಗಳ ಹಿಂದೆ ಸರ್ವೇಗೆ ಬಂದಿದ್ದ ನಿವೃತ್ತ ನ್ಯಾ.ಸುಧಾಂಶು ದುಲಿಯಾ ನೇತೃತ್ವದ ಸಮಿತಿ ಗಡಿ ಒತ್ತುವರಿ ಬಗ್ಗೆ ವರದಿ ಸಲ್ಲಿಕೆ ಮಾಡಿದೆ. ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಡ್ರೋನ್‌ ಮೂಲಕ ನಡೆದಿದ್ದ

ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ Read More »

error: Content is protected !!
Scroll to Top