ಮೃತ ಕೂಲಿ ಕಾರ್ಮಿಕ ಶಿವಪ್ಪರ ಮೃತದೇಹ ಇಳಿಸಿ ಹೋದ ಘಟನೆ | ಪ್ರಮುಖ ಆರೋಪಿ ಹೆನ್ರಿ ತಾವ್ರೋ ಬಂಧನ

ಪುತ್ತೂರು: ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕನ ಶಿವಪ್ಪ ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಹೆನ್ರಿ ತಾವ್ರೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಈ ಹಿಂದೆಯೇ ಬಂಧಿಸಿದ್ದರು. ಸಹಾಯಕ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಅಮಾನವೀಯ ರೀತಿಯಲ್ಲಿ ಇರಿಸಿ ಹೋದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ […]

ಮೃತ ಕೂಲಿ ಕಾರ್ಮಿಕ ಶಿವಪ್ಪರ ಮೃತದೇಹ ಇಳಿಸಿ ಹೋದ ಘಟನೆ | ಪ್ರಮುಖ ಆರೋಪಿ ಹೆನ್ರಿ ತಾವ್ರೋ ಬಂಧನ Read More »

ಬೃಹತ್‌ ಸಾರಿಗೆ ಮುಷ್ಕರಕ್ಕೆ ನೌಕರರ ಸಿದ್ಧತೆ

38 ತಿಂಗಳ ಅರಿಯರ್ಸ್‌ ಬಿಡುಗಡೆ, ವೇತನ ಹೆಚ್ಚಳ ಬೇಡಿಕೆ ಬೆಂಗಳೂರು: 38 ತಿಂಗಳಿಂದ ಬಾಕಿಯಿರುವ ಅರಿಯರ್ಸ್‌ ಬಿಡುಗಡೆ, ವೇತನ ಏರಿಕೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ಹೂಡಲು ಕೆಸ್‌ಆರ್‌ಟಿಸಿ ನೌಕರರು ಸಿದ್ಧತೆ ಮಾಡುತ್ತಿದ್ದಾರೆ. ಡಿಸೆಂಬರ್ 31ರಿಂದ ಸಾರಿಗೆ ಮುಷ್ಕರಕ್ಕೆ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಡಿಸೆಂಬರ್ 9ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಚಲೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ. ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್-22ರ ಪ್ರಕಾರ

ಬೃಹತ್‌ ಸಾರಿಗೆ ಮುಷ್ಕರಕ್ಕೆ ನೌಕರರ ಸಿದ್ಧತೆ Read More »

ಇಂದಿನಿಂದ ಪಡಿತರ ಕಾರ್ಡ್‌ ಪರಿಶೀಲನೆ

ಬಡವರಾ, ಶ್ರೀಮಂತರಾ ಎಂದು ಪರಿಶೀಲಿಸಲಿರುವ ಅಧಿಕಾರಿಗಳು ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದತಿಯಿಂದ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಇಂದಿನಿಂದ ಅಧಿಕಾರಿಗಳು ರಾಜ್ಯಾದ್ಯಂತ ಪಡಿತರ ಕಾರ್ಡ್‌ಗಳ ಪರಿಶೀಲನೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಅರ್ಹ ಫಲಾನುಭವಿಗಳ ಕಾರ್ಡ್‌ಗಳು ಮತ್ತೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸರ್ಹತೆಯನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮುಂತಾದ ದಾಖಲೆಗಳ ಮೂಲಕ ಕಾರ್ಡ್‌ ರದ್ದಾದವರು ತಮ್ಮ ಕಾರ್ಡ್‌ಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ

ಇಂದಿನಿಂದ ಪಡಿತರ ಕಾರ್ಡ್‌ ಪರಿಶೀಲನೆ Read More »

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ

ಉಡುಪಿ: ರಿಷಬ್‌ ಶೆಟ್ಟಿಯವರ ಕಾಂತಾರ-1 ಚಿತ್ರತಂಡ ಪ್ರಯಾಣಿಸುತ್ತಿದ್ದ ಮಿನಿಬಸ್‌ ಕೊಲ್ಲೂರು ಸಮೀಪ ನಿನ್ನೆ ರಾತ್ರಿ ಪಲ್ಟಿಯಾಗಿ ಆರು ಮಂದಿ ಜೂನಿಯರ್‌ ಕಲಾವಿದರು ಗಾಯಗೊಂಡಿದ್ದಾರೆ.ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಹಾಲ್ಕಲ್‌ನ ಆನೆಝರಿ ಎಂಬಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಸ್ಕೂಟಿ ಅಡ್ಡಬಂದಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್‌ ಮಗುಚಿ ಬಿದ್ದಿದೆ. ಬಸ್‌ನಲ್ಲಿ ಸುಮಾರು 20 ಜ್ಯೂನಿಯರ್ ಕಲಾವಿದರು ಇದ್ದರು. ಈ ಪೈಕಿ 6 ಮಂದಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. 2025ರ ಅಕ್ಟೋಬರ್​ 2ರಂದು ಈ

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ Read More »

ನ.25 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ  ಶ್ರೀ ದೇವರಿಗೆ ಮಹಾರುದ್ರ ಯಾಗ ನ.25 ಸೋಮವಾರ ನಡೆಯಲಿದೆ. ಈ ಯಾಗದಲ್ಲಿ 1333 ರುದ್ರಗಳನ್ನು ಜಪಿಸಿ ಮಹಾದೇವನಿಗೆ ಅರ್ಪಿಸಲಾಗುತ್ತದೆ. ಭಗವತಿ ಸೇವೆ, ಸಹಸ್ರ ಮೋದಕ ಹವನ, ಶತ ರುದ್ರಾಭಿಷೇಕ ಮೊದಲಾದ ಸೇವೆಗಳು ನಡೆಯಲಿವೆ. ಕಾರ್ತಿಕ ಸೋಮವಾರದಂದು ನಡೆಯಲಿರುವ ಈ ಯಾಗಕ್ಕೆ ವಸ್ತು ರೂಪದಲ್ಲಿ ಎಳ್ಳು, ಭತ್ತ, ತುಪ್ಪ ಅಥವಾ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಬಹುದು. ಮಹಾರುದ್ರ ಯಾಗದಲ್ಲಿ ಪ್ರಥಮವಾಗಿ ನೋಂದಾಯಿಸಿದ 1333 ಜನರಿಗೆ ಮಾತ್ರ ಅವಕಾಶವಿದೆ

ನ.25 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ Read More »

ಪುತ್ತೂರಿನಲ್ಲಿ ಬೃಹತ್ ಭಜಕರ ಸಮಾವೇಶ | ಮೆರವಣಿಗೆ ಮೂಲಕ ಸಾಗಿದ ಕುಣಿತ ಭಜನೆ | ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಭಜನಾ ನಿಂದಕರಿಗೆ ಸದ್ಭುದ್ದಿ ನೀಡಲೆಂದು ಪ್ರಾರ್ಥನೆ

ಪುತ್ತೂರು: ಭಜನಾ ಪರಿಷತ್ ಪುತ್ತೂರು ಹಾಗೂ ಪುತ್ತೂರಿನ ವಿವಿಧ ಹಿಂದೂ ಸಂಘಟನೆಗಳ ಮತ್ತು ಭಜಕರ ಸಹಕಾರದಲ್ಲಿ ಬೃಹತ್ ಭಜಕರ ಸಮಾವೇಶ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಾನುವಾರ ನಡೆಯಿತು. ಸಮಾವೇಶದ ಮೊದಲು ನಗರದ ದರ್ಬೆ ವೃತ್ತದಿಂದ ಭಜನಾ ಸಂಕೀರ್ತನೆಯ ಕುಣಿತದ ಮೂಲಕ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಜಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನೆ ಹಾಗೂ ಭಜನಾ ತಂಡದ ಮಹಿಳೆಯರನ್ನು ನಿಂದನೆ ಮಾಡುವವರಿಗೆ ಸದ್ಭುದ್ಧಿ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಈ

ಪುತ್ತೂರಿನಲ್ಲಿ ಬೃಹತ್ ಭಜಕರ ಸಮಾವೇಶ | ಮೆರವಣಿಗೆ ಮೂಲಕ ಸಾಗಿದ ಕುಣಿತ ಭಜನೆ | ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಭಜನಾ ನಿಂದಕರಿಗೆ ಸದ್ಭುದ್ದಿ ನೀಡಲೆಂದು ಪ್ರಾರ್ಥನೆ Read More »

ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿ : ಈಜುಗಾರರಿಂದ ರಕ್ಷಣೆ

ಉಳ್ಳಾಲ: ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯನ್ನು ಈಜುಗಾರರು ರಕ್ಷಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಸೋಮೇಶ್ವರದ ರುದ್ರಬಂಡೆಯಿಂದ ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ರಕ್ಷಿಸಿದ್ದಾರೆ. ಉಳ್ಳಾಲ ಸಮೀಪ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ. ಯುವತಿ ಸುರಕ್ಷಿತವಾಗಿದ್ದು, ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿ : ಈಜುಗಾರರಿಂದ ರಕ್ಷಣೆ Read More »

ಡಿ.12 ರಿಂದ 15 : ಶಾಂತಿಮೊಗರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

ಕುದ್ಮಾರು: ಶಾಂತಿಮೊಗರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಡಿ.14 ರಿಂದ ಡಿ.15 ರ ತನಕ ನಡೆಯಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಶಾಂತಿಮೊಗರಿನಲ್ಲಿ ನಡೆಯಿತು. ಬೆಳ್ತಂಗಡಿ ಲಾಯಿಲದ ದೀಕ್ಷಿತ ಕೆ.ಯುವರಾಜ ಗುರುಸ್ವಾಮಿ ಅವರ ಶುಭಾಶೀರ್ವಾದದೊಂದಿಗೆ, ದೀಕ್ಷಿತ ಮೇದಪ್ಪ ಗುರುಸ್ವಾಮಿ ಮತ್ತು ಆಲಂಕಾರು ಅಯ್ಯಪ್ಪ ಭಕ್ತವೃಂದದ ಹಿರಿತನದಲ್ಲಿ ಜನಾರ್ದನ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ನಡೆಯಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಶಾಂತಿಮೊಗರು ಶ್ರೀ ಅಯ್ಯಪ್ಪ ಭಕ್ತವೃಂದದವರು ಉಪಸ್ಥಿತರಿದ್ದರು.

ಡಿ.12 ರಿಂದ 15 : ಶಾಂತಿಮೊಗರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಪುತ್ತೂರು ಇನ್ನರ್ ವ್ಹೀಲ್ ಕ್ಲಬ್‍ ನಿಂದ ಮೇಳೈಸಿದ “ಕನಕ ಸಂಭ್ರಮ” | ಅಧ್ಯಕ್ಷರಿಗೆ ಗೋಲ್ಡನ್ ಕಾಲರ್ ಪ್ರದಾನ

ಪುತ್ತೂರು: ಇನ್ನರ್ ವ್ಹೀಲ್ ಕ್ಲಬ್‍ ವತಿಯಿಂದ ‘ಕನಕ ಸಂಭ್ರಮ’ ಕಾರ್ಯಕ್ರಮ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆಯಿತು. ಇನ್ನರ್ ವ್ಹೀಲ್ ಕ್ಲಬ್‍ ಜಿಲ್ಲೆ 318 ರ ಜಿಲ್ಲಾ ಚೆಯರ್ ಮ್ಯಾನ್‍ ವಿಶಾಲಾಕ್ಷಿ ಕುಡ್ವ ದೀಪ ಬೆಳಗಿಸಿ, ಕಲ್ಪವೃಕ್ಷದ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ನೇಹ ಮತ್ತು ಸೇವೆಯೇ ನಮ್ಮ ಕ್ಲಬ್‌ನ ಗುರಿ. ತಮ್ಮ ಸೇವಾ ಚಟುವಟಿಕೆಯನ್ನು ಮತ್ತೆ ಸರಕಾರವೇ ಮುಂದುವರಿಸಿರುವುದು ಸಂತೋಷದ ವಿಚಾರ. ಅವೆಲ್ಲ ಕೇವಲ ಮಹಿಳೆಯರ ಸಾಧನೆಯಲ್ಲ, ಇದರ ಜೊತೆಗೆ

ಪುತ್ತೂರು ಇನ್ನರ್ ವ್ಹೀಲ್ ಕ್ಲಬ್‍ ನಿಂದ ಮೇಳೈಸಿದ “ಕನಕ ಸಂಭ್ರಮ” | ಅಧ್ಯಕ್ಷರಿಗೆ ಗೋಲ್ಡನ್ ಕಾಲರ್ ಪ್ರದಾನ Read More »

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ವಿದ್ಯಾರ್ಥಿ ಜೀವನ ಬಂಗಾರವಾಗಲು ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಅಗತ್ಯ.  ವೈಫಲ್ಯಗಳು ಯಶಸ್ಸಿನ ಭಾಗವೇ ಆಗಿರುವುದರಿಂದ ವೈಫಲ್ಯಗಳಿಗೆ ಸಿದ್ಧರಾಗಿರಿ ಮತ್ತು ಅದು ಯಶಸ್ಸನ್ನು ಸಾಧಿಸಲು ಸಹಕಾರಿ’ ಎಂದು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ನಳಿನಾಕ್ಷಿ ಎ. ಎಸ್ ಹೇಳಿದರು. ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2024-25ನೇ ಸಾಲಿನ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾl ಆ್ಯಂಟನಿ ಪ್ರಕಾಶ್ ಮೊಂತೇರೊ, ವಿದ್ಯಾರ್ಥಿಗಳು

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನೆ Read More »

error: Content is protected !!
Scroll to Top