25,000 ಕೋ.ರೂ. ಮೌಲ್ಯದ ಮಾದಕ ವಸ್ತು ವಶ

ದೋಣಿ ಮೂಲಕ ಭಾರತಕ್ಕೆ ಬರುತ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್‌ ಹೊಸದಿಲ್ಲಿ : ಭಾರತೀಯ ಕೋಸ್ಟ್ ಗಾರ್ಡ್ ಪಡೆ ಅಂಡಮಾನ್ ದ್ವೀಪದ ಸಮೀಪ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯೊಂದರಿಂದ ಸುಮಾರು 5500 ಕೆಜಿ (5.5 ಟನ್) ತೂಕದ ಮಾದಕವಸ್ತು ವಶಪಡಿಸಿಕೊಂಡಿದೆ. ಇದರ ಬೆಲೆ 25,000 ಕೋಟಿ ರೂ. ಆಗಿದೆ. ಈ ಡ್ರಗ್ಸ್‌ ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.ದೊಡ್ಡ ಪ್ರಮಾಣದ ಮಾದಕ ದ್ರವ್ಯ ವಶವಾಗಿರುವುದು ಡ್ರಗ್ಸ್‌ ವಿರುದ್ಧ ಸರಕಾರ ನಡೆಸುತ್ತಿರುವ […]

25,000 ಕೋ.ರೂ. ಮೌಲ್ಯದ ಮಾದಕ ವಸ್ತು ವಶ Read More »

ಢಾಕಾ : ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ ವಿರೋಧಿಸಿ ಭಾರಿ ಪ್ರತಿಭಟನೆ

ಹಿಂದುಗಳ ಪರವಾಗಿ ಹೋರಾಡುತ್ತಿದ್ದ ಧಾರ್ಮಿಕ ನಾಯಕನನ್ನು ಕ್ಷುಲ್ಲಕ ಕೇಸ್‌ ಹಾಕಿ ಬಂಧಿಸಿದ ಪೊಲೀಸರು ಢಾಕಾ: ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲ, ಇಸ್ಕಾನ್ ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನವನ್ನು ವಿರೋಧಿಸಿ ಹಿಂದುಗಳು ನಿನ್ನೆ ರಾತ್ರಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾದ ಹಲವೆಡೆ ಹಿಂದುಗಳು ಬೀದಿಗಿಳಿದು ಮೆರವಣಿಗೆ, ಧರಣಿ ನಡೆಸಿದ್ದು, ಈ ಸಂದರ್ಭದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ನಿನ್ನೆ ಸಂಜೆ ಢಾಕಾ ವಿಮಾನ

ಢಾಕಾ : ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ ವಿರೋಧಿಸಿ ಭಾರಿ ಪ್ರತಿಭಟನೆ Read More »

ದೆಹಲಿಯ ಸಚಿವಾಲಯದಲ್ಲಿ ಕೇಂದ್ರ ವಿತ್ತ ಸಚಿವರನ್ನು ಭೇಟಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ  

ಮಂಗಳೂರು : ದ.ಕ. ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರನ್ನು ದೆಹಲಿಯಲ್ಲಿ ಶನಿವಾರ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ  ಇಂಡಿಯನ್ ಕೋಸ್ಟ್ ಗಾರ್ಡ್ ಅಕಾಡೆಮಿ ನಿರ್ಮಾಣ ಪ್ರಕ್ರಿಯೆಗೆ ವೇಗ ನೀಡುವುದು, ಕೊಂಕಣ ರೈಲ್ವೆಯ ವಿಲೀನ, ಜಾಗತಿಕ ಸಾಮರ್ಥ್ಯ  ಕೇಂದ್ರಗಳು (ಜಿಸಿಸಿ), ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಯ ಸ್ಥಾಪನೆ ಕುರಿತು ಮನವಿ ಮಾಡಿದರು. ಕೊಂಕಣ ರೈಲ್ವೆಯ ವಿಲೀನ, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಯ ಸ್ಥಾಪನೆ ಪ್ರಮುಖವಾಗಿದೆ.

ದೆಹಲಿಯ ಸಚಿವಾಲಯದಲ್ಲಿ ಕೇಂದ್ರ ವಿತ್ತ ಸಚಿವರನ್ನು ಭೇಟಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ   Read More »

ರಾಷ್ಟ್ರಮಟ್ಟದ ಗಣಿತ ಮೇಳ – ಅಂಬಿಕಾ ವಿದ್ಯಾಲಯದ ಸಾನ್ವಿ ಜಿ. ಪ್ರಥಮ

ಪುತ್ತೂರು :  ರಾಷ್ಟ್ರಮಟ್ಟದ  ಗಣಿತ ಮೇಳ ಬಾಲ ವರ್ಗ ಗಣಿತ ಮಾದರಿ ಪ್ರದರ್ಶನದ ರಾಷ್ಟ್ರಮಟ್ಟ ಸ್ಪರ್ಧೆಯಲ್ಲಿ ಬಪ್ಪಳಿಗೆಯ  ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಜಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಒರಿಸ್ಸಾದ – ಅಂಗುಲ್ ಸರಸ್ವತಿ ಶಿಶುಮಂದಿರದಲ್ಲಿ ರಾಷ್ಟ್ರಮಟ್ಟದ  ಗಣಿತ ಮೇಳ ಬಾಲ ವರ್ಗ ಗಣಿತ ಮಾದರಿ ಪ್ರದರ್ಶನದ ರಾಷ್ಟ್ರಮಟ್ಟ ಸ್ಪರ್ಧೆ ನಡೆಯಿತು. ಸಾನ್ವಿ ಬಂಟ್ವಾಳ ತಾಲೂಕಿನ ಗಿರೀಶ್ ಗೌಡ ಎಚ್ , ಸುಮಿತ್ರ ದಂಪತಿ

ರಾಷ್ಟ್ರಮಟ್ಟದ ಗಣಿತ ಮೇಳ – ಅಂಬಿಕಾ ವಿದ್ಯಾಲಯದ ಸಾನ್ವಿ ಜಿ. ಪ್ರಥಮ Read More »

ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ  ಆಯ್ಕೆ

ವಿಟ್ಲ : ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ ಆಯ್ಕೆಯಾದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನೈತೊಟ್ಟು, ಉಪಾಧ್ಯಕ್ಷರಾದ ಸಂಗೀತ ಪಣೆಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ಹಾಗೂ ಸ್ಥಾಯಿ ಸಮಿತಿ ಸದಸ್ಯರಾದ ಅರುಣ್ ವಿಟ್ಲ ಅಶೋಕ್ ಶೆಟ್ಟಿ, ಹರೀಶ್, ಜಯಂತ , ವಿಜಯಲಕ್ಷ್ಮಿ, ಉಪಸ್ಥಿತರಿದ್ದರು.

ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ  ಆಯ್ಕೆ Read More »

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ನಿಧನ

ಪುತ್ತೂರು : ಶಿಕ್ಷಕ, ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಾಣಿಯವರಾಗಿದ್ದು, ಬೊಳುವಾರಿನಲ್ಲಿ ವಾಸವಾಗಿದ್ದರು. ಕೆಲ ವರ್ಷಗಳಿದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಗುಣ ಮುಖರಾಗಿದ್ದು, ಆರೋಗ್ಯವಾಗಿದ್ದರು. ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನ.25ರಂದು ಬೆಳಗ್ಗೆ ಬೊಳುವಾರಿನ ವಾಸವಿದ್ದ ರೂಂನಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ನಿಧನ Read More »

ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ಇಂಜಿನಿಯರ್‌ ಈಗ ಬೆಂಗಳೂರಿನಲ್ಲಿ ಭಿಕ್ಷುಕ

ಇಂಜಿನಿಯರನ್ನು ಭಿಕ್ಷುಕನನ್ನಾಗಿ ಮಾಡಿದ್ದು ಬದುಕಿನ ಆ ಒಂದು ಆಘಾತಕಾರಿ ಘಟನೆ ಬೆಂಗಳೂರು: ಜರ್ಮನಿಯಲ್ಲಿ ಇಂಜಿನಿಯರಿಂಗ್‌ ಕಲಿತು, ಫ್ರಾಂಕ್‌ಫರ್ಟ್‌ನಲ್ಲಿ ಆರಂಕಿಯ ಸಂಬಳ ಪಡೆಯುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ವೀಡಿಯೊ ನಿನ್ನೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಕೆಂಪು ಬಣ್ಣದ ಹಳೆಯ ಟಿಶರ್ಟ್‌ ಮತ್ತು ಹರಕು ಜೀನ್ಸ್‌ ಪ್ಯಾಂಟ್‌ ಧರಿಸಿ ಕುರುಚಲು ಗಡ್ಡ ಬಿಟ್ಟು ಕಂಡೋರಿಗೆಲ್ಲ ಕೈಚಾಚಿ ಭಿಕ್ಷೆ ಕೇಳುತ್ತಿದ್ದ ಈ ವ್ಯಕ್ತಿಯನ್ನು ಶರತ್‌ ಯುವರಾಜ್‌ ಎಂಬವರು ಕುತೂಹಲದಿಂದ ಮಾತನಾಡಿಸಿದಾಗ ಆತನ

ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ಇಂಜಿನಿಯರ್‌ ಈಗ ಬೆಂಗಳೂರಿನಲ್ಲಿ ಭಿಕ್ಷುಕ Read More »

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಕುಖ್ಯಾತ ದರೋಡೆಕೋರರ ಕಾಲಿಗೆ ಗುಂಡೇಟು

ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಸೆರೆಯಾಗಿದ್ದ ಪಾತಕಿಗಳು ಮಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಇಬ್ಬರು ಕುಖ್ಯಾತ ದರೋಡೆಕೋರರ ಕಾಲಿಗೆ ಸಿಸಿಬಿ ಪೊಲೀಸರು ಗುಂಡಿಕ್ಕಿದ ಘಟನೆ ಹುಬ್ಬಳ್ಳಿ ಸಮೀಪ ಭಾನುವಾರ ಸಂಭವಿಸಿದೆ. ಮಂಗಳೂರಿನ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಭರತ್ ಮತ್ತು ಫಾರೂಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ಮಹಾರಾಷ್ಟ್ರದ

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಕುಖ್ಯಾತ ದರೋಡೆಕೋರರ ಕಾಲಿಗೆ ಗುಂಡೇಟು Read More »

ನ.27 ರಿಂದ ಡಿ.12 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ನ.27 ರಿಂದ ಡಿ.12 ರವರೆಗೆ ನಡೆಯಲಿದೆ. ನ.27 ರಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.30 ರಂದು ಲಕ್ಷದೀಪೋತ್ಸವ, ಡಿ.1 ರಂದು ರಾತ್ರಿ ಶೇಷ ವಾಹನೋತ್ಸವ, ಡಿ.2 ರಂದು ರಾತ್ರಿ ಅಶ್ವವಾಹನೋತ್ಸವ, ಡಿ.3 ರಂದು ರಾತ್ರಿ ಮಯೂರವಾಹನೋತ್ಸವ, ಡಿ.4 ರಂದು ರಾತ್ರಿ ಶೇಷವಾಹನೋತ್ಸವ, ಡಿ.5 ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ.6  ರಂದು ರಾತ್ರಿ ಪಂಚಮಿ ಉತ್ಸವ,

ನ.27 ರಿಂದ ಡಿ.12 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ Read More »

ಇಂದಿನಿಂದ ಸಂಸತ್‌ನ ಚಳಿಗಾಲ ಅಧಿವೇಶನ

ಕೋಲಾಹಲ ಎಬ್ಬಿಸಲಿರುವ ವಕ್ಫ್‌ ಮಸೂದೆ, ಅದಾನಿ ಕೇಸ್‌ ಹೊಸದಿಲ್ಲಿ : ಸಂಸತ್‌ನ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಿ ಡಿಸೆಂಬರ್​ 20ರವರೆಗೆ ನಡೆಯಲಿದೆ. ವಕ್ಫ್‌ ಮಸೂದೆ, ಅದಾನಿ ಅರೆಸ್ಟ್‌ ವಾರಂಟ್‌ ಮತ್ತಿತರ ವಿಚಾರಗಳು ಅಧಿವೇಶನದಲ್ಲಿ ಕೋಲಾಹಲ ಎಬ್ಬಿಸಲಿವೆ. ಸರ್ಕಾರವು ವಕ್ಫ್‌ ತಿದ್ದುಪಡಿ ಮಸೂದೆ ಸೇರಿದಂತೆ 16 ಮಸೂದೆಗಳನ್ನು ಮಂಡಿಸಲು ಪಟ್ಟಿ ಮಾಡಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ, ಲಂಚದ ಆರೋಪದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಯುಎಸ್ ನ್ಯಾಯಾಲಯದಿಂದ ದೋಷಾರೋಪಣೆ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಇದಕ್ಕೆ

ಇಂದಿನಿಂದ ಸಂಸತ್‌ನ ಚಳಿಗಾಲ ಅಧಿವೇಶನ Read More »

error: Content is protected !!
Scroll to Top