ಪಿಕಪ್ ಚಾಲಕ ಲೋಕೇಶ್‍ ಕಲ್ಕಾರ್ ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಕಲ್ಕಾರ್ ನಿವಾಸಿ ಲೋಕೇಶ್‍ ಕಲ್ಕಾರ್ ಬುಧವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಸೀತಾ-ರಾಮಣ್ಣ ಗೌಡ ದಂಪತಿ ಪುತ್ರರಾಗಿರುವ ಲೋಕೇಶ್‍ ಕಲ್ಕಾರ್ ಸ್ವಂತ ಪಿಕಪ್ ಹೊಂದಿದ್ದು, ಚಾಲಕರಾಗಿದ್ದರು. ಮೃತರು ತಂದೆ, ತಾಯಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಿಕಪ್ ಚಾಲಕ ಲೋಕೇಶ್‍ ಕಲ್ಕಾರ್ ನಿಧನ Read More »

ಕೆಮ್ಮಾಯಿ ಕೃಷ್ಣನಗರ 140 ನೇ ಬಿಜೆಪಿ ಬೂತ್ ಅಧ್ಯಕ್ಷರಾಗಿ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರವಿ ಆಚಾರ್ಯ ಕೃಷ್ಣನಗರ ಆಯ್ಕೆ.

ಪುತ್ತೂರು: ಚಿಕ್ಕಮುಡ್ನೂರು ಬಿಜೆಪಿ ಬೂತ್ ಸಂಖ್ಯೆ 140 ರ ನೂತನ ಅಧ್ಯಕ್ಷರಾಗಿ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರವಿ ಆಚಾರ್ಯ ಕೃಷ್ಣನಗರ ಆಯ್ಕೆಯಾಗಿದ್ದಾರೆ. ನಿವೃತ್ತ ಯೋಧ ಸಂಜೀವ ಕುಲಾಲ್ ಕೃಷ್ಣ ನಗರ ಅವರ ಮನೆಯಲ್ಲಿ ನಡೆದ ಆಯ್ಕೆ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.  ಲಾಭಾರ್ಥಿ ಪ್ರಮುಖ್ ಆಗಿ ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್ ಕೃಷ್ಣ ನಗರ, ಪ್ರಚಾರ ಪ್ರಮುಖರಾಗಿ ನಿಕಟಪೂರ್ವ ಅಧ್ಯಕ್ಷ ಅಶೋಕ್ ಪ್ರಶಾಂತ್ ಕೆಮ್ಮಾಯಿ, ಮಹಿಳಾ ಪ್ರಮುಖರಾಗಿ ಮಾಲಿನಿ ದಿನೇಶ್ ಆಚಾರ್ಯ ಕೃಷ್ಣನಗರ, ಲಲೀತಾ ಸುಬ್ರಹ್ಮಣ್ಯ ನಾಯಕ್,

ಕೆಮ್ಮಾಯಿ ಕೃಷ್ಣನಗರ 140 ನೇ ಬಿಜೆಪಿ ಬೂತ್ ಅಧ್ಯಕ್ಷರಾಗಿ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರವಿ ಆಚಾರ್ಯ ಕೃಷ್ಣನಗರ ಆಯ್ಕೆ. Read More »

ಮೋಸದಿಂದ ಲಪಟಾಯಿಸಿದ ಭೂಮಿ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ

ಮುಡಾ ಹಗರಣದ ಬಳಿಕ ಪಾರ್ವತಮ್ಮ ವಿರುದ್ಧ ಇನ್ನೊಂದು ಕೇಸ್‌ ಮೈಸೂರು: ಭೂ ವಿವಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನುಬಿಡುತ್ತಿಲ್ಲ. ಮುಡಾ ಹಗರಣದ ಮಧ್ಯೆ ಈಗ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಪಾರ್ವತಮ್ಮ ಹಾಗೂ ಸಿದ್ದರಾಮಯ್ಯನವರ ಬಾಮೈದ ಸೇರಿ ಒಟ್ಟು 10 ಜನರ ಮೇಲೆ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ. ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಭಾಗದ ಮೂರೂವರೆ ಎಕರೆ

ಮೋಸದಿಂದ ಲಪಟಾಯಿಸಿದ ಭೂಮಿ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ Read More »

ಸಂಪುಟ ಪುನಾರಚನೆ, ಆಪರೇಷನ್‌ ಹಸ್ತ ಸಿದ್ದರಾಮಯ್ಯ ಗುರಿ

ಹೈಕಮಾಂಡ್‌ ನಾಯಕರ ಜೊತೆ ಇಂದು ಮಹತ್ವದ ಮಾತುಕತೆ ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಳಿಕ ಬಲಿಷ್ಠರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟಕ್ಕೆ ಸರ್ಜರಿ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದು ದಿಲ್ಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ತೆರಳುತ್ತಿರುವುದರಿಂದ ರಾಜ್ಯದಲ್ಲಿ ಸಂಪುಟ ಪುನಾರಚನೆಯೂ ಸೇರಿದಂತೆ ಸರಕಾರದ ಮಟ್ಟದಲ್ಲಿ ದೊಡ್ಡ ಬದಲಾವಣೆ ನಡೆಯುವ ಬಗ್ಗೆ ಕುತೂಹಲ ಗರಿಗೆದರಿದೆ. ಈಗಾಗಲೇ ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ

ಸಂಪುಟ ಪುನಾರಚನೆ, ಆಪರೇಷನ್‌ ಹಸ್ತ ಸಿದ್ದರಾಮಯ್ಯ ಗುರಿ Read More »

ವೇಣೂರು ಬರ್ಕಜೆಯಲ್ಲಿ ನದಿಗೆ ಇಳಿದ ಮೂವರು ನೀರು ಪಾಲು !

ವೇಣೂರು ಬರ್ಕಜೆ ಎಂಬಲ್ಲಿ ಮೂವರು ಯುವಕರು ನೀರುಪಾಲಾದ ಘಟನೆ ಇಂದು ನಡೆದಿದೆ. ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ನಿಮ್ಮಿತ ಬಂದು ಮೂಡಬಿದ್ರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20) , ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19) , ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ನೀರು ಪಾಲಾದವರು ಸ್ಥಳೀಯ ಕುಟುಂಬದ ಮನೆಗೆ ನೆಂಟರಾಗಿ ಬಂದಿದ್ದ ಮೂವರು ನದಿಗೆ ಸ್ನಾನ ಮಾಡಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೂವರು ಮೃತದೇಹ ನೀರಿನಿಂದ ಹೊರತೆಗೆಯಲಾಗಿದ್ದು.

ವೇಣೂರು ಬರ್ಕಜೆಯಲ್ಲಿ ನದಿಗೆ ಇಳಿದ ಮೂವರು ನೀರು ಪಾಲು ! Read More »

ಕುಸಿದು ಬಿದ್ದು ಅಡ್ಕಾರಿನ ರಾಘವ ಆಚಾರ್ಯ ನಿಧನ

ಸುಳ್ಯ: ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದ ಹಿರಿಯ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದಿದೆ. ಸುಳ್ಯ ಅಡ್ಕಾರಿನ ರಾಘವ ಆಚಾರ್ಯ (65) ಮೃತಪಟ್ಟವರು. ರಾಘವ ಆಚಾರ್ಯ ಅವರು ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಸುಳ್ಯ ತಾಲೂಕು ಕಚೇರಿಯ ಪಡಶಾಲೆಗೆ ಬಂದಿದ್ದರು ಅರ್ಜಿ ಸ್ವೀಕರಿಸಿದ ಅಲ್ಲಿನ ಸಿಬ್ಬಂದಿ ಒಟಿಪಿ ಬರುವವರೆಗೆ ಕುಳಿತುಕೊಳ್ಳಲು ಹೇಳಿದ್ದರು. ಸ್ವಲ್ಪ ಹೊತ್ತಲ್ಲಿ ಒಟಿಪಿ ಬಂದಾಗ ಸಿಬ್ಬಂದಿಯು ಕೌಂಟರ್ ಬಳಿಗೆ ರಾಘವ ಆಚಾರ್ಯ ಅವರನ್ನು ಕರೆದಿದ್ದರು. ಕುಳಿತಲ್ಲಿಂದ ಎದ್ದು

ಕುಸಿದು ಬಿದ್ದು ಅಡ್ಕಾರಿನ ರಾಘವ ಆಚಾರ್ಯ ನಿಧನ Read More »

ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ | ಸಿಸಿಟಿವಿನಿಂದ ಪತ್ತೆ ಹಚ್ಚಿ ಕಳ್ಳನ ಸೆರೆ

ತಿರುಪತಿ: ವೆಂಕಟೇಶ್ವರ ಸ್ವಾಮಿಯ ಸನ್ನಿದಾನವಾದ  ತಿರುಮಲ ತಿರುಪತಿ ಕ್ಷೇತ್ರ ಬಹಳ ಪ್ರಸಿದ್ಧವಾದ ಹಿಂದೂ ದೇಗುಲವಾಗಿದೆ.. ಭಾರತದ ಶ್ರೀಮಂತ ದೇವಸ್ಥಾನವಾಗಿರುವ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ದೇಶ, ವಿದೇಶದಿಂದ ಬರುತ್ತಾರೆ. ಭಕ್ತರಿಗೆ ಅನುಕೂಲವಾಗಲೆಂದು ತಿರುಪತಿ ವೆಂಕಟರಮಣ ಸನ್ನಿದಾನದಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ಆದರೂ ಸಹ ಈ ಕ್ಷೇತ್ರದಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾರೆ. ಈ ಘಟನೆ ನಡೆದ ಬಳಿಕ  ಸಾಕಷ್ಟು ಚರ್ಚೆಗೆ ಒಳಗಾಗಿದೆ,. ತಿರುಮಲ ದೇವರ ದರ್ಶನಕ್ಕೆ ಬಂದ ತಮಿಳುನಾಡಿನ ಭಕ್ತನೊಬ್ಬ ದೇವರ

ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ | ಸಿಸಿಟಿವಿನಿಂದ ಪತ್ತೆ ಹಚ್ಚಿ ಕಳ್ಳನ ಸೆರೆ Read More »

ನ.28 ರಿಂದ 30 : ಪುತ್ತೂರಿನಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ

ಪುತ್ತೂರು: ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಹಾಗೂ ನಿರತ ನಿರಂತ ಬಹುವಚನಂ ಆಶ್ರಯದಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ ನ.28 ರಿಂದ 30 ರ ವರೆಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ. ನ.28 ರ ಗುರುವಾರ ಸಂಜೆ  ಸಾಗರದ  ಕಿನ್ನರ ಮೇಳ ತುಮರಿ ತಂಡದಿಂದ “ಇರುವೆ ಪುರಾಣ” ನಾಟಕ ಪ್ರದರ್ಶಗೊಳ್ಳಲಿದೆ.  ನ.29 ರ ಶುಕ್ರವಾರ ರಂಗಾಯಣ ಕಲಾವಿದ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ವೀರಮಂಗಲ ಪಿಎಂ ಶ್ರೀ ಸರ್ಕಾರಿ ಹಿ.ಪ್ರಾ. ಶಾಲಾ ಮಕ್ಕಳಿಂದ “ರಂಗಗೀತೆಗಳ

ನ.28 ರಿಂದ 30 : ಪುತ್ತೂರಿನಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ Read More »

ಅಂತರ್ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್‌ ಸ್ಪರ್ಧೆ : ಫಿಲೋಮಿನಾ ಕಾಲೇಜಿನ ಸ್ಪಂದನ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದ್ವಿತೀಯ ಬಿಎಸ್ಸಿ ಯ ಸ್ಪಂದನ 2024-25ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ವೈಟ್‌ ಲಿಫ್ಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಸ್ಪರ್ಧೆಯ 45 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಸ್ಪಂದನಾ ಸಂತ ಫಿಲೋಮಿನಾದ ಮಹಿಳಾ ವೈಟ್  ಲಿಫ್ಟರ್ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪದಕವನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಸಂಚಾಲಕ ರೆ.ಫಾ.ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ  ರೆ. ಡಾ.ಆಂಟನಿ ಪ್ರಕಾಶ್ ಮೊಂತೇರೊ ಸೇರಿದಂತೆ ಕಾಲೇಜು ಅಧ್ಯಾಪಕ ವೃಂದ, ಅಧ್ಯಾಪಕೇತರ ವೃಂದ ಹಾಗೂ ವಿದ್ಯಾರ್ಥಿ ಅಭಿನಂದನೆ ಸಲ್ಲಿಸಿದ್ದಾರೆ.

ಅಂತರ್ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್‌ ಸ್ಪರ್ಧೆ : ಫಿಲೋಮಿನಾ ಕಾಲೇಜಿನ ಸ್ಪಂದನ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳಲ್ಲಿ ಪೊಲೀಸರ ಫೋಟೊಶೂಟ್‌

ಸಂವೇದನಾ ರಹಿತ ಪೊಲೀಸರಿಗೆ ಕಠಿಣ ತರಬೇತಿಯ ಶಿಕ್ಷೆ ಶಬರಿಮಲೆ : ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಪರಮ ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಫೋಟೊ ಶೂಟ್‌ ಮಾಡಿರುವುದು ದೇಶವ್ಯಾಪಿ ಆಕ್ರೋಶದ ಕಿಡಿ ಎಬ್ಬಿಸಿದ್ದು, ಈ 23 ಪೊಲೀಸರನ್ನು ಶಬರಿಮಲೆಯ ಬಂದೋಬಸ್ತಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕಠಿಣ ತರಬೇತಿಗೆ ಕಳುಹಿಸುವ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿದೆ. ಭಾನುವಾರ ಸನ್ನಿಧಾನದಲ್ಲಿ ಕರ್ತವ್ಯದಲ್ಲಿದ್ದ 30 ಪೊಲೀಸರು ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ನಿಂತು ಫೋಟೊಶೂಟ್‌ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳಲ್ಲಿ ಪೊಲೀಸರ ಫೋಟೊಶೂಟ್‌ Read More »

error: Content is protected !!
Scroll to Top