ಪವರ್ ಟಿವಿ ರಾಕೇಶ್ ಶೆಟ್ಟಿಗೆ ‌ಮೂರು ತಿಂಗಳ ಜೈಲು ಶಿಕ್ಷೆ

ಬೆಂಗಳೂರು: ಖಾಸಗಿ ವಾಹಿನಿ ಪವರ್ ಟಿವಿಯ ಎಂಡಿ ರಾಕೇಶ್ ಶೆಟ್ಟಿಗೆ ಮೂರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ರಾಕೇಶ್ ಶೆಟ್ಟಿ ಮತ್ತು ‘ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಸಿವಿಲ್‌ ವ್ಯಾಜ್ಯವೊಂದನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಸೆಪ್ಟೆಂಬರ್ 8ರಂದು ನ್ಯಾಯಾಲಯವು ಮಧ್ಯಂತರ ಆದೇಶವೊಂದನ್ನು ನೀಡಿತ್ತು. ಆದರೆ, ಈ ಆದೇಶವನ್ನು ಪ್ರತಿವಾದಿ ರಾಕೇಶ್ ಶೆಟ್ಟಿ ಅವರು […]

ಪವರ್ ಟಿವಿ ರಾಕೇಶ್ ಶೆಟ್ಟಿಗೆ ‌ಮೂರು ತಿಂಗಳ ಜೈಲು ಶಿಕ್ಷೆ Read More »

ಮಹಿಳೆಗೆ ಲೈಂಗಿಕ ಕಿರುಕುಳ, ಲಕ್ಷಾಂತರ ರೂ. ಪಂಗನಾಮ: ಆರೋಪಿ ಹನೀಫ್ ಬಂಧನ

ಬೆಂಗಳೂರು: ಪತಿಯಿಂದ ಮೋಸಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಹೇಳಿ ಆಕೆ ಯಿಂದ 16 ಲಕ್ಷ ರೂ. ದೋಚಿದ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ, ಜಾತಿ ನಿಂದನೆ ಮಾಡಿದ ಕರುನಾಡು ಎಂಬ ಖಾಸಗಿ ಚಾನಲ್‌ನ ಎಂಡಿಯನ್ನು ಡಿಸಿಆರ್‌ಇ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹನೀಫ್ ಎಂದು ಗುರುತಿಸಲಾಗಿದೆ. ಬಿಟಿಎಂ ಲೇಔಟ್ ನಿವಾಸಿ ಮಹಿಳೆಯಿಂದ 16 ಲಕ್ಷ ರೂ. ಪಡೆದು ವಂಚಿಸಿದಲ್ಲದೆ, ಆಕೆಯ ಜಾತಿ ಬಗ್ಗೆ ಅಸಭ್ಯವಾಗಿ ನಿಂದಿಸಿದ್ದ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಸಿ ಎಸ್ಟಿ

ಮಹಿಳೆಗೆ ಲೈಂಗಿಕ ಕಿರುಕುಳ, ಲಕ್ಷಾಂತರ ರೂ. ಪಂಗನಾಮ: ಆರೋಪಿ ಹನೀಫ್ ಬಂಧನ Read More »

ರಬ್ಬರ್‌ ತೋಟದಲ್ಲಿ ಮೂರು ಮರಿಗಳೊಂದಿಗೆ ಚಿರತೆ ಠಿಕಾಣಿ

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಮಚ್ಚಿಮಲೆ ಅನಂತ ಭಟ್ ಎಂಬವರ ರಬ್ಬರ್ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಟ್ಯಾಪಿಂಗ್ ಕೆಲಸದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲಸದವರು ಬೆಳಗ್ಗೆ ತೋಟಕ್ಕೆ ಹೋದಾಗ ಚಿರತೆಗಳು ಕಾಣಿಸಿರುವುದಾಗಿ ತಿಳಿದು ಬಂದಿದೆ. ಅವರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಮುಂಡಾಜೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಓಡಾಟದ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದರು.‌ ಇಲ್ಲೇ ಸಮೀಪದ ಕಾಯರ್ತೋಡಿಯಲ್ಲಿ ನದಿಬದಿಯಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ. ಮರಿಗಳೊಂದಿಗೆ

ರಬ್ಬರ್‌ ತೋಟದಲ್ಲಿ ಮೂರು ಮರಿಗಳೊಂದಿಗೆ ಚಿರತೆ ಠಿಕಾಣಿ Read More »

ಕೊನೆಗೂ ಫಲಿಸುತ್ತಾ ಡಿಕೆಶಿ ಪ್ರಾರ್ಥನೆ?

ಟ್ವೀಟ್‌ನಲ್ಲಿ ಕೊಟ್ಟರು ಡಿ.ಕೆ.ಶಿವಕುಮಾರ್‌ ದೊಡ್ಡದೊಂದು ಸುಳಿವು ಬೆಂಗಳೂರು : ಸಂಕ್ರಾಂತಿ ದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾಲಿಗೆ ಶುಭದಿನವಾಗುತ್ತಾ? ಹೀಗೊಂದು ಕುತೂಹಲ ರಾಜ್ಯದ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರುವುದು ಡಿಕೆಶಿ ಇಂದು ಮಾಡಿರುವ ಒಂದು ಟ್ವೀಟ್‌. ಬುಧವಾರ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಡಿ.ಕೆ ಶಿವಕುಮಾರ್ “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಮತ್ತೊಮ್ಮೆ ಊಹಾಪೋಹಗಳು ದಟ್ಟವಾಗಿದ್ದು,

ಕೊನೆಗೂ ಫಲಿಸುತ್ತಾ ಡಿಕೆಶಿ ಪ್ರಾರ್ಥನೆ? Read More »

ಇಂದು ರಾಜ್‌ಕೋಟ್‌ನಲ್ಲಿ ಭಾರತ-ನ್ಯೂಜಿಲೆಂಡ್‌ ಎರಡನೇ ಪಂದ್ಯ

ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ನ್ಯೂಜಿಲೆಂಡ್‌ ರಾಜ್‌ಕೋಟ್‌: ನ್ಯೂಝಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಕಿರುಸರಣಿಯ ಎರಡನೇ ಪಂದ್ಯ ಇಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಗೆದ್ದಬೀಗಿರುವ ಟೀಮ್‌ ಇಂಡಿಯಾ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ. ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ವಡೋದರಾದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಟೀಮ್ ಇಂಡಿಯಾಗೆ ಯುವ ಆಲ್​ರೌಂಡರ್ ಆಯುಷ್

ಇಂದು ರಾಜ್‌ಕೋಟ್‌ನಲ್ಲಿ ಭಾರತ-ನ್ಯೂಜಿಲೆಂಡ್‌ ಎರಡನೇ ಪಂದ್ಯ Read More »

ಕಾರು-ಬಸ್‌ ಡಿಕ್ಕಿ : ಮಗು ಸಹಿತ ಮೂವರು ಸಾವು

ಶಿವಮೊಗ್ಗ: ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ ಭೀಕರ ಅಪಘಾತ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕ್ರಾಸ್ ಬಳಿ ನಡೆದಿದೆ. ಮಗು, ಕಾರಿನ ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ

ಕಾರು-ಬಸ್‌ ಡಿಕ್ಕಿ : ಮಗು ಸಹಿತ ಮೂವರು ಸಾವು Read More »

ಇಂದು ಪವಿತ್ರ ಮಕರ ಜ್ಯೋತಿ ದರ್ಶನ : ಶಬರಿಮಲೆಯಲ್ಲಿ ಸೇರಿದ್ದಾರೆ ಲಕ್ಷಾಂತರ ಅಯ್ಯಪ್ಪ ಭಕ್ತರು

ಈ ಸಲ ದಾಖಲೆ ಸಂಖ್ಯೆಯ ಭಕ್ತರಿಂದ ಶಬರಿಮಲೆ ಯಾತ್ರೆ ; ಕಾಣಿಕೆ ಸಂಗ್ರಹ ಏರಿಕೆ ಶಬರಿಮಲೆ : ಮಕರ ಸಂಕ್ರಾಂತಿಯ ಪವಿತ್ರ ದಿನವಾದ ಇಂದು ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಮಕರ ಜ್ಯೋತಿ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ಕಾಯುತ್ತಿದ್ದಾರೆ. ಮಕರ ಜ್ಯೋತಿ ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸಾಗರೋಪಾದಿಯಲ್ಲಿ ಇನ್ನೂ ಆಗಮಿಸುತ್ತಲೇ ಇದ್ದಾರೆ. ಮಕರ ಜ್ಯೋತಿ ದರ್ಶನವಾಗುವುದರೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾಗುತ್ತಾರೆ. ಶಬರಿಮಲೆ ಯಾತ್ರೆ ಇನ್ನೂ ಕೆಲವು ದಿನ ನಡೆಯುವುದಾದರೂ ಹೆಚ್ಚಿನವರು ಮಕರ

ಇಂದು ಪವಿತ್ರ ಮಕರ ಜ್ಯೋತಿ ದರ್ಶನ : ಶಬರಿಮಲೆಯಲ್ಲಿ ಸೇರಿದ್ದಾರೆ ಲಕ್ಷಾಂತರ ಅಯ್ಯಪ್ಪ ಭಕ್ತರು Read More »

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಶತ ಜಯಘೋಷ ಪಥಸಂಚಲನ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಈ ಬಾರಿಯೂ ಕೇಸರಿ ಸಂತ ವಿವೇಕಾನಂದರ ಜಯಂತಿಯನ್ನು ‌ವಿಶೇಷವಾಗಿ ಆಚರಿಸಿದ್ದು, ಆ ಪ್ರಯುಕ್ತ ಇಂದು ಸಂಘದ ಸಮೂಹ ಸಂಸ್ಥೆಗಳು ಶತ ಜಯಘೋಷ್ ಪರಿಕಲ್ಪನೆಯಡಿ ಪಥಸಂಚಲನ ನಡೆಸಿದವು. ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲಾ ಶಾಲೆಗಳ ಸುಮಾರು 1500 ವಿದ್ಯಾರ್ಥಿಗಳು ಈ ವಿಶೇಷ ಪಥಸಂಚಲನದಲ್ಲಿ ಭಾಗವಹಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್. ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತೂರಿನ ಅಟಲ್ ಉದ್ಯಾನ ಕೊಂಬೆಟ್ಟು‌ವಿನಲ್ಲಿ

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಶತ ಜಯಘೋಷ ಪಥಸಂಚಲನ Read More »

ಟ್ಯಾಂಕರ್‌ಗೆ ಗೂಡ್ಸ್ ವಾಹನ ಢಿಕ್ಕಿ

ಕಲ್ಲಡ್ಕ: ಗೂಡ್ಸ್ ವಾಹನವೊಂದು ನಿಲ್ಲಿಸಿದ್ದ ಟ್ಯಾಂಕರ್‌ಗೆ ಗುದ್ದಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಹೊಟೇಲ್ ಸಮುದ್ರ ಬಳಿ ಈ ಘಟನೆ ನಡೆದಿದೆ. ಪರಿಣಾಮ ಗೂಡ್ಸ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ದೊಡ್ಡ ಮಟ್ಟದ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಟ್ಯಾಂಕರ್‌ಗೆ ಗೂಡ್ಸ್ ವಾಹನ ಢಿಕ್ಕಿ Read More »

ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?

ನವದೆಹಲಿ: ಪಾಕಿಸ್ತಾನದ ಗಡಿ ಭಾಗಗಳಲ್ಲಿ ಭಾರತದ ಎಚ್ಚರಿಕಾ ಕಣ್ಗಾವಲು ನಿರಂತರವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ತಿಳಿಸಿದ್ದಾರೆ. ಭಾರತೀಯ ಸೇನಾ ದಿನಾಚರಣೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು, ದೇಶದ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಯೋತ್ಪಾದನೆಯ ‌ವಿರುದ್ಧದ ಕಾರ್ಯಾಚರಣೆ ಮತ್ತು ಸೇನೆಯ ಭವಿಷ್ಯದ ಯೋಜನೆಗಳ ಕುರಿತು ಅವರು ಸ್ಪಷ್ಟ ಮಾಹಿತಿ ನೀಡಿರುವುದಾಗಿದೆ. ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಸಮೀಪ ಎಂಟು ಭಯೋತ್ಪಾದಕ ಶಿಬಿರಗಳು ನಡೆಯುತ್ತಿರುವ ಮಾಹಿತಿ ಇದ್ದು, ಅವುಗಳ ಮೇಲೆ

ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ? Read More »

error: Content is protected !!
Scroll to Top