ಮುಳಿಯ ಜ್ಯುವೆಲ್ಸ್ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮ

ಬೆಂಗಳೂರು : ಮಕ್ಕಳಿಗೆ ಕರ್ನಾಟಕದ ವಿವಿಧ ನೃತ್ಯ  ಸ್ಪರ್ಧೆಯ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಹೋಟೆಲ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ ಮಾತನಾಡಿ ” ಮಕ್ಕಳನ್ನು ಹುರಿದುಂಬಿಸುವ ಈ ಬಗೆಯ ಕಾರ್ಯಕ್ರಮ ತುಂಬಾ ಒಳ್ಳೆಯದು. ಹಾಗೆಯೆ ಹೋಟೆಲ್ ಕಾರ್ಮಿಕರಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಾಣಬಹುದು” ಎಂದರು. ಇನ್ನೋರ್ವ ಅಥಿತಿ, ಮಿಸೆಸ್ ಯುನಿವರ್ಸ ಶ್ರೀಮತಿ ಸತ್ಯವತಿ ಬಸವರಾಜು ಶುಭ ಹಾರೈಸಿದರು.  ಅಧ್ಯಕ್ಷ ಸ್ಥಾನದಲ್ಲಿ ಮಾತನಾಡಿದ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ “ಮುಳಿಯದ ವಿಶೇಷ ಡಿಸೈನ್ಗಳ ಮಾರಾಟದ […]

ಮುಳಿಯ ಜ್ಯುವೆಲ್ಸ್ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮ Read More »

ಪುತ್ತೂರು ಬಿಜೆಪಿ 144ನೇ  ಬೂತ್‍ನ ನೂತನ ಅಧ್ಯಕ್ಷರಾಗಿ ಚಿದಾನಂದ ಗೌಡ, ಕಾರ್ಯದರ್ಶಿಯಾಗಿ ರಾಜ್ ಕಿರಣ್ ಆಯ್ಕೆ

ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 144ನೇ ಬೂತ್‍ನ ನೂತನ ಅಧ್ಯಕ್ಷರಾಗಿ ಚಿದಾನಂದ ಗೌಡ, ಕಾರ್ಯದರ್ಶಿಯಾಗಿ ರಾಜ್ ಕಿರಣ್ ಆಯ್ಕೆಯಾಗಿದ್ದಾರೆ. ಬಜಪಲ ಶರತ್ ಚಂದ್ರ ಬೈಪಡಿತಯ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ  ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನೂತನ ಸದಸ್ಯರಾಗಿ ಪುಷ್ಪಾವತಿ, ಧನಂಜಯ ಬಜಪಲ, ಶರತ್ ಚಂದ್ರ ಬೈಪಡಿತ್ತಾಯ , ಹರೀಶ್ ನಾಯಕ್, ಪ್ರವೀಣ್ ನಾಯಕ್, ದೇವಿ

ಪುತ್ತೂರು ಬಿಜೆಪಿ 144ನೇ  ಬೂತ್‍ನ ನೂತನ ಅಧ್ಯಕ್ಷರಾಗಿ ಚಿದಾನಂದ ಗೌಡ, ಕಾರ್ಯದರ್ಶಿಯಾಗಿ ರಾಜ್ ಕಿರಣ್ ಆಯ್ಕೆ Read More »

200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಸಂಭವಿಸಿದ ಅವಘಡ ಲಖನೌ: ಉತ್ತರ ಪ್ರದೇಶದ ವಾರಣಾಸಿಯ ಕ್ಯಾಂಟ್ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿ 200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿದೆ. ಶನಿವಾರ ಮುಂಜಾನೆ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸುಮಾರು 12 ಅಗ್ನಿಶಾಮಕ ದಳ ವಾಹನಗಳು, ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೆ

200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ Read More »

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ  ವಸ್ತು ಪ್ರದರ್ಶನ ಮಂಟಪದಲ್ಲಿ ಪುತ್ತೂರು  ಬೊಳುವಾರು  ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಸಂಭ್ರಮದ 15ನೇ ಸರಣಿ  ತಾಳಮದ್ದಳೆ “ಶರಸೇತುಬಂಧ ಜರಗಿತು. ಭಾಗವತರಾಗಿ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ, ಮದ್ದಲೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಪಿ.ಜಿ.ಜಗನ್ನಿವಾಸ ರಾವ್, ಮುಮ್ಮೇಳದಲ್ಲಿ ಶುಭಾ ಅಡಿಗ (ಹನೂಮಂತ), ಪ್ರೇಮಲತಾರಾವ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ),  ಹರಿಣಾಕ್ಷಿ .ಜೆ.ಶೆಟ್ಟಿ (ವೃದ್ಧ ಬ್ರಾಹ್ಮಣ) ಭಾಗವಹಿಸಿದ್ದರು. ಸಂಘದ ನಿರ್ದೇಶಕ ಭಾಸ್ಕರ

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ Read More »

ಇಂದು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಫೆಂಗಲ್‌ ಚಂಡಮಾರುತ

ಬೆಂಗಳೂರು ಸಹಿತ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಫೆಂಗಲ್‌ ಚಂಡಮಾರುತ ತೀವ್ರತೆ ಪಡೆದುಕೊಂಡಿದ್ದು, ಶನಿವಾರ ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶನಿವಾರ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗುವ

ಇಂದು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಫೆಂಗಲ್‌ ಚಂಡಮಾರುತ Read More »

ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿವ್ಯಾಂಗರ ಅನುದಾನ ಶೇ.80 ಕಡಿತ

ಈ ವರ್ಷ ದಿವ್ಯಾಂಗರಿಗೆ ಬರೀ 10 ಕೋ. ರೂ. ಅನುದಾನ ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರ ದಿವ್ಯಾಂಗರಿಗೆ ಅನುದಾನ ಕಡಿತ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ ಶೇ.80ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಇದನ್ನೂ ಓದಿ: ಸಭೆಗಳನ್ನು ರದ್ದು ಮಾಡಿ ದಿಢೀರ್‌ ಸ್ವಗ್ರಾಮಕ್ಕೆ ತೆರಳಿದ ಏಕನಾಥ್‌ ಶಿಂಧೆ ಕರ್ನಾಟಕ ಸರ್ಕಾರವು ದಿವ್ಯಾಂಗರಿಗಾಗಿ ಮೀಸಲಾಗಿದ್ದ ನಿಧಿಯಲ್ಲಿ ಶೇ.80 ಕಡಿತ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಮತ್ತು

ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿವ್ಯಾಂಗರ ಅನುದಾನ ಶೇ.80 ಕಡಿತ Read More »

 ಗುರುಪ್ರಕಾಶ್‍ ಅನಾರೋಗ್ಯದಿಂದ ನಿಧನ

ಪುತ್ತೂರು : ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪ್ರಕಾಶ್‍ ನಿಧನರಾಗಿದ್ದಾರೆ. ಪುತ್ತೂರು ಎಪಿಎಂಸಿ ರಸ್ತೆ ನಿವಾಸಿ ಕೆಲ ಸಮಯದಿಂದ ಅನಾರೋಗ್ಯವಾಗಿದ್ದರು. ಮೃತರು ತಾಯಿ , ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

 ಗುರುಪ್ರಕಾಶ್‍ ಅನಾರೋಗ್ಯದಿಂದ ನಿಧನ Read More »

ಬಸ್‌ ಪಲ್ಟಿ: 12ಕ್ಕೇರಿದ ಸಾವಿನ ಸಂಖ್ಯೆ

ಪ್ರಧಾನಿ ನರೇಂದ್ರ ಮೋದಿ ವಿಷಾದ ಮುಂಬಯಿ : ಮಹಾರಾಷ್ಟ್ರ ಸಾರಿಗೆ ಬಸ್ಸೊಂದು ಪಲ್ಟಿಯಾಗಿ 12 ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಭಂಡಾರ ಡಿಪ್ಪೊದಿಂದ ಗೊಂಡಿಯಾಗೆ ತೆರಳುತ್ತಿದ್ದ ಈ ವೇಳೆ ಗೊಂಡಿಯಾ–ಅರ್ಜುನಿ ರಸ್ತೆಯ ಬಿಂದ್ರವನ ಟೋಲಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 12 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗೊಂಡಿಯಾ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ

ಬಸ್‌ ಪಲ್ಟಿ: 12ಕ್ಕೇರಿದ ಸಾವಿನ ಸಂಖ್ಯೆ Read More »

ಹರೇಕಳದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ | ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ : ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಹರೇಕಳದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದು,ಗಾಯಾಳುವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಂಡರು‌. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹರೇಕಳ ಬಿಜೆಪಿ ಬೂತ್ ಅಧ್ಯಕ್ಷ ಶರತ್ ಕುಮಾರ್ ಗಟ್ಟಿ ಅವರ ಮೇಲೆ ಪಂಚಾಯತ್ ನೀರಿನ ಕ್ಷುಲ್ಲಕ ಕಾರಣಕ್ಕಾಗಿ ಮಸೀದಿಯಿಂದ ಬಂದ ಸರಿ ಸುಮಾರು 15-20 ಜನರ ತಂಡ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಹಲ್ಲೆಕೋರ ಮತಾಂತರನ್ನು ತಡೆಯಲು ಬಂದ ಅವರ

ಹರೇಕಳದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ | ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ : ಕಿಶೋರ್ ಕುಮಾರ್ ಪುತ್ತೂರು Read More »

ಎಲ್ಲಿ ಹೋದರು ಅಳಿದುಳಿದ ನಕ್ಸಲರು?

ಮರಳಿ ಕೇರಳದ ಕಾಡು ಸೇರಿಕೊಂಡಿರುವ ಶಂಕೆ ಕಾರ್ಕಳ : ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಅಳಿದುಳಿದ ನಕ್ಸಲರೆಲ್ಲ ಮರಳಿ ಕೇರಳದತ್ತ ಪಲಾಯನ ಮಾಡಿರುವ ಶಂಕೆಯಿದೆ. ವಿಕ್ರಂ ಗೌಡ ಎನ್‌ಕೌಂಟರ್‌ ಆದ ಬಳಿಕ ಕಾರ್ಕಳ, ಚಿಕ್ಕಮಗಳೂರು ಮತ್ತಿತರೆಡೆ ನಕ್ಸಲ್‌ ನಿಗ್ರಹ ಪಡೆಯವರು ಪೊಲೀಸರೊಂದಿಗೆ ತೀವ್ರ ಹುಡುಕಾಟ ನಡೆಸಿದರೂ ನಕ್ಸಲರ ಜಾಡು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕಾಡಿನಿಂದ ನಾಡಿಗಿಳಿದು ವಾಹನದ ಮೂಲಕ ಪರಾರಿಯಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಸಂಪಾಜೆ, ಕೊಪ್ಪ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಹಾಕಿ ತಪಾಸಣೆಯನ್ನೂ

ಎಲ್ಲಿ ಹೋದರು ಅಳಿದುಳಿದ ನಕ್ಸಲರು? Read More »

error: Content is protected !!
Scroll to Top