ಕಾಣಿಯೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 3ನೇ ವರ್ಷಕ್ಕೆ ಪಾದಾರ್ಪಣೆ | ಸಂಘದ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ
ಕಾಣಿಯೂರು: ಕಾಣಿಯೂರು ರಾಶಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇಂದು 3ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಪಾದಾರ್ಪಣೆ ಅಂಗವಾಗಿ ಸಂಘದ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಪ್ರವೀಣ್ ಕುಂಟ್ಯಾನ, ಸತೀಶ್ ಪಾಂಬಾರು, ತೇಜಸ್ವಿನಿ ಶೇಖರ ಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ […]










