ಸುಳ್ಯ : ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು! ಕದ್ದೋಯ್ಯುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ

ಸುಳ್ಯ :  ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ  ಬ್ಯಾಗ್ ಮತ್ತು ಶೂ ಕಳ್ಳತನ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ.  ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದು, ಮಲಗಿದ್ದ ವೇಳೆ ಪ್ರಯಾಣಿಕ ನಿದ್ದೆಯಲ್ಲಿದ್ದಾಗ ಕಳ್ಳ ಶೂ ಮತ್ತು ಬ್ಯಾಗನ್ನು  ಕದ್ದು ತಪ್ಪಿಸಿಕೊಂಡಿದ್ದಾನೆ. ಕದಿಯುತ್ತಿದ್ದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ಘಟನಾನುಸಾರವಾಗಿ ರಾತ್ರಿ ಪಾಳಿಯಲ್ಲಿ ವಾಚ್ ಮ್ಯಾನ್ ಇಲ್ಲದಿರುವುದರಿಂದ ನಿರಂತರವಾಗಿ ಕದಿಯುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದು, ಬಸ್ ನಿಲ್ದಾಣದ ಅಂಗಡಿ ಮಾಲಕರು […]

ಸುಳ್ಯ : ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು! ಕದ್ದೋಯ್ಯುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ Read More »

ಅಪ್ರಾಪ್ತೆ ಯುವತಿಯ ಮೇಲೆ ಅತ್ಯಾಚಾರ | ಆರೋಪಿಗೆ ಶರತ್ತುಬದ್ಧ ಜಾಮೀನು

ಕಾಣಿಯೂರು: ಅಪ್ರಾಪ್ತೆ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನಿಗೆ ಪುತ್ತೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಕಡಬ ಪೋಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಅಪ್ರಾಯಸ್ಥ ಯುವತಿಯೋರ್ವಳ ಮೇಲೆ ಅದೇ ಗ್ರಾಮದ ನಂದನ್ ಎಂ.ಇ ಎಂಬ ಯುವಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧಅ. 8ರಂದು ಕಡಬ ಪೋಲೀಸ್ ಠಾಣೆಯಲ್ಲಿ Crime No :79/2024  ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376 (3), 376(2)(n), 506 IPC  ಮತ್ತು POCSO

ಅಪ್ರಾಪ್ತೆ ಯುವತಿಯ ಮೇಲೆ ಅತ್ಯಾಚಾರ | ಆರೋಪಿಗೆ ಶರತ್ತುಬದ್ಧ ಜಾಮೀನು Read More »

ನಾಳೆ (ಡಿ.23) : ಅರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯಿ ದೈವಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

ಕಡಬ: ಕಡಬ ಗ್ರಾಮದ ಸವಣೂರು ಅರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಡಿ.23 ಸೋಮವಾರ ಬೆಳಿಗ್ಗೆ 11.30 ಕ್ಕೆ ನಡೆಯಲಿದೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ

ನಾಳೆ (ಡಿ.23) : ಅರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯಿ ದೈವಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ Read More »

ಉಪಲೋಕಾಯುಕ್ತ ವೀರಪ್ಪ ಬಿ. ಪುತ್ತೂರಿಗೆ ಭೇಟಿ  | ಹಾರಾಡಿ ವಿದ್ಯಾರ್ಥಿನಿಯರ ನಿಲಯದ ಅವ್ಯವಸ್ಥೆ ಕಂಡು ಗರಂ ಆದ ಉಪಲೋಕಾಯುಕ್ತರು

ಪುತ್ತೂರು: ಉಪಲೋಕಾಯುಕ್ತ ವೀರಪ್ಪ ಬಿ. ಅವರು ಭಾನುವಾರ ಪುತ್ತೂರು ಪುತ್ತೂರು ಸರ್ಕಾರಿ ಆಸ್ಪತ್ರೆ, ಹಾರಾಡಿ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿನಿ‌ಯರ ನಿಲಯ, ಬೀರಮಲೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಹಾರಾಡಿ ವಿದ್ಯಾರ್ಥಿನಿಯರ ನಿಲಯಕ್ಕೆ ಭೇಟಿ ನೀಡಿದ ಅವರು, ಸರಿಯಾದ ಸಮಯಕ್ಕೆ ಸಿಗದ ಊಟದ ವ್ಯವಸ್ಥೆ, ಹಾಸ್ಟೆಲ್ ಸುತ್ತ ಸುತ್ತು ಬೇಲಿ ಇಲ್ಲದಿರುವುದು, ಗ್ಯಾಸ್ ಸಿಲಿಂಡರ್ ಇಡಲು ಪ್ರತ್ಯೇಕ ಕೊಠಡಿ ಇಲ್ಲದಿರುವುದು, ವಿದ್ಯಾರ್ಥಿನಿಯರಿಗೆ ಓದಲು ಸರಿಯಾದ ಲೈಬ್ರೇರಿ ವ್ಯವಸ್ಥೆ ಇಲ್ಲದನ್ನು ಕಂಡು ನಿಲಯದ ವಿದ್ಯಾರ್ಥನಿಯರಿಂದ ದೂರು ಪಡೆದುಕೊಂಡು ತಕ್ಷಣ

ಉಪಲೋಕಾಯುಕ್ತ ವೀರಪ್ಪ ಬಿ. ಪುತ್ತೂರಿಗೆ ಭೇಟಿ  | ಹಾರಾಡಿ ವಿದ್ಯಾರ್ಥಿನಿಯರ ನಿಲಯದ ಅವ್ಯವಸ್ಥೆ ಕಂಡು ಗರಂ ಆದ ಉಪಲೋಕಾಯುಕ್ತರು Read More »

ಪೆರ್ಲ ಅಂಗಡಿ ಕಟ್ಟಡವೊಂದರಲ್ಲಿ ತಡ ರಾತ್ರಿ ಅಗ್ನಿ ಅವಘಡ | ಹೊತ್ತಿ ಉರಿದ ಐದು ಅಂಗಡಿಗಳು

ಪೆರ್ಲ : ಪೇಟೆಯ ಕಟ್ಟಡವೊಂದಕ್ಕೆ ನಿನ್ನೆ ತಡ ರಾತ್ರಿ ಬೆಂಕಿ ಹೊತ್ತಿದ್ದು, ಐದು ಅಂಗಡಿಗಳು ಸಂಪೂರ್ಣವಾಗಿ  ಉರಿದು ನಾಶವಾದ ಘಟನೆ ನಡೆದಿದೆ. ಇಲ್ಲಿನ ಬದಿಯಡ್ಕ ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೂಜಾ ಫ್ಯಾನ್ಸಿ, ಪೈಗಳ ಕ್ಲೋತ್ ಸ್ಟೋರ್ ಸಹಿತ ಪೇಪರ್ ವಿತರಣ ಸೆಂಟರ್,ಪ್ರವೀಣ್ ಆಟೋಮೊಬೈಲ್ಸ್,ಸದಾತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಎಂಬಿ ಅಂಗಡಿ ಮುಂಗಟ್ಟು ಈ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದೂ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ಮಧ್ಯರಾತ್ರಿ 12 ಗಂಟೆಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಸೇರಿದ ಬಳಿಕ ಅಗ್ನಿಶಾಮಕ ದಳಕ್ಕೆ

ಪೆರ್ಲ ಅಂಗಡಿ ಕಟ್ಟಡವೊಂದರಲ್ಲಿ ತಡ ರಾತ್ರಿ ಅಗ್ನಿ ಅವಘಡ | ಹೊತ್ತಿ ಉರಿದ ಐದು ಅಂಗಡಿಗಳು Read More »

ಜನ ಮರೆತರೂ ಸೋಷಿಯಲ್‌ ಮೀಡಿಯಾ ಮರೆಯುವುದಿಲ್ಲ

ಲಕ್ಷ್ಮೀ-ರವಿ ರಾದ್ಧಾಂತದಲ್ಲಿ ಮುನ್ನೆಲೆಗೆ ಬಂದ ಹಳೆ ಪ್ರಕರಣಗಳು ಕಾರ್ಕಳ: ಸಾರ್ವಜನಿಕರ ನೆನಪಿನ ಶಕ್ತಿಗೆ ಬಹಳ ಕಡಿಮೆ ಆಯಸ್ಸು. ಹೀಗಾಗಿ ರಾಜಕಾರಣಿಗಳು ಏನೇ ಮಾಡಿದರೂ, ಮಾತನಾಡಿದರೂ ಕೆಲವೇ ಸಮಯದಲ್ಲಿ ಜನ ಅದನ್ನು ಮರೆತುಬಿಡುತ್ತಾರೆ. ಹೀಗಾಗಿ ರಾಜಕೀಯ ನಾಯಕರು ಏನೇನಲ್ಲ ಮಾಡಿಯೂ ದಕ್ಕಿಸಿಕೊಳ್ಳುತ್ತಾರೆ ಎನ್ನುವುದು ಭಾರತದ ರಾಜಕೀಯದ ಮಟ್ಟಿಗೆ ಸಾರ್ವತ್ರಿಕವಾಗಿರುವ ಒಂದು ಅಭಿಪ್ರಾಯ ಮತ್ತು ಇದು ನಿಜವೂ ಹೌದು. ಆದರೆ ಈ ಸೋಷಿಯಲ್‌ ಮೀಡಿಯಾ ಯುಗದಲ್ಲಿ ಜನರು ಮರೆತರೂ ಸೋಷಿಯಲ್‌ ಮೀಡಿಯಾ ಮಾತ್ರ ಮರೆಯುವುದಿಲ್ಲ. ಎಲ್ಲ ಹಳೆ ವೀಡಿಯೊ, ದಾಖಲೆಗಳನ್ನೆಲ್ಲ

ಜನ ಮರೆತರೂ ಸೋಷಿಯಲ್‌ ಮೀಡಿಯಾ ಮರೆಯುವುದಿಲ್ಲ Read More »

ಶಬರಿಮಲೆ : ಅಯ್ಯಪ್ಪನ ಪವಿತ್ರ ತಂಗ ಅಂಗಿ ಮೆರವಣಿಗೆ ಆರಂಭ

ಡಿ.25ರಂದು ಮಂಡಲ ಪೂಜೆಗೆ ಸನ್ನಿಧಾನ ತಲುಪಲಿರುವ ಪವಿತ್ರ ಆಭರಣ ಶಬರಿಮಲೆ : ಶಬರಿಮಲೆ ವಾರ್ಷಿಕ ಯಾತ್ರೆಯ ಒಂದು ಪ್ರಮುಖ ಅಂಗವಾಗಿರುವ ತಂಗ ಅಂಗಿಯ ಮೆರವಣಿಗೆ ಇಂದು ಶುರುವಾಗಿದೆ. ಪತ್ತನತಿಟ್ಟಂ ಜಿಲ್ಲೆಯ ಆರಣ್ಮುಲದಲ್ಲಿ ಪಾರ್ಥಸಾರಥಿ ದೇಗುಲದಿಂದ ಸಕಲ ವಿಧಿವಿಧಾನಗಳೊಂದಿಗೆ ಅಯ್ಯಪ್ಪನ ಪವಿತ್ರ ಆಭರಣಗಳನ್ನು ಮಂಡಲ ಪೂಜೆಗಾಗಿ ಶಬರಿಮಲೆಗೆ ತರುವ ಯಾತ್ರೆ ಇದು.ತಂಗ ಅಂಗಿ ಅಥವಾ ಪವಿತ್ರ ಆಭರಣಗಳನ್ನು ಮಂಡಲ ಪೂಜೆ ಸಂದರ್ಭದಲ್ಲಿ ಅಯ್ಯಪ್ಪನಿಗೆ ತೊಡಿಸಿ ಅಲಂಕರಿಸಲಾಗುತ್ತದೆ. ಡಿ.25ರಂದು ಈ ಮೆರವಣಿಗೆ ಸನ್ನಿಧಾನ ತಲುಪಲಿದೆ. ಈ ಒಡವೆಗಳನ್ನು ತೊಡಿಸಿದ ಬಳಿಕ

ಶಬರಿಮಲೆ : ಅಯ್ಯಪ್ಪನ ಪವಿತ್ರ ತಂಗ ಅಂಗಿ ಮೆರವಣಿಗೆ ಆರಂಭ Read More »

ಸಾಫ್ಟ್‌ವೇರ್‌ ಇಂಜಿನಿಯರನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 11.83 ಕೋ ರೂ. ಲೂಟಿ

ಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಮೊತ್ತ ಲೂಟಿಯಾದ ಪ್ರಕರಣ ಬೆಂಗಳೂರು : ನಗರದ 39 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರನ್ನು ಒಂದು ತಿಂಗಳ ಕಾಲ ಡಿಜಿಟಲ್‌ ಅರೆಸ್ಟ್‌ ಮಾಡಿ ಸೈಬರ್‌ ವಂಚಕರು ಬರೋಬ್ಬರಿ 11.83 ಕೋಟಿ ರೂ.ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ವಂಚನೆಯಲ್ಲಿ ಅತ್ಯಧಿಕ ಮೊತ್ತ ಕಳೆದುಕೊಂಡ ದೇಶದ ಮೊದಲ ಪ್ರಕರಣ ಇದಾಗಿದೆ. ಈ ಕುರಿತು ಸಂತ್ರಸ್ತ ಟೆಕ್ಕಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸೈಬರ್‌ ಠಾಣೆ

ಸಾಫ್ಟ್‌ವೇರ್‌ ಇಂಜಿನಿಯರನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 11.83 ಕೋ ರೂ. ಲೂಟಿ Read More »

ರಿಕ್ಷಾ ಪಲ್ಟಿ : ಚಾಲಕ ಮೃತ್ಯು

ಪುತ್ತೂರು: ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಪುತ್ತೂರು ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬೊಳ್ಳಾರ್ ನಿವಾಸಿ ಸೂರ್ಯ ಮೃತಪಟ್ಟ ಆಟೋ ಚಾಲಕ. ಇಂದು ಮುಂಜಾನೆ ಬೈಪಾಸ್ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದು ಆಟೋ ಪಲ್ಟಿಯಾಗಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ವುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ರಿಕ್ಷಾ ಪಲ್ಟಿ : ಚಾಲಕ ಮೃತ್ಯು Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ “ಸಂಭ್ರಮರಶ್ಮಿ” | ಯುವಜನಾಂಗ ಮೌಲ್ಯಭರಿತರಾದಾಗ ಭಾರತ ವಿಶ್ವಗುರು : ಡಾ.ಹೆಚ್ ಮಾಧವ ಭಟ್

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ “ಸಂಭ್ರಮರಶ್ಮಿ” ಶೀಂಟೂರು ನಾರಾಯಣ ರೈ ತೆರೆದ ಸಭಾಂಗಣದಲ್ಲಿ ಜರಗಿತು. ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಹೆಚ್ ಮಾಧವ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೇಟೆ ಪಟ್ಟಣದಲ್ಲಿರುವ ಸಿಗುವಂತ ಉನ್ನತ ಮಟ್ಟದ ಶಿಕ್ಷಣ ಈ ಹಳ್ಳಿಯ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲು ಕಾರಣಕರ್ತರಾದ ಶೀಂಟೂರು ನಾರಾಯಣ ರೈಯವರನ್ನು ಇಂದು ನಾವು ಸ್ಮರಿಸಬೇಕು. ಅವರ ಕನಸ್ಸನ್ನು ನನಸಾಗಿಸಿ ಶಿಕ್ಷಣ ಸಂಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡಿದವರು ಸವಣೂರು ಸೀತಾರಾಮ ರೈಯವರು. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ಅತ್ಯಂತ

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ “ಸಂಭ್ರಮರಶ್ಮಿ” | ಯುವಜನಾಂಗ ಮೌಲ್ಯಭರಿತರಾದಾಗ ಭಾರತ ವಿಶ್ವಗುರು : ಡಾ.ಹೆಚ್ ಮಾಧವ ಭಟ್ Read More »

error: Content is protected !!
Scroll to Top