ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳಿ : ವಸಂತ ವೀರಮಂಗಲ | ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಕಾರ್ಯಕ್ರಮ
ಪುತ್ತೂರು: ಅವಕಾಶಗಳನ್ನು ಧನಾತ್ಮಕವಾಗಿ ಸ್ವೀಕರಿಸಿದವರು ಜೀವನದಲ್ಲಿ ಸಾಧಕರಾಗುತ್ತಾರೆ ಮತ್ತು ಜೀವನೋತ್ಸಾಹದಿಂದ ಇರುತ್ತಾರೆ ಎಂದು ಜೇಸಿ ತರಬೇತುದಾರ ವಸಂತ ವೀರಮಂಗಲ ಹೇಳಿದರು. ಅವರು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಜೊತೆ ವ್ಯಕ್ತಿತ್ವ ವಿಕಸನ ಕುರಿತಾಗಿ ಮಾತನಾಡಿದರು. ಅನೇಕ ಉದಾಹರಣೆಗಳು ನಮ್ಮನ್ನು ತೊಡಗಿಸಿಕೊಳ್ಳಲು ಅವಕಾಶ ನೀಡಿದೆ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಂಡ ಸಾಧಕರು ನಮ್ಮ ಸ್ಥಳೀಯವಾಗಿಯೇ ಇದ್ದಾರೆ. ಹಾಗಾಗಿ ನಮ್ಮಲ್ಲಿ ಇಚ್ಛಾಶಕ್ತಿ ಕೊರತೆಯಾಗಬಾರದು ಎಂದು ಹೇಳಿದರು. […]










