ಜೋಡಿ ಕೊಲೆ ಅಪರಾಧಿಗೆ ಜೀವಾವಧಿ ಕಾರಾಗೃಹ ವಾಸ

ಮರದ ಗೆಲ್ಲು ಕಡಿಯುವ ವಿಚಾರವಾಗಿ ನೆರೆಮನೆಯ ದಂಪತಿಯನ್ನು ಸಾಯಿಸಿದ್ದ ಅಪರಾಧಿ ಮಂಗಳೂರು : ಮೂಲ್ಕಿ ತಾಲೂಕಿನ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಅಗಿಂದಕಾಡು ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ಅಲ್ಫೋನ್ಸ್ ಸಲ್ದಾನ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ. 2020ರ ಎಪ್ರಿಲ್ 29ರಂದು ಆರೋಪಿ ಮನೆ ಸಮೀಪದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಮತ್ತವರ […]

ಜೋಡಿ ಕೊಲೆ ಅಪರಾಧಿಗೆ ಜೀವಾವಧಿ ಕಾರಾಗೃಹ ವಾಸ Read More »

ಕಚೇರಿಯಲ್ಲಿ ರಾಸಲೀಲೆ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ಶಿಕ್ಷೆ!

ವಿಡಿಯೋ ಬಹಿರಂಗವಾದ ಬಳಿಕ ತೀವ್ರ ಮುಜುಗರ ಅನುಭವಿಸುತ್ತಿರುವ ಗೃಹ ಇಲಾಖೆ ಬೆಂಗಳೂರು: ಕಚೇರಿಯ ಒಳಗೆ ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಬಹಿರಂಗವಾದ ಬೆನ್ನಿಗೆ ಡಿಜಿಪಿ ರಾಮಚಂದ್ರ ರಾವ್‌ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ನಟಿ ರನ್ಯಾರಾವ್ ಒಳಗೊಂಡ ವಿದೇಶದಿಂದ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲೂ ಡಿಜಿಪಿ ರಾಮಚಂದ್ರ ರಾವ್‌ ಹೆಸರು ಬಲವಾಗಿ ಕೇಳಿಬಂದಿತ್ತು. ಆಗಲೂ ಸರ್ಕಾರ ಅವರನ್ನು ಕೆಲದಿನಗಳ ಮಟ್ಟಿಗೆ ರಜೆ ಮೇಲೆ ಕಳುಹಿಸಿ ಕೈತೊಳೆದುಕೊಂಡಿತ್ತು. ನಾಗರಿಕ ಹಕ್ಕು ಜಾರಿ

ಕಚೇರಿಯಲ್ಲಿ ರಾಸಲೀಲೆ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ಶಿಕ್ಷೆ! Read More »

ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಸಾಲೆತ್ತೂರು ವಲಯ ಕುಲಾಲ್ ಎಂಬಲ್ಲಿ ವಾಸವಿರುವ ಲೀಲಾವತಿ ತಿಮಪ್ಪ ದಂಪತಿಗಳಿಗೆ ಕಳೆದ 6 ವರ್ಷದಿಂದ ಶ್ರೀ ಕ್ಷೇತ್ರದಿಂದ ಮಾಶಾಸನ ದೊರೆಯುತ್ತಿದ್ದು ಇವರಿಗೆ ವಾಸಕ್ಕೆ ಯೋಗ್ಯವಾದ ಮನೆ ಇಲ್ಲದ ಕಾರಣ ಕ್ಷೇತ್ರದಿಂದ ವಾತ್ಸಲ್ಯ ಮನೆ ಮಂಜೂರಾಗಿದೆ. ಈ ಮನೆಯ ಗುದ್ದಲಿ ಪೂಜೆಯನ್ನು ವಲಯದ ಭಜನಾ ಪರಿಷತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ಸದಸ್ ರಾಜಾರಾಮ್ ಹೆಗ್ಡೆ ಕುದ್ರಿಯ

ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ Read More »

ಶಾಂತಿಗೋಡು ಒಕ್ಕಲಿಗ ಗೌಡ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ರಕ್ತದಾನ ಶಿಬಿರ

ಪುತ್ತೂರು: ಶಾಂತಿಗೋಡು ಒಕ್ಕಲಿಗ ಗೌಡ ಮಾತೃ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘಗಳ ಜಂಟಿ ಆಶ್ರಯದಲ್ಲಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಸಹಯೋಗದೊಂದಿಗೆ ವಾರ್ಷಿಕ ಮಹಾಸಭೆ ಮತ್ತು ರಕ್ತದಾನ ಶಿಬಿರವು ಜನವರಿ 18ರಂದು ಜಗದೀಶ್ ಗೌಡ ಬಜಪ್ಪಾಳ ಅವರ ಗೃಹದಲ್ಲಿ ಜರುಗಿತು. ಸಮಾಜ ಸೇವೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ರಕ್ತದಾನ ಶಿಬಿರದಲ್ಲಿ ಗೌಡ ಸಮಾಜ ಬಾಂಧವರು ಪಾಲ್ಗೊಂಡು ರಕ್ತದಾನ ಮಾಡಿದರು. ಕಾರ್ಯಕ್ರಮವನ್ನು ತುಂಗಮ್ಮ ಬಜಪ್ಪಾಳ

ಶಾಂತಿಗೋಡು ಒಕ್ಕಲಿಗ ಗೌಡ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ರಕ್ತದಾನ ಶಿಬಿರ Read More »

ಧಾರ್ಮಿಕ ಭಾವನೆಗೆ ಧಕ್ಕೆ: ಹಿಂದೂ ನಾಯಕಿಯ ವಿರುದ್ಧ ದೂರು ದಾಖಲು

ಬೆಳಗಾವಿ: ಹಿಂದೂ ಸಮ್ಮೇಳನದ ಶೋಭಾಯಾತ್ರೆಯ ವೇಳೆ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಎಂಬವರು ದರ್ಗಾ‌ವೊಂದರ ಕಡೆಗೆ ಬಾಣ ಬಿಟ್ಚಂತೆ ಕೈ ಸನ್ನೆ ಮಾಡಿದ್ದು ಅವರ ವಿರುದ್ಧ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗೆ ‌ಧಕ್ಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಚ್ಚೆ ಗ್ರಾಮದಲ್ಲಿ ನಡೆದ ಶೋಭಾಯಾತ್ರೆಯ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ನಿಂತಿದ್ದ ಹರ್ಷಿತಾ ದರ್ಗಾದತ್ತ ಬಾಣ ಬಿಡುವಂತೆ ಕೈ ಚಾಚಿದ್ದರು. ಆಗ ನೆರೆದಿದ್ದವರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಹಾಗೆಯೇ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬುದಾಗಿಯೂ ದೂರಿನಲ್ಲಿ

ಧಾರ್ಮಿಕ ಭಾವನೆಗೆ ಧಕ್ಕೆ: ಹಿಂದೂ ನಾಯಕಿಯ ವಿರುದ್ಧ ದೂರು ದಾಖಲು Read More »

ಸಾರ್ವಜನಿಕರ ಟೀಕೆಗೆ ಗುರಿಯಾದ ಡಿಜಿಪಿ ರಾಮಚಂದ್ರ ರಾವ್: ಕಾರಣ ಏನು ಗೊತ್ತಾ?

ಬೆಂಗಳೂರು: ದುಬೈ‌ನಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿ ಶಿಕ್ಷೆಗೆ ಒಳಗಾದ ನಟಿ ರಾನ್ಯಾ ರಾವ್ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾನ್ಯಾ ಚಿನ್ನ ಕಳ್ಳ ಸಾಗಾಟ ಮಾಡಿರುವ ಪ್ರಕರಣದಲ್ಲಿ ಪಾರದರ್ಶಕತೆ ಕಾಪಾಡಲು ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಯಲ್ಲಿ ಸರ್ಕಾರ ಕಳುಹಿಸಿದೆ. ಇದೇ ಸಮಯದಲ್ಲಿ ಅವರು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ವೈರಲ್ ಆಗಿರುವುದಾಗಿದೆ. ಡಿಜಿಪಿ ಕಚೇರಿಯೊಳಗೆಯೇ ಈ

ಸಾರ್ವಜನಿಕರ ಟೀಕೆಗೆ ಗುರಿಯಾದ ಡಿಜಿಪಿ ರಾಮಚಂದ್ರ ರಾವ್: ಕಾರಣ ಏನು ಗೊತ್ತಾ? Read More »

ವಿದ್ಯಾರಶ್ಮಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ 2025 – 2026ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಹಾಜರಾದ ಸವಣೂರು ವಿದ್ಯಾರಶ್ಮಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ 23ನೇ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ. 9ನೇ ತರಗತಿಯ ಆಯಿಷತ್ ಜಸ್ನ – 461, ದ್ಯಾನ್ – 446, ಫಾತಿಮತ್ ಶೈಮ – 460, ಹೃತೇಶ್ ಬಿ. ಎಸ್. – 480, ಲಿಬಾ ಫಾತಿಮ – 443, ಹೈಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ

ವಿದ್ಯಾರಶ್ಮಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ Read More »

ಲಿವ್ ಇನ್ ಪಾರ್ಟ್ನರ್‌ನನ್ನು ಕೊಂದು, ಸುಟ್ಟು, ಭಸ್ಮವನ್ನು ನದಿಗೆಸೆದ ಆರೋಪಿ ಪೊಲೀಸರ ಅತಿಥಿ

ಲಕ್ನೋ: ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಲಿವ್ ಇನ್ ಪಾರ್ಟ್ನರ್ ಅನ್ನು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು, ಸಾಕ್ಷ್ಯ ನಾಶದ ಉದ್ದೇಶದಿಂದ ಚಿತಾ ಭಸ್ಮವನ್ನು ನದಿಗೆಸೆದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಆರೋಪಿ ರಾಮ್ ಸಿಂಗ್ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಈಗಾಗಲೇ ಇಬ್ಬರು ಪತ್ನಿಯರನ್ನು ಹೊಂದಿರುವ ಈ ಭೂಪ, ಮತ್ತೊಬ್ಬಳ ಜೊತೆಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದ. ಆಕೆಯ ಜೊತೆಗೆ ಹಣದ ವಿಚಾರವಾಗಿ ಜಗಳ ನಡೆದಿದ್ದು, ಆತ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಶವವನ್ನು

ಲಿವ್ ಇನ್ ಪಾರ್ಟ್ನರ್‌ನನ್ನು ಕೊಂದು, ಸುಟ್ಟು, ಭಸ್ಮವನ್ನು ನದಿಗೆಸೆದ ಆರೋಪಿ ಪೊಲೀಸರ ಅತಿಥಿ Read More »

ಮಣಿಕರ್ಣಿಕಾ ಘಾಟ್ ನವೀಕರಣದ ಬಗ್ಗೆ ಸಿಎಂ ಆದಿತ್ಯನಾಥ್ ಹೇಳಿದ್ದೇನು?

ಲಕ್ನೋ: ವಾರಣಾಸಿಯಲ್ಲಿ ಯಾವುದೇ ರೀತಿಯ ದೇವಾಲಯವನ್ನಾಗಲಿ, ಐತಿಹಾಸಿಕ ಪ್ರತಿಮೆಯನ್ನಾಗಲಿ ಕೆಡವಿಲ್ಲ. ಕಾಶಿಯ ಗೌರವವನ್ನು ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ವಿವಾದ ಸೃಷ್ಟಿ ಮಾಡುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ. ಮಣಿಕರ್ಣಿಕಾ ಘಾಟ್ ನವೀಕರಣಕ್ಕೆ ಸಂಬಂಧಿಸಿದ ಹಾಗೆ ಎದ್ದಿರುವ ಪ್ರಶ್ನೆಗಳಿಗೆ ಅವರು ಸ್ಪಷ್ಟನೆ ‌ನೀಡಿರುವುದಾಗಿದೆ. ಘಾಟ್ ಅಭಿವೃದ್ಧಿ ಸಮಯದಲ್ಲಿ ಮರಾಠಾ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂಬ ಆರೋಪದ ಸುಳ್ಳು. ಆ ವಿಡಿಯೋವನ್ನು AI ಕೃತಕ ಬುದ್ಧಿಮತ್ತೆ ಆಧರಿಸಿ ಮಾಡಲಾಗಿದೆ. ಪ್ರತಿಮೆ

ಮಣಿಕರ್ಣಿಕಾ ಘಾಟ್ ನವೀಕರಣದ ಬಗ್ಗೆ ಸಿಎಂ ಆದಿತ್ಯನಾಥ್ ಹೇಳಿದ್ದೇನು? Read More »

ಪೊಲೀಸರಿಗೆ ಯಾಮಾರಿಸಿ ತಪ್ಪಿಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ಸುಲಿಗೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿದ್ದ ಬಳಿಕ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ತೊಕ್ಕೊಟ್ಟು ಚಂಬುಗುಡ್ಡೆ ನಿವಾಸಿ ನವೀನ್ ಸೀಕ್ವೆರಾ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯ ಮೇಲೆ 2011 – 2012 ರಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ 2015 ರಲ್ಲಿ ಶಿಕ್ಷೆ ಪ್ರಕಟವಾಗಿತ್ತು. 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5000 ರೂ. ದಂಡವನ್ನು ವಿಧಿಸಿ ಕೋರ್ಟ್ ಆದೇಶ‌ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೂ

ಪೊಲೀಸರಿಗೆ ಯಾಮಾರಿಸಿ ತಪ್ಪಿಸಿಕೊಂಡಿದ್ದ ಆರೋಪಿಯ ಬಂಧನ Read More »

error: Content is protected !!
Scroll to Top