ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು?

ಹಲವಾರು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ-ಹೆಂಡತಿ ಹೊಸದಿಲ್ಲಿ: ಭಾರತದ ಮಾಜಿ ಡ್ಯಾಶಿಂಗ್‌ ಓಪನರ್‌ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸೆಹವಾಗ್‌ ಅಭಿಮಾನಿಗಳನ್ನು ವಿಚಲಿತಗೊಳಿಸಿದೆ. ಸೆಹವಾಗ್‌ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನ ಮುಕ್ತಾಯ ಹಂತದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಸೆಹ್ವಾಗ್ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ಮದುವೆಯಾದ ಸೆಹ್ವಾಗ್‌ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಲವಾರು […]

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು? Read More »

ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಕಲಾವಿದನಿಂದ ಹಲ್ಲೆ

ಗೆಳೆಯರಾಗಿದ್ದ ಎರಡು ಮೇಳಗಳ ಕಲಾವಿದರ ನಡುವೆ ಹಣಕಾಸಿನ ತಕರಾರು ಪಡುಬಿದ್ರಿ: ಹಣಕಾಸು ವಹಿವಾಟಿನ ತಕರಾರಿನ ಹಿನ್ನೆಲೆಯಲ್ಲಿ ಒಂದು ಮೇಳದ ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಯಕ್ಷಗಾನ ಕಲಾವಿದ ಬರ್ಬರವಾಗಿ ಹಲ್ಲೆ ಮಾಡಿದ ಸಂಬಂಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಸಸಿಹಿತ್ಲು ಮೇಳದ ಕಲಾವಿದ ಪಡುಬಿದ್ರಿಯ ನಿತಿನ್‌ ಕುಮಾರ್‌ ಮೇಲೆ ಪಾವಂಜೆ ಮೇಳದ ಕಲಾವಿದ ಸಚಿನ್‌ ಅಮೀನ್‌ ಉದ್ಯಾವರ, ಅವರ ತಂದೆ ಕುಶಾಲಣ್ಣ ಹಾಗೂ ಓರ್ವ ಫೈನಾನ್ಶಿಯರ್‌ ಸೇರಿಕೊಂಡು ಉದ್ಯಾವರದ ಮನೆಯೊಂದರಲ್ಲಿ ಜ.21ರಂದು ಕೂಡಿಹಾಕಿ

ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಕಲಾವಿದನಿಂದ ಹಲ್ಲೆ Read More »

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ

ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾದ ಸೋಂಕು ಮಂಗಳೂರು: ದುಬೈಯಿಂದ ಬಂದಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ 40 ವರ್ಷದ ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ಮಾಡಿ ಮಂಕಿಪಾಕ್ಸ್ (MPox) ಪ್ರಕರಣ ದೃಢಪಡಿಸಿದೆ. ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಜನವರಿ 17ರಂದು ಊರಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ದದ್ದುಗಳ ಲಕ್ಷಣಗಳು ಕಂಡುಬಂದವು ಮತ್ತು ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ Read More »

ಜ.25 : ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ಚುನಾವಣೆ | ಸಂಘದ ಹಿಂದಿನ ಆಡಳಿತ ಮತ್ತು ಸಹಕಾರ ಭಾರತಿಯ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ : ಕಿಶೋರ್ ಕೊಳತ್ತಾಯ ಎನ್‍.

ಪುತ್ತೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಂದ ಸ್ಥಾಪನೆಯಾದ, 115 ವರ್ಷಗಳ ಇತಿಹಾಸವಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‍ನ ಮುಂದಿನ 5 ವರ್ಷಗಳ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಜ.25ರಂದು ಚುನಾವಣೆ ನಡೆಯಲಿದ್ದು, ಕೇವಲ ರಾಜಕೀಯ ಕಾರಣಕ್ಕೆ ಸಂಘದ ಹಿಂದಿನ ಆಡಳಿತ ಮತ್ತು ಸಹಕಾರ ಭಾರತಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಕಳೆದ ಆಡಳಿತ ಮಂಡಳಿ ಅವಧಿಯಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳು ಕಾನೂನು ಬದ್ಧವಾಗಿಯೇ ಇದೆ ಎಂದು ಸಹಕಾರ ಭಾರತಿ ಮತ್ತು

ಜ.25 : ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ಚುನಾವಣೆ | ಸಂಘದ ಹಿಂದಿನ ಆಡಳಿತ ಮತ್ತು ಸಹಕಾರ ಭಾರತಿಯ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ : ಕಿಶೋರ್ ಕೊಳತ್ತಾಯ ಎನ್‍. Read More »

ಜ.25 : ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಮಹಾಸತ್ಸಂಗ, ಮಹಾಆರತಿ

ಪುತ್ತೂರು: ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ವಿಶ್ವಹಿಂದು ಪರಿಷದ್‌, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆಯ ವತಿಯಿಂದ ಮಹಾಸತ್ಸಂಗ ಮತ್ತು ಮಹಾ ಆರತಿಯು ಜ.25ರಂದು ಸಂಜೆ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್‌ ಪುತ್ತೂರು ಜಿಲ್ಲೆ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಟಿಯಲ್ಲಿ  ಅವರು ಮಾತನಾಡಿ, ವಿಶ್ವಹಿಂದು ಪರಿಷತ್‌ನ 17 ಆಯಾಮಗಳಲ್ಲಿ ಒಂದಾದ ಸತ್ಸಂಗ ಪ್ರಮುಖ್ ವಿಭಾಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾ ದಿನದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ

ಜ.25 : ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಮಹಾಸತ್ಸಂಗ, ಮಹಾಆರತಿ Read More »

ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುವನ್ನೂರು ಗ್ರಾಮದ ಪುಂಡಿಕಾಯಿಯಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ಪುಂಡಿಕಾಯಿ ನಿವಾಸಿ  ವೆಯರಿಂಗ್ ಕೆಲಸ ಮಾಡುತ್ತಿದ್ದ ಮೋಹನ್ (31)ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಮೋಹನ್ ಅವರು ಜ.20ರಂದು ರಾತ್ರಿ ಊಟ ಮಾಡಿ ಮಲಗಿದವರು ಜ.21ರ ಬೆಳಗ್ಗೆ ನಾಪತ್ತೆಯಾಗಿದ್ದರು. ವಿಷಯ ಅರಿತು ಹುಡುಕಾಡಿದಾಗ ಮೋಹನ್ ಅವರು ಮನೆಯ ಪಕ್ಕದ ಪದ್ಮನಾಭ ಭಟ್ ಎಂಬವರ ಜಾಗದ ಕಾಡು

ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ Read More »

ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ 

ಬೆಂಗಳೂರು : ಪತ್ನಿ ಮನೆಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಭಾವಿಯ ಎನ್​ಜಿಎಫ್​ ಲೇಔಟ್​ನ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ  ಪತಿ ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ. ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್​ಜಿಎಫ್ ಲೇಔಟ್​ನಲ್ಲಿರುವ ಹೆಂಡತಿ ವಾಸವಿದ್ದ ಮನೆಗೆ  8 ಗಂಟೆಗೆ ಮಂಜುನಾಥ್ ಬಂದಿದ್ದ. ಇದಿಕೆ ಪ್ರತಿಕ್ರೀಯಿಸಿದ ಪತ್ನಿ ನಯನ ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು

ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ  Read More »

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ

ಕಳೆಂಜ: ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಎಂಬವರು ಗಾಯಗೊಂಡಿರುವ ಘಟನೆ ಕಳಂಜ ಗ್ರಾಮದ ಬಂಡೇರಿ ಸೇತುವೆ ಬಳಿ ನಡೆದಿದೆ. ಕಳೆಂಜ ಗ್ರಾಮದ ಗೋಶಾಲೆ ಮಾರ್ಗ ಸಮೀಪದ ಮನೆಯ ವಿಶ್ವನಾಥ ಕುಂಬಾರ ಎಂಬವರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದರಿಂದ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಸಂಜೆ ಫೋನ್ ನಲ್ಲಿ ಮಾತನಾಡಲೆಂದು ಕುಳಿತಿದ್ದಾಗ ಒಂಟಿ ಸಲಗವೊಂದು ಹಿಂಬದಿಯಿಂದ ಬಂದು ಸೊಂಡಿಲಿನಿಂದ ತಳ್ಳಿ ಹಾಕಿದೆ. ಈ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ಅವರಿಗೆ ಕಿವಿ ಸರಿಯಾಗಿ

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ Read More »

ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್‌ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್‌, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್‍ ಪುತ್ತೂರು  ಸಂಸ್ಥೆ

ಪುತ್ತೂರು : ವಾಹನಗಳಲ್ಲಿ ವಿಚಿತ್ರ  ರೀತಿಯ  ಸ್ಟಿಕ್ಕರ್,  ಪೋಸ್ಟರ್’ ಗಳನ್ನು  ಅಂಟಿಸಿ  ಪ್ರದರ್ಶಿಸುವುದರ  ವಿರುದ್ಧ ಕ್ರಮ  ಕೈಗೊಳ್ಳಲು  ಮುಂದಾದ  ಸಾರಿಗೆ  ಇಲಾಖೆ  ಅಧಿಕಾರಿಗಳೇ  ನಿಮಗಿದೋ  ನ್ಯೂಸ್  ಪುತ್ತೂರು ವತಿಯಿಂದ  ಹೃದ್ಯ  ಅಭಿನಂದನೆಗಳು. ‘Better late than never’  ಎಂಬಂತೆ  ತಡವಾಗಿಯಾದರೂ  ದಿಟ್ಟ  ನಿರ್ಧಾರ  ಕೈಗೊಂಡ  ನೀವು ಶ್ಲಾಘನಾರ್ಹರು.  ನಿಮ್ಮ  ಈ  ನಡೆಗೆ  ನ್ಯೂಸ್  ಪುತ್ತೂರು  ಸರ್ವತ್ರ  ಬೆಂಬಲ  ನೀಡುತ್ತದೆ. ಹಾಗೆಯೇ  ನಮ್ಮದೊಂದು  ಮನವಿ.   ಈ  ಕೆಳಗಿನ  ಅಂಶಗಳನ್ನೂ  ದಯವಿಟ್ಟು  ಪರಿಗಣಿಸುವಿರಾ? 1) ಇಲಾಖೆಯ  ನಿಯಮಾನುಸಾರ  ವಾಹನ  ಉತ್ಪಾದಕ

ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್‌ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್‌, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್‍ ಪುತ್ತೂರು  ಸಂಸ್ಥೆ Read More »

ಕೋಟೆಕಾರು ದರೋಡೆ ಕೃತ್ಯಕ್ಕೆ ಸಹಕರಿಸಿದವರಿಗೆ ರಾಜಕೀಯ ರಕ್ಷಣೆ : ಭರತ್‌ ಶೆಟ್ಟಿ

ಸಂಚಿನಲ್ಲಿ ಭಾಗಿಯಾದವರ ಹೆಸರು ಹೊರಗೆ ಬಾರದಂತೆ ತಡೆದಿದ್ದಾರೆ ಎಂದು ಆರೋಪ ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಕೆ.ಸಿ ರೋಡ್‌ ಶಾಖೆಯಲ್ಲಿ ಕಳೆದ ಶುಕ್ರವಾರ ಹಾಡಹಗಲೇ ನಡೆದಿರುವ ದರೋಡೆಯಲ್ಲಿ ಸ್ಥಳೀಯರ ಕೈವಾಡವಿದ್ದರೂ ರಾಜಕೀಯ ಕಾರಣಗಳಿಗಾಗಿ ಅವರ ಹೆಸರು ಹೊರಬಾರದಂತೆ ಮಾಡಲಾಗಿದೆ ಎಂದು ಶಾಸಕ ಭರತ್‌ ಶೆಟ್ಟಿ ಬಾಂಬ್‌ ಸಿಡಿಸಿದ್ದಾರೆ. ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ. ಪೊಲೀಸರು ದರೋಡೆ ಮಾಡಿದವರನ್ನು ಬಂಧಿಸಿ ಮೂರು ದಿನ ಆದರೂ ದರೋಡೆಗೆ ಪ್ಲಾನ್‌ ಮಾಡಿದವರ ಕುರಿತು ಇನ್ನೂ ಯಾವುದೇ ಮಾಹಿತಿ

ಕೋಟೆಕಾರು ದರೋಡೆ ಕೃತ್ಯಕ್ಕೆ ಸಹಕರಿಸಿದವರಿಗೆ ರಾಜಕೀಯ ರಕ್ಷಣೆ : ಭರತ್‌ ಶೆಟ್ಟಿ Read More »

error: Content is protected !!
Scroll to Top