ವೀರಕಂಭ: ಮನೆಯ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ ದಾಂದಲೆ ನಡೆಸಿ ಯುವಕನ ಮೇಲೆ ಹಲ್ಲೆ | 6 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ ಕಿರಾತಕ ಆರೋಪಿ ಮೋಹನ್ ವಿರುದ್ಧ ಪ್ರಕರಣ ದಾಖಲು

ವೀರಕಂಭ: ಮನೆ ಬಾಗಿಲಿಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಸದಸ್ಯರ ಮೇಲೆ ಹಲ್ಲೆ ನಡೆಸಿ  “ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್ ಸಿ ಎಂಬವರು ಜ.31  ರಂದು ರಾತ್ರಿ 8:00 ಗಂಟೆಗೆ  ಅವರ ಮನೆಯ ಅಂಗಳದಲ್ಲಿ ಮಗುವಿನ ಜೊತೆ ಆಟವಾಡುತ್ತಿರುವಾಗ ಮೋಹನ ಗೌಡ ಎಂಬಾತನು ಏಕಾ ಏಕಿಯಾಗಿ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಹಿಗ್ಗಾ ಮುಗ್ಗ ಹಲ್ಲೆ […]

ವೀರಕಂಭ: ಮನೆಯ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ ದಾಂದಲೆ ನಡೆಸಿ ಯುವಕನ ಮೇಲೆ ಹಲ್ಲೆ | 6 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ ಕಿರಾತಕ ಆರೋಪಿ ಮೋಹನ್ ವಿರುದ್ಧ ಪ್ರಕರಣ ದಾಖಲು Read More »

ತಣ್ಣೀರು ಬಾವಿ ಕಡಲ ತೀರದಲ್ಲಿ ಕುಸ್ತಿ ಕಲರವ| ಮಂಗಳೂರಿಗರ ಗಮನ ಸೆಳೆದ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್-2025| ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಚಾಲನೆ

ಮಂಗಳೂರು : ತಣ್ಣೀರು ಬಾವಿ ಕಡಲತೀರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ 2025ರ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್ ಯಶಸ್ವಿಯಾಗಿ ನೆರವೇರಿತು. ಜಿಲ್ಲೆಯ ತಣ್ಣೀರು ಬಾವಿ ಕಡಲತೀರದಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ನಲ್ಲಿ ಕರ್ನಾಟಕ ಕುಸ್ತಿ ಸಂಘದ ವತಿಯಿಂದ ತಪಸ್ಯ ಫೌಂಡೇಶನ್ ಸಹಕಾರದೊಂದಿಗೆ  ಎರಡು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್ ಶಿಪ್ -2025 ನಲ್ಲಿ ಮಂಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 110 ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 15ಕ್ಕೂ ಹೆಚ್ಚು

ತಣ್ಣೀರು ಬಾವಿ ಕಡಲ ತೀರದಲ್ಲಿ ಕುಸ್ತಿ ಕಲರವ| ಮಂಗಳೂರಿಗರ ಗಮನ ಸೆಳೆದ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್-2025| ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಚಾಲನೆ Read More »

ವಿವಿಧ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯದ ಆತಿಥ್ಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 | ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾರ್ಗದರ್ಶನದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 ಭಾನುವಾರ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾ ಸಂಭ್ರಮದ ಅಂಗವಾಗಿ ಬೆಳಗ್ಗೆ ಮುಕ್ವೆ ಮಹಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಿಂದ ವಾಹನ ಜಾಥಾದೊಂದಿಗೆ ಕ್ರೀಡಾಜ್ಯೋತಿ

ವಿವಿಧ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯದ ಆತಿಥ್ಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 | ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ Read More »

ಕಲಾಶ್ರೀ ಎ.ಜೆ. ಮತ್ತು ಸುಮಂತ್ ಕೆ.ಎಚ್. ಜೋಡಿಯ ನಿಶ್ಚಿತಾರ್ಥ

ಪುತ್ತೂರು: ಕಲಾಶ್ರೀ ಎಜೆ ಮತ್ತು ಸುಮಂತ್ ಕೆಎಚ್ ಅವರ ನಿಶ್ಚಿತಾರ್ಥ ಫೆ.೨ರಂದು ಅನ್ಯಾಡಿ ಮನೆ, ಕುದ್ಮಾರಿನಲ್ಲಿ ನಡೆಯಿತು. ಕಲಾಶ್ರೀ ಎಜೆ ಹಾಗೂ ಸುಮಂತ್ ಕೆ.ಎಚ್‌ರವರ ಕುಟುಂಬಸ್ಥರು, ಬಂಧುಬಳಗ ಆಗಮಿಸಿ ಶುಭ ಹಾರೈಸಿದರು.

ಕಲಾಶ್ರೀ ಎ.ಜೆ. ಮತ್ತು ಸುಮಂತ್ ಕೆ.ಎಚ್. ಜೋಡಿಯ ನಿಶ್ಚಿತಾರ್ಥ Read More »

ಗ್ಯಾರಂಟಿಗಳಿಂದಾಗಿ ಅನುದಾನ ಸಿಗುತ್ತಿಲ್ಲ : ರಾಜೀನಾಮೆ ಕಾರಣ ಬಯಲು ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಆರ್‌ ಪಾಟೀಲ್‌

ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದ ಪಾಟೀಲ್‌ ಬೆಂಗಳೂರು: ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ಹುದ್ದೆಗೆ ನಿನ್ನೆ ದಿಢೀರ್‌ ಎಂದು ರಾಜೀನಾಮೆ ನೀಡಿ ಅಚ್ಚರಿ ಹುಟ್ಟಿಸಿದ್ದ ಶಾಸಕ ಬಿ.ಆರ್‌. ಪಾಟೀಲ್‌ ಇಂದು ತನ್ನ ನಡೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಮದವರ ಜೊತೆ ಮಾತನಾಡಿದ ಪಾಟೀಲ್‌ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ. ಸುಮ್ಮನೆ ರಾಜೀನಾಮೆ ಕೊಟ್ಟಿಲ್ಲ. ಕೆಲವು ಸಮಸ್ಯೆಗಳಿವೆ ಎಂದು ನೇರವಾಗಿ ವಾಗ್ದಾಳಿ ತನ್ನ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ

ಗ್ಯಾರಂಟಿಗಳಿಂದಾಗಿ ಅನುದಾನ ಸಿಗುತ್ತಿಲ್ಲ : ರಾಜೀನಾಮೆ ಕಾರಣ ಬಯಲು ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಆರ್‌ ಪಾಟೀಲ್‌ Read More »

ಕಲ್ಲಡ್ಕದಲ್ಲಿ ಮುಳಿಯ ಪ್ರಾಪರ್ಟಿ ವತಿಯಿಂದ “ಫಾರ್ಮ್ ಲ್ಯಾಂಡ್ಸ್ “ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ  *ಮುಳಿಯ ಪ್ರಾಪರ್ಟೀಸ್ನವರ 7.5 ಸೆಂಟ್ಸ್  ಮೇಲ್ಪಟ್ಟ ಸುಮಾರು 44 ಪ್ಲಾಟ್‍ ಗಳಿರುವ “ಸದಾಶಿವ ಭಾಗ್” ಫಾರ್ಮುಲಾಂಡ್  ಪ್ರೊಜೆಕ್ಟ್ಟ ಉದ್ಘಾಟನೆಗೊಂಡಿತು. ಹೊಸನಗರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಭೂಮಿ ಪೂಜೆ ನೆರವೇರಿಸಿ, ಆಶೀರ್ವಚನ ನೀಡಿ, ಪ್ರಕೃತಿದತ್ತ ವಸತಿ ವ್ಯವಸ್ಥೆಯೊಂದಿಗೆ ಇಲ್ಲಿ ಗೋಶಾಲೆ ಕೂಡ ಮಾಡುತ್ತಿರುವುದು ಮುಳಿಯ ಮನೆತನದ ಸಾಮಾಜಿಕ -ಧಾರ್ಮಿಕ ಅಭಿರುಚಿಯ ಉನ್ನತೆ ಮತ್ತು ಜವಾಬ್ದಾರಿಯನ್ನು ತಿಳಿಸುತ್ತದೆ ಎಂದರು. ಡಾ. ಕಲ್ಲಡ್ಕ ಪ್ರಭಾಕರ ಭಟ್ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸನಾತನ

ಕಲ್ಲಡ್ಕದಲ್ಲಿ ಮುಳಿಯ ಪ್ರಾಪರ್ಟಿ ವತಿಯಿಂದ “ಫಾರ್ಮ್ ಲ್ಯಾಂಡ್ಸ್ “ ಉದ್ಘಾಟನೆ Read More »

ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ

ಪುತ್ತೂರು: ಅಪಘಾತವೆಂಬುದು ಆಕಸ್ಮಿಕ ಘಟನೆಯಾಗಿದೆ. ರಸ್ತೆ ನಾವು ಹೊರಟ ಜಾಗಕ್ಕೆ ನಮ್ಮನ್ನು ತಲುಪಿಸುವ ಒಂದು ಮಾಧ್ಯಮವಷ್ಟೇ. ರಸ್ತೆಗೆ ನಮ್ಮ ಮೇಲೆ ಯಾವುದೇ ದ್ವೇಷವಿಲ್ಲ. ರಸ್ತೆಯಲ್ಲಿ ಸಾಗುವ ವಾಹನಗಳಿಗೂ ಪರಸ್ಪರ ದ್ವೇಷ ಭಾವನೆ ಇಲ್ಲ. ನಾವು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದಲ್ಲಿ ಅದೇ ನಮ್ಮ ಪಾಲಿಗೆ ಕಂಟಕವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಲ ಹೇಳಿದರು. ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಜ.೩೦ರಂದು ನಡೆದ ಕರ್ನಾಟಕ ಸರಕಾರ ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು

ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ಕೊನೇ ಕ್ಷಣದಲ್ಲಿ ಕಾರ್ಯಕ್ರಮಗಳೆಲ್ಲ ರದ್ದು ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇಂದಿನ ಅವರ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಮಂಡಿ ನೋವು ತೀವ್ರಗೊಂಡ ಕಾರಣ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ. ಇಂದು ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸ ರದ್ದಾಗಿದೆ. ಚಿಕ್ಕಬಳ್ಳಾಪುರದ ಹೊಸೂರು ಗ್ರಾಮಕ್ಕೆ ಇಂದು ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಅಲ್ಲಿ ಬಿಗಿ ಭದ್ರತೆ ಸಹಿತ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು Read More »

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗೆ ಗುಂಡೇಟು

ಮಂಗಳೂರು : ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ಧಾರಾವಿಯ ಮುರುಗನ್ ತೇವರ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕೋಟೆಕಾರು ಅಜ್ಜಿನಡ್ಕ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಪೊಲೀಸರು ಸ್ಥಳ ಮಹಜರು ನಡೆಸಲು ಆರೋಪಿ ಮುರುಗಂಡಿಯನ್ನು ಕೋಟೆಕಾರಿಗೆ ಕರೆದುಕೊಂಡು ಬಂದಿದ್ದಾಗ ಆತ ತಪ್ಪಿಸಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಶೂಟ್ ಮಾಡಿದ್ದಾರೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಜ.೧೭ರಂದು ಹಾಡಹಗಲೇ ಬ್ಯಾಂಕ್ ದರೋಡೆ ನಡೆಸಿದ ಆರೋಪಿಗಳನ್ನು. ಕೆಲವೇ ದಿನದಲ್ಲಿ

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗೆ ಗುಂಡೇಟು Read More »

ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು

ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಡಪಾಯಿ ಮಹಿಳೆ ಎಂದು ಕರೆದು ಹೀಯಾಳಿಸಿರುವ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ. ಬಿಹಾರದ ಮುಜಾಫರ್‌ನಗರದ ವಕೀಲ ಸುಧೀರ್‌ ಓಜಾ ಎಂಬವರು ದೇಶದ ಪರಮೋಚ್ಛ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಕೀಳು ಪದಗಳಲ್ಲಿ ಟೀಕೆ ಮಾಡಿದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಬೇಕೆಂದು ಆಗ್ರಹಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ

ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು Read More »

error: Content is protected !!
Scroll to Top