ಫೆ.13ರಂದು ಮೋದಿ-ಟ್ರಂಪ್‌ ಭೇಟಿ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 12ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಟ್ರಂಪ್‌ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕ-ಭಾರತ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇದು ಪ್ರಧಾನಿಯ ಮಹತ್ವದ ಪ್ರವಾಸ ಎಂದು ಪರಿಗಣಿಸಲಾಗಿದೆ. ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ಫೆಬ್ರವರಿ 12ರ ಸಂಜೆ ಪ್ರಧಾನಿ ಅಮೆರಿಕ ರಾಜಧಾನಿಗೆ ಬಂದಿಳಿದು […]

ಫೆ.13ರಂದು ಮೋದಿ-ಟ್ರಂಪ್‌ ಭೇಟಿ Read More »

ಕಬಕ-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ | ಕ್ಯಾ.ಬ್ರಿಜೇಶ್ ಚೌಟರಿಂದ ರೈಲ್ವೇ ಮಂಡಳಿ ಅಧ್ಯಕ್ಷರಿಗೆ ಮನವಿ

ಪುತ್ತೂರು: ಕಬಕ – ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯದವರೆಗೆ ವಿಸ್ತರಿಸಲು ಸಂಸದ ಕ್ಯಾ.ಬ್ರಿಜೇಶ್‍ ಚೌಟ ರೈಲ್ವೇ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಈ ರೈಲು ಯೋಜನೆಯನ್ನು ವಿಸ್ತರಿಸಲು ಸಂಸದರು ಅವಿರತ ಪ್ರಯತ್ನಪಡುತ್ತಿದ್ದು, ಸೋಮವಾರ ದೆಹಲಿಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಅವರನ್ನು ಭೇಟಿಯಾಗಿ ಕಬಕ-ಪುತ್ತೂರು ಪ್ಯಾಸೆಂಜರ್ ರೈಲು (06485) ವನ್ನು ಸುಬ್ರಹ್ಮಣ್ಯ ಜಂಕ್ಷನ್‌ವರೆಗೆ ವಿಸ್ತರಿಸುವ ಪ್ರಸ್ತಾವನೆಯ ಬಗ್ಗೆ ಪ್ರಗತಿ ಮತ್ತು ಇದನ್ನು ಆದಷ್ಟು ಬೇಗ ಕಾರ್ಯಗತಗೊಳಿಸುವಂತೆ ಮನವಿ ಮಾಡಿದರು. ಬಹು ಕಾಲದ ಬೇಡಿಕೆಯ ಈಡೇರಿಕೆಗೆ ನಾನಾ

ಕಬಕ-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ | ಕ್ಯಾ.ಬ್ರಿಜೇಶ್ ಚೌಟರಿಂದ ರೈಲ್ವೇ ಮಂಡಳಿ ಅಧ್ಯಕ್ಷರಿಗೆ ಮನವಿ Read More »

ತೆಲುಗಿನ ಖ್ಯಾತ ನಿರ್ಮಾಪಕ ಗೋವಾದಲ್ಲಿ ಆತ್ಮಹತ್ಯೆಗೆ ಶರಣು

ರಜನಿಕಾಂತ್‌ ಸಹಿತ ಸೂಪರ್‌ಸ್ಟಾರ್‌ಗಳ ಚಿತ್ರ ನಿರ್ಮಿಸಿದ್ದ ನಿರ್ಮಾಪಕ ಚೆನ್ನೈ : ರಜನಿಕಾಂತ್‌ ಅಭಿನಯದ ಕಬಾಲಿ ಸಹಿತ ಅನೇಕ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದ ತಮಿಳು, ತೆಲುಗಿನ ಖ್ಯಾತ ನಿರ್ಮಾಪಕ ಕೆ.ಪಿ.ಚೌಧರಿ ಯವರ (44) ಶವ ಗೋವಾದ ಹಳ್ಳಿಯೊಂದರಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾದ ಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಚೌಧರಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗೋವಾದ ಸಿಯೋಲಿಮ್ ಗ್ರಾಮದ ಬಾಡಿಗೆ ಮನೆಯಲ್ಲಿ ಚೌಧರಿ ವಾಸವಾಗಿದ್ದರು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ

ತೆಲುಗಿನ ಖ್ಯಾತ ನಿರ್ಮಾಪಕ ಗೋವಾದಲ್ಲಿ ಆತ್ಮಹತ್ಯೆಗೆ ಶರಣು Read More »

ಪುತ್ತೂರಿನ ಚಿರಪರಿಚಿತ, ಕಂಪೌಂಡರ್ ನರಸಿಂಹ ಭಟ್‍ ನಿಧನ

ಪುತ್ತೂರು: ಪುತ್ತೂರಿನ ಚಿರಪರಿಚಿತ, ವೈದ್ಯ ಲೋಕದ ಕಂಪೌಂಡರ್ ಹಾರಾಡಿ ನಿವಾಸಿ ಕಂಪೌಂಡರ್ ನರಸಿಂಹ ಭಟ್ (82) ಅವರು ಸೋಮವಾರ ರಾತ್ರಿ ನಿಧನರಾದರು. ಪುತ್ತೂರಿನ ಚಿಕಿತ್ಸಾಲಯವೊಂದರಲ್ಲಿ ಕಾಂಪೌಂಡರ್ ಆಗಿ 68 ವರ್ಷ ಸೇವೆ ಸಲ್ಲಿಸಿದ ನರಸಿಂಹ ಭಟ್ ನಿವೃತ್ತಿಗೊಂಡು ಮನೆಯಲ್ಲಿದ್ದರು. ಡಾ.ಶಿವರಾಮ ಭಟ್ ಜೊತೆ ಕಾಂಪೌಂಡರ್ ಆಗಿ ಕೆಲಸ ಮಾಡಿದ ನರಸಿಂಹ ಭಟ್ ಅವರು ಎಲ್ಲರಿಗೂ ಚಿರಪರಿಚಿತರು. ಮೃತರು ಪತ್ನಿ ಕಾವೇರಮ್ಮ, ಪುತ್ರ ವಿದೇಶದಲ್ಲಿರುವ ಕಾರ್ತಿಕ್, ಇಬ್ಬರು ಸಹೋದರರನ್ನು ಅಗಲಿದ್ದಾರೆ

ಪುತ್ತೂರಿನ ಚಿರಪರಿಚಿತ, ಕಂಪೌಂಡರ್ ನರಸಿಂಹ ಭಟ್‍ ನಿಧನ Read More »

ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಸಂಪಾದನೆ ದೂರು

ಸಿಎಂ ಕುಟುಂಬದಲ್ಲಿ ಆಗಾಗ ನಡೆಯುತ್ತಿರುವ ಭೂಮಿ ದಾನದ ತನಿಖೆಗೆ ಒತ್ತಾಯ ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ್ದಾರೆ. ತನಿಖೆಗೆ ಆಗ್ರಹಿಸಿದ್ದು, ಅಧಿಕಾರಿಗಳು ವಿಳಂಬ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಸಿದ್ದರಾಮಯ್ಯನವರು ಕೆಸರೆ ಗ್ರಾಮದ ಜಾಗವನ್ನು ಅರಿಶಿಣ ಕುಂಕುಮ ರೂಪದಲ್ಲಿ ಪತ್ನಿಗೆ ಕೊಟ್ಟಿದ್ದಾರೆ ಎಂದಿದ್ದರು. ಈಗ ಮತ್ತೆ ಮಲ್ಲಿಕಾರ್ಜುನಸ್ವಾಮಿ ಒಂದು ಎಕರೆ ದಾನ ಮಾಡಿದ್ದಾರೆ. ಯಾಕೆ ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದ ಭೂಮಿಗಳನ್ನೇ

ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಸಂಪಾದನೆ ದೂರು Read More »

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಠಿಣ ನಿಯಮ: ಮಧು ಬಂಗಾರಪ್ಪ

ಶೇ.10 ಕೃಪಾಂಕ ಇಲ್ಲ; ಫಲಿತಾಂಶ ಸುಧಾರಣೆಗೆ ನಾನಾ ಕಸರತ್ತು ಬೆಂಗಳೂರು : ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಗೆ ಮತಷ್ಟು ಕಠಿಣ ನಿಯಮ ತರಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ವೆಬ್‌ಕಾಸ್ಟಿಂಗ್ ಹಾಗೂ ಸಿಸಿಟಿವಿ ನಿಯಮ ಮತ್ತಷ್ಟು ಕಠಿಣವಾಗಲಿದೆ. ಜೊತೆಗೆ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೃಪಾಂಕ ಕೊಡದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿನ್ನೆ ಎಸ್‌ಎಸ್‌ಎಲ್‌ಸಿ ಮಕ್ಕಳ ಹಾಗೂ ಶಿಕ್ಷಕರ ಜೊತೆ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಬಳಿಕ ಈ ವರ್ಷ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಠಿಣ ನಿಯಮ: ಮಧು ಬಂಗಾರಪ್ಪ Read More »

ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಸಂಭ್ರಮ-2025 ಸಂಪನ್ನ

ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾರ್ಗದರ್ಶನದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್‍  ಸಹಯೋಗದೊಂದಿಗೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 ಭಾನುವಾರ ಸಂಜೆ ಸಂಪನ್ನಗೊಂಡಿತು. ಪ್ರತೀ ವಲಯದವರು ಸಂಘಟನೆ ಬೆಳೆಸಬೇಕು : ಅಮರನಾಥ ಗೌಡ ಸಮಾರಂಭವನ್ನುದ್ದೇಶಿಸಿ ಯುವ ಗೌಡ

ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಸಂಭ್ರಮ-2025 ಸಂಪನ್ನ Read More »

ಪುತ್ತೂರಿನ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿ’ಗೆ ಆಯ್ಕೆ

ಪುತ್ತೂರು: ನಗರದ ಏಳ್ಮುಡಿಯಲ್ಲಿರುವ ಪ್ರಭು ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರತೀ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ

ಪುತ್ತೂರಿನ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿ’ಗೆ ಆಯ್ಕೆ Read More »

ವಿಟ್ಲ ಚಂದ್ರನಾಥ ಬಸದಿಗೆ ಪಂಚಲೋಹದ ಮೂರ್ತಿ ಆಗಮನ | ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ

ವಿಟ್ಲ: ವಿಟ್ಲದ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯಲ್ಲಿ  ಭ. ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ. 1008  ಶ್ರೀ ಮಹಾವೀರ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಭಾನುವಾರ ಅರ್ಕುಳ ಬೀಡಿನಿಂದ  ನೂತನ ಭ. ಶ್ರೀ 1008 ಚಂದ್ರನಾಥ ಸ್ವಾಮಿ ತೀರ್ಥಂಕರರ ಪಂಚಲೋಹದ ಮೂರ್ತಿಯನ್ನು ವಿಟ್ಲ ಜೈನ ಬಸದಿಗೆ

ವಿಟ್ಲ ಚಂದ್ರನಾಥ ಬಸದಿಗೆ ಪಂಚಲೋಹದ ಮೂರ್ತಿ ಆಗಮನ | ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ Read More »

ಫೆ.5-7 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಿಂದ ಕೌಶಲಾಭಿವೃದ್ಧಿ ಕಾರ್ಯಾಗಾರ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ಮತ್ತು ಮಾನವಿಕ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಅಧ್ಯಾಪಕ ಮಾರ್ಗದರ್ಶಕರಿಗೆ ಉತ್ತಮ ಬೋಧನಾ ಮತ್ತು ಕಲಿಕಾ ಅಭ್ಯಾಸಗಳು ಎನ್ನುವ ವಿಷಯದ ಬಗ್ಗೆ ಫೆ.5 ರಿಂದ 7ರ ವರೆಗೆ ಅಧ್ಯಾಪಕರ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಬೋಧಕರಲ್ಲಿ ನವೀನ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸುವುದು, ಉತ್ತಮ ಬೋಧನಾ ಪದ್ದತಿಗಳನ್ನು ಅಳವಡಿಸುವ ಮೂಲಕ ಫಲಿತಾಂಶ ಅಧಾರಿತ ಶಿಕ್ಷಣದ ಪರಿಷ್ಕರಣೆ, ಪರಿಣಾಮಕಾರಿ ಮಾರ್ಗದರ್ಶನ ಕೌಶಲಗಳನ್ನು ಅಳವಡಿಸುವುದು, ಸಂವಾದಾತ್ಮಕ ಬೋಧನೆಗಾಗಿ ಡಿಜಿಟಲ್ ಉಪಕರಣಗಳು ಮತ್ತು

ಫೆ.5-7 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಿಂದ ಕೌಶಲಾಭಿವೃದ್ಧಿ ಕಾರ್ಯಾಗಾರ Read More »

error: Content is protected !!
Scroll to Top