ತನ್ನಿಂದ ತಾನೇ ಚಲಿಸಿ ಹೋಟೆಲ್‌ಗೆ ಗುದ್ದಿದ ಟ್ಯಾಂಕರ್‌

ಕಾರು, ಬೈಕ್‌ಗಳು, ಆಟೋರಿಕ್ಷಾ ಜಖಂ ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್‌ ತನ್ನಿಂದ ತಾನೇ ಚಲಿಸಿ ರಸ್ತೆ ದಾಟಿ ಹೋಗಿ ಹೋಟೆಲ್‌ಗೆ ನುಗ್ಗಿ ಕಾರು, ಬೈಕ್‌ಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ರಾತ್ರಿ ಕುಳಾಯಿಯ ಹೊನ್ನಕಟ್ಟೆ ಜಂಕ್ಷನ್‌ನಲ್ಲಿ ನಡೆದಿದೆ. ಕುಳಾಯಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್‌ ನಿಲ್ಲಿಸಿ ಚಾಲಕ ಹೊಟೇಲ್‌ಗೆ ತೆರಳಿದ್ದರು. ಈ ವೇಳೆ ಲಾರಿ ಏಕಾಏಕಿ ಇಳಿಜಾರಾಗಿರುವ ರಸ್ತೆಯಲ್ಲಿ ಚಲಿಸಿಕೊಂಡು ಹೋಗಿ ರಾಷ್ಟೀಯ ಹೆದ್ದಾರಿ 66ನ್ನು ದಾಟಿ ಹೊಟೇಲ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋರಿಕ್ಷಾ […]

ತನ್ನಿಂದ ತಾನೇ ಚಲಿಸಿ ಹೋಟೆಲ್‌ಗೆ ಗುದ್ದಿದ ಟ್ಯಾಂಕರ್‌ Read More »

ಕುಂಭಮೇಳದ ರುದ್ರಾಕ್ಷಿ ಹುಡುಗಿ ಈಗ ಜ್ಯುವೆಲ್ಲರಿ ಬ್ರ್ಯಾಂಡ್‌ ಅಂಬಾಸಿಡರ್‌

ಕೇರಳದ ಚಿನ್ನಾಭರಣ ಮಳಿಗೆಯ ರೂಪದರ್ಶಿಯಾಗಲಿರುವ ಮೊನಾಲಿಸಾ ಪ್ರಯಾಗ್‌ರಾಜ್‌: ಸೋಷಿಯಲ್‌ ಮೀಡಿಯಾ ಎಲ್ಲೋ ಇದ್ದವರನ್ನು ಇನ್ನೆಲ್ಲಿಗೋ ತಲುಪಿಸಿ ಬಿಡುತ್ತದೆ ಎನ್ನುವುದಕ್ಕೆ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಎಂಬ ಅಲೆಮಾರಿ ಜನಾಂಗದ ಹುಡಗಿಯೇ ಸಾಕ್ಷಿ. ಬೆಕ್ಕಿನ ಕಣ್ಣಿನ ಸಹಜ ಸುಂದರಿ 16ರ ಹರೆಯದ ಮೊನಾಲಿಸಾ ಯೂಟ್ಯೂಬರ್‌ಗಳ ಕಣ್ಣಿಗೆ ಬಿದ್ದು ರಾತ್ರಿ ಬೆಳಗಾಗವುದುರೊಳಗೆ ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಆಗಿದ್ದು, ಈ ಜನಪ್ರಿಯತೆ ಈಗ ಆಕೆಯ ಬದುಕನ್ನೇ ಬದಲಾಯಿಸಿದೆ. ಕೇರಳದ ಪ್ರಸಿದ್ಧ ಚಿನ್ನಾಭರಣ ಮಳಿಗೆಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಮೊನಾಲಿಸಾ ಆಯ್ಕೆಯಾಗಿದ್ದಾರೆ. ಇದರೊಂದಿಗೆ

ಕುಂಭಮೇಳದ ರುದ್ರಾಕ್ಷಿ ಹುಡುಗಿ ಈಗ ಜ್ಯುವೆಲ್ಲರಿ ಬ್ರ್ಯಾಂಡ್‌ ಅಂಬಾಸಿಡರ್‌ Read More »

ಫೆ.17 : ಲೋಕಕಲ್ಯಾಣಾರ್ಥವಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ | ಸಂಸದ ಕ್ಯಾ. ಬ್ರಿಜೇಶ್‍ ಚೌಟ ಭಾಗಿ

ಉಪ್ಪಿನಂಗಡಿ: ಬಿಜೆಪಿ ಉಪ್ಪಿನಂಗಡಿ ಹಾಗೂ ಕಣಿಯೂರು ಮಹಾಶಕ್ತಿ ಕೇಂದ್ರದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ಫೆ.17 ಸೋಮವಾರ ನಡೆಯಲಿದೆ. ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಅಭಿವೃದ್ಧಿ ಕುರಿತು ಇತಿಹಾಸದಲ್ಲೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ, ಸ್ವಯಂ ಪ್ರೇರಿತರಾಗಿ 50 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿದ ದ.ಕ. ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಪಾಲ್ಗೊಳ್ಳಲಿದ್ದಾರೆ. ಪಕ್ಷ ಹಾಗೂ ಸಂಘಟನೆಯ ದೇವದುರ್ಲಭ ಕಾರ್ಯಕರ್ತರ ಆಶಯದಂತೆ ನಡೆಯುವ

ಫೆ.17 : ಲೋಕಕಲ್ಯಾಣಾರ್ಥವಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ | ಸಂಸದ ಕ್ಯಾ. ಬ್ರಿಜೇಶ್‍ ಚೌಟ ಭಾಗಿ Read More »

ಶುಕ್ರವಾರ ಊರಿಗೆ ಮರಳುವ ಸಂತೋಷದಲ್ಲಿದ್ದ ಬೆಳ್ತಂಗಡಿಯ ಹಿದಾಯತ್ | ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ  

ಬೆಳ್ತಂಗಡಿ: ಸೌದಿ ಅರೆಬಿಯಾದಿಂದ ಶುಕ್ರವಾರ ಊರಿಗೆ ಮರಳುವ ಸಂತೋಷದಲ್ಲಿದ್ದ ಬೆಳ್ತಂಗಡಿ ಸಂಜಯನಗರ ನಿವಾಸಿ ಹಿದಾಯತ್ ಅವರು ಸೌದಿ ಅರೇಬಿಯಾದಲ್ಲಿ ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ನಡೆದಿದೆ. ಊರಿಗೆ ಬರುವ ಸಂತೋಷದಲ್ಲಿದ್ದ ಹಿದಾಯತ್ ತನ್ನ ಸ್ನೇಹಿತ ರಫೀಕ್ ಎಂಬವರಿಗೆ ಕರೆ ಮಾಡಿ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ಕಾರನ್ನು ತರಲು ಹೇಳಿ ಜಿದ್ದಾದಿಂದ ರಾತ್ರಿ 10:30 ರ ವಿಮಾನದಲ್ಲಿ ಹೊರಟು ಬೆಳಗಿನ ಜಾವ ಮಂಗಳೂರು ತಲುಪುವವರಿದ್ದರು. ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಬಂದು ತಲುಪಿದ್ದಂತೆ

ಶುಕ್ರವಾರ ಊರಿಗೆ ಮರಳುವ ಸಂತೋಷದಲ್ಲಿದ್ದ ಬೆಳ್ತಂಗಡಿಯ ಹಿದಾಯತ್ | ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ   Read More »

ಫೆ.18 : ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನರಿಮೊಗರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ಮಹತ್ತರವಾದ ಶೈಕ್ಷಣಿಕ ಕಾರ್ಯಕ್ರಮವಾದ ಎಫ್‍ ಎಲ್‍ ಎನ್‍ ಮಕ್ಕಳ ಕಲಿಕಾ ಹಬ್ಬ ರಾಜ್ಯಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ನಡೆಯುತ್ತಿದ್ದು, ಪುತ್ತೂರು ತಾಲೂಕಿನ ನರಿಮೊಗರು ಕ್ಲಸ್ಟರ್ ಮಟ್ಟದ ಎಫ್‍.ಎಲ್‍.ಎನ್‍. ಕಲಿಕಾ ಹಬ್ಬ ಫೆ. 18 ರಂದು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಏನಿದು ಎಫ್‍ ಎಲ್‍ ಎನ್‍ ಕಲಿಕಾ ಹಬ್ಬ? ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ Fundamental Literacy and numeracy ಎಲ್ಲಾ  ಮಕ್ಕಳು ಶಾಲೆಗೆ ದಾಖಲಾಗಬೇಕು. ದಾಖಲಾದ ಮಕ್ಕಳು

ಫೆ.18 : ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನರಿಮೊಗರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ Read More »

ಉತ್ಸವದ ವೇಳೆ ಕೆರಳಿದ ಆನೆಗಳು : ಮೂವರು ಬಲಿ

ಕೇರಳದಲ್ಲಿ ವಾರ್ಷಿಕ ಜಾತ್ರೆ ವೇಳೆ ಸಂಭವಿಸಿದ ದುರಂತ ತಿರುವನಂತಪುರಂ: ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ಭಗವತಿ ದೇವಸ್ಥಾನದ ಉತ್ಸವದ ವೇಳೆ ಎರಡು ಆನೆಗಳು ಕೆರಳಿ ಕಾದಾಡಿಕೊಂಡ ಪರಿಣಾಂ ಕನಿಷ್ಠ ಮೂವರು ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಗುರುವಾರ ರಾತ್ರಿ ಐದು ದಿನಗಳ ವಾರ್ಷಿಕ ಉತ್ಸವದ ಕೊನೆಯ ದಿನವಾಗಿತ್ತು. ದೇವಾಲಯದ ಉತ್ಸವಕ್ಕೆ ದೇವಾಲಯದ ಉತ್ಸವಕ್ಕಾಗಿ ಆನೆಗಳನ್ನು ತರಲಾಗಿತ್ತು. ಉತ್ಸವದ ಅಂಗವಾಗಿ ಸಿಡಿಮದ್ದು ಸಿಡಿಸಿದಾಗ ಆನೆಗಳು ಬೆದರಿ ಕೆರಳಿ‌ ಅಡ್ಡಾದಿಡ್ಡಿ ಚಲಿಸಿವೆ. ಇದರ

ಉತ್ಸವದ ವೇಳೆ ಕೆರಳಿದ ಆನೆಗಳು : ಮೂವರು ಬಲಿ Read More »

ಮುಂಬಯಿ ದಾಳಿಯ ಸೂತ್ರಧಾರ ರಾಣಾ ಭಾರತಕ್ಕೆ ಹಸ್ತಾಂತರ : ಟ್ರಂಪ್‌ ಘೋಷಣೆ

ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಘೋಷಣೆ ವಾಷಿಂಗ್ಟನ್‌ : ಮುಂಬಯಿ ಮೇಲೆ 2008ರ ನ.26ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯ ಸೂತ್ರಧಾರ ತಹಾವುರ್‌ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಡೊನಾಲ್ಡ್​ ಟ್ರಂಪ್ ಅಪರಾಧಿ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳು, ಅಮೆರಿಕದ ಸುಪ್ರೀಂ ಕೋರ್ಟ್ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಪ್ರಕರಣದಲ್ಲಿ ಅವನ ಶಿಕ್ಷೆಯ ವಿರುದ್ಧ

ಮುಂಬಯಿ ದಾಳಿಯ ಸೂತ್ರಧಾರ ರಾಣಾ ಭಾರತಕ್ಕೆ ಹಸ್ತಾಂತರ : ಟ್ರಂಪ್‌ ಘೋಷಣೆ Read More »

ಕಾಣಿಯೂರು ಮಠದಲ್ಲಿ ವಾರ್ಷಿಕ ಉತ್ಸವಾದಿಗಳಿಗೆ ಗೊನೆ ಮುಹೂರ್ತ

ಕಾಣಿಯೂರು :  ಕಾಣಿಯೂರು ಮಠದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಗುರುವಾರ ಬೆಳಿಗ್ಗೆ ನಡೆಯಿತು. ಮೊದಲಿಗೆ ಕಾಣಿಯೂರು ಮಠದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ 9 ಗಂಟೆಗೆ ಗೊನೆ ಮುಹೂರ್ತ ನೆರವೇರಿಸಲಾಯಿತು. ಜಾತ್ರೋತ್ಸವದ ಅಂಗವಾಗಿ ಫೆ.26 ರಂದು ಜಾತ್ರೋತ್ಸವ ಆರಂಭಗೊಳ್ಳಲಿದ್ದು, ಮಾ.4 ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಕಾಣಿಯೂರು ಮಠದಲ್ಲಿ ವಾರ್ಷಿಕ ಉತ್ಸವಾದಿಗಳಿಗೆ ಗೊನೆ ಮುಹೂರ್ತ Read More »

ಡಿವೈಡರ್‌ಗೆ ಬೈಕ್‌ ಢಿಕ್ಕಿ ಹೊಡೆದು ಯುವಕ ಮೃತ್ಯು

ಬೆಳ್ತಂಗಡಿ : ಡಿವೈಡರ್‌ಗೆ ಬೈಕ್‌ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್‌ ಪೂಜಾರಿ ಮೃತ ಪಟ್ಟ ಯುವಕ ಎನ್ನಲಾಗಿದೆ. ಪ್ರಶಾಂತ್‌ ಪೂಜಾರಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬೈಕ್‌ ಚಲಾಯಿಸಿಕೊಂಡು ಹೋಗಿದ್ದು, ವೇಣೂರು ರಸ್ತೆಯ ದ್ವಾರದಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆ

ಡಿವೈಡರ್‌ಗೆ ಬೈಕ್‌ ಢಿಕ್ಕಿ ಹೊಡೆದು ಯುವಕ ಮೃತ್ಯು Read More »

ಪುತ್ತೂರು (ಫೆ.೧೬): ಅಕ್ಷಯ ಕಾಲೇಜಿನಲ್ಲಿ ದಿಕ್ಸೂಚಿ ಕಾರ್ಯಕ್ರಮ

ಪುತ್ತೂರು : ಪುತ್ತೂರಿನಲ್ಲಿ ವಿನೂತನ ಪದವಿ ಕೋರ್ಸುಗಳನ್ನು ಪರಿಚಯಿಸಿ ಶೈಕ್ಷಣಿಕ ಕ್ಷೇತ್ರದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡುತ್ತಿರುವ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಫೆ.೧೬ ಭಾನುವಾರ ಬೆಳಿಗ್ಗೆ ೧೦. ಗಂಟೆಯಿಂದ ೧೨.೩೦ ರ ವರೆಗೆ “ದಿಕ್ಸೂಚಿ-೪” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಏನಿದು “ದಿಕ್ಸೂಚಿ”? ಕಳೆದ ೩ ವರ್ಷಗಳಿಂದ ಸಂಸ್ಥೆಯು ಪುತ್ತೂರು ಹಾಗು ಪುತ್ತೂರಿನ ಆಸುಪಾಸಿನ ತಾಲೂಕುಗಳ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪಿ.ಯು.ಸಿ ಬಳಿಕ ಇರುವ ಆಯ್ಕೆ, ವೃತ್ತಿ ಶಿಕ್ಷಣ ಕ್ಷೇತ್ರದ ಪ್ರಾಮುಖ್ಯತೆ ವಿಷಯಗಳಲ್ಲಿ ಸಮಗ್ರ ರೂಪುರೇಷೆಯನ್ನು ನೀಡಿ

ಪುತ್ತೂರು (ಫೆ.೧೬): ಅಕ್ಷಯ ಕಾಲೇಜಿನಲ್ಲಿ ದಿಕ್ಸೂಚಿ ಕಾರ್ಯಕ್ರಮ Read More »

error: Content is protected !!
Scroll to Top