18 ವರ್ಷಗಳ ಬಳಿಕ ಲಾಭದ ಮುಖ ಕಂಡ ಬಿಎಸ್‌ಎನ್‌ಎಲ್‌

ಸೇವೆಗಳ ಸುಧಾರಣೆ, ಖಾಸಗಿ ಕಂಪನಿಗಳ ದರ ಹೆಚ್ಚಳದಿಂದಾಗಿ ಬಿಎಸ್‌ಎನ್‌ಎಲ್‌ಗೆ ಲಾಭ ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) 2007ರ ಬಳಿಕ ಇದೇ ಮೊದಲ ಬಾರಿಗೆ ಲಾಭ ಕಂಡಿದೆ. ಜಿಯೋ, ಏರ್‌ಟೆಲ್‌ ಸೇವೆಗಳಲ್ಲಿ ಏರಿಕೆ ಕಂಡ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮರಳುತ್ತಿದ್ದು, ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. 2025ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್‌ 262 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ನೆಟ್‌ವರ್ಕ್ ವಿಸ್ತರಣೆ ಮತ್ತು ಗ್ರಾಹಕ ಸೇರ್ಪಡೆಯಂತಹ […]

18 ವರ್ಷಗಳ ಬಳಿಕ ಲಾಭದ ಮುಖ ಕಂಡ ಬಿಎಸ್‌ಎನ್‌ಎಲ್‌ Read More »

50 ಕೋಟಿ ಜನರಿಂದ ಪುಣ್ಯಸ್ನಾನ : ಮಹಾಕುಂಭಮೇಳದಲ್ಲಿ ಇತಿಹಾಸ ಸೃಷ್ಟಿ

ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಅತಿದೊಡ್ಡ ಮಾನವ ಸಂಗಮ ಪ್ರಯಾಗ್‌ರಾಜ್‌ : ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಿನ್ನೆಯ ತನಕ ದಾಖಲೆಯ 50 ಕೊಟಿಗೂ ಅಧಿಕ ಜನ ಪುಣ್ಯಸ್ನಾನ ಮಾಡಿದ್ದಾರೆ. ಮಹಾಕುಂಭ ಇನ್ನೂ ನಡೆಯುತ್ತಿದ್ದು, ಮಹಾಶಿವರಾತ್ರಿ ದಿನವಾದ ಫೆ.26ರ ಅಮೃತ ಸ್ನಾನದೊಂದಿಗೆ ಮುಕ್ತಾಯವಾಗಲಿದೆ. ಈಗಾಗಲೇ 50 ಕೋಟಿಗೂ ಅಧಿಕ ಜನ ಪ್ರಯಾಗ್‌ರಾಜ್‌ಗೆ ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಜನವರಿ 13ರಂದು ಪ್ರಾರಂಭವಾದಾಗಿನಿಂದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ

50 ಕೋಟಿ ಜನರಿಂದ ಪುಣ್ಯಸ್ನಾನ : ಮಹಾಕುಂಭಮೇಳದಲ್ಲಿ ಇತಿಹಾಸ ಸೃಷ್ಟಿ Read More »

ಪುತ್ತೂರಿಗೆ ಸಹಾಯಕ ಆಯುಕ್ತರಾಗಿ ಆಗಮಿಸಲಿದ್ದಾರೆ ಸ್ಟೆಲ್ಲಾ ವರ್ಗೀಸ್

ಪುತ್ತೂರು: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ಸದ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರು ವರ್ಗಾವಣೆಗೊಂಡ ಬಳಿಕ ಶ್ರವಣ್ ಕುಮಾರ್ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ನಿಯುಕ್ತಿ ಮಾಡಲಾಗಿದೆ.

ಪುತ್ತೂರಿಗೆ ಸಹಾಯಕ ಆಯುಕ್ತರಾಗಿ ಆಗಮಿಸಲಿದ್ದಾರೆ ಸ್ಟೆಲ್ಲಾ ವರ್ಗೀಸ್ Read More »

ಕಡಬ ತಾಲೂಕು ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆ

ಕಡಬ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆ ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆಯಿತು.   ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮುಖ್ಯ ಅತಿಥಿಯಾಗಿ ಮಾತನಾಡಿ, “ಕೃಷಿಕ ಸಮಾಜ ರೈತರು ಹಾಗೂ ಸರಕಾರದ ಕೊಂಡಿಯಾಗಿ ಕೆಲಸ ಮಾಡಲಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ದೊರೆಯುವ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ನೀಡಲು ರೈತರಿಗೆ ಕಾರ್ಯಾಗಾರಗಳನ್ನು ಮುಂದಿನ

ಕಡಬ ತಾಲೂಕು ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆ Read More »

ಯಕ್ಷಭಾರತಿಯಿಂದ ಸಮಾಜಕ್ಕೆ ಉತ್ತಮ ಕೊಡುಗೆ: ಶರತ್ ಕೃಷ್ಣ ಪಡುವೆಟ್ಣಾಯ

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಕ್ಷೇತ್ರದ ಪರಿಸರದಲ್ಲಿ   ನಡೆಯುತ್ತಿರುವ ಯಕ್ಷಭಾರತಿಯ ಕಲಾ ಸೇವೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳು ಅಭಿನಂದನೀಯವಾಗಿದೆ. ಯಕ್ಷಭಾರತಿಯು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದು ರಾಜ್ಯದಲ್ಲಿ ಗುರುತಿಸುವಂತಾಗಲಿಯೆಂದು ಉಜಿರೆಯ ರಾಮಕೃಷ್ಣ ಸಭಾ ಮಂಟಪದಲ್ಲಿ ಜರಗಿದ ಯಕ್ಷ ಭಾರತಿ ದಶಮಾನೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ದೇವಳದ ಅನುವಂಶೀಯ ಆಡಳಿತ ಮೊಕ್ತೆಸರ  ಶರತ ಕೃಷ್ಣ  ಪಡುವೆಟ್ಣಾಯ  ತಿಳಿಸಿದರು.  ಯಕ್ಷ ಭಾರತಿ ಪ್ರಶಸ್ತಿ ಮತ್ತು ಸೇವಾ ಗೌರವ ಪ್ರದಾನ : ಉಚಿತವಾಗಿ ಯಕ್ಷಗಾನ ನಾಟ್ಯ ತರಬೇತಿ

ಯಕ್ಷಭಾರತಿಯಿಂದ ಸಮಾಜಕ್ಕೆ ಉತ್ತಮ ಕೊಡುಗೆ: ಶರತ್ ಕೃಷ್ಣ ಪಡುವೆಟ್ಣಾಯ Read More »

ವಿಟ್ಲ ಮೆಗಿನ ಪೇಟೆ ಶ್ರೀ ಚಂದ್ರನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವ | ಡಾ |ಡಿ.ವೀರೇಂದ್ರ ಹೆಗ್ಗಡೆಯವರಿಂದ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಮತ್ತು ಶೌರ್ಯ ಸದಸ್ಯರ ಕರ್ತವ್ಯಕ್ಕೆ  ಶ್ಲಾಘನೆ

ವಿಟ್ಲ: ಇಲ್ಲಿನ ಮೆಗಿನ ಪೇಟೆ ಶ್ರೀ ಚಂದ್ರನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವದ ಧಾರ್ಮಿಕ ಸಭೆ ಫೆ.13ರಂದು ನಡೆಯಿತು. ವಿಟ್ಲ ಮೆಗಿನ ಪೇಟೆ ಶ್ರೀ ಚಂದ್ರನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವದ ಅಂಗವಾಗಿ ಕರ್ತವ್ಯ ನಿರ್ವಹಿಸಿದ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಕರ್ತರು ಹಾಗೂ  ಶೌರ್ಯ ವಿಪತ್ತು ತಂಡದ ಸದಸ್ಯರಿಗೆ  ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕರ್ತವ್ಯದ ಕುರಿತಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು ಮಾತನಾಡಿದ ಅವರು ಶೌರ್ಯ ವಿಪತ್ತು ತಂಡ ಸಮಾಜಕ್ಕೆ  ಉಪಯುಕ್ತ ತಂಡ ಎಂದು ಹೇಳಿದರು. ಬಳಿಕ ಗ್ರಾಮಾಭಿವೃದ್ಧಿ

ವಿಟ್ಲ ಮೆಗಿನ ಪೇಟೆ ಶ್ರೀ ಚಂದ್ರನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವ | ಡಾ |ಡಿ.ವೀರೇಂದ್ರ ಹೆಗ್ಗಡೆಯವರಿಂದ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಮತ್ತು ಶೌರ್ಯ ಸದಸ್ಯರ ಕರ್ತವ್ಯಕ್ಕೆ  ಶ್ಲಾಘನೆ Read More »

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ

ವೀರಮಂಗಲ : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ಹಿರಿತನದಲ್ಲಿ ವರ್ಷಾವದಿ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ಫೆ.15ರಂದು ನಡೆಯಲಿದೆ. ಬೆಳಗ್ಗೆ 6ರಿಂದ ಗಣಪತಿ ಹೋಮ, ಸಿಯಾಳಭಿಷೇಕ, ಪವಮಾನಾಭಿಷೇಕ, ನವಕ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 11ರಿಂದ ಶ್ರೀ ಲಕ್ಷ್ಮೀ ಪ್ರಿಯ ಭಜನಾ ಮಂಡಳಿ ಬೆಳಂದೂರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ.  ಮದ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ 5 ಗಂಟೆಗೆ ದೈವಗಳ ಭಂಡಾರ

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ Read More »

ಬಿಯರ್‌ ಕ್ಯಾನ್‌ನಲ್ಲಿ ಮಹಾತ್ಮ ಗಾಂಧಿ ಚಿತ್ರ : ಭಾರತೀಯರ ಆಕ್ರೋಶ

ಮಾಸ್ಕೊ: ರಷ್ಯಾದ ಮದ್ಯ ತಯಾರಕ ಕಂಪನಿಯೊಂದು ತನ್ನ ಹೊಸ ಬ್ರ್ಯಾಂಡ್‌ನ ಬಿಯರ್‌ ಕ್ಯಾನ್‌ ಮೇಲೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರ ಮುದ್ರಿಸಿ ಅವಮಾನ ಮಾಡಿದ್ದು, ಈ ಕುರಿತಾದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಭಾರತೀಯರ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ರಷ್ಯಾದ ಬಿಯರ್ ಕ್ಯಾನ್‌ನಲ್ಲಿ ಮಹಾತ್ಮ ಗಾಂಧಿಯವರ ಚಿತ್ರವನ್ನು ಪ್ರಿಂಟ್‌ ಮಾಡಿಸಿದ್ದು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ ರೆವರ್ಟ್ ಬ್ರಾಂಡ್‌ನ ಹೇಜಿ ಐಪಿಎ ಬಿಯರ್ ಕ್ಯಾನ್‌ಗಳಲ್ಲಿ ಗಾಂಧಿಯವರ ಫೋಟೋ ಮತ್ತು ಸಹಿಯನ್ನು ಮುದ್ರಿಸಲಾಗಿದೆ.

ಬಿಯರ್‌ ಕ್ಯಾನ್‌ನಲ್ಲಿ ಮಹಾತ್ಮ ಗಾಂಧಿ ಚಿತ್ರ : ಭಾರತೀಯರ ಆಕ್ರೋಶ Read More »

ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಎಸ್‍ ಡಿಪಿಐ ಪ್ರತಿಭಟನೆ

ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋದಿಸಿ ಪುತ್ತೂರು ಬಸ್ಸು ನಿಲ್ದಾಣದ ಬಳಿ ವಕ್ಫ್  ತಿದ್ದುಪಡಿ ಮಸೂದೆಯನ್ನು ವಿರೋಧಿಸಿ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿ, ಮಸೂದೆಯ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಯಿತು. ವಕ್ಫ್ ತಿದ್ದುಪಡಿ ಮಸೂದೆಯು ಕೇಂದ್ರ ಸರ್ಕಾರದ ಹಿಡನ್ ಅಜೆಂಡಾವಾಗಿದ್ದು ಈ ಮಸೂದೆಯನ್ನು ದೇಶದ ಜಾತ್ಯಾತೀತರು ಒಪ್ಪಲ್ಲ, ವಕ್ಫ್ ಆಸ್ತಿಯು

ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಎಸ್‍ ಡಿಪಿಐ ಪ್ರತಿಭಟನೆ Read More »

ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಮೈಕ್ರೋ ಫೈನಾನ್ಸ್ ಹಾವಳಿಗೆ ಜನ ಮನೆ ಮಠ ಕಳೆದುಕೊಂಡು ಬೀದಿಗೆ ಭೀಳುವ, ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳ ಬಗ್ಗೆ ರಾಜ್ಯ ಸರಕಾರ ತೆಗೆದುಕೊಂಡ ಮಹತ್ವದ ನಿರ್ಣಯಗಳಂತೆ ಇದೀಗ ಮಹತ್ವದ ಬೆಳವಣಿಗೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ ೨೦೨೫ ರ ಮುಖ್ಯಾಂಶಗಳು:- ೧. ಸದರಿ ಆಧ್ಯಾದೇಶವು ದಿನಾಂಕ: ೧೨.೦೨.೨೦೨೫ ರಂದು ಜಾರಿಗೆ ಬಂದಿದೆ.

ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ Read More »

error: Content is protected !!
Scroll to Top