ಆಟೋ ರಿಕ್ಷಾ-ಸರಕಾರಿ ಬಸ್ ಅಪಘಾತ | ಇಬ್ಬರು ಮೃತ್ಯು, ಚಾಲಕನಿಗೆ ಗಂಭೀರ ಗಾಯ

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ  ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟು, ಚಾಲಕ ಗಂಭೀರಗೊಂಡ ದಾರುಣ ಘಟನೆ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿನ ಭಾನುವಾರ ಸಂಜೆ ನಡೆದಿದೆ.  ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿಗೆ ಪುತ್ತೂರು ಕಡೆಯಿಂದ ಕಬಕ ಕಡೆಗೆ ಕೆದಂಬಾಡಿ ಗ್ರಾಮದ ಕೆದಂಬಾಡಿ ಗುಡ್ಡೆ ಮಹಮ್ಮದ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ರಿಕ್ಷಾ […]

ಆಟೋ ರಿಕ್ಷಾ-ಸರಕಾರಿ ಬಸ್ ಅಪಘಾತ | ಇಬ್ಬರು ಮೃತ್ಯು, ಚಾಲಕನಿಗೆ ಗಂಭೀರ ಗಾಯ Read More »

ಆಟೋ ರಿಕ್ಷಾ-ಬಸ್ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ

ಪುತ್ತೂರು: ಬಸ್‍ ಹಾಗೂ ರಿಕ್ಷಾ ಡಿಕ್ಕಿ ಹೊಡೆದುಕೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಮಂಜಲ್ಪಡ್ಪುವಿನಲ್ಲಿ ನಡೆದಿದೆ. ಅಪಘಾತದಿಂದ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಟೋ ರಿಕ್ಷಾ-ಬಸ್ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ Read More »

ಪ್ರತಿಷ್ಠಿತ ಜಿ.ಎಲ್‍. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಪ್ರಾಚೀನ ಪರಂಪರೆಯ ಚಿನ್ನಾಭರಣ ಮಹೋತ್ಸವ ‘ಜಿ.ಎಲ್‍.ಆ್ಯಂಟಿಕ್‍ ಫೆಸ್ಟ್’

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಪ್ರಾಚೀನ ಪರಂಪರೆಯ ಚಿನ್ನಾಭರಣ ಮಹೋತ್ಸವ ‘ಜಿ.ಎಲ್‍.ಆ್ಯಂಟಿಕ್‍ ಫೆಸ್ಟ್‍’ ಫೆ.24 ರಿಂದ ಆರಂಭಗೊಂಡಿದೆ. ಪುರಾತನ ಆಭರಣಗಳು ಸಾಮಾನ್ಯ ಆಭರಣಗಳಂತೆ ಇದ್ದು ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಆ್ಯಂಟಿಕ್ ಆಭರಣಗಳನ್ನು ವಜ್ರಗಳು, ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಮುತ್ತುಗಳಂತಹ ಅಮೂಲ್ಯ ಲೋಹಗಳಿಂದ ತಯಾರಿಸಲಾಗುತ್ತದೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಆಂಟಿಕ್ ಆಭರಣಗಳ ವಿಭಾಗ ‘ಪ್ರಾಚಿ’ಯಲ್ಲಿ ಗ್ರಾಹಕರ ಕಣ್ಮನ ಸೆಳೆಯುವ ಅಮೋಘ ಆಭರಣಗಳ ಸಂಗ್ರಹವಿದ್ದು ಸಂಸ್ಥೆಯು ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಆ್ಯಂಟಿಕ್‍ ಆಭರಣಗಳನ್ನು

ಪ್ರತಿಷ್ಠಿತ ಜಿ.ಎಲ್‍. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಪ್ರಾಚೀನ ಪರಂಪರೆಯ ಚಿನ್ನಾಭರಣ ಮಹೋತ್ಸವ ‘ಜಿ.ಎಲ್‍.ಆ್ಯಂಟಿಕ್‍ ಫೆಸ್ಟ್’ Read More »

ವಿಟ್ಲದ ಲಾಡ್ಜ್ ನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ

ವಿಟ್ಲ: ವ್ಯಕ್ತಿಯೊಬ್ಬರ ದೇಹ ಚಿಂತಾಜನಕ ಸ್ಥಿತಿಯಲ್ಲಿ ವಿಟ್ಲದ ಕಾವೇರಿ ಬಾ‌ರ್ ಲಾಡ್ಜ್‌ ನಲ್ಲಿ ಕಂಡು ಬಂದ ಘಟನೆ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಯನ್ನು ಕೇರಳ ಮೂಲದ ಸುಜೇಶ್ ಎಂದು ಗುರುತಿಸಲಾಗಿದೆ. ವಿಟ್ಲ ಮಂಗಳೂರು ರಸ್ತೆಯ ಕೋಡಿ ಕಾವೇರಿ ಬಾರ್ & ರೆಸ್ಟೋರೆಂಟ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರು ಕಳೆದ ಒಂದು ವಾರಗಳ ಹಿಂದೆ ಬಂದು ತಂಗಿದ್ದು. ಇಂದು ಮುಂಜಾನೆ ಲಾಡ್ಜ್ ಸಿಬ್ಬಂದಿಯವರು ಕೋಣೆಯ ಬಾಗಿಲು ತೆಗೆಯುತ್ತಿದ್ದಂತೆ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯು ರಕ್ತದ ಮಡುವಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಡಲೇ

ವಿಟ್ಲದ ಲಾಡ್ಜ್ ನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ Read More »

ಏ.1-4 : ಬಂಗೇರ ಕುಟುಂಬಸ್ಥರ ತರವಾಡು  ಮನೆಯ ಗೃಹಪ್ರವೇಶ ಮತ್ತು ದೈವಗಳ ಪುನರ್ ಪ್ರತಿಷ್ಠೆ : ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಏ.1 ರಿಂದ 4 ರ ತನಕ ನಡೆಯಲಿರುವ ಬಂಗೇರ ಕುಟುಂಬಸ್ಥರ ತರವಾಡು  ಮನೆಯ ಗೃಹಪ್ರವೇಶ ಮತ್ತು ದೈವಗಳ ಪುನರ್ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆಯನ್ನು ಇಂದು ಬೆಳಿಗ್ಗೆ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಬೆಳಿಗ್ಗೆ 10 ಗಂಟೆಗೆ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಗೇರ ಕುಟುಂಬಸ್ಥರ ತರವಾಡು ಮನೆಯ ಮುಖ್ಯಸ್ಥರಾದ ಅಣ್ಣಿ ಪೂಜಾರಿ ಕುದ್ಕೋಳಿ, ನಾರಾಯಣ ಪೂಜಾರಿ ಕೈರೋಳಿ, ರಂಜಿತ್

ಏ.1-4 : ಬಂಗೇರ ಕುಟುಂಬಸ್ಥರ ತರವಾಡು  ಮನೆಯ ಗೃಹಪ್ರವೇಶ ಮತ್ತು ದೈವಗಳ ಪುನರ್ ಪ್ರತಿಷ್ಠೆ : ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸಹಕಾರ ರತ್ನ ಡಾ.ಎಂ.ಎನ್‍.ರಾಜೇಂದ್ರ ಕುಮಾರ್, ಶಶಿಕುಮಾರ್ ರೈ ಬಾಲ್ಯೊಟ್ಟುಗೆ ಸಹಕಾರಿ ಬಂಧುಗಳಿಂದ ಅಭಿನಂದನೆ | ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಮಾಡದೇ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ : ಎಂ.ಎನ್‍.ರಾಜೇಂದ್ರ ಕುಮಾರ್‍

ಪುತ್ತೂರು: ನ್ಯಾಷನಲ್‍ಪ್ರೆಸ್ ಕೌನ್ಸಿಲ್ ಆಫ್‍ಎಸ್‍ಸಿಆರ್‍ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್‍.ರಾಜೇಂದ್ರ ಕುಮಾರ್ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಪುತ್ತೂರು ಬಂಟರ ಭವನದಲ್ಲಿ ಶನಿವಾರ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೆರವೇರಿಸಿ, ಡಾ|ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದಲ್ಲಿ ಉತ್ತುಂಗ ಸ್ಥಾನವನ್ನು ಸಾಧಿಸಿದ್ದಾರೆ. ಸುದೀರ್ಘ ಅವಧಿಗೆ ದ.ಕ.ಜಿಲ್ಲಾ

ಸಹಕಾರ ರತ್ನ ಡಾ.ಎಂ.ಎನ್‍.ರಾಜೇಂದ್ರ ಕುಮಾರ್, ಶಶಿಕುಮಾರ್ ರೈ ಬಾಲ್ಯೊಟ್ಟುಗೆ ಸಹಕಾರಿ ಬಂಧುಗಳಿಂದ ಅಭಿನಂದನೆ | ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಮಾಡದೇ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ : ಎಂ.ಎನ್‍.ರಾಜೇಂದ್ರ ಕುಮಾರ್‍ Read More »

ಕರಾವಳಿಯಲ್ಲಿ ರಮ್ಜಾನ್‌ ಉಪವಾಸ ಆರಂಭ

ನಿನ್ನೆ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ತಿಂಗಳು ಪವಿತ್ರ ವ್ರತ ಬೆಂಗಳೂರು: ಅಮವಾಸ್ಯೆಯ ಹಿಂದಿನ ದಿನ ಚಂದ್ರನ ದರ್ಶನವಾದ ಹಿನ್ನಲೆಯಲ್ಲಿ ಭಾನುವಾರದಿಂದ ದೇಶಾದ್ಯಂತ ರಮ್ಜಾನ್ ಉಪವಾಸ ಆರಂಭಗೊಂಡಿದೆ. ನಿನ್ನೆ ಕೇರಳದಲ್ಲಿ ಚಂದ್ರದರ್ಶನವಾಗಿದ್ದು, ಹೀಗಾಗಿ ಕರಾವಳಿಯಲ್ಲೂ ಇಂದಿನಿಂದಲೇ ಮುಸ್ಲಿಮರು ಉಪವಾಸ ವ್ರತ ಆರಂಭಿಸಿದ್ದಾರೆ.ಝೀನತ್ ಬಕ್ಷತ್ ಕೇಂದ್ರ ಜಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಆಗಿರುವಂತ ಎಸ್‌ಎಂ ರಶೀದ್ ಕರಾವಳಿಯಲ್ಲಿ ಚಂದ್ರನ ದರ್ಶನವಾಗಿದೆ. ಹೀಗಾಗಿ ಕರಾವಳಿಯಲ್ಲಿ ಇಂದಿನಿಂದ ರಂಜಾನ್ ಮಾಸ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ,

ಕರಾವಳಿಯಲ್ಲಿ ರಮ್ಜಾನ್‌ ಉಪವಾಸ ಆರಂಭ Read More »

ಕಾಂಗ್ರೆಸ್‌ ಯುವ ಕಾರ್ಯಕರ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ

ಬಸ್‌ ನಿಲ್ದಾಣದಲ್ಲಿದ್ದ ಅನಾಥ ಸೂಟ್‌ಕೇಸ್‌ನಲ್ಲಿತ್ತು ಹೆಣ ಚಂಡೀಗಢ: ಕಾಂಗ್ರೆಸ್‌ ಕಾರ್ಯಕರ್ತೆಯೊಬ್ಬರ ಶವ ಹರ್ಯಾಣದ ರೋಹ್ಟಕ್‌ ಜಿಲ್ಲೆಯ ಸಂಪ್ಲಾದ ಬಸ್‌ ನಿಲ್ದಾಣದಲ್ಲಿ ಸೂಟ್‌ಕೇಸ್‌ನೊಳಗೆ ಪತ್ತೆಯಾಗಿದೆ. ಇಲ್ಲಿ ಇಂದು ಸ್ಥಳೀಯಾಡಳಿತ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಯುವ ಕಾಂಗ್ರೆಸ್‌ ಕಾರ್ಯಕರ್ತೆಯ ಶವ ಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.ಕೊಲೆಯಾದ ಕಾಂಗ್ರೆಸ್‌ ಕಾರ್ಯಕರ್ತೆಯನ್ನು ಹಿಮಾನಿ ನರ್ವಾಲ್‌ (22) ಎಂದು ಗುರುತಿಸಲಾಗಿದೆ. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತೆಯಾಗಿದ್ದ ಈ ಯುವತಿ ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯಲ್ಲೂ ಭಾಗವಹಿಸಿದ್ದರು.ಬಸ್‌ ನಿಲ್ದಾಣದ ಬಳಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಶವ

ಕಾಂಗ್ರೆಸ್‌ ಯುವ ಕಾರ್ಯಕರ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ Read More »

ಜೀವನ ಪದ್ಧತಿ, ಸ್ವಾವಲಂಬಿ ಬದುಕು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ : ಸಂಜೀವ ಮಠಂದೂರು | ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‍ ಸೊಸೈಟಿಯ ಸುಳ್ಯ ಶಾಖಾ ಪ್ರಥಮ ವಾರ್ಷಿಕೋತ್ಸವ ಸಮಾರಂಭ

ಸುಳ್ಯ: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿಯ ಸುಳ್ಯ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಶನಿವಾರ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜನರ ಜೀವನ ಪದ್ಧತಿ ಸುಧಾರಣೆ ಮತ್ತು ಸ್ವಾವಲಂಬಿ ಬದುಕು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ. ಸಹಕಾರ ರಂಗ ಜನರ ಪ್ರೀತಿ ವಿಶ್ವಾಸ ಗಳಿಸಿದೆ. ಸಹಕಾರ ರಂಗ ಬಲಗೊಂಡಾಗ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂದು ಹೇಳಿದ ಅವರು, ಸಹಕಾರಿ ಸಂಘದ

ಜೀವನ ಪದ್ಧತಿ, ಸ್ವಾವಲಂಬಿ ಬದುಕು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ : ಸಂಜೀವ ಮಠಂದೂರು | ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‍ ಸೊಸೈಟಿಯ ಸುಳ್ಯ ಶಾಖಾ ಪ್ರಥಮ ವಾರ್ಷಿಕೋತ್ಸವ ಸಮಾರಂಭ Read More »

ಹಲವಾರು ಬೇಡಿಕಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆಯಿಂದ ಪ್ರತಿಭಟನೆ

ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ ಜಿಲ್ಲಾ ಸಮಿತಿಯಿಂದ ದ.ಕ ಜಿಲ್ಲೆಯ ರೈತರ ಹಲವಾರು ವರ್ಷಗಳಿಂದ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.1 ರಂದು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಹಲವು ವರ್ಷಗಳಿಂದ ಬಾಕಿಯಿರುವ ಅಕ್ರಮ-ಸಕ್ರಮ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಕುಮ್ಕಿ ಹಕ್ಕು ಅನುಭವಿಸುತ್ತಿರುವವರಿಗೆ ಭೂಮಿಯನ್ನು ಮಂಜೂರುಗೊಳಿಸಬೇಕು. ಹವಾಮಾನ ವೈಪರೀತ್ಯ ಹಾಗೂ ಪ್ರಾಕೃತಿಕ

ಹಲವಾರು ಬೇಡಿಕಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆಯಿಂದ ಪ್ರತಿಭಟನೆ Read More »

error: Content is protected !!
Scroll to Top