ಮಾ.8 : ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ವಿವೇಕ ಚೇತನ್-2025’ ಅಂತರ್ ಕಾಲೇಜು ಪ್ರತಿಭಾ ಸ್ಪರ್ಧೆ

ಪುತ್ತೂರು: ಮಾರ್ಚ್ 8 ಶನಿವಾರ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಯುವ ಪ್ರತಿಭಾ ಸಂಗಮವಾಗಲಿದ್ದು, ಅಂದು ‘ವಿವೇಕ ಚೇತನ್- 2025’ ಶಿರೋನಾಮೆಯಲ್ಲಿ ಅಂತರ್ ಕಾಲೇಜು ಮಟ್ಟದ ವಿವಿಧ ಹನ್ನೆರಡು ಸ್ಪರ್ಧೆಗಳು ನಡೆಯಲಿವೆ. ಛಾಯಾಗ್ರಹಣ, ಕಿರುಚಿತ್ರ ತಯಾರಿ, ಚರ್ಚೆ, ಪೋಸ್ಟರ್ ವಿನ್ಯಾಸಗಳು ಸೇರಿದಂತೆ ವಿವಿಧ ಆಕರ್ಷಕ ಚಿಂತನಾಶೀಲ ಸ್ಪರ್ಧೆಗಳು ನಡೆಯಲಿದ್ದು, ನೂರಾರು ಪ್ರತಿಭೆಗಳು ಅನಾವರಣಗೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಅಸಿಸ್ಟೆಂಟ್ ಪ್ರೊಫೆಸರ್’ಗಳಾದ ಹವ್ಯಶ್ರೀ ಪಿ. ಕೆ. (9482306026) ಮತ್ತು ಸುತನ್ ಕೇವಳ (9141142201) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ […]

ಮಾ.8 : ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ವಿವೇಕ ಚೇತನ್-2025’ ಅಂತರ್ ಕಾಲೇಜು ಪ್ರತಿಭಾ ಸ್ಪರ್ಧೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜ್ (ಸ್ವಾಯತ್ತ) ವಿಜ್ಞಾನ ವೇದಿಕೆ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಭಾರತೀಯ ಭೌತಶಾಸ್ತ್ರಜ್ಞ ಸರ್‍ ಸಿ.ವಿ.ರಾಮನ್‍ ಅವರ ಪರಿಣಾಮದ ಆವಿಷ್ಕಾರವನ್ನು ಸ್ಮರಿಸಲು ಕಾರ್ಯಕ್ರಮವನ್ನು ಆಯೋಜಿಸಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂಧರ್ಭದಲ್ಲಿ ಸರ್ಕಾರದ ಆದೇಶದಂತೆ ಪೂರ್ವಾಹ್ನ 10:30ಕ್ಕೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಪ್ರತಿಜ್ಞಾವಿಧಿ ನೆರವೇರಿಸಿದರು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೌತುಕ ಪ್ರವೃತ್ತಿಯ ಅಧ್ಯಯನ ಕ್ರಮವನ್ನು ಅನುಸರಿಸಿ, ಸೃಜನಶೀಲತೆಯೊಂದಿಗೆ ಆಲೋಚಿಸಬೇಕು ಎಂದು ಪ್ರೇರೇಪಿಸಿದರು.

ಸಂತ ಫಿಲೋಮಿನಾ ಕಾಲೇಜಿನಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನಾಚರಣೆ Read More »

ಇನ್ನು ಬಿಪಿಎಲ್‌ ಕಾರ್ಡ್‌ಗಳಿಗೆ ನಗದು ಹಣದ ಬದಲಾಗಿ ಅಕ್ಕಿ

ಈ ತಿಂಗಳಿನಿಂದಲೇ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಉಚಿತ ಬೆಂಗಳೂರು : ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ ಈ ತಿಂಗಳಿನಿಂದ ನಗದು ಹಣ ಸಿಗುವುದಿಲ್ಲ, ಅದರ ಬದಲಾಗಿ 5 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಸಿಗಲಿದೆ. ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಕೆಜಿ ಉಚಿತ ಅಕ್ಕಿಯ ಬದಲು ಇಷ್ಟರ ತನಕ ಅದರ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿತ್ತು. ಆದರೆ ಮಾರ್ಚ್‌ನಿಂದ ಹಣ ಬರುವುದಿಲ್ಲ, ಅದರ ಬದಲಾಗಿ ಅಕ್ಕಿಯನ್ನೇ ನೀಡಲು ಸರಕಾರ ತೀರ್ಮಾನಿಸಿದೆ. ಇನ್ನು ಮುಂದೆ

ಇನ್ನು ಬಿಪಿಎಲ್‌ ಕಾರ್ಡ್‌ಗಳಿಗೆ ನಗದು ಹಣದ ಬದಲಾಗಿ ಅಕ್ಕಿ Read More »

ಕೆಟ್ಟುನಿಂತ ರೈಲು | ಪ್ರಯಾಣಿಕರ ಪರದಾಟ

ಪುತ್ತೂರು: ಮಂಗಳೂರಿನಿಂದ ಹೊರಟಿದ್ದ ಕಣ್ಣೂರು ಎಕ್ಸ್‌’ಪ್ರೆಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪುತ್ತೂರು ರೈಲ್ವೇ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿ ಗಂಟೆಗೂ ಹೆಚ್ಚಿನ ಕಾಲ ನಿಂತ ಪರಿಣಾಮ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಯಿತು. ಭಾನುವಾರ ರಾತ್ರಿ 9.30ಕ್ಕೆ ಕಣ್ಣೂರು ಎಕ್ಸ್‌’ಪ್ರೆಸ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿತ್ತು. ಈ ರೈಲು ಬೆಳಿಗ್ಗೆ 6ರ ಸುಮಾರಿಗೆ ಬೆಂಗಳೂರಿಗೆ ತಲುಪಬೇಕಿತ್ತು, ಆದರೆ ವಿಳಂಬವಾಗುವ ಸಾಧ್ಯತೆ ಇದೆ.ಪುತ್ತೂರಿನಿಂದ ಸುಮಾರು 1.ಕಿ.ಮೀ ಮುಂದೆ ಸಾಗಿದ ರೈಲು ಅಚನಕಾಗಿ ನಿಂತಿದೆ. ಸುಮಾರು ಒಂದು ಗಂಟೆಗಳ ಕಾಲ ಕೆಟ್ಟು

ಕೆಟ್ಟುನಿಂತ ರೈಲು | ಪ್ರಯಾಣಿಕರ ಪರದಾಟ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ತೆರೆ | ಜಯಗಳಿಸಿದ ಕೋಣಗಳ ಫಲಿತಾಂಶ ಈ ಕೆಳಗಿನಂತಿದೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಫೈನಲ್ ಹಣಾಹಣಿಯೊಂದಿಗೆ ಭಾನುವಾರ ಸಂಜೆ ಸಂಪನ್ನಗೊಂಡಿತು. ಕಂಬಳ ಕೂಟದಲ್ಲಿ ಸುಮಾರು 170 ಜೋಡಿ ಕೋಣಗಳು ಈ ಬಾರಿ ಭಾಗವಹಿಸಿದ್ದವು. ಕೋಟಿ-ಚೆನ್ನಯ ಜೋಡುಕರೆ ಕಂಬಳ ಫಲಿತಾಂಶ : ಹಗ್ಗ ಹಿರಿಯ : ಪ್ರಥಮ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್  (ಕೋಣ ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕಾರ್ತಿಕ್ ಗೌಡ), ದ್ವಿತೀಯ  ನಂದಳಿಕೆ ಶ್ರೀಕಾಂತ್ ಭಟ್. ಹಗ್ಗ ಕಿರಿಯ: ಪ್ರಥಮ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ (ಮಂಗಲ್ಪಾಡಿ

ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ತೆರೆ | ಜಯಗಳಿಸಿದ ಕೋಣಗಳ ಫಲಿತಾಂಶ ಈ ಕೆಳಗಿನಂತಿದೆ Read More »

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೇ ಗೆಲುವು | ಸಹಕಾರ ಭಾರತಿ ತಂಡಕ್ಕೆ ಮುಖಭಂಗ

ಕಡಬ: ಆಲಂಕಾರು ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೊನೆಗೂ ಸಹಕಾರ ಭಾರತಿ ವಿರುದ್ಧದ ಬಂಡಾಯ ಎದ್ದ ತಂಡ ಜಯಗಳಿಸುವ ಮೂಲಕ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಮುಖಭಂಗ ಉಂಟಾಗಿದೆ. ಇದೀಗ ನ್ಯಾಯಾಲಯದ ಆದೇಶದ ಅರ್ಹ ಮತದಾರರ ಮತದಾನದ ಹೊರತಾಗಿ ರಮೇಶ್ ಭಟ್ ಉಪ್ಪಂಗಳ ನೇತೃತ್ವದ ಸಹಕಾರಿ ಬಳಗ ಜಯಭೇರಿ ಭಾರಿಸಿದ್ದು ಹನ್ನೆರಡು ಸ್ನಾನಗಳ ಪೈಕಿ ಹತ್ತರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೇವಲ ಎರಡು

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೇ ಗೆಲುವು | ಸಹಕಾರ ಭಾರತಿ ತಂಡಕ್ಕೆ ಮುಖಭಂಗ Read More »

ಹಸಿಮೀನು ಗಂಟಲಲ್ಲಿ ಸಿಲುಕಿ ಯುವಕ ಸಾವು!

ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಒಂದು ಮೀನು ಗಂಟಲೊಳಗೆ ಹೋದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಭಾನುವಾರ ನಡೆದಿದೆ. ಮೃತ ಯುವಕನನ್ನು ಪುತ್ತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ 4.30ರ ಸುಮಾರಿಗೆ ಆದರ್ಶ್‌ ಸ್ನೇಹಿತರೊಂದಿಗೆ ಗದ್ದೆಗೆ ನೀರು ಹಾಯಿಸಿ ಮೀನು ಹಿಡಿಯುತ್ತಿದ್ದಾಗ ಈ ಘಟನೆ ನಡೆದಿದೆ. ಇನ್ನೊಂದು ಮೀನನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಮೀನೊಂದು ಆತನ ಬಾಯಿ ಕಚ್ಚಿಕೊಂಡು ಗಂಟಲೊಳಗೆ ಹೋಗಿ ಸಿಲುಕಿಕೊಂಡಿದೆ. ಕೂಡಲೇ ಯುವಕನನ್ನು

ಹಸಿಮೀನು ಗಂಟಲಲ್ಲಿ ಸಿಲುಕಿ ಯುವಕ ಸಾವು! Read More »

ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆ ಶವ ಪತ್ತೆ ಪ್ರಕರಣ : ಓರ್ವ ಆರೋಪಿ ಸೆರೆ

ಕಾಂಗ್ರೆಸ್‌ನವರಿಂದಲೇ ಕೊಲೆ ಎಂದು ಆರೋಪಿಸಿದ ತಾಯಿ ಚಂಡೀಗಢ: ಹರ್ಯಾಣದ ಯುವ ಕಾಂಗ್ರೆಸ್ ಕಾರ್ಯಕರ್ತೆಯ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಕೆಲವರ ಕೈವಾಡ ಇದೆ ಎಂದು ಆಕೆಯ ತಾಯಿ ಆರೋಪಿಸಿದ ಬೆನ್ನಿಗೆ ಹರ್ಯಾಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪುರಸಭೆ ಚುನಾವಣೆಗೆ ಒಂದು ದಿನ ಮೊದಲು ಹರ್ಯಾಣದ ರೋಹ್ಟಕ್‌ ಜಿಲ್ಲೆಯ ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್‌ಕೇಸ್‌ನಲ್ಲಿ ಹಿಮಾನಿ ನರ್ವಾಲ್‌ ಎಂಬ 22ರ ಹರೆಯದ ಯುವತಿಯ ಶವ ಪತ್ತೆಯಾಗಿತ್ತು. ಹಿಮಾನಿ ನರ್ವಾಲ್, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ

ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆ ಶವ ಪತ್ತೆ ಪ್ರಕರಣ : ಓರ್ವ ಆರೋಪಿ ಸೆರೆ Read More »

ಹಲವು ಅಸ್ತ್ರಗಳೊಂದಿಗೆ ದಾಳಿಗೆ ವಿಪಕ್ಷ ಸಿದ್ಧ : ಭಾರಿ ಜಟಾಪಟಿ ನಿರೀಕ್ಷೆ

ಇಂದಿನಿಂದ ವಿಧಾನ ಮಂಡಲ ಬಜೆಟ್‌ ಅಧಿವೇಶನ ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ, ಆರೋಪ- ಪ್ರತ್ಯಾರೋಪ, ಚರ್ಚೆಗೆ ವೇದಿಕೆ ಸಿದ್ಧವಾಗಿದೆ. ಗ್ಯಾರಂಟಿಯ ಪ್ರಯೋಜನಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದಿರುವುದು ಸೇರಿದಂತೆ ಎರಡು ತಿಂಗಳಿನಿಂದ ಆಗಿರುವ ಬೆಳವಣಿಗೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಮೂಡಿದೆ.ಹಾಡಹಗಲೇ ನಡೆದ ಬ್ಯಾಂಕ್‌ಗಳ ದರೋಡೆ, ಮೈಸೂರಿನ ಉದಯಗಿರಿ ಠಾಣೆ ಮೇಲಿನ ದಾಳಿ, ಅತ್ಯಾಚಾರ – ಹತ್ಯೆ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕಾನೂನು

ಹಲವು ಅಸ್ತ್ರಗಳೊಂದಿಗೆ ದಾಳಿಗೆ ವಿಪಕ್ಷ ಸಿದ್ಧ : ಭಾರಿ ಜಟಾಪಟಿ ನಿರೀಕ್ಷೆ Read More »

ಮಾ.15 : ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಾ ಕೋಲ್ಚಾರ್ ಗೆ ಅಭಿನಂದನೆ | ಹಿತೈಷಿ ಬಳಗದಿಂದ ಅಭಿನಂದನಾ ಸಮಿತಿ ರಚನೆ

ಸುಳ್ಯ: ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೊಪರೆಟಿವ್ ಸೊಸೈಟಿಯ ಪೂರ್ವಾಧ್ಯಕ್ಷ, ಹಾಲಿ ನಿರ್ದೇಶಕ, ದ.ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ  ದ.ಕ. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾಗಿರುವ ಸಹಕಾರಿ ರತ್ನ ಪುರಸ್ಕೃತ ರಾದ ಚಂದ್ರ ಕೋಲ್ಚಾರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಮಾ.15 ರಂದು ಸಂಜೆ ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಅಭಿನಂದಿಸುವ ನಿಟ್ಟಿನಲ್ಲಿ

ಮಾ.15 : ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಾ ಕೋಲ್ಚಾರ್ ಗೆ ಅಭಿನಂದನೆ | ಹಿತೈಷಿ ಬಳಗದಿಂದ ಅಭಿನಂದನಾ ಸಮಿತಿ ರಚನೆ Read More »

error: Content is protected !!
Scroll to Top