ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳಂದೂರು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ

ಕಾಣಿಯೂರು: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ. ಕರಕುಶಲ ವಸ್ತುಗಳ ತಯಾರಿ ಸ್ಪರ್ಧೆಯಲ್ಲಿ  ದ್ವಿತೀಯ ಬಿಕಾಂನ ರಂಜನ್ ಕೆ.ಎಸ್., ಪ್ರಥಮ ಬಿಎ ಯ ರಶ್ಮಿ ಎಲ್. ಪ್ರಥಮ ಬಿ.ಎ. ಪ್ರಥಮ ಬಹುಮಾನ ಪಡೆದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ್ ಭಟ್ ತಿಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.

ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳಂದೂರು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ Read More »

ಕಾಯಿಮಣ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲ ನೇಮೋತ್ಸವ ಆರಂಭ- ಧ್ವಜಾರೋಹಣ | ಮಾ.24 ರಂದು ರಾತ್ರಿ ಶ್ರೀ ಚಾಮುಂಡಿ ದೈವದ ನೇಮೋತ್ಸವ

ಕಾಣಿಯೂರು: ಕಾಯಿಮಣ ಗ್ರಾಮದ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲ ನೇಮೋತ್ಸವ ಮಾ 20ರಂದು ಪ್ರಾರಂಭಗೊಂಡಿತು. ರಾತ್ರಿ ದೈವಗಳ ಭಂಡಾರ ತೆಗೆದು, ಕಲ್ಲಮಾಡದಲ್ಲಿ ಧ್ವಜಾರೋಹಣ ನಡೆಯಿತು. ಮಾ 21ರಂದು ಕಲ್ಲಮಾಡದಲ್ಲಿ ಧ್ವಜಾಪೂಜೆ, ಮಾ 22ರಂದು ಬೆಳಿಗ್ಗೆ ಮಲ್ಲಾರ ದೈವದ ನೇಮೋತ್ಸವ, ದೈಯರ ದೈವದ ನೇಮೋತ್ಸವ, ರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ 23ರಂದು ಮಧ್ಯಾಹ್ನ ಎಲ್ಯಾರ ದೈವದ ನೇಮೋತ್ಸವ, ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ನಾಯರ್ ದೈವದ ನೇಮೋತ್ಸವ, ರಾತ್ರಿ ಅಂಙಣ ಪಂಜುರ್ಲಿ ಮತ್ತು ಗುಳಿಗ ದೈವದ ನೇಮೋತ್ಸವ

ಕಾಯಿಮಣ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲ ನೇಮೋತ್ಸವ ಆರಂಭ- ಧ್ವಜಾರೋಹಣ | ಮಾ.24 ರಂದು ರಾತ್ರಿ ಶ್ರೀ ಚಾಮುಂಡಿ ದೈವದ ನೇಮೋತ್ಸವ Read More »

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಖೋ ಖೋ ಪಂದ್ಯಾಟ | ವಿವೇಕಾನಂದ ಕಾಲೇಜಿನ ಬಾಲಕರ ತಂಡ ದ್ವಿತೀಯ, ಬಾಲಕಿಯರ ತಂಡ ತೃತೀಯ

ಪುತ್ತೂರು: ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪ್ರಸ್ತುತ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜಿನ ಬಾಲಕರ ತಂಡವು ದ್ವಿತೀಯ ಹಾಗೂ ಬಾಲಕಿಯರ ತಂಡವು ತೃತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿ ದಿವ್ಯಾ ಆಲ್ ರೌಂಡರ್ ಪ್ರಶಸ್ತಿಯನ್ನು ಹಾಗೂ ಬಾಲಕರ ವಿಭಾಗದಲ್ಲಿ ಪ್ರಥಮ ಬಿಎಸ್ ಸ್ಸಿ ವಿದ್ಯಾರ್ಥಿ ಸುಹಾಸ್ ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್, ಡಾ.ಜ್ಯೋತಿಕುಮಾರಿ

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಖೋ ಖೋ ಪಂದ್ಯಾಟ | ವಿವೇಕಾನಂದ ಕಾಲೇಜಿನ ಬಾಲಕರ ತಂಡ ದ್ವಿತೀಯ, ಬಾಲಕಿಯರ ತಂಡ ತೃತೀಯ Read More »

ಮಾ.22 ರಿಂದ 24 : ವಿವೇಕಾನಂದ ಸ್ವಾಯತ್ತ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ, ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ, ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತರ ವಿಭಾಗದ ದಶಮಾನೋತ್ಸವ ಮತ್ತು ಪದವಿ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ ಮಾ.22 ರಂದು ನಡೆಯಲಿದೆ. ಮಾ.23ಕ್ಕೆ ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಹಾಗು ಮಾ.24ಕ್ಕೆ ಕಾಲೇಜು ವಾರ್ಷಿಕೋತ್ಸವ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ ಎಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸಂಚಾಲಕ, ನ್ಯಾಯವಾದಿ ಮುರಳಿಕೃಷ್ಣ ಕೆ.ಎನ್. ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ

ಮಾ.22 ರಿಂದ 24 : ವಿವೇಕಾನಂದ ಸ್ವಾಯತ್ತ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ, ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ, ವಾರ್ಷಿಕೋತ್ಸವ ಸಮಾರಂಭ Read More »

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಅಳಿಕೆಯ  ಮುಳಿಯ ಆಶಕ್ತ ಕುಟುಂಬಕ್ಕೆ  ವಾತ್ಸಲ್ಯ  ಮನೆ ಹಸ್ತಾಂತರ

ಶ್ರೀಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ  ಟ್ರಸ್ಟ್ (ರಿ) ವಿಟ್ಲ  ಅಳಿಕೆ ಗ್ರಾಮದ ಮುಳಿಯ   ವಾತ್ಸಲ್ಯ ಮನೆ  ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಪದ್ಮನಾಭ ಪೂಜಾರಿ ಮಾತನಾಡಿ, ಸಣ್ಣಗುತ್ತು  ಅವರು, ಜಾಗ ಹಾಗೂ ದಾಖಲೆ ಇದ್ದಾಗ ಮಾತ್ರ ಸರಕಾರದ ಸವಲತ್ತುಗಳನ್ನು ಪಡೆಯಬಹುದು. ಹಿಂದಿನ ಅವಧಿಯಲ್ಲಿ ಫಲಾನುಭವಿಗಳಿಗೆ ಪಂಚಾಯಿತಿಯಿಂದ 275 ಮನೆಯನ್ನು ವಿತರಿಸಲಾಗಿದೆ. ಗ್ರಾಮಕ್ಕೆ ಸರ್ಕಾರದ ಮನೆ ಬಂದರೂ  ಪಲಾನುಭವಿಗಳಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದಾಖಲೆ ಪತ್ರ ಇರುವ ಫಲಾನುಭವಿಗಳಿಗೆ ಪಂಚಾಯಿತಿ ಹಾಗೂ ಯೋಜನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಅಳಿಕೆಯ  ಮುಳಿಯ ಆಶಕ್ತ ಕುಟುಂಬಕ್ಕೆ  ವಾತ್ಸಲ್ಯ  ಮನೆ ಹಸ್ತಾಂತರ Read More »

ಬೆಳಗಾವಿ ವಿವಿ ಎಂಜಿನಿಯರಿಂಗ್‍ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟ | ಪುತ್ತೂರಿನ ಅನಘಾ 4×400 ಹರ್ಡಲ್ಸ್ ನಲ್ಲಿ ಪ್ರಥಮ

ಪುತ್ತೂರು :  ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ ಮಹಿಳಾ ವಿಭಾಗದ 4×400 ಮೀ. ಹರ್ಡಲ್ಸ್ ನಲ್ಲಿ ಪುತ್ತೂರಿನ ಕೆ.ಎ.ಅನಘಾ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಘಾ ಪುತ್ತೂರು ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಹಾಗೂ ಕವಿತ ಅನಿಲ್ ದಂಪತಿ ಪುತ್ರಿ. ಪ್ರಸ್ತುತ ಮಂಗಳೂರಿನ ಸೆಂಟ್‍ ಜೋಸೆಫ್‍ ಎಂಜಿನಿಯರಿಂಗ್‍ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ಬೆಳಗಾವಿ ವಿವಿ ಎಂಜಿನಿಯರಿಂಗ್‍ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟ | ಪುತ್ತೂರಿನ ಅನಘಾ 4×400 ಹರ್ಡಲ್ಸ್ ನಲ್ಲಿ ಪ್ರಥಮ Read More »

ಹೈಕೋರ್ಟ್‌ ಜಡ್ಜ್‌ ಮನೆಯಲ್ಲಿತ್ತು ನೋಟಿನ ರಾಶಿ

ಬೆಂಕಿ ಅವಘಡ ಸಂದರ್ಭದಲ್ಲಿ ಪತ್ತೆಯಾಯಿತು ಹಣ ಹೊಸದಿಲ್ಲಿ: ಬೆಂಕಿ ಅವಘಡ ಸಂದರ್ಭದಲ್ಲಿ ಹೈಕೋರ್ಟ್‌ ನ್ಯಾಯಾಧೀಶರೊಬ್ಬರ ಮನೆಯಲ್ಲಿ ನೋಟಿನ ರಾಶಿಯೇ ಪತ್ತೆಯಾಗಿದೆ. ಜಸ್ಟಿಸ್‌ ಯಶವಂತ್‌ ವರ್ಮ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಪಡೆಯನ್ನು ಕರೆಸಲಾಗಿತ್ತು. ಅಗ್ನಿಶಾಮಕ ಪಡೆಯವರು ಬೆಂಕಿ ನಂದಿಸಿದ ಬಳಿಕ ಮನೆಯ ಬೇರೆ ಬೇರೆ ಕೋಣೆಗಳಲ್ಲಿ ನೋಟಿನ ರಾಶಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸುಪ್ರೀಂ ಕೋರ್ಟ್‌ ಈ ನ್ಯಾಯಾಧೀಶರನ್ನು ವರ್ಗಾಯಿಸಲು ಆದೇಶಿಸಿದೆ. ಯಶವಂತ್‌ ವರ್ಮ ಅವರಿಗೆ ನೀಡಿದ್ದ ಸರಕಾರಿ ಬಂಗಲೆಯಲ್ಲೇ

ಹೈಕೋರ್ಟ್‌ ಜಡ್ಜ್‌ ಮನೆಯಲ್ಲಿತ್ತು ನೋಟಿನ ರಾಶಿ Read More »

ವಿಮಾನದಲ್ಲೇ ಪ್ರಯಾಣಿಕ ಸಾವು

ಲ್ಯಾಂಡ್‌ ಆದ ಬಳಿಕವಷ್ಟೆ ಸಿಬ್ಬಂದಿಗೆ ತಿಳಿಯಿತು ಲಖನೌ: ದೆಹಲಿಯಿಂದ ಲಕ್ನೋಗೆ ಬಂದಿಳಿದ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಆದರೆ ಪ್ರಯಾಣಿಕ ಮೃತಪಟ್ಟ ವಿಚಾರ ವಿಮಾನದ ಸಿಬ್ಬಂದಿಗೆ ತಿಳಿದದ್ದು ವಿಮಾನ ಲ್ಯಾಂಡ್‌ ಆದ ಬಳಿಕ. ಮೃತ ವ್ಯಕ್ತಿಯನ್ನು ಆಸಿಫುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 8.10ಕ್ಕೆ ವಿಮಾನ ಲಖನೌ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು, ಸಿಬ್ಬಂದಿ ಪ್ರಯಾಣಿಕನನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ವಿಮಾನದಲ್ಲಿದ್ದ ವೈದ್ಯರು ಪ್ರಯಾಣಿಕನನ್ನು

ವಿಮಾನದಲ್ಲೇ ಪ್ರಯಾಣಿಕ ಸಾವು Read More »

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಅಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ

ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು ಅವರು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಕಲ್ಚರಲ್ ಫೆಸ್ಟ್ ಕಾರ್ಯಕ್ರಮ ನಡೆಯಿತು. ಇದರಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬ್ರಾಂಡ್ ರಂಗೋಲಿ ಸ್ಪರ್ಧೆಯಲ್ಲಿ  ಸಿಂಚನ ಪಿ ಹಾಗೂ ಭಾರತಿ ಎಂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ (ಸ್ವಾಯತ್ತ) ಉಜಿರೆ, ಆಯೋಜಿಸಿದಂತಹ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ಫೆಸ್ಟ್ ನಲ್ಲಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಅಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ  ಕೇಪು ವಲಯದ  ಮಾಣಿಲದಲ್ಲಿ  ಟೈಲರಿಂಗ್  ತರಬೇತಿ ಸಮಾರೋಪ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕಿನ ಕೇಪು ವಲಯದ ಮಾಣಿಲ  ವ್ಯವಸಾಯ ಸೇವಾ ಸಹಕಾರ ಭವನದಲ್ಲಿ  ಕಳೆದ 3  ತಿಂಗಳಿನಿಂದ ಹೊಲಿಗೆ ತರಬೇತಿಯನ್ನು ಆರಂಭಿಸಿದ್ದು  ಈ ತರಬೇತಿಯಲ್ಲಿ 20 ಮಂದಿ ಸದಸ್ಯರು ಪ್ರಯೋಜನವನ್ನು ಪಡೆದಿದ್ದು, ಬೆರಿಪದವು   ಹೊಲಿಗೆ ಕೇಂದ್ರದ ಶಿಕ್ಷಕರಾದ ಸರೋಜಿನಿ ಇವರು ತರಬೇತಿಯನ್ನು ನೀಡಿರುತ್ತಾರೆ. ಈ ದಿನ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮವು ಮಾಣಿಲ  ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಮೂಲ್ಯ  ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು 

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ  ಕೇಪು ವಲಯದ  ಮಾಣಿಲದಲ್ಲಿ  ಟೈಲರಿಂಗ್  ತರಬೇತಿ ಸಮಾರೋಪ ಸಮಾರಂಭ Read More »

error: Content is protected !!
Scroll to Top