ಅಣ್ಣನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ

ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಕೃತ್ಯ ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಅತ್ಯಾಚಾರ ನಡೆದಿದೆ. ಬುಧವಾರ ಮಧ್ಯರಾತ್ರಿ ಕೆ.ಆರ್​ ಪುರಂ ರೈಲ್ವೆ ಸ್ಟೇಷನ್​ನಿಂದ ಅಣ್ಣನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಹಾರದ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಯುವತಿಯ ಅಣ್ಣನ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಮಾದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಆಕೆಯನ್ನು ಕರೆದುಕೊಂಡು ಹೋಗಲು ದೊಡ್ಡಮ್ಮನ ಮಗ ಬಂದಿದ್ದರು.ಅಲ್ಲಿಂದ ಅವರು […]

ಅಣ್ಣನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ Read More »

ಸಂಪಾದಕೀಯ – ವಕ್ಫ್‌ ಮಸೂದೆ ಅಂಗೀಕಾರ ಮೋದಿಯ ದಿಟ್ಟ ನಿರ್ಧಾರಕ್ಕೆ ಸಂದ ಜಯ

ಮಿತ್ರಪಕ್ಷಗಳ ಹಂಗಿನಲ್ಲಿದ್ದರೂ ದೇಶಕ್ಕೆ ಒಳಿತಾಗುವ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದುಕೊಳ್ಳಲು ಸಾಧ್ಯವಾಗದೆ ಮಿತ್ರಪಕ್ಷಗಳ ನೆರವಿನಿಂದ ಸರಕಾರ ರಚಿಸುವ ಅನಿವಾರ್ಯತೆಯಲ್ಲಿ ಸಿಲುಕಿದಾಗ ಈ ಅವಧಿಯಲ್ಲಿ ಬಿಜೆಪಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಎಲ್ಲ ವಿಚಾರಗಳಿಗೂ ಮಿತ್ರಪಕ್ಷಗಳ ಮನವೊಲಿಸಿ ಅಂಗಲಾಚಬೇಕಾಗಬಹುದು ಎಂಬ ಅಭಿಪ್ರಾಯವೊಂದು ಕೇಳಿಬಂದಿತ್ತು. ಆದರೆ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಯಶಸ್ವಿಯಾಗಿ ಅಂಗೀಕಾರಗೊಂಡಿರುವುದು ಈ ಅಭಿಪ್ರಾಯವನ್ನು ಸುಳ್ಳಾಗಿಸಿದೆ. ಪೂರ್ಣ ಬಹುಮತ ಇಲ್ಲದಿದ್ದರೂ ದೇಶಕ್ಕೆ ಒಳಿತಾಗುವ ದಿಟ್ಟ ನಿರ್ಧಾರ

ಸಂಪಾದಕೀಯ – ವಕ್ಫ್‌ ಮಸೂದೆ ಅಂಗೀಕಾರ ಮೋದಿಯ ದಿಟ್ಟ ನಿರ್ಧಾರಕ್ಕೆ ಸಂದ ಜಯ Read More »

ಕೋಟ್ಯಂತರ  ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ |  ಚುರುಕಿನ ತನಿಖೆಗಾಗಿ ವಿಶೇಷ ತಂಡ ರಚನೆ

ಬಜಪೆ: ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಪೇಟೆಯ ಮನೆಯೊಂದರಲ್ಲಿ ಸೋಮವಾರ ಮಧ್ಯರಾತ್ರಿ ಬಳಿಕ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತಂಡಗಳ ತನಿಖೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಿಗುಭದ್ರತೆಯಲ್ಲಿ ಮನೆಯೊಳಗಿದ್ದ ಲಾಕರ್ ಒಡೆದು ಸುಮಾರು 80 ಲಕ್ಷ ರೂ. ಮೌಲ್ಯದ ಅಂದಾಜು 1ಕೆ.ಜಿಯಷ್ಟು ಚಿನ್ನಾಭರಣಗಳನ್ನು ಲೂಟಿಗೈದಿರುವ ಬಗ್ಗೆ ಪೊಲೀಸ್ ಮೂಲಗಳು ಈಗಾಗಲೇ ಧೃಡಪಡಿಸಿವೆ. ಪ್ರಕರಣದ ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಪತ್ತೆಗಾಗಿ ಮನೆಯ ಪರಿಸರದಲ್ಲಿ ಶೋಧಕಾರ್ಯ ನಡೆಸಲಾಗಿದ್ದು ಮನೆಗೆ‌‌‌ ಸಂಬಂಧಿಸಿದ ವ್ಯಕ್ರಿಗಳನ್ನು ವಿಚಾರಣೆಗೆ

ಕೋಟ್ಯಂತರ  ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ |  ಚುರುಕಿನ ತನಿಖೆಗಾಗಿ ವಿಶೇಷ ತಂಡ ರಚನೆ Read More »

ಸಂತ ಫಿಲೋಮಿನಾದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಯಕ್ಷ ಕಲಾಕೇಂದ್ರ ಹಾಗೂ ಲಲಿತಕಲಾ ಸಂಘದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐಕ್ಯೂಎಸಿ ಸಂಯೋಜಕಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಾಲಿನಿ ಕೆ.  ‘ರಂಗಭೂಮಿಯಲ್ಲಿ ಸೃಜನಶೀಲತೆ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ,  ರಂಗಭೂಮಿಯು ನಿರಂತರತೆಯನ್ನು ಹೊಂದಿ ಹೊಸ ಸ್ವರೂಪಗಳಿಗೆ ತೆರೆದಿರಬೇಕಾದ ಅಗತ್ಯತೆಯ ಬಗ್ಗೆ ತಿಳಿಸುತ್ತಾ, ರಂಗಭೂಮಿಯ ಪ್ರಸ್ತುತಿಯನ್ನು ಅನುಭವಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಡಾ. ಆ್ಯಂಟನಿ ಪ್ರಕಾಶ್‍ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ,

ಸಂತ ಫಿಲೋಮಿನಾದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ Read More »

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ

ಮಧ್ಯರಾತ್ರಿವರೆಗೂ ನಡೆದ ಬಿರುಸಿನ ಚರ್ಚೆ; ರಾತ್ರಿ 1.15ಕ್ಕೆ ಮತದಾನ ನವದೆಹಲಿ: ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್​ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಸದನವು ವಿರೋಧ ಪಕ್ಷದ ಎಲ್ಲ ತಿದ್ದುಪಡಿಗಳನ್ನು ಧ್ವನಿಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15ಕ್ಕೆ ಮತದಾನ

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ Read More »

ಬೈಕ್‌ ಟ್ಯಾಕ್ಸಿ ಸೇವೆ 6 ವಾರದಲ್ಲಿ ಸ್ಥಗಿತ : ಹೈಕೋರ್ಟ್‌ ಆದೇಶ

ನಿಯಮ ಇಲ್ಲದೆ ಬೈಕ್‌ ಟ್ಯಾಕ್ಸಿ ಓಡಾಡುವಂತಿಲ್ಲ ಎಂದ ನ್ಯಾಯಾಲಯ ಬೆಂಗಳೂರು: ಬೆಂಗಳೂರಿನಲ್ಲಿ ಬಹಳ ಜನಪ್ರಿಯವಾಗಿರುವ ಬೈಕಜ್‌ ಟ್ಯಾಕ್ಸಿ ಸೇವೆಯನ್ನು 6 ವಾರಗಳಲ್ಲಿ ಸ್ಥಗಿತಗೊಳಿಸಲು ಹೈಕೋರ್ಟ್‌ ಆದೇಶಿಸಿದೆ. ಓಲಾ, ಉಬರ್ ಕಂಪನಿಗಳು ಬೆಂಗಳೂರು ಸೇರಿ ಕೆಲವು ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿವೆ.2022ರಲ್ಲಿ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ

ಬೈಕ್‌ ಟ್ಯಾಕ್ಸಿ ಸೇವೆ 6 ವಾರದಲ್ಲಿ ಸ್ಥಗಿತ : ಹೈಕೋರ್ಟ್‌ ಆದೇಶ Read More »

44ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ (ಏ.3) ರಂದು ಸಂಜೆ 4-30 ಕ್ಕೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನೆಮಾ 44ನೇ ದಿನಕ್ಕೆ ಕಾಲಿರಿಸಿದ್ದು, ಯಶಸ್ವಿಯಾಗಿ ಮುನ್ನಡೆಯುವ ಮೂಲಕ ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.3 ಗುರುವಾರ ಸಂಜೆ 4.30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

44ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ (ಏ.3) ರಂದು ಸಂಜೆ 4-30 ಕ್ಕೆ ಶೋ Read More »

ಮುಂಡಾಜೆಯಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ

ಮುಂಡಾಜೆ : ಗ್ರಾಮದ ಕೊಟ್ಟೂಟ್ಟುವಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಇಂದು ಬೆಳಗ್ಗೆ  ನಡೆಯಿತು. ಘಟನೆಯಿಂದ ಸುಮಾರು ಒಂದೂವರೆ ಎಕರೆಯಷ್ಟು ಸ್ಥಳ ಸುಟ್ಟೋಗಿದೆ.  ಸ್ಥಳೀಯ ಪರಿಸರದಲ್ಲಿ ಮನೆಗಳಿದ್ದು,  ಜನರಲ್ಲಿ ಆತಂಕಕ್ಕೆ ಗುರಿಯಾಗಿದೆ. ಗ್ರಾಮ ಪಂಚಾಯತ್‍ ಅಧ್ಯಕ್ಷ ಗಣೇಶ ಬಂಗೇರ , ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ಮನೆಗಳತ್ತ ಹರಡದಂತೆ ಮುನ್ನೆಚ್ಚರಿಕೆ ವಹಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದೆ ಬೆಂಕಿಯನ್ನು ನಂದಿಸಲು  ನೀರಿನ ಟ್ಯಾಂಕ‌ರ್ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಬಳಿಕ

ಮುಂಡಾಜೆಯಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ Read More »

ಬೈಕ್‍ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ  ಮಹಿಳೆ

ಉಡುಪಿ : ರಸ್ತೆಯಲ್ಲಿ ನಡೆದುಕೊಂಡು ಹೋದ ಮಹಿಳೆಯೋರ್ವಳಿಗೆ ಬೈಕ್‍ ಸವಾರ ಡಿಕ್ಕಿಹೊಡೆದು, ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಮೃತ ಮಹಿಳೆ ಮೇರಿವಾಜ್ ಮಿಯಾರು ನಿವಾಸಿಯಾಗಿದ್ದು ರಸ್ತೆ ಬದಿ ನಡೆದುಕೊಂಡು ಬರುತ್ತಿರುವಾಗಲೇ ಹಿ೦ಬದಿಯಿ೦ದ ವೇಗವಾಗಿ ಬಂದ ಬೈಕ್ ಸವಾರ ಸಂತೋಷ್ ಎಂಬವರು ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಮಹಿಳೆ ಕೆಲ ದೂರ ಹೋಗಿ ಬಿದ್ದಿದ್ದು ಅಪಘಾತದ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸಂತೋಷ್ ಕೂಡ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ

ಬೈಕ್‍ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ  ಮಹಿಳೆ Read More »

ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ದ ಪತ್ತೆ

ಉಪ್ಪಿನಂಗಡಿ : ಗುಡ್ಡೆಯೊಂದರಲ್ಲಿ ಹಿಂದೂ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧನೋರ್ವ ಸಿಕ್ಕಿ ಬಿದ್ದ ಘಟನೆ ಉಪ್ಪಿನಂಗಡಿಯ ಇಳಂತಿಲದಲ್ಲಿ ನಡೆದಿದೆ. ಕಾರ್ವೆಲ್ ನಿವಾಸಿಯಾದ ವೃದ್ದ ಹಿಂದೂ ಮಹಿಳೆಯೊಂದಿಗೆ ಇದ್ದುದನ್ನು ಕಂಡ ಸ್ಥಳೀಯರು ಇಬ್ಬರನ್ನು ಹಿಡಿದು ಬೆನ್ನಟ್ಟಿದ್ದಾರೆ. ವೃದ್ಧನಿಗೆ 65 ವರ್ಷ ವಯಸ್ಸಾಗಿದ್ದು ಏಳು ಜನ ಮಕ್ಕಳಿದ್ದಾರೆ ಆದರೂ ಈ ರೀತಿ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ದ ಪತ್ತೆ Read More »

error: Content is protected !!
Scroll to Top