ಕಾರು – ರಿಕ್ಷಾ ನಡುವೆ ಡಿಕ್ಕಿ | ನಾಲ್ವರಿಗೆ ಗಾಯ  

ಮೂಲ್ಕಿ: ಮಂಗಳೂರಿನಿಂದ ಮೂಲ್ಕಿ ಕಾರ್ನಾಡು ಕಡೆಗೆ ಬರುತ್ತಿದ್ದ ರಿಕ್ಷಾ ಒಂದಕ್ಕೆ ಕಾರೊಂದು ಹಿಂಬದಿಯಿಂದ ಢಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಚಾಲಕ ಸೇರಿ ನಾಲ್ವರು ಗಾಯಗೊಂಡ ಘಟನೆ ಮೂಲ್ಕಿಯ ಕೊಲ್ಲಾಡು ಹೆದ್ದಾರಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ರಿಕ್ಷಾ ಚಾಲಕ ಅಬ್ದುಲ್ ಬಶೀರ್ (35), ಪ್ರಯಾಣಿಕರಾದ ಮರಕಡದ ಶೋಭಾ (55), ಕುಂಜತ್ತಬೈಲ್‌ನ ಭವಾನಿ (65) ಮತ್ತು ಪಣಂಬೂರಿನ ವಸಂತಿ (72) ಎನ್ನಲಾಗಿದೆ. ಕಾರು ಹತೋಟಿ ಕಳೆದುಕೊಂಡು ನಿಧಾನವಾಗಿ ಮೂಲ್ಕಿಯತ್ತ ಹೋಗುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ರಿಕ್ಷಾ ಚಾಲಕ ಒಂದಷ್ಟು […]

ಕಾರು – ರಿಕ್ಷಾ ನಡುವೆ ಡಿಕ್ಕಿ | ನಾಲ್ವರಿಗೆ ಗಾಯ   Read More »

ಗೇರುಕಟ್ಟೆಯಲ್ಲಿ 12 ದಿನಗಳ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕಕೇಂದ್ರ ಕಛೇರಿ ತುಮಕೂರು ನೇತ್ರಾವತಿ ವಲಯ ಬೆಳ್ತಂಗಡಿ ತಾಲೂಕು ಕಳಿಯ ಶಾಖೆಯ ವತಿಯಿಂದ  ಕ್ಷೀರಸಂಗಮ ಸಭಾ ಭವನದಲ್ಲಿ 12 ದಿನಗಳ ಮಕ್ಕಳ ಚೈತನ್ಯ ಶಿಬಿರವ ಶ್ರೀ ರಾಮನವಮಿಯಂದು ಪ್ರಾರಂಭವಾಯಿತು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೇರುಕಟ್ಟೆ ಕ್ಷೀರಸಂಗಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದು,  ಶಿಬಿರದಲ್ಲಿ ಭಾಗವಹಿಸಿ  ತರಬೇತಿಯನ್ನು ಪಡೆದು  ಮಕ್ಕಳು ಸಂಸ್ಕಾರವಂತರಾಗಿ ಸಮಾಜದಲ್ಲಿ

ಗೇರುಕಟ್ಟೆಯಲ್ಲಿ 12 ದಿನಗಳ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ Read More »

ಕಾರಿನಲ್ಲಿ ಹುಚ್ಚಾಟ ಮೆರೆದ ಯುವಕರು | ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್‍

ಸುಳ್ಯ: ಸಂಪಾಜೆ ಬಳಿ ಕಾರಿನಲ್ಲಿ ಹುಚ್ಚಾಟ ಮೆರೆದ ಪ್ರಕರಣದಲ್ಲಿ ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ತಲೆಮರೆಸಿಕೊಂಡಿದ್ದಾರೆ. ಭಟ್ಕಳ ಮೂಲದ ಯುವಕರು ಕಾರಿನಲ್ಲಿ ಹುಚ್ಚಾಟ ಮೆರೆದಿರುವ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ BNS ಆಕ್ಟ್ 281 IMV ಆಕ್ಟ್ ನ 184 ಸೆಕ್ಷನ್ ಅಡಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿ ಯುವಕರು ಎಸ್ಕೆಪ್ ಆಗಿದ್ದಾರೆ. ಸಂಪಾಜೆ-ಸುಳ್ಯ ರಸ್ತೆಯಲ್ಲಿ KA09MG5880 ನಂಬರ್‌ನ ಕಾರಿನಲ್ಲಿ ಒಟ್ಟು ಏಳು ಮಂದಿ

ಕಾರಿನಲ್ಲಿ ಹುಚ್ಚಾಟ ಮೆರೆದ ಯುವಕರು | ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್‍ Read More »

ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ಪತ್ತೆ

ಪುತ್ತೂರು :ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ಭಾನುವಾರ ಅರಸಿಕೆರೆಯಲ್ಲಿ ಪತ್ತೆಯಾಗಿದ್ದಾನೆ. ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ ಕೊಡಿಪ್ಪಾಡಿ ನಿವಾಸಿ ರಝಕ್ ಮತ್ತು ಸಕೀನ ದಂಪತಿ ಪುತ್ರ ಪುತ್ತೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ (15)  ಪತ್ತೆಯಾದಾತ. ಈ ಕುರಿತು ಪೋಷಕರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದು ಪೋಷಕರಿಂದ ಮಾಹಿತಿ ಪಡೆದು ಹುಡುಕಾಡುತ್ತಿದ್ದಂತೆ ಸಂಜೆ ಅರಸಿಕೆರೆ ಸಮೀಪ ಈತ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ಪತ್ತೆ Read More »

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆ ಪೊಲೀಸ್‌ ಕೇಸ್‌

ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ ಎಂದು ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಹೀಗಿದ್ದರೂ ರಾಜ್ಯದ ಕೆಲ ಶಾಲೆಗಳಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಮ್ಮೆ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆ ಪೊಲೀಸ್‌ ಕೇಸ್‌ Read More »

ಪುತ್ತೂರು ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರ | ಸರಕಾರಿ ನೌಕರರ ದಿನಾಚರಣೆ

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆ ವತಿಯಿಂದ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಪುತ್ತೂರು ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರ ಭಾನುವಾರ ದರ್ಬೆ ಆಫೀಸರ್ಸ್‍ ಕ್ಲಬ್‍ನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್‍ ಕುಮಾರ್ ಎಂ.ಎಸ್‍. ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರರಿಗೆ ಮುಖ್ಯ ಸಮಸ್ಯೆಯಾಗಿರುವ ಎನ್‍ಪಿಎಸ್‍ಜ್ಯಾರಿಯನ್ನು ನ್ನು ರದ್ದುಪಡಿಸಿ ಒಪಿಎಸ್‍ಜ್ಯಾರಿಗೊಳಿಸುವಂತೆ ನಮ್ಮ ಮುಂದಿನ ಬಹುಮುಖ್ಯ ಹೋರಾಟವಾಗಿದ್ದು, ಎಲ್ಲಾ

ಪುತ್ತೂರು ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರ | ಸರಕಾರಿ ನೌಕರರ ದಿನಾಚರಣೆ Read More »

ಈ ವಾರವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) 2025ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಈ ವಾರವೇ ಪ್ರಕಟಸುವ ನಿರೀಕ್ಷೆ ಇದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 21ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ಪತ್ರಿಕಾಗೋಷ್ಠಿ ಮೂಲಕ ಕೆಎಸ್​​ಸಿಎಬಿ ಫಲಿತಾಂಶ ಪ್ರಕಟಿಸಲಿದೆ. ಆ ನಂತರ ಆನ್​ಲೈನ್ ಮೂಲಕ ಫಲಿತಾಂಶ ವೀಕ್ಷಿಸಬಹುದು. ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶವಿದೆ. karresults.nic.in ಮತ್ತು kseab.karnataka.gov.in ಈ ಎರಡು ವೆಬ್​ಸೈಟ್​ಗಳಲ್ಲಿ ದ್ವಿತೀಯ

ಈ ವಾರವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ Read More »

ಬೆಳ್ಳಿತೆರೆಗೆ ಬರುತ್ತಿದೆ ಯಕ್ಷಗಾನ ಕಲಾವಿದರೇ ನಟಿಸಿರುವ ಸಿನಿಮಾ ವೀರ ಚಂದ್ರಹಾಸ

ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಯಕ್ಷಗಾನದ ಕಥೆಯೇ ಸಿನಿಮಾ ಆದ ಚಿತ್ರ ಉಡುಪಿ: ಸುಮಾರು ಕಲಾವಿದರು ನಟಿಸಿರುವ, ಹಿರಿಯ ನಟ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿರುವ ಯಕ್ಷಗಾನವೇ ಕಥಾವಸ್ತು ಆಗಿ ಉಳ್ಳ ಸಿನಿಮಾವೊಂದು ಕನ್ನಡದಲ್ಲಿ ನಿರ್ಮಾಣವಾಗಿದ್ದು, ಏ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮೊದಲು ಯಕ್ಷಗಾನ ಮತ್ತು ಯಕ್ಷಗಾನದ ಪಾತ್ರಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರುವ ಅನೇಕ ಚಿತ್ರಗಳು ಬಂದಿವೆ. ಆದರೆ ಯಕ್ಷಗಾನ ಪ್ರಸಂಗವೊಂದನ್ನೇ ಸಿನಿಮಾ ಮಾಡಿ ಅದರಲ್ಲಿ ಯಕ್ಷಗಾನ ಕಲಾವಿದರೇ ನಟಿಸಿದ್ದು, ಇದೇ ಮೊದಲು. ಈ ಚಿತ್ರವನ್ನು ನಿರ್ದೇಶಿಸಿದವರು ಈಗಾಗಲೇ ಕನ್ನಡದಲ್ಲಿ

ಬೆಳ್ಳಿತೆರೆಗೆ ಬರುತ್ತಿದೆ ಯಕ್ಷಗಾನ ಕಲಾವಿದರೇ ನಟಿಸಿರುವ ಸಿನಿಮಾ ವೀರ ಚಂದ್ರಹಾಸ Read More »

ಮಾಟ ತೆಗೆಯುವ ನೆಪದಲ್ಲಿ ಕಿರುಕುಳ : ಆರೋಪಿ ಬಂಧನ

ಮಂಗಳೂರು : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಮಾಟಮಂತ್ರ ತೆಗೆಯುವ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಹೆಜಮಾಡಿಯ ಒಬ್ಬನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.ಗುರುವಾಯನಕೆರೆಯ ನಿವಾಸಿ ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಅವರು ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು

ಮಾಟ ತೆಗೆಯುವ ನೆಪದಲ್ಲಿ ಕಿರುಕುಳ : ಆರೋಪಿ ಬಂಧನ Read More »

ನಟಿಗೆ ವಂಚಿಸಿದ ಉದ್ಯಮಿಗೆ 61.50 ಲ.ರೂ. ದಂಡ

ಬೆಂಗಳೂರು : ನಟಿ ಸಂಜನಾ ಗಲ್ರಾನಿಗೆ ವಂಚಿಸಿದ ಉದ್ಯಮಿ ರಾಹುಲ್ ತೋನ್ಸೆಗೆ ನ್ಯಾಯಾಲಯ ಬರೋಬ್ಬರಿ 61.50 ಲಕ್ಷ ರೂಪಾಯಿ ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 33ನೇ ಎಸಿಜೆಎಂ ನ್ಯಾಯಾಲಯ ಈ ತೀರ್ಪು ನೀಡಿದೆ. ದಂಡದ ಮೊತ್ತದಲ್ಲಿ 10 ಸಾವಿರ ಕೋರ್ಟ್ ಶುಲ್ಕ ಕಡಿತ ಮಾಡಿ ಉಳಿದ ಹಣ ಸಂಜನಾಗೆ ನೀಡಬೇಕು. ನಿಗಧಿತ ಸಮಯದಲ್ಲಿ ದಂಡ ಪಾವತಿಸಿದರೆ ಆರು ತಿಂಗಳ ಶಿಕ್ಷೆ ಮಾಫಿ ಮಾಡಲಾಗುವುದು. ಒಂದು ವೇಳೆ ಪರಿಹಾರ ಮೊತ್ತ ನೀಡದೆ ಜೈಲು ಶಿಕ್ಷೆ

ನಟಿಗೆ ವಂಚಿಸಿದ ಉದ್ಯಮಿಗೆ 61.50 ಲ.ರೂ. ದಂಡ Read More »

error: Content is protected !!
Scroll to Top